ವಕೀಲರಿಗೆ ತೆರಿಗೆ ಇಲಾಖೆ ನೀಡಿದ್ದ ನೊಟಿಸ್​ಗೆ ತಡೆ ನೀಡಿದ ಬಾಂಬೆ ಹೈಕೋರ್ಟ್​

2014-15ನೇ ಹಣಕಾಸು ವರ್ಷದಲ್ಲಿ ತೆರಿಗೆ ತುಂಬಿಲ್ಲ ಎಂದು ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಸಹಾಯಕ ಸಚಿವರು, ವಕೀಲ ಸಂಜೀವ್​ ಮಧುಸೂದನ್​ ಶಾಗೆ ಶೋಕಾಸ್​ ಕಮ್​ ಡಿಮ್ಯಾಂಡ್​ ನೋಟಿಸ್​ ನೀಡಿತ್ತು.

ವಕೀಲರಿಗೆ ತೆರಿಗೆ ಇಲಾಖೆ ನೀಡಿದ್ದ ನೊಟಿಸ್​ಗೆ ತಡೆ ನೀಡಿದ ಬಾಂಬೆ ಹೈಕೋರ್ಟ್​
ಸಾಂದರ್ಭಿಕ ಚಿತ್ರ

Updated on: Jan 17, 2021 | 9:59 PM

ಮುಂಬೈ: ತೆರಿಗೆ ಪಾವತಿ ಮಾಡದ ವಕೀಲರೊಬ್ಬರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್​ ನೀಡಿತ್ತು. ಈ ನೋಟಿಸ್​ಗೆ ಬಾಂಬೇ ಹೈಕೋರ್ಟ್​ ಈಗ ತಡೆ ನೀಡಿದೆ.

2014-15ನೇ ಹಣಕಾಸು ವರ್ಷದಲ್ಲಿ ತೆರಿಗೆ ತುಂಬಿಲ್ಲ ಎಂದು ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಸಹಾಯಕ ಸಚಿವರು, ವಕೀಲ ಸಂಜೀವ್​ ಮಧುಸೂದನ್​ ಶಾಗೆ ಶೋಕಾಸ್​ ಕಮ್​ ಡಿಮ್ಯಾಂಡ್​ ನೋಟಿಸ್​ ನೀಡಿತ್ತು. ಈ ಕ್ರಮವನ್ನು ಸಂಜೀವ್​ ಬಾಂಬೇ ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡಿದ್ದರು.

ವ್ಯಕ್ತಿ ವಕೀಲನಾಗಿ ಸೇವೆ ಸಲ್ಲಿಸುತ್ತಿದ್ದರೆ ಅವರು ಸೇವಾ ತೆರಿಗೆಯಿಂದ ವಿನಾಯಿತಿ ಪಡೆದಿರುತ್ತಾರೆ ಎಂದು ಈ ಮೊದಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದೇ ಆಧಾರದ ಮೇಲೆ ಸಂಜೀವ್​ ವಾದ ಮಂಡನೆ ಮಾಡಿದ್ದರು. ಹೀಗಾಗಿ, ಬಾಂಬೇ ಹೈಕೋರ್ಟ್​ ಜಿಎಸ್​ಟಿ ನೋಟಿಸ್​ಗೆ ತಡೆ ನೀಡಿದೆ.

ನೋಟಿಸ್ ಅವಧಿ ಮುಗಿಸದೇ ಕೆಲಸ ಬಿಟ್ಟರೆ ಕಾದಿದೆ ಜಿಎಸ್​ಟಿ ಗುಮ್ಮ! ಏನದು ಲೆಕ್ಕಾಚಾರ?

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us