ಹಾವಿಗೆ ಹಾಲೆರದರೇನು ಫಲ..! ಟರ್ಕಿ ಜೊತೆ ಎಂಥ ಫ್ರೆಂಡ್​​ಶಿಪ್? ಸರ್ಕಾರದ ನೀತಿಯನ್ನು ತರಾಟೆಗೆ ತೆಗೆದುಕೊಂಡ ತಜ್ಞರು

Indian not a serious country, says political commentators: ಟರ್ಕಿ ಯಾವತ್ತಿಗೂ ಭಾರತದ ಪರವಾಗಿರುವ ದೇಶವಲ್ಲ. ಆ ದೇಶದ ಜೊತೆ ವಾಣಿಜ್ಯ ಮತ್ತು ರಾಜತಾಂತ್ರಿಕ ಸಂಬಂಧ ಇಟ್ಟುಕೊಳ್ಳಬಾರದು ಎಂದು ಭಾರತದ ಕೆಲ ಸೆಕ್ಯೂರಿಟಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚೀನಾದಂತೆ ಟರ್ಕಿ ಕೂಡ ಪಾಕಿಸ್ತಾನಕ್ಕೆ ಸಾಕಷ್ಟು ಮಿಲಿಟರಿ ಶಸ್ತ್ರಾಸ್ತ್ರಗಳ ನೆರವನ್ನು ಪಾಕಿಸ್ತಾನಕ್ಕೆ ನೀಡುತ್ತಿದೆ.

ಹಾವಿಗೆ ಹಾಲೆರದರೇನು ಫಲ..! ಟರ್ಕಿ ಜೊತೆ ಎಂಥ ಫ್ರೆಂಡ್​​ಶಿಪ್? ಸರ್ಕಾರದ ನೀತಿಯನ್ನು ತರಾಟೆಗೆ ತೆಗೆದುಕೊಂಡ ತಜ್ಞರು
ಟರ್ಕಿ ಅಧ್ಯಕ್ಷ ಎರ್ಡೋಗನ್

Updated on: May 07, 2025 | 7:25 PM

ನವದೆಹಲಿ, ಮೇ 7: ಕಾಶ್ಮೀರ, ಭಯೋತ್ಪಾದನೆ ಸೇರಿದಂತೆ ಪಾಕಿಸ್ತಾನಕ್ಕೆ ಎಲ್ಲಾ ರೀತಿಯಿಂದಲೂ ಬೆಂಬಲ ಕೊಡುವ ಕೆಲವೇ ರಾಷ್ಟ್ರಗಳಲ್ಲಿ ಟರ್ಕಿ (Turkey) ಒಂದು. ಈ ದೇಶದ ಜೊತೆ ಭಾರತ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧ ಮುಂದುವರಿಸುತ್ತಿರುವುದು ಈ ಕ್ಷೇತ್ರದ ತಜ್ಞರಿಗೆ ವಿಷಾದ ಮೂಡಿಸಿದೆ. ಭಾರತದ ಇಂಡಿಗೋ ಏರ್ಲೈನ್ಸ್ ಮತ್ತು ಟರ್ಕಿಶ್ ಏರ್ಲೈನ್ಸ್ ಮಧ್ಯೆ ಪಾರ್ಟ್ನರ್​ಶಿಪ್ ಇದ್ದು, ಇದರಲ್ಲಿ ಟರ್ಕಿಯ ವಿಮಾನ ಕಂಪನಿಗೆ ಅತಿದೊಡ್ಡ ಲಾಭ ಪಾಲು ಸಿಗುತ್ತದೆ ಎನ್ನುವಂತಹ ವರದಿ ಬಂದಿದ್ದು, ಈ ವಿಚಾರದ ಬಗ್ಗೆ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾವಿಗೆ ಹಾಲೆರದರೇನು ಫಲ, ಅದು ಯಾವತ್ತಿದ್ದರೂ ಕಚ್ಚುತ್ತೆ ಎಂದು ಒಬ್ಸರ್ವರ್ ರಿಸರ್ಚ್ ಫೌಂಡೇಶನ್​ನ ಸೀನಿಯರ್ ಫೆಲೋ ಅಗಿರುವ ಸುಶಾಂತ್ ಸರೀನ್ ಹೇಳಿದ್ದಾರೆ.

‘ಭಾರತ ಗಂಭೀರ ದೇಶವಲ್ಲ. ಹಾಲಿಗೆ ಹಾಲೆರೆದರೂ ಅದು ಕಚ್ಚಿದಾಗ ಆಶ್ಚರ್ಯ ಪಡುತ್ತೇವೆ. ನಮ್ಮ ಶತ್ರುಗಳನ್ನು ಸನ್ಮಾನಿಸುತ್ತೇವೆ, ಸ್ನೇಹಿತರನ್ನು ಅವಮಾನಿಸುತ್ತೇವೆ. ಟರ್ಕಿಯಂತಹ ದೇಶಗಳು ತಮ್ಮ ಕುಬುದ್ಧಿಯನ್ನು ಬಿಡಬಹುದು ಎನ್ನುವ ಭ್ರಾಂತಿಯಲ್ಲಿದ್ದೇವೆ. ಅವರು ನಮ್ಮಿಂದ ಲಾಭ ಪಡೆದು, ಬಹಿರಂಗವಾಗಿ ನಮಗೆ ಚೂರಿ ಹಾಕುತ್ತಾರೆ’ ಎಂದು ಬಲಪಂಥೀಯ ವಿಚಾರವಾದಿಗಳಲ್ಲಿ ಒಬ್ಬರಾದ ಸುಶಾಂತ್ ಸರೀನ್ ತಮ್ಮ ಎಕ್ಸ್ ಪೋಸ್ಟ್​​​​ನಲ್ಲಿ ತಿಳಿಸಿದ್ದಾರೆ.

ಟರ್ಕಿಶ್ ಏರ್​​ಲೈನ್ಸ್ ಮತ್ತು ಇಂಡಿಗೋ ಏರ್​​ಲೈನ್ಸ್ ಪಾರ್ಟ್ನರ್​​ಶಿಪ್ ಏನು?

ಟರ್ಕಿಶ್ ಏರ್​​ಲೈನ್ಸ್ ಮತ್ತು ಇಂಡಿಗೋ ಏರ್​​ಲೈನ್ಸ್ ಸಂಸ್ಥೆಗಳು ಯೂರೋಪ್ ಮತ್ತು ಅಮೆರಿಕದ 30ಕ್ಕೂ ಹೆಚ್ಚು ಸ್ಥಳಗಳಿಗೆ ಜಂಟಿಯಾಗಿ ಫ್ಲೈಟ್ ಆಪರೇಟ್ ಮಾಡಲು ಒಪ್ಪಂದ ಮಾಡಿಕೊಂಡಿವೆ. ಇದರಲ್ಲಿ ಹೆಚ್ಚಿನ ಲಾಭವು ಟರ್ಕಿಶ್ ಏರ್​​ಲೈನ್ಸ್​​ಗೆ ಹೋಗುತ್ತದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ.

ಇದನ್ನೂ ಓದಿ
80 ಭಾರತೀಯ ವಿಮಾನಗಳಿಂದ ಸ್ಟ್ರೈಕ್; ಟ್ರೋಲ್ ಆದ ಪಾಕ್ ಪ್ರಧಾನಿ
ಭಾರತದ ದಾಳಿ ಬಗ್ಗೆ ಮಹಿಳಾ ಅಧಿಕಾರಿಗಳಿಂದಲೇ ಸುದ್ದಿಗೋಷ್ಠಿ ನಡೆಸಿದ್ದೇಕೆ?
ಮೋದಿಗೆ ಹೋಗಿ ಹೇಳು ಎಂದಿದ್ದವರಿಗೆ ದಿಟ್ಟ ಉತ್ತರ: #Itoldmodi ವೈರಲ್‌!
ಆಪರೇಷನ್ ಸಿಂಧೂರ್​​: ಪತರಗುಟ್ಟಿದ ಪಾಕ್​ ​ಸಚಿವ ಯುಟರ್ನ್

ಇದನ್ನೂ ಓದಿ: ಆಪರೇಷನ್ ಸಿಂಧೂರ್​ನಲ್ಲಿ 80 ಭಾರತೀಯ ಯುದ್ಧವಿಮಾನಗಳಿಂದ ದಾಳಿ: ಟ್ರೋಲ್ ಆದ ಪಾಕ್ ಪ್ರಧಾನಿ ಹೇಳಿಕೆ

ಪಾಕಿಸ್ತಾನಕ್ಕೆ ಸಾಕಷ್ಟು ಮಿಲಿಟರಿ ನೆರವು ನೀಡುವ ಟರ್ಕಿ

ಚೀನಾದಂತೆ ಟರ್ಕಿ ಕೂಡ ಪಾಕಿಸ್ತಾನಕ್ಕೆ ಸರ್ವವಿಧದಲ್ಲೂ ಮಿತ್ರ ದೇಶವಾಗಿದೆ. ಟರ್ಕಿ ತನ್ನ ಬಯ್ರಾಕ್ತರ್ ಮತ್ತು ಅಕಿಂಚಿ ಡ್ರೋನ್​​​ಗಳನ್ನು ಪಾಕಿಸ್ತಾನಕ್ಕೆ ಸರಬರಾಜು ಮಾಡಿದೆ. KAAN ಎನ್ನುವ ಅತ್ಯಾಧುನಿಕ ಫೈಟರ್ ಜೆಟ್ ಅನ್ನು ಪಾಕಿಸ್ತಾನದ ಜೊತೆ ಸೇರಿ ತಯಾರಿಸುತ್ತಿದೆ. ಅಷ್ಟೇ ಅಲ್ಲ, ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರ ದಾಳಿ ಘಟನೆಯಾದ ಕೆಲವೇ ದಿನದಲ್ಲಿ ಟರ್ಕಿಯ ಆರು ಮಿಲಿಟರಿ ಏರ್​​ಕ್ರಾಫ್ಟ್​​ಗಳು ಪಾಕಿಸ್ತಾನಕ್ಕೆ ಹೋಗಿ, ರಕ್ಷಣಾ ಸರಕುಗಳನ್ನು ಇಳಿಸಿವೆ.

ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಟರ್ಕಿ ಬಹಿರಂಗವಾಗಿ ಬೆಂಬಲ ನೀಡುತ್ತದೆ. ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ನಿಲುವನ್ನು ಬೆಂಬಲಿಸುತ್ತದೆ. ಇಷ್ಟಾದರೂ ಭಾರತವು ಟರ್ಕಿ ಜೊತೆ ಯಾಕೆ ಉತ್ತಮ ಸಂಬಂಧ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಾರತ, ಪಾಕ್‌ ನಡುವೆ ಉದ್ವಿಗ್ನ: ದೇಶದ 18 ವಿಮಾನ ನಿಲ್ದಾಣಗಳು ಬಂದ್​, 200 ವಿಮಾನಗಳು ರದ್ದು!

ಯೂರೋಪ್​​ಗೆ ಪ್ರಯಾಣಿಸುವ ಭಾರತೀಯರು ಇಸ್ತಾಂಬುಲ್ ಮೂಲಕ ಯಾಕೆ ಹೋಗಬೇಕು ಎಂದು ಪತ್ರಕರ್ತ ವಿಕ್ರಮ್ ಚಂದ್ರ ಪ್ರಶ್ನೆ ಮಾಡಿದ್ದಾರೆ.

‘ಇಸ್ತಾಂಬುಲ್ ಮೂಲಕ ಯಾಕೆ ಹೋಗಬೇಕು ಎನ್ನುವುದೇ ಅರ್ಥವಾಗುತ್ತಿಲ್ಲ. ಚೀನಾ ಜೊತೆ ಟರ್ಕಿ ಕೂಡ ಪಾಕಿಸ್ತಾನದ ಪ್ರಬಲ ಬೆಂಬಲಿಗ ದೇಶವಾಗಿದೆ. ಟರ್ಕಿ ಬದಲು ಭಾರತವು ಗ್ರೀಸ್ ಜೊತೆ ಸಂಬಂಧ ಗಟ್ಟಿಗೊಳಿಸಬೇಕು. ಇಸ್ತಾಂಬುಲ್​​ಗೆ ಸಾಕಷ್ಟು ನೇರ ಫ್ಲೈಟ್​​​ಗಳಿವೆ. ಆದರೆ, ಅಥೆನ್ಸ್​​ಗೆ ಒಂದೂ ಇಲ್ಲ’ ಎಂದು ವಿಕ್ರಮ್ ಚಂದ್ರ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ