Bank Holidays in October 2022: ಅಕ್ಟೋಬರ್‌ನಲ್ಲಿ ಕರ್ನಾಟಕದಲ್ಲಿ 11 ದಿನ, ದೇಶಾದ್ಯಂತ 21 ದಿನ ಬ್ಯಾಂಕ್ಗಳಿಗೆ ರಜೆ
ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕದಲ್ಲಿ 11 ದಿನಗಳು ಬ್ಯಾಂಕ್ಗಳಿಗೆ ರಜೆ ಇದ್ದು, ದೇಶಾದ್ಯಂತ ಒಟ್ಟು 21 ದಿನ ರಜೆ ಇರಲಿದೆ. ಆದರೆ ಆನ್‌ಲೈನ್ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಕ್ಟೋಬರ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯ ಪ್ರಕಾರ, ವಾರಾಂತ್ಯದ ರಜಾದಿನಗಳನ್ನು ಒಳಗೊಂಡಂತೆ ಅಕ್ಟೋಬರ್‌ನಲ್ಲಿ 21 ದಿನಗಳ ಕಾಲ ಭಾರತದ ವಿವಿಧ ರಾಜ್ಯಗಳಲ್ಲಿ ಹಾಗೂ ಕರ್ನಾಕಟದಲ್ಲಿ 11 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆದ್ದರಿಂದ, ಗ್ರಾಹಕರು ತಮ್ಮ ಶಾಖೆಗಳಿಗೆ ಭೇಟಿ ನೀಡುವ ಮೊದಲು ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಬೇಕು. ಅದರಂತೆ ನಿಮ್ಮ ಬ್ಯಾಂಕ್ ಕೆಲಸ ಕಾರ್ಯಗಳನ್ನು ಮುಂಚಿತವಾಗಿ ಮುಗಿಸಿಬಿಡುವುದು ಉತ್ತಮ. ಪಟ್ಟಿಯಲ್ಲಿರುವ ಕೆಲವು ರಜಾದಿನಗಳು ಕೆಲವು ರಾಜ್ಯಗಳಿಗೆ ಮಾತ್ರ ನಿರ್ದಿಷ್ಟವಾಗಿರುತ್ತವೆ ಮತ್ತು ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಒಳಗೊಂಡಿವೆ. ಅದಾಗ್ಯೂ, 21 ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಆಗಿದ್ದರೂ ಗ್ರಾಹಕರು ಆತಂಕ ಪಡಬೇಕಾಗಿಲ್ಲ. ಏಕೆಂದರೆ ಗ್ರಾಹಕರು ಭೌತಿಕವಾಗಿ ಬ್ಯಾಂಕ್‌ನಿಂದ ಹಣವನ್ನು ಠೇವಣಿ ಮಾಡಲು ಮತ್ತು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಅಷ್ಟೆ. ಆದರೆ ಆನ್‌ಲೈನ್ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ. ಸುದ್ದಿಯಲ್ಲಿ ಕರ್ನಾಕದಲ್ಲಿನ ಬ್ಯಾಂಕ್ ರಜೆಗಳನ್ನು ಪ್ರತ್ಯೇಕವಾಗಿ ನೀಡಲಾಗಿದೆ.
ದೇಶದಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ ಇಲ್ಲಿದೆ
ಅಕ್ಟೋಬರ್-1: ಅರ್ಧ ವಾರ್ಷಿಕ ಮುಕ್ತಾಯ (ಸಿಕ್ಕಿಂ)
ಅಕ್ಟೋಬರ್-2 : ಗಾಂಧಿ ಜಯಂತಿ (ರಾಷ್ಟ್ರೀಯ ರಜೆ)
ಅಕ್ಟೋಬರ್-3 : ದುರ್ಗಾ ಪೂಜೆ (ಸಿಕ್ಕಿಂ, ಮಣಿಪುರ, ಬಂಗಾಳ, ಬಿಹಾರ, ತ್ರಿಪುರ, ಒರಿಸ್ಸಾ, ಜಾರ್ಖಂಡ್, ಮೇಘಾಲಯ ಮತ್ತು ಕೇರಳ)
ಅಕ್ಟೋಬರ್-4: ದುರ್ಗಾ ಪೂಜೆ, ದಸರಾ, ಮಹಾ ನವಮಿ, ಆಯುಧ ಪೂಜೆ, ಶ್ರೀಮಂತ ಶಂಕರದೇವರ ಜನ್ಮೋತ್ಸವ (ಅಗರ್ತಲಾ, ಬಂಗಾಳ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಕರ್ನಾಟಕ, ಒರಿಸ್ಸಾ, ಸಿಕ್ಕಿಂ, ಕೇರಳ, ಮಹಾರಾಷ್ಟ್ರ ಮತ್ತು ಮೇಘಾಲಯ)
ಅಕ್ಟೋಬರ್-5: ದುರ್ಗಾ ಪೂಜೆ, ದಸರಾ, ವಿಜಯ ದಶಮಿ, ಶ್ರೀಮಂತ ಶಂಕರದೇವರ ಜನ್ಮೋತ್ಸವ (ಮಣಿಪುರ ಹೊರತುಪಡಿಸಿ ಎಲ್ಲಾ ರಾಜ್ಯಗಳು)
ಅಕ್ಟೋಬರ್-6: ದುರ್ಗಾ ಪೂಜೆ (ಗ್ಯಾಂಗ್ಟಾಕ್ ಮತ್ತು ಸಿಕ್ಕಿಂ) (ದೇಶದಾದ್ಯಂತ ರಜೆ)
ಅಕ್ಟೋಬರ್-7: ದುರ್ಗಾ ಪೂಜೆ (ಗ್ಯಾಂಗ್ಟಾಕ್ ಮತ್ತು ಸಿಕ್ಕಿಂ)
ಅಕ್ಟೋಬರ್-8: ಈದ್ – ಮಿಲಾದ್-ಉನ್-ನಬಿ (ಜಮ್ಮು ಮತ್ತು ಕಾಶ್ಮೀರ, ಕೇರಳ, ಹಿಮಾಚಲ ಪ್ರದೇಶ ಮತ್ತು ಮಧ್ಯಪ್ರದೇಶ)
ಅಕ್ಟೋಬರ್-13: ಕರ್ವಾ ಚೌತ್ (ಶಿಮ್ಲಾ ಮತ್ತು ಹಿಮಾಚಲ ಪ್ರದೇಶ)
ಅಕ್ಟೋಬರ್-14: ಈದ್ ನಂತರ ಶುಕ್ರವಾರ – ಮಿಲಾದ್-ಉನ್-ನಬಿ (ಜಮ್ಮು ಮತ್ತು ಕಾಶ್ಮೀರ)
ಅಕ್ಟೋಬರ್-24: ಕಾಳಿ ಪೂಜೆ, ದೀಪಾವಳಿ, ಲಕ್ಷ್ಮಿ ಪೂಜೆ, ನರಕ ಚತುರ್ದಶಿ (ಸಿಕ್ಕಿಂ, ತೆಲಂಗಾಣ ಮತ್ತು ಮಣಿಪುರ ಹೊರತುಪಡಿಸಿ ಎಲ್ಲಾ ರಾಜ್ಯಗಳು)
ಅಕ್ಟೋಬರ್-25: ಲಕ್ಷ್ಮಿ ಪೂಜೆ, ದೀಪಾವಳಿ, ಗೋವರ್ಧನ ಪೂಜಾ (ಸಿಕ್ಕಿಂ, ತೆಲಂಗಾಣ, ಮಣಿಪುರ ಮತ್ತು ರಾಜಸ್ಥಾನ)
ಅಕ್ಟೋಬರ್-26: ಗೋವರ್ಧನ ಪೂಜಾ, ವಿಕ್ರಮ್ ಸಂವಂತ್ ಹೊಸ ವರ್ಷದ ದಿನ, ಭಾಯಿ ಬಿಜ್, ಭಾಯಿ ದುಜ್, ದೀಪಾವಳಿ (ಬಲಿ ಪ್ರತಿಪದ), ಲಕ್ಷ್ಮಿ ಪೂಜೆ, ಪ್ರವೇಶ ದಿನ (ಕರ್ನಾಟಕ, ಉತ್ತರಾಖಂಡ, ಸಿಕ್ಕಿಂ, ಜಮ್ಮು, ಗುಜರಾತ್, ಮಹಾರಾಷ್ಟ್ರ, ಕಾಶ್ಮೀರ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶ)
ಅಕ್ಟೋಬರ್-27: ಭೈದೂಜ್, ಚಿತ್ರಗುಪ್ತ ಜಯಂತಿ, ಲಕ್ಷ್ಮಿ ಪೂಜೆ, ದೀಪಾವಳಿ, ನಿಂಗೋಲ್ ಚಕ್ಕೌಬಾ (ಸಿಕ್ಕಿಂ, ಮಣಿಪುರ, ಮಹಾರಾಷ್ಟ್ರ, ಉತ್ತರ ಪ್ರದೇಶ)
ಅಕ್ಟೋಬರ್-31: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ, ಸೂರ್ಯ ಪಷ್ಟಿ ದಲಾ ಛಾತ್ (ಬೆಳಿಗ್ಗೆ ಅರ್ಧ), ಛತ್ ಪೂಜೆ (ಗುಜರಾತ್, ಬಿಹಾರ ಮತ್ತು ಜಾರ್ಖಂಡ್)
ಹಾಗಿದ್ದರೆ ಕರ್ನಾಟಕದಲ್ಲಿ ಎಷ್ಟು ದಿನ ಬ್ಯಾಂಕ್ಗಳಿಗೆ ರಜೆ?
ಅಕ್ಟೋಬರ್-2 ಗಾಂಧಿ ಜಯಂತಿ ಮತ್ತು ಭಾನುವಾರದ ರಜೆ
ಅಕ್ಟೋಬರ್-4 ಮಹಾನವಾಮಿ
ಅಕ್ಟೋಬರ್ -5 ವಿಜಯದಶಮಿ
ಅಕ್ಟೋಬರ್- 9 ವಾಲ್ಮೀಕಿ ಜಯಂತಿ ಮತ್ತು ಭಾನುವಾರದ ರಜೆ
ಅಕ್ಟೋಬರ್-24 ನರಕ ಚತುದರ್ಶಿ
ಅಕ್ಟೋಬರ್-26 ದೀಪಾವಳಿ
ವಾರಾಂತ್ಯದ ರಜಾದಿನಗಳ ಪಟ್ಟಿ
ಅಕ್ಟೋಬರ್ 2: ವಾರದ ರಜೆ (ಭಾನುವಾರ)
ಅಕ್ಟೋಬರ್ 8 : ತಿಂಗಳ 2ನೇ ಶನಿವಾರ
ಅಕ್ಟೋಬರ್ 9 : ವಾರದ ರಜೆ (ಭಾನುವಾರ)
ಅಕ್ಟೋಬರ್ 16: ವಾರದ ರಜೆ (ಭಾನುವಾರ)
ಅಕ್ಟೋಬರ್ 22: ತಿಂಗಳ 4ನೇ ಶನಿವಾರ
ಅಕ್ಟೋಬರ್ 23: ವಾರದ ರಜೆ (ಭಾನುವಾರ)
ಅಕ್ಟೋಬರ್ 30: ವಾರದ ರಜೆ (ಭಾನುವಾರ)
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:34 pm, Fri, 30 September 22