World’s Richest Man ಗೌತಮ್ ಅದಾನಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ: ವರದಿ

| Updated By: ರಶ್ಮಿ ಕಲ್ಲಕಟ್ಟ

Updated on: Sep 16, 2022 | 12:54 PM

Gautam Adani ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಅದಾನಿ ಅವರ ನಿವ್ವಳ ಮೌಲ್ಯವು ಸೆಪ್ಟೆಂಬರ್ 16, 2022 ರ ಹೊತ್ತಿಗೆ 155.7 ಬಿಲಿಯನ್ ಡಾಲರ್ ಆಗಿದೆ

Worlds Richest Man ಗೌತಮ್ ಅದಾನಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ: ವರದಿ
ಗೌತಮ್ ಅದಾನಿ
Follow us on

ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ (Gautam Adani) ಈಗ ವಿಶ್ವದ ಎರಡನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಅದಾನಿ ಅವರ ನಿವ್ವಳ ಮೌಲ್ಯವು ಸೆಪ್ಟೆಂಬರ್ 16, 2022 ರ ಹೊತ್ತಿಗೆ 155.7 ಬಿಲಿಯನ್ ಡಾಲರ್ ಆಗಿದೆ, ಇದು 5.5 ಬಿಲಿಯನ್  ಡಾಲರ್ ಅಥವಾ ಸುಮಾರು ಶೇ 4ರಷ್ಟು ಹೆಚ್ಚಾಗಿದೆ. ಅದಾನಿ ಅವರು ಅಮೆಜಾನ್‌ನ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ  ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಫೋರ್ಬ್ಸ್ ರಿಯಲ್ ಟೈಮ್ ಮಾಹಿತಿಯ ಪ್ರಕಾರ 273.5 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಟೆಸ್ಲಾದ ಎಲೋನ್ ಮಸ್ಕ್. ಅದಾನಿ ಗ್ರೂಪ್ ಷೇರುಗಳಲ್ಲಿ ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ ಮತ್ತು ಅದಾನಿ ಟ್ರಾನ್ಸ್‌ಮಿಷನ್ ಶುಕ್ರವಾರದ ಆರಂಭಿಕ ವ್ಯವಹಾರಗಳಲ್ಲಿ ಬಿಎಸ್‌ಇಯಲ್ಲಿ ತಮ್ಮ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದವು, ಇದು ಗುಂಪಿನ ಅಧ್ಯಕ್ಷರ ರಿಯಲ್ ಟೈಮ್ ನಿವ್ವಳ ಮೌಲ್ಯದಲ್ಲಿ ಏರಿಕೆಗೆ ಕಾರಣವಾಯಿತು.

ಅದಾನಿ ಅವರು 2022 ರಲ್ಲಿ (YTD) ಇಲ್ಲಿಯವರೆಗೆ $70 ಶತಕೋಟಿಗಿಂತ ಹೆಚ್ಚಿನ ಹಣವನ್ನು ತಮ್ಮ ಸಂಪತ್ತಿಗೆ ಸೇರಿಸಿದ್ದಾರೆ.  ಈ ವರ್ಷ ಅವರ ನಿವ್ವಳ ಮೌಲ್ಯದ ಹೆಚ್ಚಳವನ್ನು ಕಂಡ ವಿಶ್ವದ 10 ಶ್ರೀಮಂತ ಜನರಲ್ಲಿ ಒಬ್ಬರು ಮಾತ್ರ. ಅದಾನಿ ಫೆಬ್ರವರಿಯಲ್ಲಿ ಏಷ್ಯಾದ ಶ್ರೀಮಂತರಾಗಿ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದರು. ಕಳೆದ ತಿಂಗಳು ಮೈಕ್ರೋಸಾಫ್ಟ್ ಕಾರ್ಪೊರೇಷನ್‌ನ ಬಿಲ್ ಗೇಟ್ಸ್ ಅವರನ್ನು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಹಿಂದಿಕ್ಕಿದರು.

60ರ ಹರೆಯದ ಅದಾನಿ ಭಾರತದ ಅತಿದೊಡ್ಡ ಬಂದರು ನಿರ್ವಾಹಕರಾದ ಅದಾನಿ ಸಮೂಹದ ಸಂಸ್ಥಾಪಕರಾಗಿದ್ದಾರೆ. ಅಹಮದಾಬಾದ್ ನಲ್ಲಿರುವ  ಅದಾನಿಯವರ ಸಮೂಹವು ಭಾರತದ ಅತ್ಯಂತ ನಿಕಟವಾದ ಉಷ್ಣ ಕಲ್ಲಿದ್ದಲು ಉತ್ಪಾದಕ ಮತ್ತು ಅತಿದೊಡ್ಡ ಕಲ್ಲಿದ್ದಲು ವ್ಯಾಪಾರಿಯಾಗಿದೆ. ಅವರ $13 ಬಿಲಿಯನ್ (ಆದಾಯ)ದ ಅದಾನಿ ಗ್ರೂಪ್‌ ಮೂಲಸೌಕರ್ಯ, ಸರಕುಗಳು, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಮತ್ತು ರಿಯಲ್ ಎಸ್ಟೇಟ್ ಅನ್ನು ವ್ಯಾಪಿಸಿದೆ.

ಮೇ 2022 ರಲ್ಲಿ, ಅವರು ಭಾರತದಲ್ಲಿ ಸ್ವಿಸ್ ದೈತ್ಯ ಹೋಲ್ಸಿಮ್‌ನ ಸಿಮೆಂಟ್ ವ್ಯವಹಾರವನ್ನು $ 10.5 ಬಿಲಿಯನ್‌ಗೆ ಸ್ವಾಧೀನಪಡಿಸಿಕೊಳ್ಳುವ ಮೂಲಕ ಅದಾನಿ ಗ್ರೂಪ್  ಸಿಮೆಂಟ್‌ಗೆ ವ್ಯವಹಾರಕ್ಕೆ ಪ್ರವೇಶ ಪಡೆದರು. ಅದಾನಿಯು ವಿಶ್ವದ ಅತಿದೊಡ್ಡ ಹಸಿರು ಇಂಧನ ಉತ್ಪಾದಕರಾಗಲು ಬಯಸುತ್ತಾರೆ ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳಲ್ಲಿ $70 ಬಿಲಿಯನ್‌ವರೆಗೆ ಹೂಡಿಕೆ ಮಾಡುವುದಾಗಿ ಹೇಳಿದ್ದಾರೆ. ಅವರು ತಮ್ಮ ದತ್ತಿ ನೀಡುವಿಕೆಯನ್ನೂ ಹೆಚ್ಚಿಸಿದ್ದಾರೆ. ಜೂನ್‌ನಲ್ಲಿ ತಮ್ಮ 60 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಗಳಿಗಾಗಿ 7.7 ಶತಕೋಟಿ ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿದ್ದರು.

ಟಾಪ್ 10 ಪಟ್ಟಿಯಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ 92.2 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಎರಡನೇ ಭಾರತೀಯರಾಗಿದ್ದಾರೆ. ಮೊದಲ ಹತ್ತು ಪಟ್ಟಿಯಲ್ಲಿರುವ ಇತರ ಬಿಲಿಯನೇರ್‌ಗಳೆಂದರೆ ಬಿಲ್ ಗೇಟ್ಸ್, ಲ್ಯಾರಿ ಎಲಿಸನ್, ವಾರೆನ್ ಬಫೆಟ್, ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್.

ಆಗಸ್ಟ್ 30 ರಂದು, ಲೂಯಿ ವಿಟಾನ್ ಮುಖ್ಯಸ್ಥ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಅದಾನಿ ಹೊರಹೊಮ್ಮಿದ್ದರು. ಅಗ್ರ ಮೂರು ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಷ್ಯಾದ ಮೊದಲ ವ್ಯಕ್ತಿಯೂ ಅದಾನಿ ಆಗಿದ್ದಾರೆ.

Published On - 12:22 pm, Fri, 16 September 22