Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 7.8ರಷ್ಟು ಬೆಳವಣಿಗೆ; ಚೀನಾ, ಅಮೆರಿಕ, ಜಪಾನ್​ಗಿಂತಲೂ ವೇಗದ ಪ್ರಗತಿ

India GDP Q1 24Fy: ಭಾರತದ ಆರ್ಥಿಕ ಬೆಳವಣಿಗೆ 2023ರ ಏಪ್ರಿಲ್​ನಿಂದ ಜೂನ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಶೇ. 7.8ರಷ್ಟು ಬೆಳೆದಿರುವುದು ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶದಿಂದ ತಿಳಿದುಬಂದಿದೆ. ಆರ್​ಬಿಐ ಈ ಅವಧಿಯಲ್ಲಿ ಶೇ 8ರಷ್ಟು ಜಿಡಿಪಿ ಹೆಚ್ಚಬಹುದು ಎಂದು ಅಂದಾಜು ಮಾಡಿತ್ತು. ರಾಯ್ಟರ್ಸ್ ನಡೆಸಿದ ಸಮೀಕ್ಷೆಯಲ್ಲಿ ಆರ್ಥಿಕತಜ್ಞರ ಅನಿಸಿಕೆಯ ಸರಾಸರಿ ಪ್ರಕಾರವೂ ಶೇ. 8ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಆರ್ಥಿಕತೆ ವೃದ್ಧಿಸಬಹುದು ಎಂದಿದೆ.

ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 7.8ರಷ್ಟು ಬೆಳವಣಿಗೆ; ಚೀನಾ, ಅಮೆರಿಕ, ಜಪಾನ್​ಗಿಂತಲೂ ವೇಗದ ಪ್ರಗತಿ
ಜಿಡಿಪಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 31, 2023 | 6:24 PM

ನವದೆಹಲಿ, ಆಗಸ್ಟ್ 31: ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಆರ್​ಬಿಐ ನಿರೀಕ್ಷಿಸಿದ್ದಕ್ಕಿಂತ ತುಸು ಕಡಿಮೆ ಆಗಿದೆ. ಸರ್ಕಾರ ಇಂದು ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2023ರ ಏಪ್ರಿಲ್​ನಿಂದ ಜೂನ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಆರ್ಥಿಕತೆ ಶೇ. 7.8ರಷ್ಟು ಹೆಚ್ಚಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿನ (2022ರ ಏಪ್ರಿಲ್​ನಿಂದ ಜೂನ್​ವರೆಗೆ) ಜಿಡಿಪಿ ಬೆಳವಣಿಗೆಗೆ ಹೋಲಿಸಿದರೆ ಆಗಿರುವ ಹೆಚ್ಚಳ. ಇನ್ನು ಹಿಂದಿನ ಕ್ವಾರ್ಟರ್​ನಲ್ಲಿ, ಅಂದರೆ 2023ರ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ಜಿಡಿಪಿ ಶೇ. 6.1ರಷ್ಟು ಹೆಚ್ಚಳವಾಗಿತ್ತು.

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಿಂದಿನ ಎಂಪಿಸಿ ಸಭೆಯಲ್ಲಿ, ಮೊದಲ ಕ್ವಾರ್ಟರ್​ನಲ್ಲಿ ಶೇ. 8ರಷ್ಟು ಜಿಡಿಪಿ ಹೆಚ್ಚಬಹುದು ಎಂದು ನಿರೀಕ್ಷಿಸಿತ್ತು. ಇತ್ತೀಚೆಗೆ ರಾಯ್ಟರ್ಸ್ ನಡೆಸಿದ ಸಮೀಕ್ಷೆ ಅಥವಾ ಪೋಲ್​ನಲ್ಲಿ ವಿವಿಧ ಕಾರ್ಪೊರೇಟ್ ಆರ್ಥಿಕ ತಜ್ಞರು ಅಂದಾಜಿಸಿದ ಪ್ರಕಾರ ಸರಾಸರಿಯಾಗಿ ಜಿಡಿಪಿ ಶೇ. 8ಕ್ಕಿಂತ ತುಸು ಹೆಚ್ಚು ಬೆಳೆಯಬಹುದು ಎಂಬ ಅಂದಾಜಿತ್ತು. ವಾಸ್ತವವಾಗಿ ಆಗಿರುವ ಜಿಡಿಪಿ ಬೆಳವಣಿಗೆ ಸರಿಸುಮಾರು ಆ ಅಂದಾಜಿಗೆ ಸಮೀಪ ಇದೆ.

ಇದನ್ನೂ ಓದಿ: ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆ ಆಗಿದೆ, ಯಾವ್ಯಾವುದಕ್ಕೆ ಲಿಂಕ್ ಆಗಿದೆ? ತಿಳಿಯುವ ಸುಲಭ ವಿಧಾನ ಇಲ್ಲಿದೆ

ಚೀನಾ, ಅಮೆರಿಕ ಮೊದಲಾದ ಪ್ರಮುಖ ದೇಶಗಳನ್ನು ಮೀರಿಸಿದ ಬೆಳವಣಿಗೆ

2023-24ರ ಏಪ್ರಿಲ್​ನಿಂದ ಜೂನ್​ವರೆಗಿನ ಕ್ವಾರ್ಟರ್​ನಲ್ಲಿ ವಿವಿಧ ದೇಶಗಳ ಜಿಡಿಪಿ ಬೆಳವಣಿಗೆಯನ್ನು ಗಮನಿಸಿದರೆ, ಭಾರತದ್ದು ಅತಿವೇಗದ ಬೆಳವಣಿಗೆಯಾಗಿದೆ. ಚೀನಾದ ಜಿಡಿಪಿ ಇದೇ ಅವಧಿಯಲ್ಲಿ ಸಾಧಿಸಿದ್ದು ಶೇ. 6.3ರಷ್ಟು ಪ್ರಗತಿ ಮಾತ್ರವೇ. ಜಪಾನ್ ಶೇ. 6, ಅಮೆರಿಕ ಶೇ. 2.1ರಷ್ಟು ಜಿಡಿಪಿ ವೃದ್ಧಿ ಕಂಡಿವೆ. ಬ್ರಿಟನ್ ದೇಶದ ಜಿಡಿಪಿ ಕೇವಲ 0.4ರಷ್ಟು ಮಾತ್ರ ಬೆಳೆದರೆ, ಜರ್ಮನಿಯ ಆರ್ಥಿಕ ಪ್ರಗತಿ ಮೈನಸ್ ಶೇ. 0.2ಕ್ಕೆ ಕುಸಿದಿದೆ.

ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ವಿವರ

ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್​ಎಸ್​ಒ) ಬಿಡುಗಡೆ ಮಾಡಿದ ದತ್ತಾಂಶದಲ್ಲಿ ಜಿಡಿಪಿ ವಿವರ ಒದಗಿಸಲಾಗಿದೆ. 2023-24ರ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಒಟ್ಟಾರೆ ರಿಯಲ್ ಜಿಡಿಪಿ 40.37 ಲಕ್ಷಕೋಟಿ ರೂ ಮಟ್ಟದಲ್ಲಿರಬಹುದು ಎಂದು ಅಂದಾಜಿಸಲಾಗಿದೆ. 2022-23ರ ಹಣಕಾಸು ವರ್ಷದ ಇದೇ ಕ್ವಾರ್ಟರ್​ನಲ್ಲಿ ಜಿಡಿಪಿ 37.44 ಲಕ್ಷಕೋಟಿ ರೂ ಇತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ ಶೇ. 7.8ರಷ್ಟು ಜಿಡಿಪಿ ಬೆಳೆದಿದೆ.

ಇದನ್ನೂ ಓದಿ: ಮೊದಲ ತ್ರೈಮಾಸಿಕದಲ್ಲಿ ಶೇ. 8ಕ್ಕಿಂತ ಹೆಚ್ಚು ಆರ್ಥಿಕವೃದ್ಧಿ ಸಾಧ್ಯತೆ; ಆರ್ಥಿಕತಜ್ಞರ ಸರಾಸರಿ ಲೆಕ್ಕಾಚಾರ

ಆದರೆ, 2021-22ರ ಮೊದಲ ಕ್ವಾರ್ಟರ್​ಗೆ ಹೋಲಿಸಿದರೆ ಕಳೆದ ವರ್ಷದ ಕ್ವಾರ್ಟರ್​ನಲ್ಲಿ ಜಿಡಿಪಿ ಬರೋಬ್ಬರಿ ಶೇ. 13.1ರಷ್ಟು ಹೈಜಂಪ್ ಆಗಿತ್ತು.

ಶೇ. 33.9ರಷ್ಟು ವಿತ್ತೀಯ ಕೊರತೆ

ಭಾರತದ ಹಣಕಾಸು ಶಿಸ್ತಿಗೆ ಕೈಗನ್ನಡಿಯಾಗುವ ವಿತ್ತೀಯ ಕೊರತೆ ಮೊದಲ ಕ್ವಾರ್ಟರ್​ನಲ್ಲಿ ಶೇ. 33.9ರಷ್ಟು ಇರುವುದು ಗೊತ್ತಾಗಿದೆ. ದತ್ತಾಂಶದ ಪ್ರಕಾರ 2023ರ ಏಪ್ರಿಲ್​ನಿಂದ ಜುಲೈವರೆಗಿನ ಅವದಿಯಲ್ಲಿ ವಿತ್ತೀಯ ಕೊರತೆ 6.06 ಲಕ್ಷಕೋಟಿ ರೂನಷ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:59 pm, Thu, 31 August 23

ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು