ಬೈಜುಸ್ ಗಾಯಕ್ಕೆ ಬರೆ; 22 ಬಿಲಿಯನ್ ಡಾಲರ್ ಇದ್ದ ಮೌಲ್ಯ ಈಗ 3 ಬಿಲಿಯನ್ ಮಟ್ಟಕ್ಕಿಂತಲೂ ಕಡಿಮೆ

Byju's Valuation Steep Fall In 1 Year: ಬೈಜುಸ್​ನ ಮೌಲ್ಯ ಈಗ 3 ಬಿಲಿಯನ್ ಡಾಲರ್​ಗಿಂತಲೂ ಕಡಿಮೆ ಎಂದು ಅದರ ಷೇರುದಾರ ಸಂಸ್ಥೆ ಪ್ರೋಸುಸ್ ಮೌಲ್ಯಮಾಪನ ಪರಿಷ್ಕರಿಸಿದೆ. ವರ್ಷದ ಹಿಂದೆಯಷ್ಟೇ ಬೈಜುಸ್ ಮೌಲ್ಯ 22 ಬಿಲಿಯನ್ ಡಾಲರ್ ಎಂದು ನಿಗದಿ ಮಾಡಲಾಗಿತ್ತು. ಒಂದೇ ವರ್ಷದಲ್ಲಿ ಶೇ. 86ರಷ್ಟು ಮೌಲ್ಯಕಡಿತವಾಗಿದೆ. 2021-22ರ ಹಣಕಾಸು ವರ್ಷದಲ್ಲಿ ಬೈಜುಸ್ ಸಂಸ್ಥೆ 2,250 ಕೋಟಿ ರೂ ನಷ್ಟ ತೋರಿಸಿದೆ. ಇದರ ಜೊತೆಗೆ ಸಾಲ, ಕಾನೂನು ಕುಣಿಕೆ ಇತ್ಯಾದಿ ಸಮಸ್ಯೆ ಬೈಜುಸ್ ಅನ್ನು ಕಾಡುತ್ತಿವೆ.

ಬೈಜುಸ್ ಗಾಯಕ್ಕೆ ಬರೆ; 22 ಬಿಲಿಯನ್ ಡಾಲರ್ ಇದ್ದ ಮೌಲ್ಯ ಈಗ 3 ಬಿಲಿಯನ್ ಮಟ್ಟಕ್ಕಿಂತಲೂ ಕಡಿಮೆ
ಬೈಜುಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 30, 2023 | 12:22 PM

ನವದೆಹಲಿ, ನವೆಂಬರ್ 30: ಬೈಜುಸ್​ನ ದುರಂತಗಳ ಸರಮಾಲೆ ಮುಂದುವರಿಯುತ್ತಲೇ ಇದೆ. ಸಾಲ, ತೆರಿಗೆ ವಿವಾದ, ನಷ್ಟ ಇತ್ಯಾದಿಗಳಿಂದ ಜರ್ಝರಿತವಾಗಿರುವ ಬೈಜುಸ್​ನ ಮೌಲ್ಯ (Valuation of Byju’s) ಈಗ ನೆಲಕಚ್ಚಿದೆ. ಒಂದು ಕಾಲದಲ್ಲಿ ಭಾರತದ ಸ್ಟಾರ್ಟಪ್ ಸೂಪರ್​ಸ್ಟಾರ್ ಎನಿಸಿದ್ದ ಬೈಜುಸ್ ಈಗ ದಯನೀಯ ಸ್ಥಿತಿಗೆ ಜಾರಿದೆ. ಅದರ ಒಂದು ಹೂಡಿಕೆದಾರ ಪ್ರೋಸುಸ್ (Prosus) ಈಗ ಬೈಜುಸ್​ನ ಮೌಲ್ಯಮಾಪನವನ್ನು ಮತ್ತಷ್ಟು ತಗ್ಗಿಸಿದೆ. ಬೈಜುಸ್ ಸಂಸ್ಥೆಯ ಮೌಲ್ಯ 3 ಬಿಲಿಯನ್ ಡಾಲರ್​ಗಿಂತಲೂ ಕಡಿಮೆ ಎಂದು ಪ್ರೋಕಸ್ ವರದಿ ಕೊಟ್ಟಿದೆ. ಕಳೆದ ವರ್ಷವಷ್ಟೇ ಬೈಜುಸ್​ನ ಮೌಲ್ಯ 22 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿತ್ತು. ಈಗ ಒಂದೇ ವರ್ಷದಲ್ಲಿ ಶೇ. 86ರಷ್ಟು ಮೌಲ್ಯ ಕಳೆದುಕೊಂಡಿದೆ ಬೈಜುಸ್.

ಪ್ರೋಸುಸ್, ಬ್ಲ್ಯಾಕ್​ರಾಕ್ ಮೊದಲಾದ ಬೈಜುಸ್ ಷೇರುದಾರರು ಕಳೆದ ಒಂದು ವರ್ಷದಿಂದಲೂ ಕೂಡ ಮೌಲ್ಯ ಕಡಿತಗೊಳಿಸುತ್ತಲೇ ಬಂದಿವೆ. 22 ಬಿಲಿಯನ್ ಡಾಲರ್ ಇದ್ದ ಬೈಜುಸ್​ನ ಮೌಲ್ಯ ಮಾರ್ಚ್ ತಿಂಗಳಲ್ಲಿ 11 ಬಿಲಿಯನ್ ಡಾಲರ್, ಮೇ ತಿಂಗಳಲ್ಲಿ 8 ಬಿಲಿಯನ್ ಡಾಲರ್, ಜೂನ್ ತಿಂಗಳಲ್ಲಿ 5 ಬಿಲಿಯನ್ ಡಾಲರ್​ಗೆ ಕಡಿತಗೊಳಿಸಲಾಗಿದೆ. ಇದೀಗ 3 ಬಿಲಿಯನ್ ಡಾಲರ್​ಗೆ ಬೈಜುಸ್ ಕುಸಿದಿದೆ.

ಬೈಜುಸ್ ಸಂಸ್ಥೆ ಬಹಳ ವಿಳಂಬವಾಗಿ ಬಿಡುಗಡೆ ಮಾಡಿದ 2021-22ರ ಹಣಕಾಸು ವರ್ಷದ ತನ್ನ ಆದಾಯದ ವರದಿಯಲ್ಲಿ, ಅದು ಸಾಕಷ್ಟು ಆದಾಯವೃದ್ಧಿ ಕಂಡಿದೆಯಾದರೂ ಲಾಭ ಕಾಣದೇ 2,250 ಕೋಟಿ ರೂ ನಷ್ಟ ಅನುಭವಿಸಿರುವುದು ತಿಳಿದುಬಂದಿದೆ. ಹಣಕಾಸು ವರದಿ ವಿಳಂಬಗೊಂಡ ಪರಿಣಾಮ ಬೈಜುಸ್ ಸಾಕಷ್ಟು ಪರಿಣಾಮಗಳನ್ನು ಎದುರಿಸಬೇಕಾಯಿತು. ಸಾಲ ಕೊಟ್ಟವರು ಬೈಜುಸ್ ತಲೆ ಮೇಲೆ ಕೂತಿದ್ದಾರೆ.

ಇದನ್ನೂ ಓದಿ: UPI: ತಪ್ಪಾಗಿ ಯುಪಿಐನಲ್ಲಿ ಹಣ ಕಳುಹಿಸಿದ್ದೀರಾ? ಬರಲಿದೆ 4 ಗಂಟೆ ನಿಯಮ; ಸಿಗಲಿದೆ ಹಣ ಹಿಂಪಡೆಯುವ ದಾರಿ

ಬೈಜುಸ್​ನ ಆನ್ಲೈನ್ ಕೋಚಿಂಗ್ ತರಗತಿಗಳು ಕೋವಿಡ್ ಸಂದರ್ಭದಲ್ಲಿ ಸೂಪರ್ ಹಿಟ್ ಆಗಿದ್ದವು. ಶಾಲೆಗಳು ಮರಳಿ ಆರಂಭಗೊಂಡ ಬಳಿಕ ಬೈಜುಸ್ ಬಿಸಿನೆಸ್ ಬಹಳ ಕಡಿಮೆ ಆಗಿದೆ. ಪೈಪೋಟಿ ಹೆಚ್ಚಿದೆ. ಇದರ ಜೊತೆಗೆ ವಿವಿಧ ಕಾನೂನು ಹೋರಾಟಗಳು, ತೆರಿಗೆ ಸಂಕಷ್ಟಗಳು ಬೈಜುಸ್ ಅನ್ನು ಎಡಬಿಡದೆ ಕಾಡುತ್ತಿವೆ. ದೊಡ್ಡ ದೊಡ್ಡ ಅಧಿಕಾರಿಗಳು ಕೆಲಸ ಬಿಟ್ಟು ಹೋಗಿದ್ದಾರೆ. ಒಟ್ಟಾರೆಯಾಗಿ ಬೈಜುಸ್ ಎಂಬ ಸ್ಟಾರ್ಟಪ್ ಸ್ಟಾರ್ ಇವತ್ತು ದಿಕ್ಕೆಟ್ಟು ಕೂತಿದೆ.

ಇದೇ ವೇಳೆ, ಫೆಮಾ ನಿಯಮ ಉಲ್ಲಂಘನೆ ಆರೋಪದ ಪ್ರಕರಣದಲ್ಲಿ ಬೈಜುಸ್​ಗೆ ಜಾರಿ ನಿರ್ದೇಶನಾಲಯ ನೋಟೀಸ್ ಜಾರಿ ಮಾಡಿದೆ. ಬೈಜುಸ್ ಒಂದಷ್ಟು ಶುಲ್ಕ ಪಾವತಿಸಬೇಕಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Thu, 30 November 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್