7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ ಬಂಪರ್ ಆಗಸ್ಟ್ 3ಕ್ಕೆ ನಿರೀಕ್ಷಿಸಿ; ಸುದ್ದಿ ಪಕ್ಕಾ ಆಗಲು ಕಾಯಿರಿ
ಆಗಸ್ಟ್ 3ನೇ ತಾರೀಕಿನಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು ಕೇಂದ್ರ ಸರ್ಕಾರಿ ನೌಕರರು ದೊಡ್ಡ ಮಟ್ಟದ ಡಿಎ ಹೆಚ್ಚಳವಳನ್ನು ನಿರೀಕ್ಷೆ ಮಾಡಬಹುದು ಎಂದು ವರದಿಗಳಾಗಿವೆ.

ತುಟ್ಟಿಭತ್ಯೆ (DA) ಹೆಚ್ಚಳದ ಘೋಷಣೆಗಾಗಿ ಕಾಯುತ್ತಿರುವ ಕೇಂದ್ರ ಸರ್ಕಾರದ ಲಕ್ಷಾಂತರ ಸಂಖ್ಯೆಯ ನೌಕರರಿಗೆ ಮುಂದಿನ ತಿಂಗಳು (ಆಗಸ್ಟ್) ಒಳ್ಳೆಯ ಸುದ್ದಿ ಕೇಳಬಹುದು ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ. ಆಗಸ್ಟ್ ಮೊದಲ ವಾರದಲ್ಲಿ ನಡೆಯುವ ಕೇಂದ್ರ ಸಂಪುಟ ಸಭೆಯಲ್ಲಿ ಡಿಎ ಹೆಚ್ಚಳದ ಬಗ್ಗೆ ಸರ್ಕಾರ ಘೋಷಣೆ ಮಾಡಬಹುದು ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಜುಲೈ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರಿ ನೌಕರರು ನಿರೀಕ್ಷೆಗಿಂತ ಜಾಸ್ತಿ ತುಟ್ಟಿ ಭತ್ಯೆ ಹೆಚ್ಚಳವನ್ನು ಪಡೆಯಬಹುದು ಎಂದು ವರದಿಗಳು ತಿಳಿಸಿವೆ. ಈ ರೀತಿ ನಿರೀಕ್ಷೆಗೆ ಕಾರಣ ಏನು ಅಂದರೆ, ಇತ್ತೀಚಿನ ಅಖಿಲ-ಭಾರತ ಮಟ್ಟದ CPI-IW ಡೇಟಾ. ಎಐಸಿಪಿ ಸೂಚ್ಯಂಕವು ಡಿಎ ನಿರ್ಧರಿಸುವಲ್ಲಿ ನಿರ್ಣಾಯಕ ಅಂಶವಾಗಿದೆ. ಮೇ ತಿಂಗಳಿಗೆ ಕೇಂದ್ರ ಸರ್ಕಾರದ ಡಿಎ ಹೆಚ್ಚಳದ ಸಂಭವನೀಯತೆಯನ್ನು ಸೂಚಿಸುತ್ತದೆ. ಜುಲೈ ತಿಂಗಳಲ್ಲಿ ಸರ್ಕಾರವು ಉದ್ಯೋಗಿಗಳಿಗೆ ಇನ್ನೂ ಕೆಲವು ಒಳ್ಳೆಯ ಸುದ್ದಿ ನೀಡಬಹುದು.
ಡಿಎ ಹೆಚ್ಚಳ ಯಾವಾಗ?
ಇತ್ತೀಚಿನ ಮಾಧ್ಯಮ ವರದಿಗಳನ್ನು ಆಧರಿಸಿ ಹೇಳುವುದಾದರೆ, ಆಗಸ್ಟ್‌ನಲ್ಲಿ ತುಟ್ಟಿ ಭತ್ಯೆ ಶೇ 6ರಷ್ಟು ಹೆಚ್ಚಳವಾಗಬಹುದು. ಇದರರ್ಥ ಒಟ್ಟು ಡಿಎ ಶೇ 40ರಷ್ಟನ್ನು ತಲುಪಬಹುದು. ಸರ್ಕಾರವು ಆಗಸ್ಟ್ ಮೂರನೇ ವಾರದಲ್ಲಿ ಡಿಎ ಹೆಚ್ಚಳವನ್ನು ಘೋಷಿಸಬಹುದು. ಆಗಸ್ಟ್ 3ರಂದು ಸಭೆ ನಡೆಯುವ ಸಾಧ್ಯತೆ ಹೆಚ್ಚು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇವು ಸದ್ಯಕ್ಕೆ ಊಹಾಪೋಹಗಳು ಮಾತ್ರ, ಮತ್ತು ಉದ್ಯೋಗಿಗಳು ಅಧಿಕೃತ ಆದೇಶಕ್ಕಾಗಿ ಕಾಯಬೇಕಾಗುತ್ತದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. ಮೊದಲನೆಯದನ್ನು ಜನವರಿಯಿಂದ ಜೂನ್ವರೆಗೆ ನೀಡಲಾಗುತ್ತದೆ. ಎರಡನೆಯದು ಜುಲೈನಿಂದ ಡಿಸೆಂಬರ್ವರೆಗೆ ಬರುತ್ತದೆ.
2022ರ ಏಪ್ರಿಲ್ನ ಅಖಿಲ ಭಾರತ ಮಟ್ಟದ CPI-IW 1.7 ಅಂಕಗಳಿಂದ ಹೆಚ್ಚಾಯಿತು ಮತ್ತು 127.7ರಲ್ಲಿ ನಿಂತಿತು. ಇದು ಒಂದು ವರ್ಷದ ಹಿಂದಿನ ಇದೇ ತಿಂಗಳಿಗೆ ಹೋಲಿಸಿದರೆ ಶೇ 0.42ರ ಹೆಚ್ಚಳ. 1 ತಿಂಗಳ ಶೇಕಡಾವಾರು ಬದಲಾವಣೆಯಲ್ಲಿ ಇದು ಹಿಂದಿನ ತಿಂಗಳಿಗೆ ಸಂಬಂಧಿಸಿದಂತೆ ಶೇಕಡಾ 1.35ರಷ್ಟು ಹೆಚ್ಚಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಡೇಟಾ ತೋರಿಸಿದೆ. ಸಚಿವಾಲಯದ ಇತ್ತೀಚಿನ ವರದಿಗಳ ಪ್ರಕಾರ, ಮೇ ತಿಂಗಳ ಎಐಸಿಪಿಐ ಅಂಕಿ-ಅಂಶಗಳು 129 ರಷ್ಟಿದ್ದು, ಇದು ಡಿಎ ನಿರೀಕ್ಷೆಗಿಂತ ಹೆಚ್ಚಾಗಿರುತ್ತದೆ. ಅಂದರೆ ಶೇಕಡಾ 6 ರಷ್ಟು ಎಂದು ಖಚಿತತೆಯ ಸುಳಿವು ನೀಡುತ್ತಿದೆ ಎಂಬುದಾಗಿ ಹಲವಾರು ಮಾಧ್ಯಮ ವೆಬ್‌ಸೈಟ್‌ಗಳು ಹೇಳುತ್ತಿವೆ.
ಮೊದಲ ಏರಿಕೆ
2022ನೇ ಇಸವಿಯಲ್ಲಿ ತುಟ್ಟಿಭತ್ಯೆಯ ಮೊದಲ ಹೆಚ್ಚಳವನ್ನು ಮಾರ್ಚ್‌ನಲ್ಲಿ ಘೋಷಿಸಲಾಯಿತು. 2021ರ ಡಿಸೆಂಬರ್ನಲ್ಲಿ AICPI ಅಂಕಿ- ಅಂಶವು 125.4 ರಷ್ಟಿತ್ತು. ಆದರೆ 2022ರ ಜನವರಿಯಲ್ಲಿ ಇದು 0.3 ಅಂಕಗಳಿಂದ ಇಳಿದು, 125.1ಕ್ಕೆ ಕುಸಿಯಿತು. 2022ರ ಫೆಬ್ರವರಿಯಲ್ಲಿ ಅಖಿಲ ಭಾರತ ಮಟ್ಟದ CPI-IW 0.1 ಅಂಕಗಳಿಂದ ಕಡಿಮೆಯಾಗಿದೆ ಮತ್ತು 125.0ರಲ್ಲಿ ನಿಂತಿದೆ. 1-ತಿಂಗಳ ಶೇಕಡಾವಾರು ಬದಲಾವಣೆಯ ಮೇಲೆ, ಇದು ಹಿಂದಿನ ತಿಂಗಳಿಗೆ ಸಂಬಂಧಿಸಿದಂತೆ ಶೇಕಡಾ 0.08ರಷ್ಟು ಕಡಿಮೆಯಾಗಿದೆ. ಇದು ವರ್ಷದ ಹಿಂದೆ ಇದೇ ತಿಂಗಳಿಗೆ ಹೋಲಿಸಿದರೆ ಶೇಕಡಾ 0.68ರಷ್ಟು ಹೆಚ್ಚಳವಾಗಿದೆ. ಮಾರ್ಚ್ ತಿಂಗಳಿಗೆ 1 ಅಂಕ ಜಿಗಿತ ಕಂಡಿದ್ದು, ಎಐಸಿಪಿಐ ಸೂಚ್ಯಂಕ ಅಂಕಿ-ಅಂಶಗಳು 126ರಷ್ಟಿದೆ.
ವರ್ಷದಿಂದ ವರ್ಷಕ್ಕೆ ಗಮನಿಸಿದರೆ ತಿಂಗಳ ಹಣದುಬ್ಬರವು ಶೇ 6.34ರಷ್ಟಿದ್ದು, ಹಿಂದಿನ ತಿಂಗಳು ಇದು 5.35ರಷ್ಟಿತ್ತು. ಮತ್ತು ಹಿಂದಿನ ವರ್ಷದ ಇದೇ ತಿಂಗಳಿನಲ್ಲಿ ಶೇಕಡಾ 5.14 ರಷ್ಟಿತ್ತು. ಅದೇ ರೀತಿ ಆಹಾರ ಹಣದುಬ್ಬರವು ಹಿಂದಿನ ತಿಂಗಳಿನ ಶೇ 6.27ಕ್ಕೆ ಹೋಲಿಸಿದರೆ ಈಗ ಶೇಕಡಾ 7.05 ರಷ್ಟಿತ್ತು ಮತ್ತು ವರ್ಷದ ಹಿಂದೆ ಇದೇ ತಿಂಗಳಿನಲ್ಲಿ ಶೇಕಡಾ 4.78ರಷ್ಟಿತ್ತು ಎಂದು ಅಧಿಕೃತ ಅಂಕಿ-ಅಂಶಗಳಲ್ಲಿ ತಿಳಿಸಲಾಗಿದೆ. ಮೇ ತಿಂಗಳ ಎಐಸಿಪಿ ಸೂಚ್ಯಂಕವು ಡಿಎಯನ್ನು ಶೇ 6ರಷ್ಟು ಹೆಚ್ಚಿಸಬಹುದು ಎಂದು ಮತ್ತಷ್ಟು ಊಹಾಪೋಹಗಳಿಗೆ ಉತ್ತೇಜನ ನೀಡಿದ್ದು, ಅಂದರೆ ಒಟ್ಟು ಡಿಎ ಶೇ 40ರಷ್ಟನ್ನು ತಲುಪಬಹುದು.
1.16 ಕೋಟಿಯಷ್ಟು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಲಾಭದಾಯಕ ಬೆಲೆ ಏರಿಕೆ ಸರಿದೂಗಿಸಲು ತುಟ್ಟಿ ಭತ್ಯೆ (ಡಿಎ) ಮತ್ತು ಡಿಯರ್ನೆಸ್ ರಿಲೀಫ್ (ಡಿಆರ್) ಅನ್ನು ಶೇ 3ರಷ್ಟು ಹೆಚ್ಚಿಸುವುದರೊಂದಿಗೆ ಈಗ ಶೇ 34ರಷ್ಟು ನೀಡುವುದಕ್ಕೆ ಕೇಂದ್ರ ಸಚಿವ ಸಂಪುಟವು ಮಾರ್ಚ್ 30ರಂದು ಒಪ್ಪಿದ್ದನ್ನು ಸ್ಮರಿಸಬಹುದಾಗಿದೆ. ಹೆಚ್ಚುವರಿ ಕಂತು ಜನವರಿ 1, 2022ರಿಂದ ಜಾರಿಗೆ ಬರುತ್ತದೆ. 7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಸ್ವೀಕೃತ ಸೂತ್ರಕ್ಕೆ ಅನುಗುಣವಾಗಿ ಈ ಹೆಚ್ಚಳವಾಗಿದೆ.