Car Loan: ಹೊಸ ಕಾರು ಖರೀದಿಗೆ ಯಾವ ಬ್ಯಾಂಕ್​ನಲ್ಲಿ ಕಡಿಮೆ ಬಡ್ಡಿ? ಇಲ್ಲಿದೆ ಸಂಪೂರ್ಣ ಮಾಹಿತಿ

| Updated By: Srinivas Mata

Updated on: Jul 02, 2021 | 8:09 PM

ಹೊಸ ಕಾರು ಖರೀದಿ ಮೇಲೆ ಬಡ್ಡಿ ದರ ಎಷ್ಟಿದೆ ಗೊತ್ತಿದೆಯಾ? ನಿಮಗೆ ಪ್ರಮುಖ ಬ್ಯಾಂಕ್​ಗಳಲ್ಲಿನ ಬಡ್ಡಿ ದರದ ಮಾಹಿತಿಯನ್ನು ಒಂದೇ ಕಡೆ ದೊರಕಿಸಲು ಈ ಲೇಖನ ಸಹಾಯ ಮಾಡುತ್ತದೆ.

Car Loan: ಹೊಸ ಕಾರು ಖರೀದಿಗೆ ಯಾವ ಬ್ಯಾಂಕ್​ನಲ್ಲಿ ಕಡಿಮೆ ಬಡ್ಡಿ? ಇಲ್ಲಿದೆ ಸಂಪೂರ್ಣ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಹೊಸದಾಗಿ ಕಾರು ಖರೀದಿಸಬೇಕು ಅಂತಿದ್ದೀರಾ? ಅದಕ್ಕಾಗಿ ಸಾಲದ ಅಗತ್ಯ ಇದ್ದಲ್ಲಿ ಬಡ್ಡಿ ದರ ಎಲ್ಲೆಲ್ಲಿ, ಎಷ್ಟಿದೆ ಎಂಬ ಬಗ್ಗೆ ಒಮ್ಮೆ ವಿಚಾರಿಸಿಕೊಳ್ಳುವುದು ಉತ್ತಮ. ಸಾಮಾನ್ಯವಾಗಿ ಕಾರಿನ ಡೀಲರ್​ ಜತೆಗೆ ಒಪ್ಪಂದ ಮಾಡಿಕೊಂಡಿರುವ ಅಥವಾ ಪಾರ್ಟನರ್ ಆಗಿರುವ ಸಾಲ ನೀಡುವ ಸಂಸ್ಥೆಗಳಿಂದಲೇ ಲೋನ್ ಪಡೆದುಕೊಳ್ಳುತ್ತಾರೆ. ಒಂದೇ ಛಾವಣಿ ಅಡಿಯಲ್ಲಿ ಎಲ್ಲ ಅನುಕೂಲ ದೊರೆಯುವುದರಿಂದ ಗ್ರಾಹಕರು ಕೂಡ ಆ ಸೇವೆಗೆ ಆದ್ಯತೆ ನೀಡುತ್ತಾರೆ. ಕಾರು ಖರೀದಿಗೆ ಸಾಲವನ್ನು ಪಡೆಯುವಾಗ ಡೀಲರ್ ಜತೆಗೆ ಪಾರ್ಟನರ್ ಆಗಿರುವ ಸಂಸ್ಥೆಗಳಿಂದ ವಿಧಿಸುವ ಬಡ್ಡಿಯನ್ನು ಪರೀಕ್ಷಿಸಿ, ಆ ನಂತರ ಮುಂದುವರಿಯುವುದು ಉತ್ತಮ. ಶೇಕಡಾ 1ರಷ್ಟು ಬಡ್ಡಿ ದರದಲ್ಲಿ ವ್ಯತ್ಯಾಸ ಆದರೂ ದೊಡ್ಡ ಮೊತ್ತದ ಉಳಿತಾಯ ಮಾಡಬಹುದು. ಒಂದು ವೇಳೆ 7 ಲಕ್ಷ ರೂಪಾಯಿ ಸಾಲ ಮಾಡಿದಲ್ಲಿ, ಡೀಲರ್ ಐದು ವರ್ಷದ ಅವಧಿಗೆ ಶೇ 8ರ ದರದಲ್ಲಿ ಸಾಲ ನೀಡುತ್ತಾರೆ. ನಿಮ್ಮ ಈಕ್ವೇಟೆಡ್ ಮಂತ್ಲಿ ಇನ್​ಸ್ಟಾಲ್​ಮೆಂಟ್​ (ಇಎಂಐ) ರೂ. 14,194 ಆದಲ್ಲಿ ಮತ್ತು ಒಟ್ಟಾರೆಯಾಗಿ ರೂ. 8,51,609 ಆಗುತ್ತದೆ.

ಒಂದು ವೇಳೆ ಸಾಲದ ದರ ಶೇ 0.5 ಕಡಿಮೆ ಆದಲ್ಲಿ ಇಎಂಐ 14,027 ರೂಪಾಯಿ ಆಗುತ್ತದೆ. ಒಟ್ಟಾರೆಯಾಗಿ 8,41,594 ರೂಪಾಯಿ ಆಗುತ್ತದೆ. ಒಂದು ವೇಳೆ ಸಾಲದ ದರ ಶೇ 1ರಷ್ಟು ಕಡಿಮೆ ಆದಲ್ಲಿ ತಿಂಗಳ ಇಎಂಐ ರೂ. 13,861 ಆಗುತ್ತದೆ ಮತ್ತು ಒಟ್ಟಾರೆ ಪಾವತಿ ರೂ. 8,31,650 ಆಗುತ್ತದೆ. ಸಾಲವನ್ನು ಪಡೆಯುವಾಗ ಬಡ್ಡಿದರದ ಜತೆಗೆ ಪ್ರೊಸೆಸಿಂಗ್ ಶುಲ್ಕ ಎಷ್ಟು ಎಂಬುದನ್ನು ಸಹ ಗಮನಿಸಬೇಕಾಗುತ್ತದೆ.

ಬ್ಯಾಂಕ್ ಆಫ್ ಬರೋಡಾ-ಶೇ 7ರಿಂದ ಶೇ 10.25
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ- ಶೇ 7.15ರಿಂದ ಶೇ 7.50
ಕೆನರಾ ಬ್ಯಾಂಕ್- ಶೇ 7.30ರಿಂದ ಶೇ 9.90
ಬ್ಯಾಂಕ್ ಆಫ್ ಇಂಡಿಯಾ- ಶೇ 7.35ರಿಂದ ಶೇ 8.55
ಐಡಿಬಿಐ ಬ್ಯಾಂಕ್- ಶೇ 7.50ರಿಂದ ಶೇ 8.10
ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ*- ಶೇ 7.50ರಿಂದ ಶೇ 11.20
ಇಂಡಿಯನ್ ಓವರ್​ಸೀಸ್ ಬ್ಯಾಂಕ್- ಶೇ 7.55
ಪಂಜಾಬ್ ನ್ಯಾಷನಲ್ ಬ್ಯಾಂಕ್**- ಶೇ 7.55- ಶೇ 7.80
ಬ್ಯಾಂಕ್ ಆಫ್ ಮಹಾರಾಷ್ಟ್ರ***- ಶೇ 7.55- ಶೇ 10.40
ಐಸಿಐಸಿಐ ಬ್ಯಾಂಕ್- ಶೇ 7.90- ಶೇ 9.85
ಎಚ್​ಡಿಎಫ್​ಸಿ ಬ್ಯಾಂಕ್- ಶೇ 7.95- ಶೇ 8.30
ಫೆಡರಲ್ ಬ್ಯಾಂಕ್- ಶೇ 8.5
ಆಕ್ಸಿಸ್ ಬ್ಯಾಂಕ್- ಶೇ 8.65ರಿಂದ ಶೇ 10.90
ಆರ್​ಬಿಎಲ್​ ಬ್ಯಾಂಕ್- ಶೇ 12ರಿಂದ ಶೇ 14

*- ಎಲೆಕ್ಟ್ರಿಕ್ ವಾಹನದ ಮೇಲೆ ವಿನಾಯಿತಿ
**- ಫ್ಲೋಟಿಂಗ್ ಬಡ್ಡಿ ದರ ಶೇ 7.30 ರಕ್ಷಣೆ/ಪ್ಯಾರಾ ಮಿಲಿಟರಿಯವರಿಗೆ. ಈಗಾಗಲೇ ಇರುವ ಗ್ರಾಹಕರಿಗೆ ವಿನಾಯಿತಿ
***- ಈಗಾಗಲೇ ಇರುವ ಗ್ರಾಹಕರು, ಮಹಿಳೆಯರು ಮತ್ತು ಸಶಸ್ತ್ರ ಮೀಸಲು ಪಡೆಯವರಿಗೆ ಶೇ 0.25 ಬಡ್ಡಿ ದರ ವಿನಾಯಿತಿ.

ಇದನ್ನೂ ಓದಿ: Small savings account: ಜುಲೈನಿಂದ ಸೆಪ್ಟೆಂಬರ್​ ತ್ರೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆ ಬಡ್ಡಿ ದರಗಳಲ್ಲಿ ಬದಲಾವಣೆಯಿಲ್ಲ

(Are you purchasing new car? Here is the cheaper interest rate on new car loan. Here is the details)