Footwear Industry: ಚಪ್ಪಲಿ, ಶೂ ಇತ್ಯಾದಿ 24 ಪಾದರಕ್ಷೆ ಉತ್ಪನ್ನಗಳಿಗೆ ಜುಲೈ 1ರಿಂದ ಬಿಐಎಸ್ ಲೈಸೆನ್ಸ್ ಕಡ್ಡಾಯ

|

Updated on: Jun 20, 2023 | 11:59 AM

BIS License Mandatory For 24 Footwear Products: 24 ಪಾದರಕ್ಷೆ ಉತ್ಪನ್ನಗಳ ತಯಾರಿಕೆಗೆ ಬಿಐಎಸ್ ಪರವಾನಿಗೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಈ ಲೈಸೆನ್ಸ್ ಇಲ್ಲದೆ ಉತ್ಪನ್ನಗಳನ್ನು ತಯಾರಿಸುವುದಾಗಲೀ, ಮಾರುವುದಾಗಲೀ ಮಾಡುವಂತಿಲ್ಲ.

Footwear Industry: ಚಪ್ಪಲಿ, ಶೂ ಇತ್ಯಾದಿ 24 ಪಾದರಕ್ಷೆ ಉತ್ಪನ್ನಗಳಿಗೆ ಜುಲೈ 1ರಿಂದ ಬಿಐಎಸ್ ಲೈಸೆನ್ಸ್ ಕಡ್ಡಾಯ
ಪಾದರಕ್ಷೆ
Follow us on

ನವದೆಹಲಿ: ಗುಣಮಟ್ಟದ ಪಾದರಕ್ಷೆಗಳ ತಯಾರಿಕೆಗೆ ಉತ್ತೇಜನ ಕೊಡಲು ಸರ್ಕಾರ ಬಿಐಎಸ್ ಲೈಸೆನ್ಸ್ ವ್ಯವಸ್ಥೆ ತಂದಿದೆ. ಪಾದರಕ್ಷೆ ತಯಾರಕರು ಇನ್ನುಂದೆ ಬಿಐಎಸ್ ಪರವಾನಿಗೆ (BIS License) ಪಡೆಯಬೇಕಾಗುತ್ತದೆ. ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್​ನ ಬಿಐಎಸ್ ಲೈಸೆನ್ಸ್ ಪಡೆಯುವುದನ್ನು 24 ಪಾದರಕ್ಷೆ ಉತ್ಪನ್ನಗಳಿಗೆ ಕಡ್ಡಾಯ ಮಾಡಲಾಗಿದೆ. ಜುಲೈ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಅಂದರೆ, ಪಾದರಕ್ಷೆ ತಯಾರಕರು ಬಿಐಎಸ್ ಪರವಾನಿಗೆ ಇಲ್ಲದೇ ಉತ್ಪಾದನೆ ಮಾಡುವಂತಿಲ್ಲ.

ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಸಂಸ್ಥೆಯ ಮಹಾನಿರ್ದೇಶಕ ಪ್ರಮೋದ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ಸಂಗತಿಯನ್ನು ಘೋಷಿಸಿದ್ದಾರೆ. ಪಾದರಕ್ಷೆ ಮತ್ತಿರರ ಉತ್ಪನ್ನಗಳಿಗೆ ಗುಣಮಟ್ಟ ನಿಯಂತ್ರಣ ವ್ಯವಸ್ಥೆ (Quality Control Order) ಇರಬೇಕೆಂದು ಸರ್ಕಾರ ಸೂಚಿಸಿರುವ ವಿಚಾರವನ್ನು ಉಲ್ಲೇಖಿಸಿದ ಅವರು, ಈ ಕ್ವಾಲಿಟಿ ಕಂಟ್ರೋಲ್ ಆರ್ಡರ್​ಗಳ ಅಡಿಯಲ್ಲಿ ಉತ್ಪನ್ನಗಳ ತಯಾರಿಕೆ, ಆಮದು ಅಥವಾ ಮಾರಾಟಕ್ಕೆ ಬಿಐಎಸ್ ಲೈಸೆನ್ಸ್ ಕಡ್ಡಾಯ ಇರಲಿದೆ ಎಂದಿದ್ದಾರೆ.

ಇದನ್ನೂ ಓದಿIIFL Securities: ಐಐಎಫ್​ಎಲ್ ಸೆಕ್ಯೂರಿಟೀಸ್ ಮೇಲೆ ಸೆಬಿ ನಿರ್ಬಂಧ; ಷೇರುಬೆಲೆ ಶೇ. 18ಕ್ಕಿಂತ ಹೆಚ್ಚು ಕುಸಿತ

ವ್ಯಾಪಾರ ಮತ್ತು ಉದ್ಯಮ ಸಂಸ್ಥೆ ಹಾಗೂ ಇತರ ಸಂಬಂಧಿತರೊಂದಿಗೆ ಸಮಾಲೋಚನೆ ನಡೆಸಿ ಪಾದರಕ್ಷೆ ಉತ್ಪನ್ನಗಳಿಗೆ ಗುಣಮಟ್ಟ ಪ್ರಮಾಣ ಹೇಗಿರಬೇಕೆಂದು ನಿರ್ಧರಿಸಲಾಗಿದೆ. ಸಣ್ಣ ಮತ್ತು ಅತಿಸಣ್ಣ ಮಟ್ಟದ ಕೈಗಾರಿಕೆಗಳು ಈ ಗುಣಮಟ್ಟಕ್ಕೆ ಹೊಂದಿಕೊಳ್ಳಲು ಅನುವಾಗುವಂತೆ ಅವರಿಗೆ ಹೆಚ್ಚು ಕಾಲಾವಕಾಶ ಕೊಡಲಾಗುತ್ತಿದೆ ಎಂದು ಪ್ರಮೋದ್ ಕುಮಾರ್ ತಿವಾರಿ ಹೇಳಿದ್ದಾರೆ.

ಸಣ್ಣ ಉದ್ಯಮ ಘಟಕ ಮತ್ತು ಸರ್ಟಿಫೈಡ್ ಸ್ಟಾರ್ಟಪ್​ಗಳಿಗೆ ಪಾದರಕ್ಷೆ ಉತ್ಪನ್ನಗಳ ಪರೀಕ್ಷಾ ಶುಲ್ಕದಲ್ಲಿ ಶೇ. 80ರಷ್ಟು ರಿಯಾಯಿತಿ ಕೊಡುವುದಾಗಿ ಸರ್ಕಾರ ಇತ್ತೀಚೆಗೆ ಪ್ರಕಟಿಸಿತ್ತು. ಇದೆಲ್ಲವೂ ದೇಶದ ಪಾದರಕ್ಷೆ ಉದ್ಯಮದ ಬೆಳವಣಿಗೆಗೆ ಪೂರಕವಾಗುವ ರೀತಿಯಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮವಾಗಿದೆ.

ಎಲ್ಲಾ ಶೂ ತಯಾರಕರೂ ಬಿಐಎಸ್ ಸರ್ಟಿಫಿಕೇಟ್ ಪಡೆಯಬೇಕು ಎಂದು ಇತ್ತೀಚೆಗೆ ಕಡ್ಡಾಯಪಡಿಸಲಾಗಿತ್ತು. ಎಲ್ಲಾ ಪಾದರಕ್ಷೆ ಉತ್ಪನ್ನಗಳಿಗೂ ಐಎಸ್​ಐ ಮಾರ್ಕ್ ಹೊಂದಿರಲೇಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ