AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆ ಆಗಿದೆ, ಯಾವ್ಯಾವುದಕ್ಕೆ ಲಿಂಕ್ ಆಗಿದೆ? ತಿಳಿಯುವ ಸುಲಭ ವಿಧಾನ ಇಲ್ಲಿದೆ

Aadhaar History Tool: ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲೆ ಬಳಕೆಯಾಗಿದೆ, ಯಾವ್ಯಾವುದಕ್ಕೆ ಲಿಂಕ್ ಆಗಿದೆ ಇವೆಲ್ಲವನ್ನೂ ತಿಳಿಯುವ ಮಾರ್ಗ ಇದ್ದೇ ಇದೆ. ಆಧಾರ್ ಅನ್ನು ರೂಪಿಸಿರುವ ಮತ್ತು ನಿರ್ವಹಿಸುವ ಯುಐಡಿಎಐ ಬಳಿ ಆಧಾರ್ ಹಿಸ್ಟರಿ ಎಂಬ ಟೂಲ್ ಇದೆ. ಯುಐಡಿಎಐ ವೆಬ್​ಸೈಟ್​ಗೆ ಹೋದರೆ ಈ ಸಾಧನ ಬಳಸಿ ಆಧಾರ್​ನ ಹಿಂದಿನ ಮತ್ತು ಈಗಿನ ಬಳಕೆಯ ಇತಿಹಾಸವನ್ನು ತಿಳಿಯಬಹುದು.

ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆ ಆಗಿದೆ, ಯಾವ್ಯಾವುದಕ್ಕೆ ಲಿಂಕ್ ಆಗಿದೆ? ತಿಳಿಯುವ ಸುಲಭ ವಿಧಾನ ಇಲ್ಲಿದೆ
ಆಧಾರ್ ಕಾರ್ಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 31, 2023 | 4:50 PM

Share

ಆಧಾರ್ ಕಾರ್ಡ್ (Aadhaar Card) ಬಹಳ ಮುಖ್ಯವಾದ ದಾಖಲೆ ಎನಿಸಿದೆ. ಗುರುತಿನ ಚೀಟಿಯಾಗಿಯೂ, ವಿಳಾಸ ಸಾಕ್ಷ್ಯವಾಗಿಯೂ (Address Proof) ಅದು ಅಗತ್ಯ ದಾಖಲೆ. ಬ್ಯಾಂಕ್ ಖಾತೆ ತೆರೆಯಲು, ಪ್ಯಾನ್ ಕಾರ್ಡ್ ಸಕ್ರಿಯವಾಗಲು, ಸಿಮ್ ಕಾರ್ಡ್ ಪಡೆಯಲು, ಸರ್ಕಾರಿ ಯೋಜನೆಗಳನ್ನು ಪಡೆಯಲು ಹೀಗೆ ಬಹಳಷ್ಟು ಕೆಲಸ ಮತ್ತು ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಅತ್ಯಗತ್ಯ. ಸಾಕಷ್ಟು ಕಡೆ ನಾವು ಆಧಾರ್ ಕಾರ್ಡ್ ಅನ್ನು ಬಳಸುತ್ತೇವೆ. ಸಾಕಷ್ಟು ಕಡೆ ನಮ್ಮ ಆಧಾರ್ ದಾಖಲೆಗಳನ್ನು ಕೊಟ್ಟಿರುತ್ತೇವೆ. ಕೆಲವೊಮ್ಮೆ ನಮಗೆ ಗೊತ್ತಿಲ್ಲದೆಯೋ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿಯೂ ಆಧಾರ್ ಅನ್ನು ದುರುಪಯೋಗಿಸಿಕೊಂಡಿರಲೂ ಬಹುದು.

ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲೆ ಬಳಕೆಯಾಗಿದೆ, ಯಾವ್ಯಾವುದಕ್ಕೆ ಲಿಂಕ್ ಆಗಿದೆ ಇವೆಲ್ಲವನ್ನೂ ತಿಳಿಯುವ ಮಾರ್ಗ ಇದ್ದೇ ಇದೆ. ಆಧಾರ್ ಅನ್ನು ರೂಪಿಸಿರುವ ಮತ್ತು ನಿರ್ವಹಿಸುವ ಯುಐಡಿಎಐ ಬಳಿ ಆಧಾರ್ ಹಿಸ್ಟರಿ ಎಂಬ ಟೂಲ್ ಇದೆ. ಯುಐಡಿಎಐ ವೆಬ್​ಸೈಟ್​ಗೆ ಹೋದರೆ ಈ ಸಾಧನ ಬಳಸಿ ಆಧಾರ್​ನ ಹಿಂದಿನ ಮತ್ತು ಈಗಿನ ಬಳಕೆಯ ಇತಿಹಾಸವನ್ನು ತಿಳಿಯಬಹುದು.

ಇದನ್ನೂ ಓದಿ: ಸಂಬಳ ಅಥವಾ ಆದಾಯ ಹೆಚ್ಚಾದರೆ, ಸಾಲ ತೀರಿಸಬೇಕಾ, ಹೂಡಿಕೆ ಹೆಚ್ಚಿಸಬೇಕಾ? ಯಾವುದು ಉತ್ತಮ ಆಯ್ಕೆ?

ಯುಐಡಿಎಐನಲ್ಲಿ ಆಧಾರ್ ಹಿಸ್ಟರಿ ತಿಳಿಯುವುದು ಹೇಗೆ?

  • ಅಧಿಕೃತ ಆಧಾರ್ ಕಾರ್ಡ್ ವೆಬ್​ಸೈಟ್​ಗೆ ಹೋಗಿ: uidai.gov.in
  • ಅಲ್ಲಿ ಮೈ ಆಧಾರ್ ಎಂಬ ಆಯ್ಕೆ ಓಪನ್ ಮಾಡಿ
  • ಆಧಾರ್ ಸರ್ವಿಸಸ್ ಅಡಿಯಲ್ಲಿ ‘ಆಧಾರ್ ಅಥೆಂಟಿಕೇಶನ್ ಹಿಸ್ಟರಿ’ ಅನ್ನು ಆಯ್ಕೆ ಮಾಡಿ
  • ಹೊಸ ವಿಂಡೋ ತೆರೆದುಕೊಳ್ಳುತ್ತದೆ.
  • ಈಗ ನಿಮ್ಮ 12 ಅಂಕಿಗಳ ಆಧಾರ್ ನಂಬರ್ ಮತ್ತು ಸೆಕ್ಯೂರಿಟಿ ಕೋಡ್ ಅನ್ನು ಹಾಕಿರಿ
  • ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಿ
  • ಒಟಿಪಿ ನಮೂದಿಸಿದ ಬಳಿಕ ಆಧಾರ್ ಕಾರ್ಡ್ ಹಿಸ್ಟರಿಯನ್ನು ಡೌನ್​ಲೋಡ್ ಮಾಡಬಹುದು.

ಆಧಾರ್ ಕಾರ್ಡ್ ಹಿಸ್ಟರಿಯಲ್ಲಿರುವ ಮಾಹಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ. ಯಾವುದಾದರೂ ತಪ್ಪಾದ ದಾಖಲೆಗೆ ನಿಮ್ಮ ಅಧಾರ್ ಕಾರ್ಡ್ ಲಿಂಕ್ ಆಗಿದೆಯಾ ಗಮನಿಸಿ. ನಿಮ್ಮ ಆಧಾರ್ ಕಾರ್ಡ್ ನೀವಲ್ಲದೇ ಬೇರೆ ಯಾರಾದರೂ ಬಳಸಿದ್ದಾರಾ ನೋಡಿ. ಇಂಥ ವ್ಯತ್ಯಾಸ ಕಂಡು ಬಂದರೆ ಟೋಲ್ ಫ್ರೀ ನಂಬರ್ 1947 ಅಥವಾ help@uidai.gov.in ಇಮೇಲ್ ಮೂಲಕ ಯುಐಡಿಎಐ ಅನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು.

ಇದನ್ನೂ ಓದಿ: ಗೃಹಸಾಲಕ್ಕೆ ಡೌನ್​ಪೇಮೆಂಟ್ ಎಷ್ಟು? ಇಎಂಐ ಹೊರೆ ಕಡಿಮೆ ಮಾಡುವ ಉಪಾಯ ಏನು?

ಅಥವಾ ನಿಮ್ಮ ಆಧಾರ್ ಮಾಹಿತಿಯಲ್ಲಿ ತಪ್ಪು ಸೇರಿಕೊಂಡಿದ್ದರೆ ಕೂಡಲೇ ಆಧಾರ್ ಕೇಂದ್ರಕ್ಕೆ ಹೋಗಿ ಸರಿಪಡಿಸಿ.

ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿರುವುದರಿಂದ ಅದನ್ನು ಹಾಗೂ ಅದರಲ್ಲಿರುವ ಮಾಹಿತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದೂ ಬಹಳ ಮುಖ್ಯ. ನಿಮ್ಮ ಕೈಯಲ್ಲೇ ಅದರ ಸುರಕ್ಷತೆಗೆ ಸಾಧನ ಇರುವಾಗ ಅದರ ಪ್ರಯೋಜನ ಪಡೆಯಲು ಹಿಂದೆ ಮುಂದೆ ನೋಡಬೇಡಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Thu, 31 August 23

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!