ಐಐಜಿಎಫ್ 2023 ಸಭೆ ಇಂದು; ಇಂಟರ್ನೆಟ್ ಸಂಬಂಧಿತ ಸಾರ್ವಜನಿಕ ನೀತಿ ವಿಚಾರಗಳ ಚರ್ಚೆ ನಿರೀಕ್ಷೆ

|

Updated on: Dec 05, 2023 | 11:08 AM

India Internet Governance Forum 2023: ವಿಶ್ವಸಂಸ್ಥೆಯ ಇಂಟರ್ನೆಟ್ ಗವರ್ನೆನ್ಸ್ ಫೋರಂ ಅಡಿಯಲ್ಲಿ ಇಂಡಿಯಾ ಇಂಟರ್ನೆಟ್ ಗವರ್ನೆನ್ಸ್ ಫೋರಂ 2023 ಸಭೆ ಇಂದು ನಡೆಯುತ್ತಿದೆ. ಇಂಟರ್ನೆಟ್​ಗೆ ಸಂಬಂಧಿಸಿದ ಸಾರ್ವಜನಿಕ ನೀತಿ ಸಮಸ್ಯೆಗಳ ಕುರಿತು ಈ ಸಭೆಯಲ್ಲಿ ಚರ್ಚೆ ಆಗಲಿದ್ದು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳಬಹುದು. 2021 ಮತ್ತು 2022ರಲ್ಲೂ ಐಐಜಿಎಫ್ ಸಭೆಗಳು ನಡೆದಿದ್ದವು. ಇದು ಮೂರನೇ ಆವೃತ್ತಿಯಾಗಿದೆ. ದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಡಪಂನಲ್ಲಿ ಸಭೆ ನಡೆಯಲಿದೆ.

ಐಐಜಿಎಫ್ 2023 ಸಭೆ ಇಂದು; ಇಂಟರ್ನೆಟ್ ಸಂಬಂಧಿತ ಸಾರ್ವಜನಿಕ ನೀತಿ ವಿಚಾರಗಳ ಚರ್ಚೆ ನಿರೀಕ್ಷೆ
ಐಐಜಿಎಫ್ 2023
Follow us on

ನವದೆಹಲಿ, ಡಿಸೆಂಬರ್ 5: ರಾಷ್ಟ್ರರಾಜಧಾನಿ ನಗರಿಯಲ್ಲಿ ಇಂದು ಮಂಗಳವಾರ ಇಂಡಿಯಾ ಇಂಟರ್ನೆಟ್ ಗವರ್ನೆನ್ಸ್ ಫೋರಂ 2023 ಸಭೆ (India Internet Governance Forum) ನಡೆಯಲಿದೆ. ಇಂಟರ್ನೆಟ್​ಗೆ ಸಂಬಂಧಿಸಿದ ಸಾರ್ವಜನಿಕ ನೀತಿ ಸಮಸ್ಯೆಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ಸಮಸ್ಯೆಯ ವ್ಯಾಪ್ತಿಗೆ ಬರುವ ಎಲ್ಲಾ ವ್ಯಕ್ತಿ ಮತ್ತು ಸಂಸ್ಥೆಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ‘ಭಾರತದ ಡಿಜಿಟಲ್ ಅಜೆಂಡಾ ಅರಿತು ಮುನ್ನಡೆಯುವುದು’ (ಮೂವಿಂಗ್ ಫಾರ್ವರ್ಡ್ – ಕ್ಯಾಲಿಬ್ರೇಟಿಂಗ್ ಭಾರತ್ಸ್ ಡಿಜಿಟಲ್ ಅಜೆಂಡಾ) ಈ ಬಾರಿಯ ಸಭೆಯ ಥೀಮ್ ಆಗಿದೆ.

ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವಾಲಯ ಮಾಹಿತಿ ಪ್ರಕಾರ, ಭಾರತದಲ್ಲಿ ಬಹಳ ಸುರಕ್ಷಿತವಾದ, ವಿಶ್ವಾಸಾರ್ಹವಾದ ಮತ್ತು ಸಮರ್ಪಕವಾದ ಸೈಬರ್​ಸ್ಪೇಸ್ ನಿರ್ಮಾಣ ಮಾಡುವುದು, ಭಾರತದ ಅಭಿವೃದ್ಧಿ ಗುರಿ ಸಾಧನೆಗೆ ವಿನೂತನ ಪ್ರಯತ್ನಗಳನ್ನು ಮಾಡುವುದು, ಭಾರತದ ಡಿಜಿಟಲ್ ಅಜೆಂಡಾವನ್ನು ಅರಿತು ಕೊರತೆಗಳನ್ನು ನೀಗಿಸುವುದು ಇವೇ ಮುಂತಾದ ಸಂಗತಿಗಳನ್ನು ಇಂಡಿಯಾ ಇಂಟರ್ನೆಟ್ ಗವರ್ನೆನ್ಸ್ ಫೋರಂ ಸಭೆಯಲ್ಲಿ ಚರ್ಚಿಸಲಾಗುತ್ತದೆ.

ಇದನ್ನೂ ಓದಿ: Corporate Bond: ಆರು ವರ್ಷದಲ್ಲಿ ದ್ವಿಗುಣಗೊಳ್ಳಲಿದೆ ಭಾರತದ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆ; ಏನಿದು ಬಾಂಡ್?

ಅಂದಹಾಗೆ, ವಿಶ್ವಸಂಸ್ಥೆಯ ಇಂಟರ್ನೆಟ್ ಗವರ್ನೆನ್ಸ್ ಫೋರಂನ ಅಡಿಯಲ್ಲಿ ಇಂಡಿಯಾ ಇಂಟರ್ನೆಟ್ ಗವರ್ನೆನ್ಸ್ ಫೋರಂ ಕಾರ್ಯಕ್ರಮ ನಡೆಯುತ್ತಿದೆ. ಭಾರತದಲ್ಲಿ ಇದು ಮೂರನೇ ಸಭೆಯಾಗಿದೆ. 2021 ಮತ್ತು 2022ರಲ್ಲಿ ಮೊದಲೆರಡು ಸಭೆ ನಡೆದಿತ್ತು. ಈಗ ಮೂರನೇ ಆವೃತ್ತಿಯಾಗಿದೆ.

ನವದೆಹಲಿಯ ಪ್ರಗತಿ ಮೈದಾನದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಭಾರತ್ ಮಂಡಪಂನಲ್ಲಿ ಸಭೆ ನಡೆಯಲಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಈ ವರ್ಷದ ಕಾರ್ಯಕ್ರಮದ ಮೊದಲ ಸೆಷನ್​ನಲ್ಲಿ ಭಾಗಿಯಾಗಲಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಕಾರ್ಯದರ್ಶಿ ಎಸ್ ಕೃಷ್ಣನ್ ಸಭೆಯಲ್ಲಿ ವಿಶೇಷ ಭಾಷಣ ಮಾಡಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:00 am, Tue, 5 December 23