
ಬೆಂಗಳೂರು, ಸೆಪ್ಟೆಂಬರ್ 1: ಭಾರತ ಈ ಹೈಸ್ಪೀಡ್ ರೈಲು ಜಾಲವನ್ನು (Indian railways) ತ್ವರಿತವಾಗಿ ಹೆಚ್ಚಿಸಲು ಯೋಜಿಸಿದೆ. ಸದ್ಯ ಅಹ್ಮದಾಬಾದ್ ಮತ್ತು ಮುಂಬೈ ಮಾರ್ಗದಲ್ಲಿ ಬುಲೆಟ್ ರೈಲಿನ ಯೋಜನೆ (Bullet train project) ವೇಗವಾಗಿ ಕಾರ್ಯಗತಗೊಳ್ಳುತ್ತಿದೆ. ಈ ಮಧ್ಯೆ ಬುಲೆಟ್ ರೈಲು ವ್ಯವಸ್ಥೆ ತರಲು ವಿವಿಧ ಮಾರ್ಗಗಳನ್ನು ಅವಲೋಕಿಸಲಾಗುತ್ತಿದೆ. ಕಳೆದ ವಾರ ಆಂಧ್ರ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ದಕ್ಷಿಣ ಭಾರತದಲ್ಲಿ ಹೈಸ್ಪೀಡ್ ಕಾರಿಡಾರ್ ಸ್ಥಾಪಿಸುವ ಉದ್ದೇಶ ಇರುವುದನ್ನು ತಿಳಿಸಿದ್ದಾರೆ. ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ನಾಲ್ಕು ನಗರಗಳನ್ನು ಸಂಪರ್ಕಿಸುವ ಹೈಸ್ಪೀಡ್ ರೈಲು ಜಾಲಕ್ಕಾಗಿ ಸರ್ವೆ ಕಾರ್ಯಕ್ಕೆ ಆದೇಶ ಹೊರಡಿಸಿರುವುದಾಗಿ ನಾಯ್ಡು ತಿಳಿಸಿದ್ಧಾರೆ.
ಪ್ರಸ್ತಾಪಿತ ಬುಲೆಟ್ ರೈಲು ಕಾರಿಡಾರ್ನಲ್ಲಿ ಹೈದರಾಬಾದ್, ಚೆನ್ನೈ, ಅಮರಾವತಿ ಮತ್ತು ಬೆಂಗಳೂರು ನಗರಗಳು ಹೈಸ್ಪೀಡ್ ರೈಲು ಮಾರ್ಗದಲ್ಲಿ ಒಳಗೊಳ್ಳಲಿವೆ. ಈ ಕಾರಿಡಾರ್ನಲ್ಲಿರುವ ನಾಲ್ಕು ನಗರಗಳಲ್ಲಿ ಐದು ಕೋಟಿಗೂ ಅಧಿಕ ಜನಸಂಖ್ಯೆ ಇದ್ದು, ಹೈಸ್ಪೀಡ್ ರೈಲಿಗೆ ವಾಣಿಜ್ಯಾತ್ಮಕವಾಗಿ ಬಹಳ ಬೇಡಿಕೆಯಲ್ಲಿರುವ ಮಾರ್ಗವೆನಿಸಲಿದೆ ಎಂಬುದು ಆಂಧ್ರ ಸಿಎಂ ಅವರ ಅನಿಸಿಕೆ. ಈ ಸೌತ್ ಇಂಡಿಯಾ ಹೈಸ್ಪೀಡ್ ರೈಲು ಕಾರಿಡಾರ್ ಸಿದ್ಧವಾದಲ್ಲಿ ದಕ್ಷಿಣ ಭಾರತದಲ್ಲಿ ಆರ್ಥಿ ಬೆಳವಣಿಗೆಗೆ ಪುಷ್ಟಿ ಸಿಗುತ್ತದೆ ಎಂದಿದ್ದಾರೆ ಅವರು.
ಕಳೆದ ವಾರ ನರೇಂದ್ರ ಮೋದಿ ಅವರು ಜಪಾನ್ ದೇಶಕ್ಕೆ ಭೇಟಿ ನೀಡಿದ್ದರು. ಜಪಾನ್ ಪ್ರಧಾನಿ ಶಿಗೆರು ಇಶಿಬಾ ಜೊತೆ ಮೋದಿ ಅವರು ಟೋಕಿಯೋದಿಂದ ಸೆಂಡೈವರೆಗೆ ಶೀನ್ಕಾನ್ಸೆನ್ ಬುಲೆಟ್ ಟ್ರೈನ್ನಲ್ಲಿ ಪ್ರಯಾಣಿಸಿದರು. ಈ ವೇಳೆ ಅಲ್ಲಿಯ ಮಾಧ್ಯಮವೊಂದರಲ್ಲಿ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದೇಶದಲ್ಲಿ 7,000 ಕಿಮೀ ಉದ್ದದ ಬುಲೆಟ್ ರೈಲು ಜಾಲ ನಿರ್ಮಿಸುವ ಗುರಿ ಬಗ್ಗೆ ಹೇಳಿಕೊಂಡಿದ್ದಾರೆ.
ಜಪಾನ್ ದೇಶದ ತಂತ್ರಜ್ಞಾನದ ಸಹಾಯದಿಂದ ಮುಂಬೈ ಮತ್ತು ಅಹ್ಮದಾಬಾದ್ ನಡುವೆ ಹೈ ಸ್ಪೀಡ್ ರೈಲು ನೆಟ್ವರ್ಕ್ ನಿರ್ಮಿಸಲಾಗುತ್ತಿದೆ. ಈ ಮಾರ್ಗದಲ್ಲಿ ಜಪಾನ್ನ ಶೀಂಕಾನ್ಸೆನ್ ಇ5 ಅಥವಾ ಇ10 ಟ್ರೈನ್ ಅನ್ನು ಓಡಿಸುವ ಗುರಿ ಇದೆ. ಇನ್ನು 2-3 ವರ್ಷದಲ್ಲಿ ಈ ರೈಲು ಮಾರ್ಗ ಸಿದ್ಧವಾಗಲಿದೆ.
ಬುಲೆಟ್ ಟ್ರೈನುಗಳನ್ನು ಎಲ್ಲೆಲ್ಲಿ ಚಲಾಯಿಸಬಹುದು ಎಂದು ಅವಲೋಕಿಸುವ ಕಾರ್ಯ ನಡೆದಿದೆ. ನ್ಯಾಷನಲ್ ರೈಲ್ ಪ್ಲಾನ್ನಿಂದ ಹಲವು ಸಂಭಾವ್ಯ ಮಾರ್ಗಗಳನ್ನು ಗುರುತಿಸಲಾಗಿದೆ. ಇದರಲ್ಲಿ ಮೈಸೂರು ಕೂಡ ಸೇರಿದೆ. ಸದ್ಯ ಗುರುತಿಸಲಾಗಿರುವ ಕೆಲ ಮಾರ್ಗಗಳು ಈ ಕೆಳಕಂಡಂತಿವೆ:
ಇದನ್ನೂ ಓದಿ: ರೈಲುಗಳಲ್ಲಿ ಹೊಸ ಲಗೇಜ್ ನಿಯಮ; ಗಂಟುಮೂಟೆ ಕಟ್ಟಿ ರೈಲು ಹತ್ತುವ ಮುನ್ನ ಹುಷಾರ್
ಈ ಮೊದಲು ಬೆಂಗಳೂರು ಮತ್ತು ಚೆನ್ನೈ ನಡುವೆ ಬುಲೆಟ್ ರೈಲು ಓಡಿಸುವ ಪ್ರಸ್ತಾಪ ಇತ್ತು. ಈಗ ಮೈಸೂರಿನಿಂದ ಚೆನ್ನೈವರೆಗೆ ಬುಲೆಟ್ ರೈಲು ಹೋಗಬೇಕಾದರೆ, ಬೆಂಗಳೂರು ಮೂಲಕ ಹಾದುಹೋಗಬೇಕು. ಹೀಗಾಗಿ, ಬೆಂಗಳೂರು ಮತ್ತು ಚೆನ್ನೈ ಬದಲು ಮೈಸೂರು ಚೆನ್ನೈ ರೈಲು ಮಾರ್ಗವನ್ನು ಅವಲೋಕಿಸುತ್ತಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ