
ಭಾರತದಲ್ಲಿ ಸೌರಶಕ್ತಿ ಉದ್ಯಮವು (Solar energy industry) ವೇಗವಾಗಿ ಬೆಳೆಯುತ್ತಿದೆ. ಭವಿಷ್ಯದಲ್ಲಿ ಸೌರವಿದ್ಯುತ್ಗೆ ಬೇಡಿಕೆ ಇನ್ನೂ ಗಮನಾರ್ಹ ರೀತಿಯಲ್ಲಿ ಹೆಚ್ಚಲಿದೆ. ಇದು ಶುದ್ಧ ಶಕ್ತಿ ಮತ್ತು ನವೀಕರಣ ಶಕ್ತಿಯಾದ್ದರಿಂದ (renewable energy) ಬೇಡಿಕೆ ಇದೆ. ಆಗಸದಲ್ಲಿ ಸೂರ್ಯ ಇರುವವರೆಗೂ ಸೌರಶಕ್ತಿಗೆ ಕೊರತೆ ಇರೋದಿಲ್ಲ. ಬಹಳ ಬೇಡಿಕೆ ಇರುವ ಮತ್ತು ಸಖತ್ ಬ್ಯುಸಿನೆಸ್ ಸಾಧ್ಯತೆ ಹೊಂದಿರುವ ಈ ಕ್ಷೇತ್ರದಲ್ಲಿ ನೀವು ಬ್ಯುಸಿನೆಸ್ ಆರಂಭಿಸಬೇಕೆಂದಿದ್ದರೆ ಈ ಲೇಖನ ನಿಮಗಾಗಿ. ಈ ಕ್ಷೇತ್ರದಲ್ಲಿ ಬ್ಯುಸಿನೆಸ್ ಮಾಡಲು ಎರಡು ಮಾರ್ಗಗಳಿವೆ. ಒಂದು, ಸೋಲಾರ್ ಪ್ಯಾನಲ್ ಏಜೆನ್ಸಿ ತೆರೆಯುವುದು. ಇನ್ನೊಂದು, ಸೋಲಾರ್ ಡೀಲರ್‌ಶಿಪ್ ಪಡೆಯುವುದು. ಎರಡೂ ಕೂಡ ಮೇಲ್ನೋಟಕ್ಕೆ ಒಂದೇ ತೆರನಾಗಿ ಕಂಡರೂ ಕಾರ್ಯಸ್ವರೂಪದಲ್ಲಿ ವೈಭಿನ್ಯತೆ ಇದೆ. ಇವೆರಡು ಬ್ಯುಸಿನೆಸ್ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
ಸೌರ ಕಂಪನಿಯಾದ APN SOLAR ವರದಿಯ ಪ್ರಕಾರ, ಸೌರ ಫಲಕ ಏಜೆನ್ಸಿ ಮಾಡಲ್ನಲ್ಲಿ ನೀವು ಸರ್ಕಾರದ ಸಹಯೋಗದಲ್ಲಿ ದೊಡ್ಡ ಮಟ್ಟದ ಸೌರ ಯೋಜನೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಅವುಗಳನ್ನು MNRE (ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ) ಅಥವಾ ರಾಜ್ಯ ನೋಡಲ್ ಏಜೆನ್ಸಿಗಳಲ್ಲಿ ನೋಂದಾಯಿಸಬೇಕಾಗುತ್ತದೆ. ಈ ಏಜೆನ್ಸಿಗಳು ದೊಡ್ಡ ಸೌರ ಯೋಜನೆಗಳನ್ನು ಕಾರ್ಯಗತಗೊಳಿಸುತ್ತವೆ. ಅವು ವಿಶೇಷವಾಗಿ ರೂಪಫ್ಟಾಪ್ ಸೋಲಾರ್ ಸಿಸ್ಟಂ, ಆಫ್-ಗ್ರಿಡ್ ಸಿಸ್ಟಂಗಳನ್ನು ಕಾರ್ಯಗತಗೊಳಿಸಲು ಸಹಾಯ ಮಾಡುತ್ತವೆ.
ಸರ್ಕಾರಿ ಟೆಂಡರ್‌ಗಳಲ್ಲಿ ಭಾಗವಹಿಸುವುದು ಮತ್ತು ದೊಡ್ಡ ಸೋಲಾರ್ ಇನ್ಸ್ಟಾಲೆಸನ್ ಪ್ರಾಜೆಕ್ಟ್ಸ್ಗಳನ್ನು ಎಕ್ಸಿಕ್ಯೂಟ್ ಮಾಡುವುದು ಈ ಸೋಲಾರ್ ಪ್ಯಾನಲ್ ಏಜೆನ್ಸಿಯ ಮುಖ್ಯ ಕೆಲಸ. ಸಬ್ಸಿಡಿ ಮತ್ತು ಫಂಡಿಂಗ್ಗೆ ಸಂಬಂಧಿಸಿದ ಸರ್ಕಾರಿ ಇಲಾಖೆಗಳೊಂದಿಗೆ ನೇರ ಸಮನ್ವಯ ಕಾಪಾಡಿಕೊಳ್ಳುವುದು; ಟೆಕ್ನಿಕಲ್ ರಿಪೋರ್ಟ್, ಡೇಟಾ ಮತ್ತು ಪ್ರಾಜೆಕ್ಟ್ ಡಾಕ್ಯುಮೆಂಟೇಶನ್ ಅನ್ನು ಸಹ ನಿರ್ವಹಿಸುವುದು ಈ ಕೆಲಸಗಳನ್ನು ನೀವು ಮಾಡಬೇಕಾಗುತ್ತದೆ.
ಮೂರು ವಿಧದ ಸೋಲಾರ್ ಏಜೆನ್ಸಿಗಳಿವೆ. ಮೊದಲನೆಯದು MNRE (ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ) ಅನುಮೋದಿತ ಸಂಸ್ಥೆ. ಇವು ಅಧಿಕೃತವೆಂದು ಗುರುತಿಸಲ್ಪಟ್ಟಿವೆ. ಈ ಏಜೆನ್ಸಿಗಳು ದೇಶಾದ್ಯಂತ ಗ್ರಿಡ್ ಮತ್ತು ಆಫ್ ಗ್ರಿಡ್ ಸೋಲಾರ್ ಪ್ರಾಜೆಕ್ಟ್ಗಳನ್ನು ಕಾರ್ಯಗತಗೊಳಿಸುತ್ತವೆ. ಎರಡನೆಯದು EPC (ಎಂಜಿನಿಯರಿಂಗ್, ಸಂಗ್ರಹಣೆ, ನಿರ್ಮಾಣ) ಸಂಸ್ಥೆ. ಈ ಏಜೆನ್ಸಿಗಳು ಸಾಮಾನ್ಯವಾಗಿ ಸೈಟ್ ಸಮೀಕ್ಷೆ ಮತ್ತು ವಿನ್ಯಾಸದಿಂದ ಹಿಡಿದು ಅದರ ಸ್ಥಾಪನೆ ಮತ್ತು ಕಾರ್ಯಾರಂಭದವರೆಗೆ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಸೌರ ಯೋಜನೆಯ ಸಂಪೂರ್ಣ ಯೋಜನಾ ಪ್ರಕ್ರಿಯೆಯನ್ನು ನಿರ್ವಹಿಸುತ್ತವೆ. ಮೂರನೆಯ ರೀತಿಯ ಸೋಲಾರ್ ಏಜೆನ್ಸಿ ಎಂದರೆ ಸ್ವತಂತ್ರ ಕನ್ಸಲ್ಟೆಂಟ್ಸ್. ಇವು ಸರ್ಕಾರಿ ಪ್ರಕ್ರಿಯೆಗಳಲ್ಲಿ ತಾಂತ್ರಿಕ ಸಲಹೆ ಮತ್ತು ಸಹಾಯವನ್ನು ಒದಗಿಸುವ ಸಣ್ಣ ಸಂಸ್ಥೆಗಳು.
ಸೋಲಾರ್ ಡೀಲರ್‌ಶಿಪ್ ಒಂದು ವೈಯಕ್ತಿಕ ಬ್ಯುಸಿನೆಸ್ ಮಾಡಲ್. ಇದರಲ್ಲಿ ನೀವು ಯಾವುದಾದರೂ ಸೋಲಾರ್ ಬ್ರಾಂಡ್ (APN ಸೋಲಾರ್, ಲೂಮ್ ಸೋಲಾರ್, ಟಾಟಾ ಪವರ್ ಸೋಲಾರ್ ನಂತಹ) ಜೊತೆ ಸೇರಿ ಅವರ ಉತ್ಪನ್ನಗಳನ್ನು ಮಾರಾಟ ಮಾಡುವ, ಇನ್ಸ್ಟಾಲೇಶನ್ ಸರ್ವಿಸ್ ನೀಡುವ ಸೇವೆ ನೀಡುತ್ತೀರಿ. ನೀವು ಕಡಿಮೆ ಹೂಡಿಕೆಯೊಂದಿಗೆ ಸೌರಶಕ್ತಿ ವ್ಯವಹಾರ ಪ್ರಾರಂಭಿಸಬಯಸಿದರೆ ಸೌರ ಡೀಲರ್‌ಶಿಪ್ ಅಥವಾ ಫ್ರ್ಯಾಂಚೈಸ್ ಮಾದರಿಯು ನಿಮಗೆ ಉತ್ತಮ ಆಯ್ಕೆಯಾಗಿರಬಹುದು.
ಇದನ್ನೂ ಓದಿ: ಭಾರತದಲ್ಲಿ ಐಟಿ ರಿಟರ್ನ್ಸ್ ಸಲ್ಲಿಸುವ ಅವಶ್ಯಕತೆ ಇಲ್ಲದವರು ಯಾರ‍್ಯಾರು? ಇಲ್ಲಿದೆ ಪಟ್ಟಿ
ಸೋಲಾರ್ ಡೀಲರ್‌ಶಿಪ್ ಬ್ಯುಸಿನೆಸ್ ಮಾಡಲ್ನಲ್ಲಿ ನಿಮಗೆ ದೊಡ್ಡ ಬ್ರ್ಯಾಂಡ್‌ನೊಂದಿಗೆ ಕೆಲಸ ಮಾಡುವ ಅವಕಾಶ ಸಿಗುತ್ತದೆ. ನೀವು ಬ್ರ್ಯಾಂಡ್ ಕಂಪನಿಯಿಂದ ಸಂಪೂರ್ಣ ತರಬೇತಿ, ಮಾರ್ಕೆಟಿಂಗ್ ಬೆಂಬಲ ಮತ್ತು ತಾಂತ್ರಿಕ ಸಹಾಯವನ್ನು ಪಡೆಯುತ್ತೀರಿ. ಸೌರ ಫಲಕಗಳು, ಇನ್ವರ್ಟರ್‌ಗಳು, ಬ್ಯಾಟರಿಗಳಂತಹ ಉತ್ಪನ್ನಗಳನ್ನು ಸಗಟು ಬೆಲೆಯಲ್ಲಿ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡಬೇಕು. ಇನ್ಸ್ಟಾಲೇಶನ್ ಮತ್ತು ಆಫ್ಟರ್ ಸೇಲ್ಸ್ ಸೇವೆಗಳನ್ನು ಒದಗಿಸಬೇಕು. ಡೀಲರ್‌ಶಿಪ್ ನೀಡುವ ಬ್ರ್ಯಾಂಡ್ ಕಂಪನಿಯಿಂದ ನಿಮಗೆ ಅಗತ್ಯವಾದ ತರಬೇತಿ ಮತ್ತು ಸಾಫ್ಟ್ವೇರ್ ಸಿಗುತ್ತದೆ. ಅಷ್ಟೇ ಅಲ್ಲ, ಬ್ಯುಸಿನೆ್ ಲೀಡ್ ಕೂಡ ನಿಮಗೆ ಸಿಗುತ್ತದೆ.
ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಸೌರಶಕ್ತಿ ಉದ್ಯಮದ ಪ್ರಮುಖ ಭಾಗವಾಗಿವೆ ಈ ಎರಡೂ ಮಾದರಿಗಳು. ಆದರೆ, ಇವುಗಳ ಕಾರ್ಯನಿರ್ವಹಣೆಯ ವ್ಯವಸ್ಥೆ ಭಿನ್ನವಾಗಿವೆ. ನಿಮ್ಮ ಬಜೆಟ್, ಅನುಭವ ಮತ್ತು ಪ್ರದೇಶದ ಪ್ರಕಾರ ಇವು ನಿಮಗೆ ಹೊಂದಿಕೆಯಾಗಬಹುದು. ಈ ಕೆಳಗಿರುವ ಟೇಬಲ್ನಲ್ಲಿ ಈ ಎರಡು ಬ್ಯುಸಿನೆಸ್ ಮಾಡಲ್ಗಳ ಹೋಲಿಕೆ ಇದೆ ಗಮನಿಸಿ:
| ವಿಶೇಷತೆ | ಸೋಲಾರ್ ಏಜೆನ್ಸಿ | ಸೋಲಾರ್ ಡೀಲರ್‌ಶಿಪ್ |
| ಆರಂಭಿಕ ಹೂಡಿಕೆ | 3 ಲಕ್ಷದಿಂದ 10 ಲಕ್ಷ ರೂ ಅಥವಾ ಅದಕ್ಕಿಂತ ಹೆಚ್ಚು | 2 ಲಕ್ಷದಿಂದ 5 ಲಕ್ಷದವರೆಗೆ (ಬ್ರಾಂಡ್ ಮೇಲೆ ಅವಲಂಬಿತ) |
| ಲೈಸೆನ್ಸ್/ಮಂಜೂರಾತಿ | MNRE ಅಥವಾ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆಯಬೇಕು. | ಸರ್ಕಾರದಿಂದ ಯಾವುದೇ ಪರವಾನಗಿ ಅಗತ್ಯವಿಲ್ಲ, ಬ್ರ್ಯಾಂಡ್‌ನೊಂದಿಗೆ ಅಗ್ರಿಮೆಂಟ್ ಮಾಡಿಕೊಂಡರೆ ಸಾಕು. |
| ಗಳಿಕೆಯ ವಿಧಾನ | ಸರ್ಕಾರಿ ಯೋಜನೆಗಳು, ಸಬ್ಸಿಡಿಗಳು ಮತ್ತು ಸಲಹಾ ಸೇವೆಗಳಿಂದ ಹಣವನ್ನು ಪಡೆಯಲಾಗುತ್ತದೆ. | ಉತ್ಪನ್ನಗಳ ಮಾರಾಟ, ಇನ್ಸ್ಟಾಲೇಶನ್ ಫೀಸ್ ಮತ್ತು ಸರ್ವಿಸ್ನಿಂದ ಲಾಭ |
| ರಿಸ್ಕ್ ಅಂಶ | ಸ್ವಲ್ಪ ಹೆಚ್ಚು – ಕಾಗದಪತ್ರಗಳು ಮತ್ತು ಸರ್ಕಾರಿ ನಿಯಮಗಳ ಅನುಸರಣೆ ಅಗತ್ಯ. | ರಿಸ್ಕ್ ಕಡಿಮೆ – ಬ್ರ್ಯಾಂಡ್ ಒದಗಿಸುವ ತರಬೇತಿ ಮತ್ತು ಬೆಂಬಲ ಇರುತ್ತದೆ. |
| ವ್ಯವಹಾರ ವಿಸ್ತರಿಸುವ ಸಾಧ್ಯತೆ | ಹೆಚ್ಚಿರುತ್ತದೆ- ದೊಡ್ಡ ಸರ್ಕಾರಿ ಟೆಂಡರ್ ಮತ್ತು ಕಮರ್ಷಿಯಲ್ ಪ್ರಾಜೆಕ್ಟ್ಗಳಲ್ಲಿ ಅವಕಾಶ ಸಿಗುತ್ತದೆ | ಬ್ಯುಸಿನೆಸ್ ವಿಸ್ತರಣೆ ಸೀಮಿತ – ಸ್ಥಳೀಯ ಮಾರುಕಟ್ಟೆಯಲ್ಲಿ ಅಥವಾ ಬ್ರ್ಯಾಂಡ್‌ನ ಗೊತ್ತುಪಡಿಸಿದ ಪ್ರದೇಶದಲ್ಲಿ ಮಾತ್ರ ಕೆಲಸ ಮಾಡಬಹುದು. |
ದೇಶದಲ್ಲಿ ಕ್ಲೀನ್ ಎನರ್ಜಿ ಸೆಕ್ಟರ್ನ ಭಾಗವಾಗಬೇಕೆಂದರೆ ಸೋಲಾರ್ ಪ್ಯಾನಲ್ ಡೀಲರ್‌ಶಿಪ್ ಅನ್ನು ಪ್ರಾರಂಭಿಸುವುದು ಸುಲಭ ಮಾರ್ಗವಾಗಿದೆ. ಇವತ್ತು ಮನೆ, ಅಂಗಡಿಗಳು ಮತ್ತು ಹಳ್ಳಿಗಳಲ್ಲಿ ಸೋಲಾರ್ ಸಿಸ್ಟಂಗಳನ್ನು ಹಾಕಿಸುತ್ತಿರುವವರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ದೊಡ್ಡ ಸೋಲಾರ್ ಕಂಪನಿಗಳು ತಮ್ಮ ಬ್ಯುಸಿನೆಸ್ ವಿಸ್ತರಣೆಗೆ ಡೀಲರ್ಶಿಪ್ಗಳನ್ನು ವಿತರಿಸುತ್ತವೆ.
ಡೀಲರ್‌ಶಿಪ್ ಪ್ರಾರಂಭಿಸಲು, ನೀವು 2 ರಿಂದ 5 ಲಕ್ಷ ರೂ.ಗಳನ್ನು ಆರಂಭದಲ್ಲಿ ಹೂಡಿಕೆ ಮಾಡಬೇಕು. ಇದರಲ್ಲಿ ಕಚೇರಿ, ಡೀಲರ್‌ಶಿಪ್ ಫೀಸ್, ಮಾರ್ಕೆಟಿಂಗ್ ವೆಚ್ಚಗಳು ಸೇರಿವೆ. ಇದಲ್ಲದೆ, ಗ್ರಾಹಕರೊಂದಿಗೆ ಸಮಾಲೋಚನೆ ಮತ್ತು ಸಂವಹನಕ್ಕಾಗಿ ನೀವು ಸುಮಾರು 100 ರಿಂದ 200 ಚದರ ಅಡಿಗಳ ಕಚೇರಿಯನ್ನು ಹೊಂದಿರಬೇಕು.
ನೀವು ಸೋಲಾರ್ ಏಜೆನ್ಸಿಯನ್ನು ತೆರೆಯಲು ಬಯಸಿದರೆ, MNRE (ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ) ದಿಂದ ಮಾನ್ಯತೆ ಪಡೆಯಬೇಕು. ತಾಂತ್ರಿಕವಾಗಿ ಸಮರ್ಥವಾಗಿರುವ ಮತ್ತು ಸರ್ಕಾರಿ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸುವ ಕಂಪನಿಗಳಿಗೆ ಮಾತ್ರ ಅವಕಾಶ ಸಿಗುತ್ತದೆ.
ಇದನ್ನೂ ಓದಿ: PM Kisan: ಅಪ್ಪನಿಂದ ಜಮೀನು ವರ್ಗಾವಣೆಯಾದರೆ ಪಿಎಂ ಕಿಸಾನ್ ಹಣ ನಿಂತುಹೋಗುತ್ತಾ? ಇಲ್ಲಿದೆ ಡೀಟೇಲ್ಸ್
ನಿಮ್ಮ ಸೋಲಾರ್ ಏಜೆನ್ಸಿಗೆ MNRE ಯಿಂದ ಮಾನ್ಯತೆ ಪಡೆಯಲು, ಹಂತ-ಹಂತದ ನೋಂದಣಿ ಮತ್ತು ಪರಿಶೀಲನೆ ಪ್ರಕ್ರಿಯೆಯ ಮೂಲಕ ಹೋಗಬೇಕು.
ಟೈಯರ್-1 ನಗರಗಳಿಗೆ (ದೆಹಲಿ, ಮುಂಬೈ, ಬೆಂಗಳೂರು) ಹೆಚ್ಚಿನ ಸಂಖ್ಯೆಯ ಸರ್ಕಾರಿ ಯೋಜನೆಗಳಿಂದಾಗಿ ಏಜೆನ್ಸಿ ಮಾದರಿಯು ಪ್ರಯೋಜನಕಾರಿಯಾಗಿದೆ. ಟೈಯರ್-2 ಮತ್ತು ಟೈಯರ್-3 ನಗರಗಳಿಗೆ (ಗೋರಖ್‌ಪುರ, ಇಂದೋರ್, ಜೈಪುರ) ವಸತಿ ಸೌರಶಕ್ತಿಯ ಬೇಡಿಕೆ ವೇಗವಾಗಿ ಹೆಚ್ಚುತ್ತಿರುವುದರಿಂದ ಡೀಲರ್‌ಶಿಪ್ ಮಾದರಿಯು ಉತ್ತಮ ಆಯ್ಕೆಯಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ