Channapatna toys: ಅಂಬಾನಿಯ ರಿಲಯನ್ಸ್ ಸಹಭಾಗಿ ಸಂಸ್ಥೆಯ ನೆರವು, ಚನ್ನಪಟ್ಟಣದ ಬೊಂಬೆಗಳು ಸಿಂಗಾಪೂರಕ್ಕೆ ರಫ್ತು
ರಿಲಯನ್ಸ್ ಬೆನ್ನೆಲುಬಾಗಿ ನಿಂತಿರುವ ಖಲಾರ ವೇದಿಕೆಯು ಸಾವಿರಾರು ಭಾರತೀಯ ಕುಶಲಕರ್ಮಿಗಳು ಸಿದ್ದಪಡಿಸಿದ ಕಲಾಕೃತಿಗಳಿಗೆ ಜಗತ್ತಿನಾದ್ಯಂತ ಮಾರುಕಟ್ಟೆಯನ್ನು ಒದಗಿಸುತ್ತಿದೆ. ಚನ್ನಪಟ್ಟಣದ ಆಟಿಕೆಗಳು ಸಿಂಗಾಪೂರ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ.
ಜಗದ್ವಿಖ್ಯಾತ ಚನ್ನಪಟ್ಟಣದ ಬೊಂಬೆ ಆಟಿಕೆಗಳಿಗೆ ಈಗ ಸಿಂಗಾಪೂರದಲ್ಲೂ ಮಾರುಕಟ್ಟೆ ಸೃಷ್ಟಿಯಾಗುತ್ತಿದೆ. ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಬೆನ್ನುಲುಬಾಗಿ ನಿಂತಿರುವ ಖಲಾರ ವೇದಿಕೆಯು ಚನ್ನಪಟ್ಟಣದ ಆಟಿಕೆಗಳಿಗೆ ಮಾರುಕಟ್ಟೆ ಒದಗಿಸಲು ಮುಂದಾಗಿದೆ. ಖಲಾರ ಭಾರತದ ಬೃಹತ್ ಸಾಗರೋತ್ತರ ಬಿಟುಬಿ (ಬ್ಯುಸಿನೆಸ್ ಟು ಬ್ಯುಸಿನೆಸ್) ವೇದಿಕೆಯಾಗಿದ್ದು (qalara.com), ಭಾರತೀಯ ಕುಶಲಕರ್ಮಿ ಉತ್ಪನ್ನಗಳನ್ನು ಜಾಗತಿಕ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ರೂಪಿಸಿದೆ. ಇದರ ಭಾಗವಾಗಿ ಕರ್ನಾಟಕದ ಪ್ರಮುಖ ಸಾಂಪ್ರದಾಯಿಕ ಚನ್ನಪಟ್ಟಣದ ಆಟಿಕೆಗಳಿಗೆ ಸಿಂಗಾಪೂರದಲ್ಲಿ ಹೊಸ ಗ್ರಾಹಕರನ್ನು ಖಲಾರ ಸೃಷ್ಟಿಸಿದೆ.
ದೆಹಲಿಯಲ್ಲಿ ಅಕ್ಟೋಬರ್ 28ರಿಂದ 31ರವರೆಗೆ ಭಾರತೀಯ ಕರಕುಶಲ ಮತ್ತು ಉಡುಗೊರೆ ಮೇಳ ಖಲಾರ ಸಹಭಾಗಿತ್ವದಲ್ಲಿ ದೆಹಲಿಯಲ್ಲಿ ಅಕ್ಟೋಬರ್ 28ರಿಂದ 31ರವರೆಗೆ ಆಯೋಜಿಸಲಾಗಿರುವ ಏಷ್ಯಾದ ಅತಿದೊಡ್ಡ ಭಾರತೀಯ ಕರಕುಶಲವಸ್ತುಗಳು ಮತ್ತು ಉಡುಗೊರೆಗಳ ಮೇಳದಲ್ಲಿ ಗೃಹಲಂಕಾರ, ಕಸೂತಿ, ಉಡುಗೊರೆ, ಒಳಾಂಗಣ ಮತ್ತು ಹೊರಾಂಗಣ ಆಂಲಕಾರಿಕೆಗಳು, ಅಡುಗೆಕೊಣೆ ಮತ್ತು ಊಟದಮನೆ ಆಲಂಕಾರಿಕ ವಸ್ತುಗಳು ಸೇರಿದಂತೆ 75,000 ಕ್ಕೂ ಮೀರಿದ ಕುಶಲಕರ್ಮಿಗಳು ಸಿದ್ದಪಡಿಸಿದ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ.
ರಿಲಯನ್ಸ್ ಬೆನ್ನೆಲುಬಾಗಿ ನಿಂತಿರುವ ಖಲಾರ ವೇದಿಕೆಯು ಸಾವಿರಾರು ಭಾರತೀಯ ಕುಶಲಕರ್ಮಿಗಳು ಸಿದ್ದಪಡಿಸಿದ ಕಲಾಕೃತಿಗಳಿಗೆ ಜಗತ್ತಿನಾದ್ಯಂತ ಮಾರುಕಟ್ಟೆಯನ್ನು ಒದಗಿಸುತ್ತಿದೆ. ತತ್ಪರಿಣಾಮ ಚಿನ್ನಮಲೈನಲ್ಲಿ ಕೈಮಗ್ಗದಿಂದ ನೇಯ್ದ ಕಿಚನ್ ಟವಲ್ ಗಳು ಲಾಸ್ ಏಂಜಲೀಸ್ ನಲ್ಲಿ, ಬಂಗಾಳದಲ್ಲಿ ಸಬೈ ಹುಲ್ಲಿನಿಂದ ತಯಾರಿಸಿದ ಊಟದ ಮೇಜು ಅಲಂಕಾರಿಕ ಚೌಕಗಳು ಹಾಂಗ್ ಕಾಂಗ್ ಮಾರುಕಟ್ಟೆಯಲ್ಲಿ, ಮಣಿಪುರದ ಲಾಂಗ್ಪಿ ಗ್ರಾಮದಲ್ಲಿ ತಯಾರಿಸಿದ ಮಡಿಕೆಗಳು ಕೆನಾಡಾದ ಮಾರುಕಟ್ಟೆಯಲ್ಲಿ, ಚನ್ನಪಟ್ಟಣದ ಆಟಿಕೆಗಳು ಸಿಂಗಾಪೂರ ಮಾರುಕಟ್ಟೆಯಲ್ಲಿ, ಸಹರನ್ ಪುರದ ಕೈಕೆತ್ತನೆ ಮರದ ಅಲಂಕಾರಿಕ ಕೃತಿಗಳು ಮಾರಿಷಸ್ ಮಾರುಕಟ್ಟೆಯಲ್ಲಿ, ಒಡಿಸಾದ ಕೈಯಲ್ಲಿ ರಚಿಸಿದ ಸುಂದರಕಲಾಕೃತಿಯ ಪಾನೀಯ ಪಾತ್ರೆಗಳು ಲಂಡನ್ ಮಳಿಗೆಗಳಲ್ಲಿ, ಆಗ್ರದಲ್ಲಿ ತಯಾರಿಸಿದ ಮೆದುಕಲ್ಲಿನ ದೀಪಗಳು ಯುನೈಟೆಂಡ್ ಕಿಂಗ್ಡಮ್ ಮಳಿಗೆಗಳಲ್ಲಿ ಲಭ್ಯವಿವೆ. ಜೈಪುರದ ಸಾಂಪ್ರದಾಯಿಕ ಆಭರಣಗಳು ಯುರೋಪ್, ಆಸ್ಟ್ರೇಲಿಯಾ, ಕೆನಡಾ, ಅಮೆರಿಕಾ ಮತ್ತಿತರ ದೇಶಗಳ ಮಾರುಕಟ್ಟೆಯಲ್ಲೂ ಲಭ್ಯವಾಗುತ್ತಿವೆ.
ಖಲಾರ ವೇದಿಕೆಯು 600ಕ್ಕೂ ಹೆಚ್ಚು ನೊಂದಾಯಿತ ಅತಿಸಣ್ಣ, ಸಣ್ಣ ಮತ್ತು ದೊಡ್ಡ ಉತ್ಪಾದಕರು, ಕುಶಲಕರ್ಮಿಗಳು, ತಯಾರಕರು ಮತ್ತು ರಫ್ತುದಾರರನ್ನು ಹೊಂದಿದ್ದು, 50ಕ್ಕೂ ಹೆಚ್ಚು ದೇಶಗಳಿಂದ ಸಾವಿರಾರು ನೋಂದಾಯಿತ ಖರೀದಿದಾರರನ್ನು ಹೊಂದಿದೆ. ಒಂದು ವರ್ಷದೊಳಗೆ 40ಕ್ಕೂ ಹೆಚ್ಚು ದೇಶಗಳಿಗೆ ಸರಕುಗಳನ್ನು ತಲುಪಿಸಿದೆ.
ಜಗತ್ತಿನಾದ್ಯಂತ ಇರುವ ಗ್ರಾಹಕರ ಬೇಡಿಕೆ, ಉತ್ಪನ್ನ ಮತ್ತು ಬೆಲೆ ಏರಿಳಿತವನ್ನು ಗ್ರಹಿಸಲು ಮಾಹಿತಿ ಸಂಗ್ರಹ ಮತ್ತು ತಂತ್ರಜ್ಞಾನ ಸಂಯೋಜನೆ ಬಳಸಿಕೊಂಡಿರುವ ಖಲಾರ ವೇದಿಕೆ ಭಾರತೀಯ ಕುಶಲಕರ್ಮಿ ಉತ್ಪನ್ನಗಳ ಮಾರುಕಟ್ಟೆ ಮತ್ತು ಮಾರಾಟವನ್ನು ಹೆಚ್ಚಿಸಲು ಉತ್ಪಾದಕರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿದೆ.
ಮುಖೇಶ್ ಅಂಬಾನಿ ಅವರ ಒಡೆತನದ ರಿಲಯನ್ಸ್ ಬೆಂಬಲದೊಂದಿಗೆ, ಖಲಾರ ವೇದಿಕೆಯು ಸರಕು ಪೂರೈಕೆ ಸರಪಳಿ, ಉತ್ಪನ್ನ ಅಭಿವೃದ್ಧಿ, ಅಂತರಾಷ್ಟ್ರೀಯ ಪಾಲುದಾರಿಕೆ, ಮಾಹಿತಿ ಮತ್ತು ತಂತ್ರಜ್ಞಾನವನ್ನು ಸಮ್ಮಿಳಿತಗೊಳಿಸುವ ಮೂಲಕ ಸಂಯೋಜನೆ ಮತ್ತು ನಿಯಂತ್ರಣ ಸಾಧಿಸಿದೆ. ಗ್ರಾಹಕರ ಇಚ್ಚಾನುಸಾರ ಉತ್ಪನ್ನಗಳ ತಯಾರಿಕೆ ಮತ್ತು ಕಡಮೆ ಸಂಖ್ಯೆಯ ಬೇಡಿಕೆ ಸ್ವೀಕಾರ, ಬೇಡಿಕೆಯಾಧಾರಿತ ಉತ್ಪಾದನೆ ವಿಧಾನಗಳನ್ನು ಅಳವಡಿಸಿಕೊಂಡಿದೆ. ವಾಯುಮಾರ್ಗ, ಜಲಮಾರ್ಗಗಳ ಮೂಲಕ ಸಾಗರೋತ್ತರ ದೇಶಗಳಿಗೆ ಉತ್ಪನ್ನಗಳನ್ನು ರವಾನಿಸುತ್ತಿದ್ದು ಜಾಗತಿಕ ಪಾವತಿ ಪರಿಕರ ವ್ಯವಸ್ಥೆಯನ್ನು ಖಲಾರ ವೇದಿಕೆಯು ಒದಗಿಸಿದೆ.
(Channapatna toys made to available in singapore through qalara backed by reliance industries)