
ನವದೆಹಲಿ, ಜನವರಿ 31: ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಬಜೆಟ್ (Union Budget) ಮಂಡಿಸುತ್ತಿದ್ದು ಉದ್ಯಮ ವಲಯದಲ್ಲಿ ಅಪಾರ ನಿರೀಕ್ಷೆಗಳಿವೆ. ಜಾಗತಿಕ ಸಂಕಷ್ಟಗಳ ನಡುವೆ ಆರ್ಥಿಕ ಬೆಳವಣಿಗೆಯ ವೇಗ ಹೆಚ್ಚಿಸಲು ಸರ್ಕಾರ ಸಂಕಲ್ಪ ತೊಟ್ಟಿದೆ. ಕಳೆದ ವರ್ಷದ ಬಜೆಟ್ನಲ್ಲಿ (2025) ಹಲವಾರು ಸೆಕ್ಟರ್ಗಳ ಮೂಲಸೌಕರ್ಯಕ್ಕಾಗಿ ಸರ್ಕಾರ ಬಹಳಷ್ಟು ಹಣ ವ್ಯಯಿಸಿತ್ತು. ಈ ಬಾರಿಯ ಬಜೆಟ್ನಲ್ಲೂ ಇದೇ ನಿಲುವು ಮುಂದುವರಿಯಬಹುದು ಎಂದು ಉದ್ಯಮ ವಲಯ ನಿರೀಕ್ಷಿಸುತ್ತಿದೆ.
ಭಾರತವು ಜಾಗತಿಕ ಆರ್ಥಿಕ ಪ್ರಬಲ ಶಕ್ತಿಯಾಗಬೇಕಾದರೆ ಈ ಬಜೆಟ್ನಲ್ಲಿ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ ಹೇಳಲಾಗಿದೆ. ಹೆದ್ದಾರಿ, ನಗರ ಸಾರಿಗೆ, ಸ್ಮಾರ್ಟ್ಸಿಟಿ ನಿರ್ಮಾಣ ಯೋಜನೆಗಳಲ್ಲಿ ಹೂಡಿಕೆ ಮಾಡಲು, ಹಾಗೂ ರಾಜ್ಯಗಳಿಗೆ ಬಡ್ಡಿರಹಿತ ಸಾಲ ಕೊಡಲು ಕಳೆದ ವರ್ಷದ ಬಜೆಟ್ನಲ್ಲಿ 1.5 ಲಕ್ಷ ಕೋಟಿ ರೂ ಹಣ ನೀಡಲಾಗಿತ್ತು. ಈ ಬಾರಿಯ ಬಜೆಟ್ನಲ್ಲಿ ಅದು 3 ಲಕ್ಷ ಕೋಟಿ ರೂಗೆ ಏರಿಸಬೇಕು ಎಂದು ತಜ್ಞರು ಸಲಹೆ ಕೊಟ್ಟಿದ್ದಾರೆ.
‘ಉತ್ಪನ್ನತೆಗೆ ಪುಷ್ಟಿ ಕೊಡಲು, ಲಾಜಿಸ್ಟಿಕ್ಸ್ನ ಕ್ಷಮತೆ ಸುಧಾರಿಸಲು, ನಮ್ಮ ಜನಸಂಖ್ಯಾ ಬಲವನ್ನು ಆರ್ಥಿಕ ಪ್ರಗತಿಗೆ ಅನುಕೂಲಕರವಾಗಿ ಮಾಡಿಕೊಳ್ಳಲು ಇನ್ಫ್ರಾಸ್ಟ್ರಕ್ಚರ್ ಸಮರ್ಪಕವಾಗಿರುವುದು ಬಹಳ ಮುಖ್ಯ. ಮೂಲಸೌಕರ್ಯ ಯೋಜನೆಗಳಿಗೆ ಸರ್ಕಾರ ಮಾಡುವ ವೆಚ್ಚ ಒಂದೆರಡು ವರ್ಷಕ್ಕೆ ಸೀಮಿತವಾಗದೆ ಹಲವು ವರ್ಷಗಳು ನಿರಂತರವಾಗಿ ಹೂಡಿಕೆ ಆಗಬೇಕು’ ಎಂದು ಸಲಾಸರ್ ಟೆಕ್ನೋ ಎಂಜಿನಿಯರಿಂಗ್ ಕಂಪನಿಯ ಜಂಟಿ ಎಂಡಿಯಾದ ಶಶಾಂಕ್ ಅಗರ್ವಾಲ್ ಹೇಳುತ್ತಾರೆ.
ಇದನ್ನೂ ಓದಿ: ಬಲಿಷ್ಠ ಭಾರತಕ್ಕೆ ಬೇಕು ತಂತ್ರಜ್ಞಾನ ಪ್ರಾವೀಣ್ಯತೆ; ಬಜೆಟ್ನಲ್ಲಿ ಟೆಕ್ ಸೆಕ್ಟರ್ಗೆ ಏನು ಸಿಗುತ್ತೆ?
ಸಾಂಪ್ರದಾಯಿಕ ಮೂಲಸೌಕರ್ಯಗಳ ಜೊತೆಗೆ ಎಐ ಶಕ್ತ ಡಾಟಾ ಸೆಂಟರ್, ರೋಬೋಟಿಕ್ಸ್, ಎಡ್ಜ್ ಇಂಟೆಲಿಜೆನ್ಸ್, ಎಐ ಅಳವಡಿಕೆ ಇತ್ಯಾದಿ ಇನ್ಫ್ರಾಸ್ಟ್ರಕ್ಚರ್ಗೆ ಪುಷ್ಟಿ ನೀಡುವ ನೀತಿ ಬರಬೇಕು. ಆಗ ದೇಶದಲ್ಲಿ ಉತ್ಪನ್ನಶೀಲತೆ, ಆರ್ಥಿಕ ಕ್ಷಮತೆ, ಜಾಗತಕ ಸ್ಪರ್ಧಾತ್ಮಕತೆ ಗಣನೀಯವಾಗಿ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಗ್ಲೋಬಲ್ಲಾಜಿಕ್ನ ಪಿಯೂಶ್ ಝಾ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ