ಕೆಲಸ ಕೊಡೋದ್ರಲ್ಲಿ ಬೆಂಗಳೂರು ನಂ. 1; ಭವಿಷ್ಯದ ಜಾಬ್ ಮಾರ್ಕೆಟ್ ಆಗುತ್ತಿವೆ ಈ ಸಣ್ಣ ನಗರಗಳು

TeamLease report on job market in India: ಭಾರತದಲ್ಲಿ ಅತಿಹೆಚ್ಚು ಉದ್ಯೋಗಸೃಷ್ಟಿಯಾಗುತ್ತಿರುವುದು ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್ ನಗರಗಳಲ್ಲಿ. ಇದರ ಮಧ್ಯೆ ಎರಡನೇ ಸ್ತರದ ನಗರಗಳೂ ಕೂಡ ಪೈಪೋಟಿ ನೀಡುತ್ತಿವೆ. ತಮಿಳುನಾಡಿನ ಕೊಯಮತ್ತೂರು, ಹರ್ಯಾಣದ ಗುರುಗ್ರಾಮ್ ನಗರಗಳಲ್ಲಿ ಉದ್ಯೋಗಾವಕಾಶ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಟೀಮ್​ಲೀಸ್​ನ ವರದಿ ಹೇಳಿದೆ.

ಕೆಲಸ ಕೊಡೋದ್ರಲ್ಲಿ ಬೆಂಗಳೂರು ನಂ. 1; ಭವಿಷ್ಯದ ಜಾಬ್ ಮಾರ್ಕೆಟ್ ಆಗುತ್ತಿವೆ ಈ ಸಣ್ಣ ನಗರಗಳು
ಉದ್ಯೋಗ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 02, 2024 | 5:45 PM

ನವದೆಹಲಿ, ಡಿಸೆಂಬರ್ 2: ದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ ಮೊದಲಾದ ನಗರಗಳಲ್ಲಿ ಸಾಕಷ್ಟು ಉದ್ಯಮಗಳು ಬೆಳವಣಿಗೆ ಹೊಂದಿದ್ದು ಅಲ್ಲಿ ಉದ್ಯೋಗಾವಕಾಶ ವಿಫುಲವಾಗಿವೆ. ಈ ಮಧ್ಯೆ ಎರಡನೇ ಸ್ತರದ ನಗರಗಳು ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು ಪ್ರಮುಖ ಉದ್ಯೋಗ ಮಾರುಕಟ್ಟೆಗಳಾಗುವ ಹಾದಿಯಲ್ಲಿವೆ. ಟೀಮ್ ಲೀಸ್ ಎನ್ನುವ ಮಾನವ ಸಂಪನ್ಮೂಲ ಸೇವೆಯ ಏಜೆನ್ಸಿಯ ವರದಿ ಪ್ರಕಾರ, ಕೊಯಂಬತ್ತೂರು, ಜೈಪುರ್, ನಾಗಪುರ್, ಲಕ್ನೋ ಮತ್ತು ಗುರುಗ್ರಾಮ್ ನಗರಗಳಲ್ಲಿ ಉದ್ಯೋಗಾವಕಾಶ ಹೆಚ್ಚುತ್ತಿದೆ. ಆದರೆ, ಜಾಬ್ ಮಾರ್ಕೆಟ್​ನಲ್ಲಿ ಬೆಂಗಳೂರು ಈಗಲೂ ನಂಬರ್ ಒನ್ ಆಗಿದೆ ಎನ್ನುವುದು ಗಮನಾರ್ಹ.

ಟೀಮ್ ಲೀಸ್ ವರದಿ ಪ್ರಕಾರ ಉದ್ಯೋಗಸೃಷ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಇಲ್ಲಿ ಉದ್ಯೋಗಾವಕಾಶ ಶೇ. 53.1ರಷ್ಟು ಹೆಚ್ಚಾಗಿದೆ. ಮುಂಬೈನಲ್ಲಿ ಶೇ. 50.2, ಹೈದರಾಬಾದ್​ನಲ್ಲಿ ಶೇ. 48.2ರಷ್ಟು ಹೆಚ್ಚು ಉದ್ಯೋಗಗಳ ಸೃಷ್ಟಿಯಾಗಿದೆ.

ಇದನ್ನೂ ಓದಿ: ಭಾರತದ ವೈದ್ಯಕೀಯ ತಂತ್ರಜ್ಞಾನ ಉದ್ಯಮಕ್ಕೆ ಅಗಾಧ ಬೆಳವಣಿಗೆಯ ಶಕ್ತಿ ಇದೆ: ಸಿಐಐ ಅನಿಸಿಕೆ

ಪ್ರಮುಖ ಕ್ಲೈಂಟ್​ಗಳು, ಕೌಶಲ್ಯವಂತ ಕೆಲಸಗಾರರು, ಸ್ಥಾಪಿತ ಮೂಲಸೌಕರ್ಯಗಳ ಲಭ್ಯತೆ ಇತ್ಯಾದಿ ಅನುಕೂಲಗಳು ಬೆಂಗಳೂರು ಮೊದಲಾದ ನಗರಗಳಲ್ಲಿ ಇವೆ. ಈ ಕಾರಣಕ್ಕೆ ಸಹಜವಾಗಿ ಹೊಸ ಉದ್ಯೋಗಗಳ ಸೃಷ್ಟಿ ಈ ನಗರಗಳಲ್ಲಿ ಹೆಚ್ಚಿವೆ ಎನ್ನುವುದು ಟೀಮ್ ಲೀಸ್​ನ ಅನಿಸಿಕೆ.

ಆದರೆ, ಕೊಯಂಬತ್ತೂರು, ಗುರುಗ್ರಾಮ್ ಮೊದಲಾದ ಎರಡನೇ ಸ್ತರದ ನಗರಗಳಲ್ಲಿ ಬೆಳವಣಿಗೆ ಆಗುತ್ತಿರುವ ಅಚ್ಚರಿಯ ವಿಚಾರವನ್ನು ಟೀಮ್​ಲೀಸ್ ಗುರುತಿಸಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಶೇ. 24.6, ಗುರುಗ್ರಾಮ್​ನಲ್ಲಿ ಸೇ. 22.6, ಜೈಪುರ್​ನಲ್ಲಿ ಶೇ. 20.3, ಲಕ್ನೋನಲ್ಲಿ ಶೇ. 18.5, ನಾಗಪುರ್​ನಲ್ಲಿ ಶೇ. 16.7ರಷ್ಟು ಉದ್ಯೋಗಸೃಷ್ಟಿಯಾಗಿದೆಯಂತೆ. ಈ ಬೆಳವಣಿಗೆಯ ಹಿಂದೆ ಕೆಲವಾರು ಕಾರಣಗಳನ್ನು ಗುರುತಿಸಲಾಗಿದೆ.

ಇದನ್ನೂ ಓದಿ: ಇಟಿಎಫ್ ರಿಟರ್ನ್​ನ ಮರುಹೂಡಿಕೆ ನಿಯಮ ಸೇರಿದಂತೆ ಇಪಿಎಫ್​ನಲ್ಲಿ ಮಹತ್ವದ ಬದಲಾವಣೆ

ಈ ಕಾರಣಗಳಲ್ಲಿ ಪ್ರಮುಖವಾದುದೆಂದರೆ, ಬೆಂಗಳೂರಿನಂಥ ನಗರಗಳಲ್ಲಿ ರಿಯಲ್ ಎಸ್ಟೇಟ್ ವೆಚ್ಚ ಹಾಗೂ ಬಾಡಿಗೆ ದರ ಬಹಳ ದುಬಾರಿ. ಇದಕ್ಕೆ ಹೋಲಿಸಿದರೆ ಎರಡನೇ ಸ್ತರದ ನಗರಗಳಲ್ಲಿ ಕಡಿಮೆ ವೆಚ್ಚ ಇರುತ್ತದೆ. ಇನ್ನೊಂದು ಪ್ರಮುಖ ಕಾರಣವೆಂದರೆ, ಈ ಸಣ್ಣ ನಗರಗಳಲ್ಲಿ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ಕೌಶಲ್ಯವಂತ ಕೆಲಸಗಾರರ ಲಭ್ಯತೆಯೂ ಅಧಿಕ ಇದೆ. ಹೀಗಾಗಿ, ಹಲವು ಉದ್ದಿಮೆಗಳು ಈ ಸಣ್ಣ ನಗರಗಳಲ್ಲಿ ನೆಲೆ ನಿಲ್ಲಲು ಯತ್ನಿಸುತ್ತಿವೆ ಎಂಬ ವಿಚಾರವನ್ನು ಟೀಮ್​ಲೀಸ್​ನ ವರದಿಯಲ್ಲಿ ಎತ್ತಿ ತೋರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ