GST Share: ಕೇಂದ್ರದಿಂದ ರಾಜ್ಯಗಳಿಗೆ 1.18 ಲಕ್ಷ ಕೋಟಿ ಜಿಎಸ್​ಟಿ ಹಂಚಿಕೆ; ಕರ್ನಾಟಕಕ್ಕೆ 4,314 ಕೋಟಿ ರೂ; ಬೇರೆ ರಾಜ್ಯಗಳಿಗೆ ಸಿಕ್ಕಿದ್ದು ಎಷ್ಟು?

|

Updated on: Jun 12, 2023 | 5:56 PM

Centre Releases 3rd GST Installment To States: ಕೇಂದ್ರ ಸರ್ಕಾರ ಜೂನ್ 12ರಂದು 3ನೇ ಕಂತಿನ ಜಿಎಸ್​ಟಿ ಹಣ ಬಿಡುಗಡೆ ಮಾಡಿದೆ. 1.18 ಲಕ್ಷ ಕೋಟಿ ರೂ ಪೈಕಿ ಕರ್ನಾಟಕಕ್ಕೆ 4,314 ಕೋಟಿ ರೂ ಸಿಕ್ಕಿದೆ. ಉತ್ತರಪ್ರದೇಶಕ್ಕೆ ಅತಿಹೆಚ್ಚು ಲಭಿಸಿದೆ. ರಾಜ್ಯವಾರು ಜಿಎಸ್​ಟಿ ಪಟ್ಟಿ ಇಲ್ಲಿದೆ....

GST Share: ಕೇಂದ್ರದಿಂದ ರಾಜ್ಯಗಳಿಗೆ 1.18 ಲಕ್ಷ ಕೋಟಿ ಜಿಎಸ್​ಟಿ ಹಂಚಿಕೆ; ಕರ್ನಾಟಕಕ್ಕೆ 4,314 ಕೋಟಿ ರೂ; ಬೇರೆ ರಾಜ್ಯಗಳಿಗೆ ಸಿಕ್ಕಿದ್ದು ಎಷ್ಟು?
ಜಿಎಸ್​ಟಿ
Follow us on

ನವದೆಹಲಿ: ಕೇಂದ್ರ ಸರ್ಕಾರ ಜೂನ್ ತಿಂಗಳಲ್ಲಿ ವಿವಿಧ ರಾಜ್ಯಗಳಿಗೆ ಒಟ್ಟಿಗೆ ಎರಡು ಕಂತುಗಳ ಜಿಎಸ್​ಟಿ ಪಾಲು (GST Devolution) ಹಂಚಿಕೆ ಮಾಡಿದೆ. ವಾಡಿಕೆಯಂತೆ ತಿಂಗಳಿಗೆ 59,140 ಕೋಟಿ ರೂ ನೀಡಬೇಕಿದ್ದ ಕೇಂದ್ರ ಸರ್ಕಾರ ಈ ಬಾರಿ 1,18,280 ಕೋಟಿ ರೂ ಹಣವನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಿದೆ. ಜೂನ್ 12ರಂದು ಕೇಂದ್ರದಿಂದ ಹಣ ಬಿಡುಗಡೆ ಆಗಿದೆ. ರಾಜ್ಯಗಳಲ್ಲಿ ವಿವಿಧ ಯೋಜನೆಗಳಿಗೆ ಹಣ ಹೂಡಿಕೆ ತ್ವರಿತಗೊಳ್ಳಲೆಂಬ ಉದ್ದೇಶಕ್ಕೆ ಕೇಂದ್ರದಿಂದ ಮುಂದಿನ ತಿಂಗಳ ಜಿಎಸ್​ಟಿ ಪಾಲನ್ನು ಮುಂಗಡವಾಗಿ ಸೇರಿಸಿ ಕೊಡಲಾಗಿದೆ.

ವಿವಿಧ ರಾಜ್ಯಗಳಿಗೆ ನೀಡಲಾಗಿರುವ 1,18,280 ರೂ ಪೈಕಿ ಕರ್ನಾಟಕಕ್ಕೆ 4,314 ಕೋಟಿ ರೂ ಪ್ರಾಪ್ತವಾಗಿದೆ. ಮಹಾರಾಷ್ಟ್ರ ರಾಜ್ಯಕ್ಕೆ ಸಿಕ್ಕಿರುವುದು 7,472 ಕೋಟಿ ರೂ. ಮಹಾರಾಷ್ಟ್ರ ಮತ್ತು ಕರ್ನಾಟಕ ದೇಶದಲ್ಲಿ ಅತಿಹೆಚ್ಚು ಜಿಎಸ್​ಟಿ ಸಂಗ್ರಹ ಮಾಡಿ ಕೇಂದ್ರಕ್ಕೆ ತಲುಪಿಸುವ ರಾಜ್ಯಗಳಾಗಿವೆ. ಜಿಎಸ್​ಟಿ ಪಾಲಿನಲ್ಲಿ ಉತ್ತರಪ್ರದೇಶಕ್ಕೆ ಸಿಂಹ ಪಾಲು ಇದೆ. .ಪ್ರ.ಗೆ 21,218 ಕೋಟಿ ರೂ ಸಿಕ್ಕಿದೆ. ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಿಗೆ 8,000 ಕೋಟಿ ರೂಗಿಂತ ಹೆಚ್ಚು ಜಿಎಸ್​ಟಿ ಪಾಲು ಜೂನ್ ತಿಂಗಳಲ್ಲಿ ಸಿಕ್ಕಿದೆ.

ಇದನ್ನೂ ಓದಿPM Kisan 14th Installment: ಕೃಷಿಕರಿಗೆ ನೀಡುವ ಪಿಎಂ ಕಿಸಾನ್ 14ನೇ ಕಂತಿನ ಹಣ ಮುಂದಿನ ವಾರ ಬಿಡುಗಡೆ? ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ

2023, ಜೂನ್ 12ಕ್ಕೆ ಬಿಡಗಡೆ ಆದ 3ನೇ ಕಂತಿನ ಜಿಎಸ್​ಟಿ ಹಣ

  1. ಉತ್ತರಪ್ರದೇಶ: 21,218 ಕೋಟಿ ರೂ
  2. ಬಿಹಾರ: 11,897 ಕೋಟಿ ರೂ
  3. ಮಧ್ಯಪ್ರದೇಶ: 9,285 ಕೋಟಿ ರೂ
  4. ಪಶ್ಚಿಮ ಬಂಗಾಳ: 8,898 ಕೋಟಿ ರೂ
  5. ಮಹಾರಾಷ್ಟ್ರ: 7,472 ಕೋಟಿ ರೂ
  6. ರಾಜಸ್ಥಾನ್: 7,128 ಕೋಟಿ ರೂ
  7. ಒಡಿಶಾ: 5,356 ಕೋಟಿ ರೂ
  8. ತಮಿಳುನಾಡು: 4,825 ಕೋಟಿ ರೂ
  9. ಆಂಧ್ರಪ್ರದೇಶ: 4,787 ಕೋಟಿ ರೂ
  10. ಕರ್ನಾಟಕ: 4,314 ಕೋಟಿ ರೂ
  11. ಗುಜರಾತ್: 4,114 ಕೋಟಿ ರೂ
  12. ಛತ್ತೀಸ್​ಗಡ: 4,030 ಕೋಟಿ ರೂ
  13. ಜಾರ್ಖಂಡ್: 3,912ಕೋಟಿ ರೂ
  14. ಅಸ್ಸಾಮ್: 3,700 ಕೋಟಿ ರೂ
  15. ತೆಲಂಗಾಣ: 2,486 ಕೋಟಿ ರೂ
  16. ಕೇರಳ: 2,277 ಕೋಟಿ ರೂ
  17. ಪಂಜಾಬ್: 2,137 ಕೋಟಿ ರೂ
  18. ಅರುಣಾಚಲಪ್ರದೇಶ: 2,078 ಕೋಟಿ ರೂ
  19. ಉತ್ತರಾಖಂಡ್: 1,322 ಕೋಟಿ ರೂ
  20. ಹರ್ಯಾಣ: 1,293 ಕೋಟಿ ರೂ
  21. ಹಿಮಾಚಲಪ್ರದೇಶ: 982 ಕೋಟಿ ರೂ
  22. ಮೇಘಾಲಯ: 907 ಕೋಟಿ ರೂ
  23. ಮಣಿಪುರ: 847 ಕೋಟಿ ರೂ
  24. ತ್ರಿಪುರಾ: 837 ಕೋಟಿ ರೂ
  25. ನಾಗಾಲ್ಯಾಂಡ್: 673 ಕೋಟಿ ರೂ
  26. ಮಿಝೋರಾಂ: 591 ಕೋಟಿ ರೂ
  27. ಸಿಕ್ಕಿಂ: 459 ಕೋಟಿ ರೂ
  28. ಗೋವಾ: 457 ಕೋಟಿ ರೂ

ಇದನ್ನೂ ಓದಿCompany FD: ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್: ಏನು ಲಾಭ? ಎಚ್ಚರ ವಹಿಸಬೇಕಾದ ಸಂಗತಿಗಳು; ಇಲ್ಲಿದೆ ಡೀಟೇಲ್ಸ್

ಹೆಚ್ಚು ಜಿಎಸ್​ಟಿ ಗಳಿಸಿದರೂ ಯಾಕೆ ಕಡಿಮೆ ಪಾಲು?

ಇಲ್ಲಿ ರಾಜ್ಯಗಳ ಆರ್ಥಿಕ ಸ್ಥಿತಿಗಳಿಗೆ ಅನುಸಾರವಾಗಿ ಜಿಎಸ್​ಟಿ ಪಾಲು ಹಂಚಿಕೆಯನ್ನು ಕೇಂದ್ರ ಸರ್ಕಾರ ಮಾಡುತ್ತದೆ. ಹೆಚ್ಚು ಹಿಂದುಳಿದ ರಾಜ್ಯಗಳಾದ ಉತ್ತರಪ್ರದೇಶ, ಬಿಹಾರ, ಛತ್ತೀಸ್​ಗಡ, ಜಾರ್ಖಂಡ್, ಮಧ್ಯಪ್ರದೇಶ ಮೊದಲಾದವಕ್ಕೆ ಹೆಚ್ಚಿನ ತೆರಿಗೆ ಪಾಲು ಇದೆ. ಹೀಗಾಗಿ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮೊದಲಾದ ರಾಜ್ಯಗಳಿಗೆ ಕಡಿಮೆ ಜಿಎಸ್​ಟಿ ಪಾಲು ದೊರಕುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Mon, 12 June 23