ಆರ್​​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್ ಅಧಿಕಾರ ಅವಧಿ ವಿಸ್ತರಣೆ; ಮುಂದಿನ 3ವರ್ಷಕ್ಕೆ ಅವರೇ ಮತ್ತೆ ಗವರ್ನರ್​

|

Updated on: Oct 29, 2021 | 9:36 AM

Shaktikanta Das: ಶಕ್ತಿಕಾಂತ್​ ದಾಸ್​ 2018ರ ಡಿಸೆಂಬರ್​ 11ರಂದು ಆರ್​ಬಿಐ ಗವರ್ನರ್​ ಆಗಿ ನೇಮಕಗೊಂಡಿದ್ದರು. ಅದಕ್ಕೂ ಮೊದಲು ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದರು. 

ಆರ್​​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್ ಅಧಿಕಾರ ಅವಧಿ ವಿಸ್ತರಣೆ; ಮುಂದಿನ 3ವರ್ಷಕ್ಕೆ ಅವರೇ ಮತ್ತೆ ಗವರ್ನರ್​
ಶಕ್ತಿಕಾಂತ್​ ದಾಸ್​
Follow us on

ದೆಹಲಿ:  ಆರ್​​ಬಿಐ (ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ) ಗವರ್ನರ್​ ಶಕ್ತಿಕಾಂತ್​ ದಾಸ್​ (RBI Governor Shaktikanta Das) ಅವರ ಅಧಿಕಾರ ಅವಧಿಯನ್ನು ಮತ್ತೆ ಮೂರು ವರ್ಷಗಳಿಗೆ ವಿಸ್ತರಿಸಿ ಶುಕ್ರವಾರ ಆದೇಶ ಹೊರಡಿಸಿದೆ. ಶಕ್ತಿಕಾಂತ್​ ದಾಸ್​ ಅಧಿಕಾರ ಅವಧಿ 2021ರ ಡಿಸೆಂಬರ್​ 10ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಈಗ ಕೇಂದ್ರ ಸರ್ಕಾರ ಅದನ್ನು ವಿಸ್ತರಿಸಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಆರ್​ಬಿಐ ಗವರ್ನರ್​  ಶಕ್ತಿಕಾಂತ್​ ದಾಸ್​ ಅವರ ಮರುನೇಮಕಾತಿಗೆ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ ಎಂದು ಹೇಳಲಾಗಿದೆ.  

ಶಕ್ತಿಕಾಂತ್​ ದಾಸ್​ 2018ರ ಡಿಸೆಂಬರ್​ 11ರಂದು ಆರ್​ಬಿಐ ಗವರ್ನರ್​ ಆಗಿ ನೇಮಕಗೊಂಡಿದ್ದರು. ಅದಕ್ಕೂ ಮೊದಲು ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದರು.  ಹಣಕಾಸು, ಟ್ಯಾಕ್ಸೇಶನ್​​, ಉದ್ಯಮ, ಮೂಲಸೌಕರ್ಯಗಳಿಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಬಹುಮುಖ್ಯ ಹುದ್ದೆಗಳನ್ನು ನಿಭಾಯಿಸಿದ ಅನುಭವ ಅವರಿಗೆ ಇದೆ.  ಹಾಗೇ, ವಿಶ್ವ ಬ್ಯಾಂಕ್​, ಏಷ್ಯನ್​ ಡೆವಲಪ್​ಮೆಂಟ್​ ಬ್ಯಾಂಕ್​ (ADB), ನ್ಯೂ ಡೆವಲಪ್​ಮೆಂಟ್​ ಬ್ಯಾಂಕ್ (NDB), ಏಷ್ಯನ್​ ಇನ್​ಫ್ರಾಸ್ಟ್ರಕ್ಚರ್​​ ಇನ್ವೆಸ್ಟ್​ಮೆಂಟ್ ಬ್ಯಾಂಕ್​ (AHB)ಗಳಲ್ಲಿ ಭಾರತದ ಪರ್ಯಾಯ ಗವರ್ನರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ಹಣಕಾಸು ಸಚಿವಾಲಯದಲ್ಲಿ ಸುದೀರ್ಘ ಅವಧಿಗೆ ಕಾರ್ಯನಿರ್ವಹಿಸಿರುವ ಶಕ್ತಿಕಾಂತ್​ ದಾಸ್​ ಒಟ್ಟು 8 ಕೇಂದ್ರ ಬಜೆಟ್​​ಗಳ ತಯಾರಿಕೆಯಲ್ಲಿ ನೇರವಾಗಿ ಕಾರ್ಯನಿರ್ವಹಿಸಿದ್ದಾರೆ.

ಶಕ್ತಿಕಾಂತ್​ ದಾಸ್​ ಗವರ್ನರ್​ ಆಗುವುದಕ್ಕೂ ಮೊದಲು ಆ ಸ್ಥಾನದಲ್ಲಿ ಊರ್ಜಿತ್​ ಪಟೇಲ್​ ಇದ್ದರು. ಆದರೆ ಅವರಿಗೂ ಕೇಂದ್ರ ಸರ್ಕಾರಕ್ಕೂ ಪದೇಪದೆ ವೈಮನಸ್ಯ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಆಕಸ್ಮಿಕವಾಗಿ ರಾಜೀನಾಮೆ ನೀಡಿದ್ದರು.  ಇದೀಗ ಶಕ್ತಿಕಾಂತ್​ ದಾಸ್​ ಅವಧಿ ಮತ್ತೆ ಮೂರು ವರ್ಷಕ್ಕೆ ವಿಸ್ತರಣೆಯಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕಾರ ವಿಸ್ತರಣೆಯಾದ ಆರ್​ಬಿಐನ ಮೊದಲ ಗವರ್ನರ್​ ಇವರಾಗಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣ ಡಿವೈಎಸ್​​ಪಿ ರಮೇಶ್ ಪೊಲೀಸ್​ ಸಮವಸ್ತ್ರದಲ್ಲಿಯೇ ಭಜನೆಗೆ ಕುಳಿತರು!

ಜಿ20 ಶೃಂಗಸಭೆಗಾಗಿ ರೋಮ್​​ಗೆ ತೆರಳಿದ ನರೇಂದ್ರ ಮೋದಿ; ಪ್ರಧಾನಿಯಾದ ಬಳಿಕ ಇದು ಮೊದಲ ಭೇಟಿ

Published On - 9:25 am, Fri, 29 October 21