ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಜೂನ್ ತಿಂಗಳಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ (Bank holidays list) ಪ್ರಕಟಿಸಿದೆ. ಹಬ್ಬ ಹರಿದಿನ, ವಾರಾಂತ್ಯ ಇತ್ಯಾದಿ ರಜೆಗಳು ಒಳಗೊಂಡಿವೆ. ಜೂನ್ ತಿಂಗಳಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕ್ಗಳಿಗೆ ರಜೆಗಳಿವೆ. ಆದರೆ, ಎಲ್ಲೆಡೆಯೂ 12 ದಿನ ರಜೆ ಇರುವುದಿಲ್ಲ. ಕೆಲ ರಜೆಗಳು ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತವಾಗಿರುತ್ತವೆ. ಇಂಥ ಪ್ರಾದೇಶಿಕ ರಜೆಗಳನ್ನು (Regional holidays) ಆಯಾ ಪ್ರದೇಶಗಳ ರಾಜ್ಯ ಸರ್ಕಾರಗಳು ನಿರ್ಧರಿಸುತ್ತವೆ. ಜೂನ್ ತಿಂಗಳಲ್ಲಿ ಜಗನ್ನಾಥ ರಥಯಾತ್ರೆ, ಈದ್ ಉಲ್ ಅಳ (Eid Ul Azha), ಖರ್ಚಿ ಪೂಜಾ ಮೊದಲಾದ ಹಬ್ಬಗಳಿವೆ. ಇವು ಪ್ರಾದೇಶಿಕ ರಜೆಗಳ ಗುಂಪಿಗೆ ಸೇರಿದವು.
ಈಗ ಮೇ 27ರ ನಾಲ್ಕನೇ ಶನಿವಾರ ಮತ್ತು ಮೇ 28ರ ಭಾನುವಾರದ ರಜೆ ಸೇರಿದರೆ ಜೂನ್ 30ರವರೆಗೂ 14 ದಿನಗಳ ಕಾಲ ಬ್ಯಾಂಕ್ಗೆ ರಜೆ ಇರುತ್ತವೆ.
ಇದನ್ನೂ ಓದಿ: Rs 2000 Notes: ಬ್ಯಾಂಕ್ನಲ್ಲಿ ನೀವು 2,000 ರೂ ಮರಳಿಸಲು ಪ್ಯಾನ್ ನಂಬರ್ ಕೊಡಬೇಕಾ?
ಇದನ್ನೂ ಓದಿ: PM Kisan: ಪಿಎಂ ಕಿಸಾನ್ ಯೋಜನೆ; ಒಂದೇ ಕುಟುಂಬದ ಇಬ್ಬರು ವರ್ಷಕ್ಕೆ 6,000 ರೂ ಪಡೆಯಬಹುದಾ?
2023ರ ಜೂನ್ ತಿಂಗಳಲ್ಲಿ ಬ್ಯಾಂಕುಗಳು ಒಟ್ಟಾರೆಯಾಗಿ 12 ದಿನ ರಜೆ ಹೊಂದಿದ್ದರೂ ಕರ್ನಾಟಕದಲ್ಲಿ ಬ್ಯಾಂಕುಗಳು ಈ ಒಂದು ತಿಂಗಳಲ್ಲಿ 7 ದಿನ ಮಾತ್ರ ಬಾಗಿಲು ಮುಚ್ಚಿರುತ್ವೆ. ಇದರಲ್ಲಿ ಜೂನ್ 29ರಂದು ಈದ್ ಉಲ್ ಆಳ ಹಬ್ಬ ಪ್ರಯುಕ್ತ ರಜೆ ಇದ್ದರೆ ಉಳಿದವು ಶನಿವಾರ ಮತ್ತು ಭಾನುವಾರಗಳ ನಿಯಮಿತ ರಜೆಗಳೇ ಆಗಿವೆ.
ಬ್ಯಾಂಕುಗಳು ರಜೆ ಇದ್ದ ದಿನಗಳಲ್ಲಿ 2,000 ರೂ ನೋಟುಗಳ ವಿನಿಮಯ ಸಾಧ್ಯವಾಗದೇ ಹೋಗಬಹುದು. ಆದರೆ, ಬೇರೆ ಬಹುತೇಕ ಬ್ಯಾಂಕಿಂಗ್ ಚಟುವಟಿಕೆಗಳಿಗೆ ಅಡ್ಡಿ ಇರುವುದಿಲ್ಲ. ಸಾರ್ವಜನಿಕರು ಇಂಟರ್ನೆಟ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್, ಎಟಿಎಂ, ಯುಪಿಐ ಇತ್ಯಾದಿ ಸೇವೆಗಳನ್ನು ಪಡೆಯಬಹುದು.