ಚನ್ನಪಟ್ಟಣ ಡಿವೈಎಸ್ಪಿ ರಮೇಶ್ ಪೊಲೀಸ್ ಸಮವಸ್ತ್ರದಲ್ಲಿಯೇ ಭಜನೆಗೆ ಕುಳಿತರು!
ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕೋಟೆ ನಗರದ ಮನೆಯೊಂದರಲ್ಲಿ ಡಿವೈಎಸ್ಪಿ ರಮೇಶ್ ಭಜನೆ ಮಾಡಿದ್ದಾರೆ. ಭಜನೆ ಮಾಡಿರೋ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಡಿವೈಎಸ್ಪಿ ರಮೇಶ್ ಅವರ ಈ ನಡೆಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.
ರಾಮನಗರ: ಅಪರಾಧ ಪ್ರಕರಣಗಳು ಹೆಚ್ಚಾದರೂ ಡಿವೈಎಸ್ಪಿ ರಮೇಶ್ ಕೆಎನ್ ಅವರಿಗೆ ಭಜನೆಯ ಚಿಂತೆ. ಯೂನಿಫಾರ್ಮ್ ನಲ್ಲಿಯೇ ಕುಳಿತು ಭಜನೆಯಲ್ಲಿ ಪಾಲ್ಗೊಂಡಿದ್ದಾರೆ ಚನ್ನಪಟ್ಟಣ ವಿಭಾಗದ ಡಿವೈಎಸ್ಪಿ ರಮೇಶ್. ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕೋಟೆ ನಗರದ ಮನೆಯೊಂದರಲ್ಲಿ ಡಿವೈಎಸ್ಪಿ ರಮೇಶ್ ಭಜನೆ ಮಾಡಿದ್ದಾರೆ. ಭಜನೆ ಮಾಡಿರೋ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಡಿವೈಎಸ್ಪಿ ರಮೇಶ್ ಅವರ ಈ ನಡೆಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ಪೊಲೀಸ್ ಸಮವಸ್ತ್ರದಲ್ಲಿ ಕುಳಿತು ಭಜನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ನೇರ ಪ್ರಶ್ನೆಯಾಗಿದೆ. ಇದೇ ವೇಳೆ ಭಜನೆಯಿಂದ ಎದ್ದು, ಮೊದಲು ಅಪರಾಧ ಪ್ರಕರಣಗಳನ್ನ ತಡೆಯುವ ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಚನ್ನಪಟ್ಟಣ: ಪಿಎಸ್ಐ ವರ್ಗಾವಣೆಗೆ ಠಾಣೆ ಮುಂದೆ ಪಟಾಕಿ ಸಿಡಿಸಿ, ಸಾರ್ವಜನಿಕರಿಂದ ಸಂಭ್ರಮಾಚರಣೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅಕ್ಕೂರು ಠಾಣೆಯ ಪಿಎಸ್ಐ ವರ್ಗಾವಣೆಗೆ ಠಾಣೆಯ ಮುಂದೆ ಪಟಾಕಿ ಸಿಡಿಸಿ ಸಾರ್ವಜನಿಕರು ಸಂಭ್ರಮಾಚರಣೆ ಮಾಡಿದ್ದಾರೆ. ನಿನ್ನೆ ರಾತ್ರಿ ಠಾಣೆಯ ಮುಂದೆ ಪಟಾಕಿ ಸಿಡಿಸಿದ ಗ್ರಾಮಸ್ಥರು ಆನಂದಗೊಂಡಿದ್ದಾರೆ. ಅಕ್ಕೂರು ಠಾಣೆಯ ಪ್ರಭಾರ ಪಿಎಸ್ಐ ಆಗಿದ್ದ ಸರಸ್ವತಿ ವರ್ಗವಾದ ಪೊಲೀಸ್ ಅಧಿಕಾರಿ. ಅವರನ್ನು ಮೂಲ ಸ್ಥಾನಕ್ಕೆ ವರ್ಗಾವಣೆ ಮಾಡಿ ಜಿಲ್ಲಾ ಎಸ್ಪಿ ಆದೇಶ ಮಾಡಿದ್ದರು. ಇದೀಗ ಸರಸ್ವತಿ ಸ್ಥಾನಕ್ಕೆ ಮಾಗಡಿ ಠಾಣೆ ಎಸ್ಐ ಶ್ರೀಕಾಂತ್ ನೇಮಕವಾಗಿದ್ದಾರೆ.
ಪಿಎಸ್ಐ ಸರಸ್ವತಿ ವಿರುದ್ಧ ಆರೋಪಗಳು ಕೇಳಿ ಬಂದ ಹಿನ್ನೆಲೆ ಮೂಲ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಪಿಎಸ್ಐ ಸರಸ್ವತಿ ರಾಮನಗರ ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಆಗಿದ್ದರು. ಹೆಚ್ಚುವರಿಯಾಗಿ ಅಕ್ಕೂರು ಠಾಣೆಗೆ ಅವರನ್ನು ನೇಮಕ ಮಾಡಲಾಗಿತ್ತು.
Also Read: Channapatna toys: ಅಂಬಾನಿಯ ರಿಲಯನ್ಸ್ ಸಹಭಾಗಿ ಸಂಸ್ಥೆಯ ನೆರವು, ಚನ್ನಪಟ್ಟಣದ ಬೊಂಬೆಗಳು ಸಿಂಗಾಪೂರಕ್ಕೆ ರಫ್ತು
Bajarangi 2 Release: ಈ ಸಿನಿಮಾ ನೋಡಿ ನನಗೆ ಸ್ವಲ್ಪ ಟಚ್ ಆಯ್ತು |Tv9 Kannada
(channapatna dysp ramesh kn performs bhajan sitting in police uniform)
Published On - 9:26 am, Fri, 29 October 21