ಪಾರ್ಟ್ನರ್ ವೀಸಾ, ಕಾನ್ಸುಲಾರ್ ಸರ್ವಿಸ್ ನಿಯಮಗಳಲ್ಲಿ ಬದಲಾವಣೆ ತಂದ ಸರ್ಕಾರ

Quality Service In Indian Missions: ಗುಣಮಟ್ಟದ ಸೇವೆ, ಸೂಕ್ತ ಬೆಲೆ, ದತ್ತಾಂಶ ರಕ್ಷಣೆ ಮತ್ತು ಭದ್ರತೆ ಮತ್ತು ನೈತಿಕ ನಡಾವಳಿ ಈ ನಾಲ್ಕು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಯಾವುದೇ ವ್ಯಕ್ತಿ ಭಾರತಕ್ಕೆ ಬರುವಾಗ ಮೊದಲು ಸಂಪರ್ಕಕ್ಕೆ ಬರುವುದು ರಾಜತಾಂತ್ರಿಕ ಕಚೇರಿಯಾದ್ದರಿಂದ ಅಲ್ಲಿ ಉತ್ಕೃಷ್ಟ ಗುಣಮಟ್ಟದ ಸೇವೆ ಒದಗಿಸಲು ನಿರ್ಧರಿಸಲಾಗಿದೆ.

ಪಾರ್ಟ್ನರ್ ವೀಸಾ, ಕಾನ್ಸುಲಾರ್ ಸರ್ವಿಸ್ ನಿಯಮಗಳಲ್ಲಿ ಬದಲಾವಣೆ ತಂದ ಸರ್ಕಾರ
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 01, 2023 | 10:59 AM

ನವದೆಹಲಿ, ಸೆಪ್ಟೆಂಬರ್ 1: ಪಾರ್ಟ್ನರ್ ವೀಸಾ ಮತ್ತು ಕಾನ್ಸುಲಾರ್ ಸರ್ವಿಸ್ ವಿಚಾರದಲ್ಲಿ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಪಾರ್ಟ್ನರ್ ವೀಸಾ ಮತ್ತು ಕಾನ್ಸುಲಾರ್ ಸೇವೆ ದುಬಾರಿಯಾಗದಂತೆ ನಿಯಂತ್ರಿಸಲು ಮತ್ತು ದೇಶದ ಘನತೆಗೆ ಕುಂದುಂಟಾಗದಂತೆ ನಿಯಂತ್ರಿಸಲು ಕೇಂದ್ರ ವಿದೇಶ ವ್ಯವಹಾರಗಳ ಸಚಿವಾಲಯ (MEA- Ministry of external Affairs) ಈ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ. ವಿದೇಶದಿಂದ ಭಾರತಕ್ಕೆ ಬರುವ ಯಾವುದೇ ವ್ಯಕ್ತಿಗೆ ಭಾರತದ ರಾಜತಾಂತ್ರಿಕ ಕಚೇರಿ (Indian Mission) ಮೊದಲ ಸಂಪರ್ಕ ಕೊಂಡಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರಾಜತಾಂತ್ರಿಕ ಕಚೇರಿಯ ನಿಯಮಗಳು ಬಹಳ ಮುಖ್ಯ ಎನಿಸುತ್ತವೆ.

ಗುಣಮಟ್ಟದ ಸೇವೆ, ಸೂಕ್ತ ಬೆಲೆ, ದತ್ತಾಂಶ ರಕ್ಷಣೆ ಮತ್ತು ಭದ್ರತೆ ಮತ್ತು ನೈತಿಕ ನಡಾವಳಿ ಈ ನಾಲ್ಕು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಯಾವುದೇ ವ್ಯಕ್ತಿ ಭಾರತಕ್ಕೆ ಬರುವಾಗ ಮೊದಲು ಸಂಪರ್ಕಕ್ಕೆ ಬರುವುದು ರಾಜತಾಂತ್ರಿಕ ಕಚೇರಿಯಾದ್ದರಿಂದ ಅಲ್ಲಿ ಉತ್ಕೃಷ್ಟ ಗುಣಮಟ್ಟದ ಸೇವೆ ಒದಗಿಸುವುದು ಬಹಳ ಮುಖ್ಯ ಎಂದು ಭಾರತೀಯ ಪ್ರವಾಸೀ ಏಜೆಂಟ್​ಗಳ ಸಂಘದ ಅಧ್ಯಕ್ಷೆ ಜ್ಯೋತಿ ಮಾಯಾಲ್ ಹೇಳುತ್ತಾರೆ.

ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆ ಸಾಧಕ-ಭಾದಕ ತಿಳಿಯಲು ರಾಮ್ ನಾಥ್ ಕೋವಿಂದ್ ನೇತೃತ್ವದ ಸಮಿತಿ ರಚಿಸಿದ ಕೇಂದ್ರ

ವ್ಯಾಪಾರ, ಅಂತಾರಾಷ್ಟ್ರೀಯ ಸೇವೆ, ನಾಗರಿಕ ಸೇವೆ ಇತ್ಯಾದಿ ಹಲವಾರು ವಲಯಗಳಲ್ಲಿ ಭಾರತ ಜಾಗತಿಕ ನಾಯಕನಾಗಿ ಗುರುತಿಸಿಕೊಳ್ಳುತ್ತಿದೆ. ನವಭಾರತ ನಿರ್ಮಿಸುವ ಭರವಸೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. ಈ ಹಂತದಲ್ಲಿ ಭಾರತ ಸರ್ಕಾರಕ್ಕೆ ಅದರ ವಿದೇಶಾಂಗ ಸಚಿವಾಲಯ ಮತ್ತು ರಾಜತಾಂತ್ರಿಕ ಕಚೇರಿಗಳು ಪ್ರತಿನಿಧಿಗಳೆನಿಸುತ್ತವೆ. ಹೀಗಾಗಿ ಅಲ್ಲಿ ಬಹಳ ಕಾರ್ಯಕ್ಷಮತೆಯ ಮತ್ತು ಗುಣಮಟ್ಟದ ಸೇವೆಗಳನ್ನು ಒದಗಿಸುವ ವ್ಯವಸ್ಥೆ ಇರಬೇಕು. ಇಲ್ಲದಿದ್ದರೆ ಸರ್ಕಾರದ ಸಾಮರ್ಥ್ಯದ ಬಗ್ಗೆ ನಂಬುಗೆ ಕಡಿಮೆ ಆಗಬಹುದು ಎಂದು ಜ್ಯೋತಿ ಮಾಯಾಲ್ ಅವರ ಅನಿಸಿಕೆ.

ಈ ಕಾರಣಕ್ಕೆ ಪಾರ್ಟ್ನರ್ ವೀಸಾ ಮತ್ತು ರಾಜತಾಂತ್ರಿಕ ಸೇವೆ ನೀಡಲು ನಿಯಮಗಳನ್ನು ಪರಿಷ್ಕರಿಸಿ, ಗುಣಮಟ್ಟದ ಸೇವೆ ಒದಗಿಸಲು ಸರ್ಕಾರ ಮುಂದಾಗಿದೆ. ಪಾರ್ಟ್ನರ್ ವಿಸಾ ಎಂದರೆ, ಬೇರೆ ದೇಶದಲ್ಲಿ ವಾಸಿಸುವ ವ್ಯಕ್ತಿಯನ್ನು ಭಾರತೀಯ ಪ್ರಜೆ ವಿವಾಹವಾಗಿ ವಿದೇಶಕ್ಕೆ ಹೋಗಿ ಸೇರಲು ಪಾರ್ಟ್ನರ್ ವೀಸಾ ಪಡೆಯಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ