ಸರ್ಕಾರಿ ನೌಕರರಿಗೆ ಈ ಬಾರಿಯ ಡಿಎ ಹೆಚ್ಚಳ ಶೇ. 3 ಅಲ್ಲ, ಇನ್ನೂ ಹೆಚ್ಚು? ಯಾವ ದಿನ ಪ್ರಕಟವಾಗುತ್ತೆ ತುಟ್ಟಿಭತ್ಯೆ ಏರಿಕೆ ನಿರ್ಧಾರ?

|

Updated on: Oct 01, 2023 | 3:15 PM

Central Government Employees DA, DA Date: ನವರಾತ್ರಿ ಕಳೆದ ಬಳಿಕ ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆ ಹೆಚ್ಚಳದ ನಿರ್ಧಾರ ಘೋಷಿಸುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಡಿಎ ಮತ್ತು ಡಿಆರ್ ಅನ್ನು ಈ ಬಾರಿ ಶೇ. 3ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡುವ ಸಾಧ್ಯತೆ ಇದೆ. ದೀಪಾವಳಿ ಹಬ್ಬದ ಒಳಗಾಗಿ ಡಿಎ ಹೆಚ್ಚಳ ಪ್ರಕಟವಾಗಬಹುದಾದರೂ ಜುಲೈ 1ರಿಂದ ಅದು ಪೂರ್ವಾನ್ವಯ ಆಗುತ್ತದೆ.

ಸರ್ಕಾರಿ ನೌಕರರಿಗೆ ಈ ಬಾರಿಯ ಡಿಎ ಹೆಚ್ಚಳ ಶೇ. 3 ಅಲ್ಲ, ಇನ್ನೂ ಹೆಚ್ಚು? ಯಾವ ದಿನ ಪ್ರಕಟವಾಗುತ್ತೆ ತುಟ್ಟಿಭತ್ಯೆ ಏರಿಕೆ ನಿರ್ಧಾರ?
ತುಟ್ಟಿಭತ್ಯೆ
Follow us on

ನವದೆಹಲಿ, ಅಕ್ಟೋಬರ್ 1: ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ನೀಡುವ ಡಿಎ ಮತ್ತು ಡಿಆರ್ ಅನ್ನು (DA and DR) ಈ ಬಾರಿ ಶೇ. 3ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡುವ ಸಾಧ್ಯತೆ ಇದೆ. ತುಟ್ಟಿಭತ್ಯೆ ಹೆಚ್ಚಳವನ್ನು (DA hike) ಯಾವಾಗ ಪ್ರಕಟಿಸಲಾಗುತ್ತದೆ ಎಂಬ ಬಗ್ಗೆಯೂ ಕೆಲ ಸುದ್ದಿಗಳು ಚಾಲನೆಯಲ್ಲಿವೆ. ಇವುಗಳ ಪ್ರಕಾರ, ನವರಾತ್ರಿ ಕಳೆದ ಬಳಿಕ ಮತ್ತು ದೀಪಾವಳಿಗೆ ಮುಂಚೆ ಡಿಎ ಏರಿಕೆ ನಿರ್ಧಾರ ಪ್ರಕಟವಾಗಬಹುದು ಎನ್ನಲಾಗಿದೆ. ಯಾವತ್ತೇ ನಿರ್ಧಾರ ಪ್ರಕಟವಾದರೂ 2023ರ ಜುಲೈ 1ರಿಂದಲೇ ಅದು ಅನ್ವಯಕ್ಕೆ ಬರುತ್ತದೆ. ಅಕ್ಟೋಬರ್ 15ರಿಂದ 24ರವರೆಗೂ ಈ ಬಾರಿಯ ನವರಾತ್ರಿ ಇದೆ. ನವೆಂಬರ್ 12ಕ್ಕೆ ದೀಪಾವಳಿ ಹಬ್ಬ ಇದೆ. ಅಂದಾಜು ಪ್ರಕಾರ ಅಕ್ಟೋಬರ್ 25ರಿಂದ ನವೆಂಬರ್ 8ರೊಳಗೆ ಡಿಎ ಮತ್ತು ಡಿಆರ್ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸಬಹುದು.

ತುಟ್ಟಿಭತ್ಯೆ ಏರಿಕೆ ಶೇ. 3ಕ್ಕಿಂತಲೂ ಹೆಚ್ಚು?

ಕೈಗಾರಿಕೆಯ ಕಾರ್ಮಿಕರ ಗ್ರಾಹಕ ಬೆಲೆ ಅನುಸೂಚಿ (ಸಿಪಿಐ- ಐಡಬ್ಲ್ಯು) ಆಧಾರದ ಮೇಲೆ ತುಟ್ಟಿಭತ್ಯೆಯನ್ನು ಗಣಿಸಲಾಗುತ್ತದೆ. ಕಳೆದ ಮೂರ್ನಾಲ್ಕು ಬಾರಿಯಿಂದಲೂ ಶೇ. 4ರಷ್ಟು ತುಟ್ಟಿಭತ್ಯೆ ಹೆಚ್ಚಿಸುತ್ತಾ ಬರಲಾಗಿದೆ. ಈ ಬಾರಿ ಶೇ. 3ರಷ್ಟು ಮಾತ್ರವೇ ಡಿಎ ಮತ್ತು ಡಿಆರ್ ಏರಿಸಲು ಸರ್ಕಾರ ನಿರ್ಧರಿಸಿದೆ ಎನ್ನುವಂತಹ ಸುದ್ದಿಗಳು ಈ ಹಿಂದೆ ಬಂದಿದ್ದವು. ಆದರೆ, ಹೊಸ ಸುದ್ದಿ ಪ್ರಕಾರ ಈ ಬಾರಿಯೂ ಶೇ. 4ರಷ್ಟು ಡಿಎ ಮತ್ತು ಡಿಆರ್ ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯಕ್ಕೆ ಡಿಎ ಮತ್ತು ಡಿಆರ್ ಶೇ. 42ರಷ್ಟಿವೆ. ಈಗ 4 ಪ್ರತಿಶತದಷ್ಟು ಹೆಚ್ಚಳವಾದರೆ ಡಿಎ ಶೇ. 46ಕ್ಕೆ ಹೋಗುತ್ತದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಕಾರ್​ಪೂಲಿಂಗ್ ನಿಷೇಧಕ್ಕೆ ಸಾರಿಗೆ ಇಲಾಖೆ ಮುಂದು; 10,000 ರೂ ವರೆಗೆ ದಂಡ ವಿಧಿಸುವ ಸಾಧ್ಯತೆ

ಏನಿದು ಡಿಎ ಮತ್ತು ಡಿಆರ್?

ಡಿಎ ಮತ್ತು ಡಿಆರ್ ಇವು ಸರಕಾರಿ ನೌಕರರಿಗೆ ನೀಡಲಾಗುವ ವಿಶೇಷ ಭತ್ಯೆ. ಸಾಮಾನ್ಯ ಬೆಲೆ ಏರಿಕೆಯಿಂದ ಜೀವನ ನಿರ್ವಹಣೆ ಕಷ್ಟಕರವಾಗುವುದನ್ನು ತಪ್ಪಿಸಲು ಸಂಬಳಕ್ಕೆ ಹೆಚ್ಚುವರಿಯಾಗಿ ಭತ್ಯೆ ನೀಡಲಾಗುತ್ತದೆ. ಅದೇ ಡಿಎ. ಮೂಲ ಸಂಬಳಕ್ಕೆ ಈ ಡಿಎ ಹೆಚ್ಚುವರಿಯಾಗಿ ಲಭಿಸುತ್ತದೆ. ವೇತನ ಹೆಚ್ಚಳಕ್ಕೆ ಇದು ಹೊರತಾಗಿರುತ್ತದೆ.

ಡಿಎ ಎಂಬುದು ತುಟ್ಟಿಭತ್ಯೆಯಾದರೆ, ಡಿಆರ್ ಎಂಬುದು ತುಟ್ಟಿಪರಿಹಾರ. ಹೆಸರೇ ತಿಳಿಸುವಂತೆ ಬೆಲೆ ಏರಿಕೆಯ ಹೊಡೆತ ತಡೆಯಲು ಧನಸಹಾಯ ಇದಾಗಿರುತ್ತದೆ. ಹಾಲಿ ಸೇವೆಯಲ್ಲಿರುವ ನೌಕರರಿಗೆ ಡಿಎ ಸಿಗುತ್ತದೆ. ನಿವೃತ್ತಿಗೊಂಡು ಪಿಂಚಣಿ ಪಡೆಯುತ್ತಿದ್ದವರಿಗೆ ಡಿಆರ್ ಸಿಗುತ್ತದೆ.

ಈ ಎರಡನ್ನೂ ಕೂಡ ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. ಜನವರಿ 1 ಮತ್ತು ಜುಲೈ 1ರಂದು ಡಿಎ ಮತ್ತು ಡಿಆರ್ ಪ್ರಕಟಿಸಲಾಗುತ್ತದೆ.

ಇದನ್ನೂ ಓದಿ: ನಿಮ್ಮ ಮ್ಯುಚುವಲ್ ಫಂಡ್ ಅಕೌಂಟ್​ಗೆ ನಾಮಿನಿ ಅಪ್​ಡೇಟ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಡಿಎ ಲೆಕ್ಕಾಚಾರ ಹೇಗೆ?

2022ರ ಜೂನ್​ಗೆ ಹಿಂದಿನ 12 ತಿಂಗಳಲ್ಲಿ ಇರುವ ಅಖಿಲ ಭಾರತ ಗ್ರಾಹಕ ಬೆಲೆ ಅನುಸೂಚಿಯ ಸರಾಸರಿ ದರದ ಆಧಾರವಾಗಿ ಡಿಎ ಮತ್ತು ಡಿಆರ್ ನಿರ್ಧರಿಸಲಾಗುತ್ತದೆ. ಅದಕ್ಕೆ ಸೂತ್ರ ನಿರ್ದಿಷ್ಟಪಡಿಸಲಾಗಿದೆ. ಹೀಗಾಗಿ, ಎಲ್ಲವೂ ಡಾಟಾ ಲೆಕ್ಕಾಚಾರದ ಪ್ರಕಾರ ಏರಿಕೆ ನಿರ್ಧಾರ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ