ಬ್ಯಾಂಕ್ ರಜಾದಿನಗಳು
ನವದೆಹಲಿ, ಸೆಪ್ಟೆಂಬರ್ 26: ಅಕ್ಟೋಬರ್ ತಿಂಗಳಲ್ಲಿ ಅರ್ಧದಷ್ಟು ದಿನಗಳು ಬ್ಯಾಂಕುಗಳಿಗೆ ರಜೆ ಇರುತ್ತವೆ. ಶನಿವಾರ ಮತ್ತು ಭಾನುವಾರ ಸೇರಿಸಿ ಒಟ್ಟು 15 ದಿನಗಳು ಬ್ಯಾಂಕ್ಗೆ ರಜೆ ಇರುತ್ತವೆ. ಕರ್ನಾಟಕದಲ್ಲಿ 12 ದಿನಗಳು ಬ್ಯಾಂಕ್ ಬಾಗಿಲು ಮುಚ್ಚಿರುತ್ತವೆ. ಕೆಲ ರಾಜ್ಯಗಳಲ್ಲಿ ಅಕ್ಟೋಬರ್ 10ರಿಂದ 14ರವರೆಗೆ ಸತತ ಐದು ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರುತ್ತವೆ. ಅಕ್ಟೋಬರ್ ತಿಂಗಳಲ್ಲಿ ಹಬ್ಬ ಹರಿದಿನಗಳು ಹೆಚ್ಚಿವೆ. ದಸರಾ, ದೀಪಾವಳಿ, ದುರ್ಗಾ ಪೂಜೆ, ನವರಾತ್ರಿ ಎಲ್ಲವೂ ಅಕ್ಟೋಬರ್ನಲ್ಲೇ ಇವೆ. ಜೊತೆಗೆ ಗಾಂಧಿ ಜಯಂತಿ, ವಾಲ್ಮೀಕಿ ಜಯಂತಿಗಳಿಗೂ ರಜೆ ಇದೆ. ದೇಶಾದ್ಯಂತ ಹಾಗೂ ಕರ್ನಾಟಕದಲ್ಲಿ ಬ್ಯಾಂಕುಗಳು ಯಾವ್ಯಾವಾಗ ರಜೆ ಹೊಂದಿವೆ ಎನ್ನುವ ವಿವರ ಇಲ್ಲಿ ಮುಂದಿದೆ.
2024ರ ಅಕ್ಟೋಬರ್ ತಿಂಗಳಲ್ಲಿನ ಬ್ಯಾಂಕ್ ರಜಾದಿನಗಳು
- ಅ. 1, ಮಂಗಳವಾರ: ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಿಮಿತ್ತ ರಜೆ
- ಅ. 2, ಬುಧವಾರ: ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ
- ಅ. 3, ಗುರುವಾರ: ನವರಾತ್ರಿ, ಮಹಾರಾಜ ಅಗ್ರಸೇನ ಜಯಂತಿ
- ಅ. 6: ಭಾನುವಾರದ ರಜೆ
- ಅ. 10, ಗುರುವಾರ: ಮಹಾಸಪ್ತಮಿ
- ಅ. 11, ಶುಕ್ರವಾರ: ಮಹಾನವಮಿ
- ಅ. 12: ಎರಡನೇ ಶನಿವಾರ ಮತ್ತು ದಸರಾ, ಆಯುಧ ಪೂಜೆ (ದೇಶದೆಲ್ಲೆಡೆ ರಜೆ)
- ಅ. 13: ಭಾನುವಾರದ ರಜೆ
- ಅ. 14, ಸೋಮವಾರ: ದುರ್ಗಾ ಪೂಜೆ, ದಸರಾ (ಸಿಕ್ಕಿಂ ಮೊದಲಾದ ಕೆಲವೆಡೆ ರಜೆ)
- ಅ. 16, ಬುಧವಾರ: ಲಕ್ಷ್ಮೀ ಪೂಜೆ (ಕೋಲ್ಕತಾ, ಅಗಾರ್ತಲಾದಲ್ಲಿ ರಜೆ)
- ಅ. 17, ಗುರುವಾರ: ವಾಲ್ಮೀಕಿ ಜಯಂತಿ, ಕಾಟಿ ಬಿಹು (ಹಲವೆಡೆ ರಜೆ)
- ಅ. 20: ಭಾನುವಾರ ರಜೆ
- ಅ. 26: ನಾಲ್ಕನೇ ಶನಿವಾರದ ರಜೆ
- ಅ. 27: ಭಾನುವಾರದ ರಜೆ
- ಅ. 31, ಗುರುವಾರ: ನರಕ ಚತುರ್ದಶಿ, ದೀಪಾವಳಿ (ಎಲ್ಲೆಡೆ ರಜೆ)
ಇದನ್ನೂ ಓದಿ: ಪಿಎಂ ಕಿಸಾನ್ ಸ್ಕೀಮ್; ಅಕ್ಟೋಬರ್ ಮೊದಲ ವಾರದಲ್ಲಿ 18ನೇ ಕಂತಿನ ಹಣ ಬಿಡುಗಡೆ
2024ರ ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕದಲ್ಲಿ ಇರುವ ಬ್ಯಾಂಕ್ ರಜಾದಿನಗಳು
- ಅ. 2, ಬುಧವಾರ: ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ
- ಅ. 3, ಗುರುವಾರ: ನವರಾತ್ರಿ
- ಅ. 6: ಭಾನುವಾರದ ರಜೆ
- ಅ. 10, ಗುರುವಾರ: ಮಹಾಸಪ್ತಮಿ
- ಅ. 11, ಶುಕ್ರವಾರ: ಮಹಾನವಮಿ
- ಅ. 12: ಎರಡನೇ ಶನಿವಾರ
- ಅ. 13: ಭಾನುವಾರದ ರಜೆ
- ಅ. 17, ಗುರುವಾರ: ವಾಲ್ಮೀಕಿ ಜಯಂತಿ
- ಅ. 20: ಭಾನುವಾರ ರಜೆ
- ಅ. 26: ನಾಲ್ಕನೇ ಶನಿವಾರದ ರಜೆ
- ಅ. 27: ಭಾನುವಾರದ ರಜೆ
- ಅ. 31, ಗುರುವಾರ: ದೀಪಾವಳಿ
ಬ್ಯಾಂಕುಗಳು ಮುಚ್ಚಿದರೂ ಅದರ ಸರ್ವರ್ಗಳು ಚಾಲನೆಯಲ್ಲೇ ಇರುತ್ತವೆ. ಎಟಿಎಂ, ನೆಟ್ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್, ಯುಪಿಐ ಇತ್ಯಾದಿ ನಿರಂತರವಾಗಿ ಲಭ್ಯ ಇರುತ್ತವೆ. ಹೆಚ್ಚಿನ ಹಣದ ವಹಿವಾಟಿಗೆ ಯಾವ ಅಡಚಣೆ ಆಗದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ