MRP: ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚು ಹಣ ತೆಗೆದುಕೊಳ್ಳುತ್ತಿದ್ದಾರಾ? ಮೋಸ ಮಾಡುವ ಅಂಗಡಿಯವರಿಗೆ ಹೀಗೆ ಶಾಕ್ ಕೊಡಿ

| Updated By: ಸಾಧು ಶ್ರೀನಾಥ್​

Updated on: Aug 16, 2022 | 9:21 PM

MRP: ಯಾವುದೇ ಸರಕನ್ನು ಗರಿಷ್ಠ ಮಾರಾಟ ದರಕ್ಕಿಂತ (ಎಂಆರ್‌ಪಿ) ಹೆಚ್ಚು ಶುಲ್ಕ ವಿಧಿಸಿ, ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ.. ಗಮನಿಸಿ, ಹಾಗೆ ಹೆಚ್ಚಿನ ಹಣ ನೀಡುವುದೂ ಕೂಡ ಅಪರಾಧವೇ.

MRP: ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚು ಹಣ ತೆಗೆದುಕೊಳ್ಳುತ್ತಿದ್ದಾರಾ? ಮೋಸ ಮಾಡುವ ಅಂಗಡಿಯವರಿಗೆ ಹೀಗೆ ಶಾಕ್ ಕೊಡಿ
ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚು ಹಣ ತೆಗೆದುಕೊಳ್ಳುತ್ತಿದ್ದಾರಾ? ಮೋಸ ಮಾಡುವ ಅಂಗಡಿಯವರಿಗೆ ಹೀಗೆ ಶಾಕ್ ಕೊಡಿ
Follow us on

ಯಾವುದೇ ಸರಕನ್ನು ಗರಿಷ್ಠ ಮಾರಾಟ ದರಕ್ಕಿಂತ (ಎಂಆರ್‌ಪಿ -MRP) ಹೆಚ್ಚು ಶುಲ್ಕ ವಿಧಿಸಿ, ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ.. ಗಮನಿಸಿ, ಹಾಗೆ ಹೆಚ್ಚಿನ ಹಣ ನೀಡುವುದೂ ಕೂಡ ಅಪರಾಧವೇ. ಯಾವುದೇ ಚಿಲ್ಲರೆ ವ್ಯಾಪಾರಿ ಯಾವುದೇ ವಸ್ತುವಿಗೆ ಗ್ರಾಹಕರಿಂದ ಗರಿಷ್ಠ ಚಿಲ್ಲರೆ ಬೆಲೆಗಿಂತ ಹೆಚ್ಚಿನದನ್ನು ಬೇಡಿಕೆಯಿಡುವುದು ಅಪರಾಧವಾಗಿದೆ.

ಕಾನೂನು ಮಾಪನಶಾಸ್ತ್ರ ಕಾಯ್ದೆಯ ಪ್ರಕಾರ ಯಾವುದೇ ಅಂಗಡಿಯವರು ಯಾವುದೇ ವಸ್ತುವಿಗೆ ಎಂಆರ್‌ಪಿಗಿಂತ ಹೆಚ್ಚು ಕೇಳಬಾರದು. ಆದರೆ ಆಗಾಗ ಅಂಗಡಿಯವರು ಕುಡಿಯುವ ನೀರು ಅಥವಾ ತಂಪು ಪಾನೀಯ ಮಾರಾಟ ಮಾಡಲು ಎಂಆರ್ ಪಿ ಜೊತೆಗೆ ಕೂಲಿಂಗ್ ಚಾರ್ಜ್ (ರೆಫ್ರಿಜರೇಟರ್) ಹೆಸರಿನಲ್ಲಿ ಎರಡು ರೂಪಾಯಿ ವಸೂಲಿ ಮಾಡುತ್ತಾರೆ. ಗ್ರಾಹಕರೂ ಅಷ್ಟೇಯಾ ಜಸ್ಟ್​ 2 ರೂ ಅಷ್ಟೇ ಅಲ್ಲವಾ, ಕೊಡೋಣಾ ಬಿಡೀ ಎಂಬ ಉದಾರ ಮನೋಭಾವ ತೋರುತ್ತಾರೆ. ಆದರೆ ಈ ಮೂಲಕ ಗ್ರಾಹಕ ಕಾನೂನು ಮುರಿಯಲು ಸಹಾಯವಾಗುತ್ತಿದ್ದಾರೆ ಎಂಬುದು ಗಮನಾರ್ಹ.

ಕಾನೂನು ಏನು ಹೇಳುತ್ತದೆ?

ಕೇಂದ್ರ ಮಾಪನಶಾಸ್ತ್ರ ಕಾಯಿದೆಯಡಿ ಶೀತಲೀಕರಣ, ಸಾರಿಗೆ ಇತ್ಯಾದಿ ನೆಪದಲ್ಲಿ ಯಾವುದೇ ವಸ್ತುವಿನ ಮೇಲೆ MRP ಗಿಂತ ಹೆಚ್ಚಿನ ಶುಲ್ಕವನ್ನು ಚಿಲ್ಲರೆ ವ್ಯಾಪಾರಿ ಕೇಳುವುದು ಕಾನೂನುಬದ್ಧ ಅಪರಾಧವಾಗಿದೆ. ಅಷ್ಟೇ ಅಲ್ಲ. ಅಂತಹ ವ್ಯಾಪಾರಿಗಳಿಗೆ ಎರಡು ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗುತ್ತದೆ.

ವಾಸ್ತವವಾಗಿ, ಪ್ರತಿ ಐಟಂಗೆ MRP ಅನ್ನು ನಿರ್ಧರಿಸಿದಾಗ ಐಟಂ ತಯಾರಿಕೆಯ ವೆಚ್ಚ ಮತ್ತು ಸಂಗ್ರಹಣೆ, ಸಾಗಣೆ ಇತ್ಯಾದಿಗಳ ವೆಚ್ಚವನ್ನು ಸಹ ಅಂದಾಜು ಮಾಡಲಾಗುತ್ತದೆ. ಆ ವಸ್ತುವಿನ ಗರಿಷ್ಠ ಚಿಲ್ಲರೆ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಆದ್ದರಿಂದಲೇ ಯಾವುದೇ ಚಿಲ್ಲರೆ ಹೆಚ್ಚು ಹಣ ಕೇಳುವುದು ತಪ್ಪು.

ಎಲ್ಲಿ ದೂರು ನೀಡಬೇಕು?

ಯಾವುದೇ ಚಿಲ್ಲರೆ ವ್ಯಾಪಾರಿಗಳು ಅಥವಾ ಅಂಗಡಿಯವರು MRP ಗಿಂತ ಹೆಚ್ಚಿನ ಹಣವನ್ನು ನಿಮ್ಮಿಂದ ಬೇಡಿಕೆಯಿದ್ದರೆ, ತಕ್ಷಣವೇ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸಂಖ್ಯೆ 1915 ಗೆ ಕರೆ ಮಾಡಿ ಮತ್ತು ನಿಮ್ಮ ದೂರನ್ನು ನೋಂದಾಯಿಸಿ. ನೀವು ಬಯಸಿದರೆ, ನೀವು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯ ಅಧಿಕೃತ ವೆಬ್‌ಸೈಟ್ ಮೂಲಕವೂ ದೂರು ಸಲ್ಲಿಸಬಹುದು.

To read more in Telugu click here