
‘ಪತಂಜಲಿ’ ಬ್ರಾಂಡ್ ಹೆಸರಿನಲ್ಲಿ ದಂತ ಕಾಂತಿ, ಗುಲಾಬ್ ಶರಬತ್ತು, ಹಸು ತುಪ್ಪ ಅಥವಾ ಜೇನುತುಪ್ಪದಂತಹ ಉತ್ಪನ್ನಗಳ ಬಗ್ಗೆ ನೀವು ಕೇಳಿರಬೇಕು. ಇವೆಲ್ಲವೂ ಬಾಬಾ ರಾಮದೇವ್ (Baba Ramdev) ಅವರ ಪತಂಜಲಿ ಫುಡ್ಸ್ ಕಂಪನಿಯು ರೀಟೇಲ್ ಉತ್ಪನ್ನಗಳ ಪೋರ್ಟ್ಫೋಲಿಯೊಗಳಾಗಿವೆ. ಆದರೆ ಸಗಟು (ಹೋಲ್ಸೇಲ್) ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಅನೇಕ ಉತ್ಪನ್ನಗಳನ್ನು ಸಹ ಪತಂಜಲಿ ತಯಾರಿಸುತ್ತದೆ ಎನ್ನುವುದು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಬಿ2ಬಿ ವಿಭಾಗದಲ್ಲಿ ತನ್ನ ಉತ್ಪನ್ನಗಳಲ್ಲಿ ಅದು ಮಾರುಕಟ್ಟೆಯ ಲೀಡಿಂಗ್ನಲ್ಲಿ ಇದೆ. ಇದು ವಾಸ್ತವ.
2019 ರಲ್ಲಿ ಪತಂಜಲಿ ಆಯುರ್ವೇದ ಸಂಸ್ಥೆಯು ಮಧ್ಯಪ್ರದೇಶದ ರುಚಿ ಸೋಯಾ ಇಂಡಸ್ಟ್ರೀಸ್ ಎನ್ನುವ ಪ್ರಮುಖ ಕಂಪನಿಯೊಂದನ್ನು ಖರೀದಿಸಿತು. ಇದರ ನಂತರ, ಪತಂಜಲಿ ಗ್ರೂಪ್‌ನ FMCG ವ್ಯವಹಾರಗಳು ಕ್ರಮೇಣ ಈ ಕಂಪನಿಗೆ ವರ್ಗವಾದವು. ನಂತರ, ಪತಂಜಲಿ ಫುಡ್ಸ್ ಎಂಬ ಹೊಸ ಕಂಪನಿಯನ್ನು ಸ್ಥಾಪಿಸಲಾಯಿತು. ಆದರೂ ಕೂಡ ರುಚಿ ಸೋಯಾ ಇಂಡಸ್ಟ್ರೀಸ್ನ ಹೋಲ್ಸೇಲ್ ಬ್ಯುಸಿನೆಸ್ ಎಂದಿನಂತೆ ನಡೆದೇ ಇತ್ತು.
ರುಚಿ ಸೋಯಾ ಇಂಡಸ್ಟ್ರೀಸ್ ದೇಶದಲ್ಲಿ ಸೋಯಾಬೀನ್ ಎಣ್ಣೆಯನ್ನು ತಯಾರಿಸಲು ಪ್ರಾರಂಭಿಸಿದ ಮೊದಲ ಕಂಪನಿಯಾಗಿದೆ. ದೇಶದಲ್ಲಿ ಮೊದಲ ಸೋಯಾಬೀನ್ ಸಂಸ್ಕರಣಾ ಘಟಕವನ್ನು ಸ್ಥಾಪಿಸದ ಕಂಪನಿ ಇದು. ಇದರ ‘ಮಹಾಕೋಶ್’ ಎನ್ನುವ ಬ್ರಾಂಡ್ನ ಸೋಯಾಬೀನ್ ಎಣ್ಣೆ ಈಗಾಗಲೇ ಹೆಸರುವಾಸಿಯಾಗಿದೆ. ಕಂಪನಿಯು ವಿವಿಧ ಸೋಯಾ ಉತ್ಪನ್ನಗಳನ್ನು ನ್ಯೂಟ್ರೆಲಾ ಬ್ರಾಂಡ್ ಹೆಸರಿನಲ್ಲಿ ರೀಟೇಲ್ ಮಾರಾಟ ಮಾಡುತ್ತದೆ.
ಇದನ್ನೂ ಓದಿ: ಹಠಯೋಗ, ರಾಜಯೋಗ ಇನ್ನೂ ಹಲವು ಯೋಗಪ್ರಾಕಾರಗಳ ಬಗ್ಗೆ ಬಾಬಾ ರಾಮದೇವ್ರೀಂದ ತಿಳಿಯಿರಿ
ಈಗ ಪತಂಜಲಿ ಫುಡ್ಸ್ ಆಗಿ ಮಾರ್ಪಟ್ಟಿರುವ ರುಚಿ ಸೋಯಾ ಇಂಡಸ್ಟ್ರೀಸ್, ದೇಶದ ಅತಿದೊಡ್ಡ ಸೋಯಾ ಕೃಷಿ ವ್ಯವಹಾರ ಹೊಂದಿದೆ. ಕಂಪನಿಯು ಸೋಯಾಬೀನ್‌ನ ಗರಿಷ್ಠ ಬಳಕೆಯಲ್ಲಿ ಪರಿಣತಿಯನ್ನು ಹೊಂದಿದೆ. ಕಂಪನಿಯು ದೇಶಾದ್ಯಂತ 10 ಸುಧಾರಿತ ಕ್ರಷಿಂಗ್ ಪ್ಲಾಂಟ್‌ಗಳನ್ನು ಹೊಂದಿದ್ದರೆ, 4 ದೊಡ್ಡ ಸಂಸ್ಕರಣಾಗಾರಗಳನ್ನು ಹೊಂದಿದೆ. 2020 ರಿಂದ ರೀಟೇಲ್ ಸೆಕ್ಟರ್ನಲ್ಲಿ ತನ್ನ ನ್ಯೂಟ್ರೆಲಾ (Nutrela) ಬ್ರ್ಯಾಂಡ್ ಅನ್ನು ಬಲಪಡಿಸಲು ಪ್ರಾರಂಭಿಸಿತು. ಅದೇ ಸಮಯದಲ್ಲಿ, ಕಂಪನಿಯು ಸೋಯಾದಿಂದ ಅನೇಕ ಉಪ ಉತ್ಪನ್ನಗಳನ್ನು B2B ಅಡಿಯಲ್ಲಿ ಇತರ ಕೈಗಾರಿಕೆಗಳಿಗೆ ಮಾರಾಟ ಮಾಡುತ್ತದೆ. ಈ ಸೋಯಾ ಉತ್ಪನ್ನಗಳನ್ನು ಮಿಠಾಯಿಗಳಿಂದ ಹಿಡಿದು ಹೆಲ್ತ್ ಸಪ್ಲಿಮೆಂಟ್ಗಳವರೆಗೆ ಬಳಸಲಾಗುತ್ತದೆ.
ಇದನ್ನೂ ಓದಿ: ಪತಂಜಲಿ ದಂತ ಕಾಂತಿ ಟೂತ್ಪೇಸ್ಟ್ ಜನಪ್ರಿಯತೆಗೆ ಕಾರಣ ಏನು? ಶೇ. 89 ಜನರು ಕೊಟ್ಟ ಉತ್ತರ ಇದು
ಇವುಗಳಲ್ಲದೆ, ಕಂಪನಿಯು ಪೂರ್ಣ ಕೊಬ್ಬಿನ ಸೋಯಾ ಹಿಟ್ಟು, ಸೋಯಾಬೀನ್ ಗಂಜಿಯಂತೆ ಕಾಣುವ ಸೋಯಾ ಗ್ರಿಟ್ ಮತ್ತು ಟೆಕ್ಸ್ಚರ್ಡ್ ಸೋಯಾ ಪ್ರೋಟೀನ್ ಅನ್ನು ಸಹ ತಯಾರಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ