ಜಿಎಸ್​ಟಿ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳ; ಸೆಪ್ಟೆಂಬರ್​ನಲ್ಲಿ ಸರ್ಕಾರಕ್ಕೆ ಸಿಕ್ಕ ತೆರಿಗೆ 1,62,712 ಕೋಟಿ ರೂ; ಕರ್ನಾಟಕದ ಪಾಲೆಷ್ಟು?

Ministry of Finance Releases GST Collection Data for 2023 September: 2023ರ ಸೆಪ್ಟೆಂಬರ್ ತಿಂಗಳಲ್ಲಿ ದೇಶಾದ್ಯಂತ 1,62,712 ಕೋಟಿ ರೂ ಜಿಎಸ್​ಟಿ ಸಂಗ್ರಹವಾಗಿದೆ. ಕಳೆದ 6 ತಿಂಗಳಲ್ಲಿ ಜಿಎಸ್​ಟಿ ಸಂಗ್ರಹ 1.60 ಲಕ್ಷ ಕೋಟಿ ರೂ ಗಡಿ ದಾಟಿದ್ದು ಇದು ನಾಲ್ಕನೇ ಬಾರಿ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳು ಅತಿಹೆಚ್ಚು ಜಿಎಸ್​ಟಿ ಸಂಗ್ರಹ ಪಡೆದಿವೆ. ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಬಹುತೇಕ ಸಮಾನವಾಗಿ ಜಿಎಸ್​ಟಿ ಹಂಚಿಕೆ ಆಗಿದೆ.

ಜಿಎಸ್​ಟಿ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳ; ಸೆಪ್ಟೆಂಬರ್​ನಲ್ಲಿ ಸರ್ಕಾರಕ್ಕೆ ಸಿಕ್ಕ ತೆರಿಗೆ 1,62,712 ಕೋಟಿ ರೂ; ಕರ್ನಾಟಕದ ಪಾಲೆಷ್ಟು?
ಜಿಎಸ್​ಟಿ
Follow us
|

Updated on: Oct 01, 2023 | 5:47 PM

ನವದೆಹಲಿ, ಅಕ್ಟೋಬರ್ 1: ಸೆಪ್ಟೆಂಬರ್ ತಿಂಗಳ ಜಿಎಸ್​ಟಿ ಸಂಗ್ರಹದ ಮಾಹಿತಿ ಹೊರಬಂದಿದೆ. ಒಟ್ಟು ಜಿಎಸ್​ಟಿ ಸಂಗ್ರಹ (gross GST collection) 1,62,712 ಕೋಟಿ ರೂ ಇರುವುದು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿದೆ. ಈ ಹಣಕಾಸು ವರ್ಷದಲ್ಲಿ (2023-24ರಲ್ಲಿ), ಏಪ್ರಿಲ್​ನಿಂದ ಈಚೆ ಮಾಸಿಕ ಜಿಎಸ್​ಟಿ ಸಂಗ್ರಹ 1.60 ಲಕ್ಷ ಕೋಟಿ ರೂ ದಾಟಿದ್ದು ಇದು ನಾಲ್ಕನೇ ಬಾರಿ. ಕಳೆದ ಆರು ತಿಂಗಳಲ್ಲಿ ನಾಲ್ಕು ಬಾರಿ ಜಿಎಸ್​ಟಿ ಸಂಗ್ರಹ 1.6 ಲಕ್ಷ ಕೋಟಿ ರೂ ಗಡಿ ಮುಟ್ಟಿದೆ. ಈ ಆರು ತಿಂಗಳಲ್ಲಿ ಒಟ್ಟು ತೆರಿಗೆ ಸಂಗ್ರಹ 9,92,508 ಕೋಟಿ ರೂ ಇದೆ. ಹೆಚ್ಚೂಕಡಿಮೆ 10 ಲಕ್ಷ ಕೋಟಿ ರೂನಷ್ಟು ಜಿಎಸ್​ಟಿ ಸಂಗ್ರಹ ಸರ್ಕಾರಕ್ಕೆ ಸಿಕ್ಕಿದೆ.

ಸೆಪ್ಟೆಂಬರ್ ಜಿಎಸ್​ಟಿ ಸಂಗ್ರಹದ ವಿವರ

  • ಒಟ್ಟು ಜಿಎಸ್​ಟಿ ಸಂಗ್ರಹ: 1,62,712 ಕೋಟಿ ರೂ
  • ಸಿಜಿಎಸ್​ಟಿ: 29,818 ಕೋಟಿ ರೂ
  • ಎಸ್​ಜಿಎಸ್​ಟಿ: 37,657 ಕೋಟಿ ರೂ
  • ಐಜಿಎಸ್​ಟಿ: 83,623 ಕೋಟಿ ರೂ
  • ಸೆಸ್: 11,613 ಕೋಟಿ ರೂ

ಇದನ್ನೂ ಓದಿ: ಬೆಂಗಳೂರು ಗುಲಾಬಿ ಈರುಳ್ಳಿ ರಫ್ತಿಗೆ ನಿರ್ಬಂಧ ರದ್ದು; ಸೆ. 29ರಿಂದಲೇ ಅನುಮತಿ; ಆದರೆ ಷರತ್ತುಗಳಿವೆ

ಈ ಪೈಕಿ ಐಜಿಎಸ್​ಟಿಯ ಮೊತ್ತದಲ್ಲಿ ಕೇಂದ್ರಕ್ಕೆ 33,736 ಕೋಟಿ ರೂ ಸಿಕ್ಕರೆ, ರಾಜ್ಯ ಸರ್ಕಾರಗಳಿಗೆ 27,578 ಕೋಟಿ ರೂ ಸಿಕ್ಕಿದೆ. ಇದರೊಂದಿಗೆ ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಜಿಎಸ್​ಟಿ ಪಾಲು ಸಿಕ್ಕಿರುವುದು ಹೀಗಿದೆ:

ಕೇಂದ್ರಕ್ಕೆ ಸಿಕ್ಕ ಜಿಎಸ್​ಟಿ ಪಾಲು: 63,555 ಕೋಟಿ ರೂ

ರಾಜ್ಯಗಳಿಗೆ ಸಿಕ್ಕ ಜಿಎಸ್​ಟಿ ಪಾಲು: 65,235 ಕೋಟಿ ರೂ

ರಾಜ್ಯವಾರು ಜಿಎಸ್​ಟಿ ಆದಾಯ ಹೇಗೆ?

ಅತಿ ಹೆಚ್ಚು ಜಿಎಸ್​ಟಿ ಸಂಗ್ರಹ ಕಂಡ ರಾಜ್ಯಗಳಲ್ಲಿ ಈ ಬಾರಿಯೂ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳೇ ಮುಂದಿವೆ. ತಮಿಳುನಾಡು, ಗುಜರಾತ್ ರಾಜ್ಯಗಳೂ ಕೂಡ ಸಮೀಪದಲ್ಲಿವೆ. ಅತಿ ಹೆಚ್ಚು ಜಿಎಸ್​ಟಿ ಸಂಗ್ರಹ ಕಂಡ 10 ರಾಜ್ಯಗಳ ಪಟ್ಟಿ:

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಈ ಬಾರಿಯ ಡಿಎ ಹೆಚ್ಚಳ ಶೇ. 3 ಅಲ್ಲ, ಇನ್ನೂ ಹೆಚ್ಚು? ಯಾವ ದಿನ ಪ್ರಕಟವಾಗುತ್ತೆ ತುಟ್ಟಿಭತ್ಯೆ ಏರಿಕೆ ನಿರ್ಧಾರ?

  1. ಮಹಾರಾಷ್ಟ್ರ: 25,137 ಕೋಟಿ ರೂ
  2. ಕರ್ನಾಟಕ: 11,693 ಕೋಟಿ ರೂ
  3. ತಮಿಳುನಾಡು: 10,481 ಕೋಟಿ ರೂ
  4. ಗುಜರಾತ್: 10,129 ಕೋಟಿ ರೂ
  5. ಹರ್ಯಾಣ: 8,009 ಕೋಟಿ ರೂ
  6. ಉತ್ತರಪ್ರದೇಶ: 7,844 ಕೋಟಿ ರೂ
  7. ತೆಲಂಗಾಣ: 5,226 ಕೋಟಿ ರೂ
  8. ಪಶ್ಚಿಮ ಬಂಗಾಳ: 4,940 ಕೋಟಿ ರೂ
  9. ದೆಹಲಿ: 4,849 ಕೋಟಿ ರೂ
  10. ಒಡಿಶಾ: 4,249 ಕೋಟಿ ರೂ
  11. ಆಂಧ್ರಪ್ರದೇಶ: 3,658 ಕೋಟಿ ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ