ನವದೆಹಲಿ, ಡಿಸೆಂಬರ್ 5: ಭಾರತದಲ್ಲಿ ಅತ್ಯಂತ ಜಟಿಲವಾದ ವಲಯವೆಂದರೆ ವೈಮಾನಿಕ ಕ್ಷೇತ್ರದ್ದು. ಲಭ ಗಳಿಸುವ ಏರ್ಲೈನ್ಸ್ ಕಂಪನಿಗಳು ವಿರಳ. ಹಾಗೆಯೇ, ಏರ್ಪೋರ್ಟ್ಗಳೂ ಕೂಡ ಲಾಭಕ್ಕಾಗಿ ತಡಕಾಡಬೇಕಾಗಿದೆ. ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜನರಲ್ ಡಾ. ವಿ.ಕೆ. ಸಿಂಗ್ (General Dr. V.K. Singh) ಇಂದು ಮಂಗಳವಾರ ಸಂಸತ್ಗೆ ನೀಡಿರುವ ಮಾಹಿತಿ ಪ್ರಕಾರ, ಭಾರತದ ಹೆಚ್ಚಿನ ವಿಮಾನ ನಿಲ್ದಾಣಗಳು ನಷ್ಟದಲ್ಲಿವೆಯಂತೆ. ಕಳೆದ ಮೂರು ಹಣಕಾಸು ವರ್ಷಗಳ ವರದಿಗಳನ್ನು ಆಧರಿಸಿ ಸಚಿವರು ಈ ಮಾಹಿತಿ ನೀಡಿದ್ದಾರೆ. ದೇಶದ 125 ಏರ್ಪೋರ್ಟ್ಗಳ ಪೈಕಿ 93 ವಿಮಾನ ನಿಲ್ದಾಣಗಳು (Airports) 2022-23ರಲ್ಲಿ ನಷ್ಟ ಅನುಭವಿಸಿವೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಕೆಲವೇ ಏರ್ಪೋರ್ಟ್ಗಳು ಲಾಭ ಮಾಡಿವೆ. ಅತಿ ಹೆಚ್ಚು ಲಾಭ ಕಂಡಿರುವುದು ಬೆಂಗಳೂರಿನ ವಿಮಾನ ನಿಲ್ದಾಣವೇ.
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2022-23ರ ಹಣಕಾಸು ವರ್ಷದಲ್ಲಿ 528 ಕೋಟಿ ರೂನಷ್ಟು ಲಾಭ ಗಳಿಸಿರುವುದು ತಿಳಿದುಬಂದಿದೆ. ಲಾಭ ಮಾಡಿರುವ ಇತರ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕೊಚ್ಚಿ ಮತ್ತು ಹೈದರಾಬಾದ್ ಏರ್ಪೋರ್ಟ್ಗಳೂ ಸೇರಿವೆ ಎಂದು ಸಚಿವ ಜನರಲ್ ವಿ.ಕೆ. ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಅದಾನಿ ಗ್ರೂಪ್ಗೆ ಧನಸಹಾಯ ಕೊಡುವ ಮುನ್ನ ಹಿಂಡನ್ಬರ್ಗ್ ವರದಿ ಅವಲೋಕಿಸಿದ್ದ ಅಮೆರಿಕದ ಸರ್ಕಾರ
ಅತಿಹೆಚ್ಚು ನಷ್ಟ ಕಂಡಿರುವುದು ಅಹ್ಮಾದಾಬಾದ್ನ ವಿಮಾನ ನಿಲ್ದಾಣ. ಇದು 2022-23ರಲ್ಲಿ 408.51 ಕೋಟಿ ರೂ ನಷ್ಟ ಕಂಡಿತ್ತು. ದೆಹಲಿ ಏರ್ಪೋರ್ಟ್ ಕೂಡ ನಷ್ಟದಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಷ್ಟ ಅನುಭವಿಸಿದೆಯಾದರೂ 2021-22ಕ್ಕೆ ಹೋಲಿಸಿದರೆ 2022-23ರಲ್ಲಿ ಕಡಿಮೆ ನಷ್ಟ ಕಂಡಿದೆ. 2022ರ ಹಣಕಾಸು ವರ್ಷದಲ್ಲಿ ಅದು 182.58 ಕೋಟಿ ರೂ ನಷ್ಟ ಕಂಡಿತ್ತು. 2023ರ ಹಣಕಾಸು ವರ್ಷದಲ್ಲಿ ನಷ್ಟವು 1.04 ಕೋಟಿ ರೂಗೆ ಇಳಿದಿದೆ. ಮಂಗಳೂರು ವಿಮಾನ ನಿಲ್ದಾಣ ಕೂಡ ನಷ್ಟ ಕಂಡಿದೆ.
ದೇಶದಲ್ಲಿ ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್ಶಿಪ್ ಮಾದರಿಯಲ್ಲಿ 14 ಏರ್ಪೋರ್ಟ್ಗಳ ನಿರ್ವಹಣೆ ಆಗುತ್ತಿದೆ. ಈ ಪೈಕಿ 11 ಏರ್ಪೋರ್ಟ್ಗಳು ನಷ್ಟ ಕಂಡಿವೆ. ಬೆಂಗಳೂರು, ಕೊಚ್ಚಿ ಮತ್ತು ಹೈದರಾಬಾದ್ ಏರ್ಪೋರ್ಟ್ಗಳು ಮಾತ್ರವೇ ಲಾಭ ಮಾಡಿರುವುದು.
ಇದನ್ನೂ ಓದಿ: Corporate Bond: ಆರು ವರ್ಷದಲ್ಲಿ ದ್ವಿಗುಣಗೊಳ್ಳಲಿದೆ ಭಾರತದ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆ; ಏನಿದು ಬಾಂಡ್?
ಅಹ್ಮದಾಬಾದ್, ದೆಹಲಿ, ಮುಂಬೈ, ಲಕ್ನೋ, ಜೈಪುರ್, ದುರ್ಗಾಪುರ್, ಮಂಗಳೂರು, ತಿರುವನಂತಪುರಂ, ಗುವಾಹತಿ, ಮೋಪಾ ಮೊದಲಾದ ಏರ್ಪೋರ್ಟ್ಗಳು ನಷ್ಟ ಕಂಡಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:26 pm, Tue, 5 December 23