Bank Holidays May 2023: ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 12 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವ ದಿನ ಬ್ಯಾಂಕ್ ಬಾಗಿಲು ಬಂದ್ ಅಗಿರುತ್ತೆ ತಿಳಿದಿರಿ

|

Updated on: Apr 25, 2023 | 6:28 PM

2023 May Month Holiday List: ವಾರದ ರಜೆ, ಸಾರ್ವತ್ರಿಕ ರಜೆ ಮತ್ತು ಪ್ರಾದೇಶಿಕ ರಜೆ ಸೇರಿ ಬ್ಯಾಂಕುಗಳಿಗೆ 2023 ಮೇ ತಿಂಗಳಲ್ಲಿ 12 ರಜಾದಿನಗಳಿವೆ. ಇವುಗಳ ಪಟ್ಟಿ ಇಲ್ಲಿದೆ. ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ಬ್ಯಾಂಕುಗಳು ಎಷ್ಟು ದಿನ ಬಾಗಿಲು ಹಾಕಿರುತ್ತವೆ ಎಂಬ ವಿವರವೂ ಇಲ್ಲಿದೆ.

Bank Holidays May 2023: ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 12 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವ ದಿನ ಬ್ಯಾಂಕ್ ಬಾಗಿಲು ಬಂದ್ ಅಗಿರುತ್ತೆ ತಿಳಿದಿರಿ
ಬ್ಯಾಂಕು ರಜೆ
Follow us on

ಬೆಂಗಳೂರು: ಸರ್ಕಾರಿ ರಜಾ ದಿನಗಳ ಪ್ರಕಾರ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತವೆ. ಬ್ಯಾಂಕುಗಳ ರಜಾದಿನಗಳ ಪಟ್ಟಿ (Bank Holidays List) ತುಸು ದೊಡ್ಡದೇ ಇರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI- Reserve Bank of India) ಮಾರ್ಗಸೂಚಿ ಪ್ರಕಾರ ಎಲ್ಲಾ ಸಾರ್ವತ್ರಿಕ ರಜೆಗಳೂ ಬ್ಯಾಂಕುಗಳಿಗೆ ಅನ್ವಯ ಆಗುತ್ತವೆ. ಹಾಗೆಯೇ, ಪ್ರಾದೇಶಿಕ ರಜಾ ದಿನಗಳು ಆಯಾ ಪ್ರದೇಶಗಳಲ್ಲಿನ ಬ್ಯಾಂಕುಗಳಿಗೆ ಅನ್ವಯ ಆಗುತ್ತದೆ. ಈ ಪ್ರಾದೇಶೀಕ ರಜಾ ದಿನಗಳು ಆಯಾ ರಾಜ್ಯ ಸರ್ಕಾರದ ನಿರ್ಧಾರ ಆಗಿರುತ್ತವೆ. ಇದೇ ವೇಳೆ 2023 ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 12 ದಿನಗಳ ಕಾಲ ರಜೆ ಇದೆ. ಇದರಲ್ಲಿ ವಾರದ 4 ಭಾನುವಾರ ಹಾಗೂ 2 ಶನಿವಾರದ ರಜೆಗಳು ಒಳಗೊಂಡಿವೆ. ಇನ್ನುಳಿದ ರಜೆಯಲ್ಲಿ ಒಂದು ಸಾರ್ವತ್ರಿಕ ರಜೆಯಾದರೆ, ಉಳಿದವು ಪ್ರಾದೇಶಿಕ ರಜೆಗಳಾಗಿವೆ. ದೇಶದ ಎಲ್ಲಾ ಕಡೆಯೂ ಬ್ಯಾಂಕುಗಳು ಮೇ ತಿಂಗಳಲ್ಲಿ 12 ದಿನ ಬಂದ್ ಆಗಿರುತ್ತವೆ ಎಂದೇನಿಲ್ಲ. ಪ್ರಾದೇಶಿಕ ರಜೆಗಳು ಕೆಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಬೇರೆ ಸ್ಥಳದಲ್ಲಿರುವ ಬ್ಯಾಂಕುಗಳಿಗೆ ಅದು ಅನ್ವಯ ಆಗಲ್ಲ.

2023 ಮೇ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ

  • ಮೇ 1 (ಸೋಮವಾರ): ಮೇ ದಿನ ಅಥವಾ ಕಾರ್ಮಿಕರ ದಿನ ಮತ್ತು ಮಹಾರಾಷ್ಟ್ರ ದಿನ
  • ಮೇ 5 (ಶುಕ್ರವಾರ): ಬುದ್ಧ ಪೂರ್ಣಿಮಾದೆಹಲಿ, ಹರ್ಯಾಣ, ಮಹಾರಾಷ್ಟ್ರ, ಪಂಜಾಬ್, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಉತ್ತರಾಖಂಡ್, ಅಸ್ಸಾಮ್, ಬಿಹಾರ, ಗುಜರಾತ್, ಅರುಣಾಚಲಪ್ರದೇಶ, ಚತ್ತೀಸ್​ಗಡ
  • ಮೇ 7: ಭಾನುವಾರ
  • ಮೇ 9 (ಮಂಗಳವಾರ): ರವೀಂದ್ರನಾಥ್ ಠಾಗೂರ್ ಜಯಂತಿ
  • ಮೇ 13: ಎರಡನೇ ಶನಿವಾರ
  • ಮೇ 14: ಭಾನುವಾರ
  • ಮೇ 16 (ಮಂಗಳವಾರ): ಸಿಕ್ಕಿಂ ದಿನ
  • ಮೇ 21: ಭಾನುವಾರ
  • ಮೇ 22 (ಸೋಮವಾರ): ಮಹಾರಾಣಾ ಪ್ರತಾಪ್ ಜಯಂತಿ ಗುಜರಾತ್, ಹರ್ಯಾಣ, ಹಿಮಾಚಲಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನ
  • ಮೇ 24 (ಬುಧವಾರ): ಕಾಜಿ ನಜ್ರುಲ್ ಇಸ್ಲಾಂ ಜಯಂತಿತ್ರಿಪುರಾ
  • ಮೇ 27: ನಾಲ್ಕನೇ ಶನಿವಾರ
  • ಮೇ 28: ಭಾನುವಾರ

ಇದನ್ನೂ ಓದಿAirtel 5G Data Plans: ಏರ್​ಟೆಲ್ ಹೊಸ ಪ್ಲಾನ್​ಗಳು; ಅನ್​ಲಿಮಿಟೆಡ್ 5ಜಿ ಡಾಟಾ, ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್​ಸ್ಟಾರ್ ಉಚಿತ

ಇಲ್ಲಿ ಸಿಕ್ಕಿಂ ಪ್ರದೇಶದ ಬ್ಯಾಂಕುಗಳು ಮೇ ತಿಂಗಳಲ್ಲಿ 6 ವಾರದ ರಜೆ ಸೇರಿ 8 ರಜಾದಿನಗಳನ್ನು ಹೊಂದಿರುತ್ತವೆ. ಹರ್ಯಾಣ, ಪಂಜಾಬ್, ಗುಜರಾತ್ ರಾಜ್ಯಗಳಲ್ಲೂ ಬ್ಯಾಂಕುಗಳು 8 ದಿನ ಬಾಗಿಲು ಮುಚ್ಚಿರುತ್ತವೆ.

ಕರ್ನಾಟಕದಲ್ಲಿ 6 ವಾರದ ರಜೆಯ ಜೊತೆ ಕಾರ್ಮಿಕರ ದಿನದ ರಜೆ ಮಾತ್ರ ಇದೆ. ಅಂದರೆ ಮೇ 1ರಂದು ದೇಶದೆಲ್ಲೆಡೆಯಂತೆ ಕರ್ನಾಟಕದಲ್ಲಿ ಬ್ಯಾಂಕುಗಳು ಬಂದ್ ಆಗಿರುತ್ತವೆ.

ಕರ್ನಾಟಕದಲ್ಲಿ 2023 ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ ರಜೆ ಇರುವ ದಿನಗಳು:

  • ಮೇ 1: ಕಾರ್ಮಿಕರ ದಿನ
  • ಮೇ 7: ಭಾನುವಾರ
  • ಮೇ 13: ಎರಡನೇ ಶನಿವಾರ
  • ಮೇ 14: ಭಾನುವಾರ
  • ಮೇ 21: ಭಾನುವಾರ
  • ಮೇ 27: ನಾಲ್ಕನೇ ಶನಿವಾರ
  • ಮೇ 28: ಭಾನುವಾರ

2023 ಜೂನ್​ನಿಂದ ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ಸಾರ್ವತ್ರಿಕ ರಜಾ ದಿನಗಳ ಪಟ್ಟಿ

  • ಜೂನ್ 29: ಬಕ್ರೀದ್
  • ಜುಲೈ 29: ಮೊಹರಂ ಕೊನೆಯ ದಿನ
  • ಆಗಸ್ಟ್ 15: ಸ್ವಾತಂತ್ರ್ಯೋತ್ಸವ
  • ಸೆಪ್ಟಂಬರ್ 18: ಗಣೇಶ ಹಬ್ಬ
  • ಸೆಪ್ಟಂಬರ್ 28: ಈದ್ ಮಿಲಾದ್
  • ಅಕ್ಟೋಬರ್ 2: ಗಾಂಧಿ ಜಯಂತಿ
  • ಅಕ್ಟೋಬರ್ 14: ಮಹಾಲಯ ಅಮಾವಾಸ್ಯೆ
  • ಅಕ್ಟೋಬರ್ 23: ಆಯುಧಪೂಜೆ
  • ಅಕ್ಟೋಬರ್ 24: ವಿಜಯದಶಮಿ
  • ಅಕ್ಟೋಬರ್ 28: ವಾಲ್ಮೀಕಿ ಜಯಂತಿ
  • ನವೆಂಬರ್ 1: ಕನ್ನಡ ರಾಜ್ಯೋತ್ಸವ
  • ನವೆಂಬರ್ 12: ನರಕ ಚತುರ್ದಶಿ
  • ನವೆಂಬರ್ 14: ದೀಪಾವಳಿ, ಬಲಿಪಾಡ್ಯಮಿ
  • ನವೆಂಬರ್ 30: ಕನಕದಾಸ ಜಯಂತಿ
  • ಡಿಸೆಂಬರ್ 25: ಕ್ರಿಸ್ಮಸ್

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ