ಕೇಂದ್ರದ ಪಿಎಲ್​ಐ ಸ್ಕೀಮ್​ನಲ್ಲಿ ತಮಿಳುನಾಡು, ಗುಜರಾತ್ ಮತ್ತು ಕರ್ನಾಟಕಕ್ಕೆ ಸಿಂಹಪಾಲು; ಕ್ರಿಸಿಲ್ ರಿಸರ್ಚ್ ವರದಿ

CRISIL Research Report on PLI Schemes: ಕೇಂದ್ರದ ಪಿಎಲ್​ಐ ಯೋಜನೆ ಅಡಿ ಸಾಕಷ್ಟು ಬಂಡವಾಳ ಹರಿದುಬರುತ್ತಿದ್ದು, ಇದರಲ್ಲಿ ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳಿಗೆ ಹೆಚ್ಚಿನ ಹೂಡಿಕೆ ಹೋಗುತ್ತಿದೆ. ಕರ್ನಾಟಕಕ್ಕೂ ಶೇ. 11ರಷ್ಟು ಹೂಡಿಕೆಗಳು ಹೋಗಲಿವೆ ಎಂದು ಕ್ರಿಸಿಲ್ ರಿಸರ್ಚ್ ವರದಿಯಲ್ಲಿ ತಿಳಿಸಲಾಗಿದೆ. ಕರ್ನಾಟಕಕ್ಕೆ ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಬರುವ ಹೆಚ್ಚಿನ ಹೂಡಿಕೆ ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಎಸಿಸಿ ಬ್ಯಾಟರಿ ವಲಯದಿಂದ ಸಿಗಲಿದೆ.

ಕೇಂದ್ರದ ಪಿಎಲ್​ಐ ಸ್ಕೀಮ್​ನಲ್ಲಿ ತಮಿಳುನಾಡು, ಗುಜರಾತ್ ಮತ್ತು ಕರ್ನಾಟಕಕ್ಕೆ ಸಿಂಹಪಾಲು; ಕ್ರಿಸಿಲ್ ರಿಸರ್ಚ್ ವರದಿ
ಪಿಎಲ್​ಐ ಸ್ಕೀಮ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 01, 2023 | 12:31 PM

ಕೇಂದ್ರ ಸರ್ಕಾರ ವಿವಿಧ ವಲಯಗಳಲ್ಲಿ ತಯಾರಿಕೆಗೆ ಉತ್ತೇಜನ ನೀಡಲು ಜಾರಿಗೆ ತಂದಿರುವ ಪಿಎಲ್​ಐ ಸ್ಕೀಮ್ ಗಣನೀಯವಾಗಿ ವಿಸ್ತರಿಸುತ್ತಿದೆ. 14 ವಲಯಗಳಲ್ಲಿ ಈಗ ಸರ್ಕಾರ ಉತ್ಪಾದನೆ ಅಧಾರಿತ ಪ್ರೋತ್ಸಾಹ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಯೋಜನೆ ಅಡಿ ಶುರುವಾಗಿರುವ ಮತ್ತು ಶುರುವಾಗಲಿರುವ ಮ್ಯಾನುಫ್ಯಾಕ್ಚರಿಂಗ್ ಯೂನಿಟ್​ಗಳು ದೇಶವ್ಯಾಪಿ ಇವೆ. ಆದರೆ, ತಮಿಳುನಾಡು, ಗುಜರಾತ್ ಮತ್ತು ಕರ್ನಾಟಕಕ್ಕೆ ಹೆಚ್ಚಿನ ಪಾಲು ಸಿಗಲಿದೆ. ಕರ್ನಾಟಕವನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಹೇಳುತ್ತಾ ಬರುತ್ತಿರುವ ಹೊತ್ತಿನಲ್ಲೇ ಹೂಡಿಕೆಗಳು ರಾಜ್ಯಕ್ಕೆ ಹೆಚ್ಚೆಚ್ಚು ಸಿಗುತ್ತಿರುವುದು ಗಮನಅರ್ಹ. ಕ್ರಿಸಿಲ್ ಮಾರ್ಕೆಟ್ ಇಂಟೆಲಿಜೆನ್ಸ್ ಅಂಡ್ ಅನಾಲಿಸಿಸ್ ವಿಭಾಗವು (CRISIL Market Intelligence and Analysis) ಪಿಎಲ್​ಐ ಸ್ಕೀಮ್ ಅನ್ವಯವಾಗುವ 14 ವಲಯಗಳ ಪೈಕಿ ಪ್ರಮುಖ 9 ವಲಯಗಳಲ್ಲಿ ಈ ಸ್ಕೀಮ್ ಅನ್ನು ವಿವರವಾಗಿ ಅವಲೋಕಿಸಿದೆ. ಅದರ ಪ್ರಕಾರ ಮೇಲಿನ ಮೂರು ರಾಜ್ಯಗಳಲ್ಲಿ ಶೇ. 72ರಷ್ಟು ಹೂಡಿಕೆಗಳಾಗಲಿವೆ.

ಎಸಿಸಿ ಬ್ಯಾಟರಿ, ಸೋಲಾರ್ ಪಿವಿ, ಜವಳಿ, ಮೊಬೈಲ್, ಆಹಾರ ಸಂಸ್ಕರಣೆ, ಟೆಲಿಕಾಂ, ವೈಟ್ ಗೂಡ್ಸ್ (ಫ್ರಿಡ್ಜ್ ಇತ್ಯಾದಿ ದೊಡ್ಡ ವಿದ್ಯುತ್ ಗೃಹೋಪಕರಣ), ಐಟಿ ಹಾರ್ಡ್​ವೇರ್ ಮತ್ತು ವೈದ್ಯಕೀಯ ಸಾಧನ, ಈ 9 ವಲಯಗಳಲ್ಲಿನ ಪಿಎಲ್​ಐ ಸ್ಕೀಮ್ ಅನ್ನು ಕ್ರಿಸಿಸ್ ಸಂಸ್ಥೆ ಅವಲೋಕಿಸಿದೆ. ಈ 9 ವಲಯದ ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಒಟ್ಟು 1.28 ಲಕ್ಷಕೋಟಿ ರೂ ಹೂಡಿಕೆಯಾಗುವ ನಿರೀಕ್ಷಎ ಇದೆ. ಈ ಪೈಕಿ ತಮಿಳುನಾಡಿಗೆ 42,000 ಕೋಟಿ ರೂ ಹೂಡಿಕೆ ಹೋಗಲಿದೆ. ಅಂದರೆ ಮೂರನೇ ಒಂದು ಭಾಗದಷ್ಟು ಹೂಡಿಕೆ ತಮಿಳುನಾಡು ಪಾಲಾಗಲಿದೆ. ಗುಜರಾತ್ ಸಮೀಪದಲ್ಲಿದ್ದು 36,000 ಕೋಟಿ ರೂ ಹೂಡಿಕೆ ಪಡೆಯಲಿದೆ. ತಮಿಳುನಾಡು, ಗುಜರಾತ್ ನಂತರ ಸ್ಥಾನ ಕರ್ನಾಟಕದ್ದಾಗಿದೆ. ಕರ್ನಾಟಕಕ್ಕೆ 14,000 ಕೋಟಿ ರೂ ಸಿಗಬಹುದು ಎನ್ನಲಾಗಿದೆ. ಕರ್ನಾಟಕದಲ್ಲಿ ಬರುವ ಹೂಡಿಕೆಯಲ್ಲಿ ಹೆಚ್ಚಿನ ಭಾಗ ವಿಸ್ತ್ರಾನ್ ವತಿಯಿಂದ ಸಿಗುವಂಥದ್ದು ಎಂಬುದು ಗಮನಾರ್ಹ. ಆದರೂ ಕೂಡ ಶೇ. 11ರಷ್ಟು ಹೂಡಿಕೆಯನ್ನು ಕರ್ನಾಟಕ ಆಕರ್ಷಿಸಿದೆ. ಮೊಬೈಲ್ ಬಿಟ್ಟರೆ ಕರ್ನಾಟಕಕ್ಕೆ ಹೆಚ್ಚಿನ ಹೂಡಿಕೆ ಬರುವುದು ಎಸಿಸಿ ಬ್ಯಾಟರಿ ವಲಯದಿಂದ.

ಕ್ರಿಸಿಲ್ ಅವಲೋಕಿಸಿದ 9 ವಲಯಗಳ ಪೈಕಿ ಎಸಿಸಿ ಬ್ಯಾಟರಿ ವಲಯದಲ್ಲಿ ಅತಿಹೆಚ್ಚು ಹೂಡಿಕೆ ಆಗಲಿದೆ. ಅಂದರೆ 52,000 ಕೋಟಿ ರೂ ಮೌಲ್ಯದ ಹೂಡಿಕೆ ನಡೆಯಲಿದೆ. ಇದರಲ್ಲಿ ತಮಿಳುನಾಡಿಗೆ ಶೇ. 67ರಷ್ಟು ಹೂಡಿಕೆ ಹೋಗಲಿದೆ. ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಿಗೆ ಎಸಿಸಿ ಬ್ಯಾಟರಿ ಘಟಕಗಳಿಂದ 17 ಪ್ರತಿಶತದಷ್ಟು ಹೂಡಿಕೆ ಸಿಗಲಿದೆ.

ಇದನ್ನೂ ಓದಿ: ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 7.8ರಷ್ಟು ಬೆಳವಣಿಗೆ; ಚೀನಾ, ಅಮೆರಿಕ, ಜಪಾನ್​ಗಿಂತಲೂ ವೇಗದ ಪ್ರಗತಿ

2020-21ರಲ್ಲಿ ಜಾರಿಗೆ ಬಂದ ಪಿಎಲ್​ಐ ಸ್ಕೀಮ್ ಬಹಳ ದೊಡ್ಡ ಗುರಿ ಹೊಂದಿತ್ತು. ಆದರೆ, ನಿರೀಕ್ಷಿತ ವೇಗದಲ್ಲಿ ನಡೆದಿಲ್ಲದಿರುವುದು ಕ್ರಿಸಿಲ್ ಸಂಶೋಧನೆಯಿಂದ ಗೊತ್ತಾಗಿದೆ. ಪಿಎಲ್​ಐ ಸ್ಕೀಮ್ ಇಷ್ಟರಲ್ಲಾಗಲೀ ಉಚ್ಚ ಮಟ್ಟ ತಲುಪಬೇಕಿತ್ತು. 2025-26ರಷ್ಟರಲ್ಲಿ ಭಾರತದಲ್ಲಿ ತಯಾರಿಕಾ ಕ್ಷೇತ್ರಕ್ಕೆ ಭದ್ರ ನೆಲೆ ಒದಗಿಸಬಹುದು ಎಂದು ಮೂಲದಲ್ಲಿ ನಿರೀಕ್ಷಿಸಲಾಗಿತ್ತು. ಆದರೆ, ಆರಂಭಿಕ ವರ್ಷಗಳಲ್ಲಿ ನಿರೀಕ್ಷಿತ ರೀತಿಯಲ್ಲಿ ಪಿಎಲ್​ಐಗೆ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಅದರ ಗುರಿ ಈಡೇರಿಕೆ ನಿರೀಕ್ಷಿತ ರೀತಿಯಲ್ಲಿ ಆಗಿಲ್ಲ. ಸರ್ಕಾರ ಇದೇ ಕಾರಣಕ್ಕೆ ಪಿಎಲ್​ಐ ಸ್ಕೀಮ್ ಅನ್ನು 2028-29ರವರೆಗೂ ಮುಂದುವರಿಸಬಹುದು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:30 pm, Fri, 1 September 23

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ