ಸಂಬಳ ಅಥವಾ ಆದಾಯ ಹೆಚ್ಚಾದರೆ, ಸಾಲ ತೀರಿಸಬೇಕಾ, ಹೂಡಿಕೆ ಹೆಚ್ಚಿಸಬೇಕಾ? ಯಾವುದು ಉತ್ತಮ ಆಯ್ಕೆ?

Loan vs SIP: ನಿಮಗೆ ಅಕಸ್ಮಾತ್ ಆಗಿ ದೊಡ್ಡ ಪ್ರಮಾಣದಲ್ಲಿ ಆದಾಯ ಹೆಚ್ಚಳ ಆಗಿದೆ ಎಂದಿಟ್ಟುಕೊಳ್ಳಿ. ಅದೇ ಸಂದರ್ಭದಲ್ಲಿ ನೀವು ಸಾಲ ಹಾಗೂ ಹೂಡಿಕೆ ಎರಡನ್ನೂ ಹೊಂದಿರುತ್ತೀರಿ. ನಿಮ್ಮ ಹೆಚ್ಚುವರಿ ಆದಾಯವನ್ನು ಯಾವುದಕ್ಕೆ ವಿನಿಯೋಗಿಸುತ್ತೀರಿ? ಇಂಥ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ. ಈ ಬಗ್ಗೆ ಕೆಲ ಸಲಹೆ ಇಲ್ಲಿದೆ...

ಸಂಬಳ ಅಥವಾ ಆದಾಯ ಹೆಚ್ಚಾದರೆ, ಸಾಲ ತೀರಿಸಬೇಕಾ, ಹೂಡಿಕೆ ಹೆಚ್ಚಿಸಬೇಕಾ? ಯಾವುದು ಉತ್ತಮ ಆಯ್ಕೆ?
ಹೂಡಿಕೆ
Follow us
|

Updated on: Aug 30, 2023 | 6:16 PM

ಹಣದ ನಿರ್ವಹಣೆ (Money Management) ನಿಜಕ್ಕೂ ಒಂದು ಕಲೆ. ಅದಕ್ಕೆ ಹಣಕಾಸು ಶಿಸ್ತು, ಜ್ಞಾನ, ಸಮಯಪ್ರಜ್ಞೆ ಕೂಡ ಬಹಳ ಮುಖ್ಯ. ಯಾವ ಸಮಯದಲ್ಲಿ ಯಾವ ಹಣಕಾಸು ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಚಾಕಚಕ್ಯತೆ ಇರಬೇಕು. ಕೆಲ ಸಂದರ್ಭಗಳು ನಮ್ಮನ್ನು ಇಕ್ಕಟ್ಟಿಗೆ ಅಥವಾ ಗೊಂದಲಕ್ಕೆ ಕೆಡವಬಹುದು. ಉದಾಹರಣೆಗೆ ನೀವು ಕಂಪನಿಯನ್ನು ಬದಲಿಸಿದಾಗಲೋ ಅಥವಾ ಒಳ್ಳೆಯ ಅಪ್ರೈಸಲ್ ಸಿಕ್ಕು ನಿಮಗೆ ದಿಢೀರ್ ಶೇ. 30ರಷ್ಟು ಸಂಬಳ ಹೆಚ್ಚಳವಾದರೆ ಮುಂದೇನು ಮಾಡಬೇಕು ಎಂಬ ಆಲೋಚನೆ ನಿಮ್ಮನ್ನು ಕಾಡಬಹುದು. ನಿಮಗೆ ಯಾವುದೇ ಬಾಧ್ಯತೆಗಳು ಇಲ್ಲದೇ ಇದ್ದರೆ ಆ ಹಣವನ್ನು ಯಾವುದರಲ್ಲಾದರೂ ಹೂಡಿಕೆ ಮಾಡುತ್ತೀರಿ. ಅದು ಸುಲಭ ನಿರ್ಧಾರ.

ಆದರೆ, ನೀವು ಸಾಲ ಮತ್ತು ಹೂಡಿಕೆ ಎರಡನ್ನೂ ಹೊಂದಿದ್ದಾಗ ನಿಮ್ಮ ಹೆಚ್ಚುವರಿ ಆದಾಯವನ್ನು ಯಾವುದಕ್ಕೆ ವಿನಿಯೋಗಿಸುತ್ತೀರಿ? ಇದು ನಿಮ್ಮನ್ನು ಗೊಂದಲಕ್ಕೆ ಕೆಡವಬಹುದು.

ಇದನ್ನೂ ಓದಿ: ಗೃಹಸಾಲಕ್ಕೆ ಡೌನ್​ಪೇಮೆಂಟ್ ಎಷ್ಟು? ಇಎಂಐ ಹೊರೆ ಕಡಿಮೆ ಮಾಡುವ ಉಪಾಯ ಏನು?

ಇಲ್ಲಿ ನಿಮ್ಮ ಹೂಡಿಕೆ ಯಾವುದು ಎಂಬುದು ಮುಖ್ಯ. ನಿಮ್ಮ ಸಾಲದ ಬಡ್ಡಿ ದರ ಎಷ್ಟು, ಹಾಗೂ ನಿಮ್ಮ ಹೂಡಿಕೆಯಿಂದ ನಿರೀಕ್ಷಿಸುವ ಸರಾಸರಿ ರಿಟರ್ನ್ ಎಷ್ಟು ಎಂಬುದನ್ನು ಹೋಲಿಸಿ ನೋಡಿ. ಯಾವುದು ಹೆಚ್ಚು ದರ ಇದೆಯೋ ಅದರ ಮೇಲೆ ನಿಮ್ಮ ಹೆಚ್ಚುವರಿ ಹಣ ವಿನಿಯೋಗಿಸುವುದು ಉತ್ತಮ ಎನ್ನುತ್ತಾರೆ ಫೈನಾನ್ಷಿಯಲ್ ಪ್ಲಾನರ್​ಗಳು.

ನೀವು ಈಕ್ವಿಟ್ ಫಂಡ್​ಗಳ ಎಸ್​ಐಪಿ ಯೋಜನೆಯ ಡೈರೆಕ್ಟ್ ಪ್ಲಾನ್ ಹೊಂದಿದ್ದರೆ ಅದರಿಂದ ಶೇ. 12ರಿಂದ 15ರಷ್ಟಾದರೂ ವಾರ್ಷಿಕ ದರದಲ್ಲಿ ಬೆಳವಣಿಗೆ ನಿರೀಕ್ಷಿಸಬಹುದು. ಆದರೆ, ನೀವು ವೈಯಕ್ತಿಕ ಸಾಲ ಪಡೆದಿದ್ದರೆ ಅದರ ಬಡ್ಡಿದರ ಶೇ. 15ರಿಂದ ಶೇ. 18ರವರೆಗೂ ಇರುತ್ತದೆ. ಆಗ ನೀವು ಪರ್ಸನಲ್ ಲೋನ್ ತೀರಿಸಲು ಆದ್ಯತೆ ಕೊಡಬೇಕಾಗುತ್ತದೆ.

ಇದನ್ನೂ ಓದಿ: ಭವಿಷ್ಯದ ಭದ್ರತೆಗೆ ನಿಮಗೆ ಎಷ್ಟು ಹಣ ಬೇಕು? ನಿವೃತ್ತಿ ನಂತರದ ಬದುಕಿಗೆ ಈಗಲೇ ಲೆಕ್ಕ ಹಾಕುವುದು ಹೇಗೆ?

ಆದರೆ, ಗೃಹಸಾಲ ಹೊಂದಿದ್ದರೆ ಅದರ ಬಡ್ಡಿದರ ಶೇ. 9ರಿಂದ 10 ಇರಬಹುದು. ಈ ಸಂದರ್ಭದಲ್ಲಿ ನೀವು ಇದಕ್ಕಿಂತ ಹೆಚ್ಚು ರಿಟರ್ನ್ ಕೊಡುವ ಎಸ್​ಐಪಿ ಮೇಲೆ ಹಣ ವಿನಿಯೋಗಿಸುವುದು ಉತ್ತಮ. ಆದರೆ, ಈಕ್ವಿಟಿ ಬಿಟ್ಟರೆ ಬೇರೆ ಸೇವಿಂಗ್ ಸ್ಕೀಮ್​ಗಳಲ್ಲಿ ನೀವು ಹಣ ಹಾಕಿದರೆ ವಾರ್ಷಿಕವಾಗಿ ಶೇ. 9ಕ್ಕಿಂತ ಹೆಚ್ಚು ಬಡ್ಡಿ ಸಿಗುವುದಿಲ್ಲ. ಆಗ ನೀವು ಸಾಲ ತೀರಿಸುವುದಕ್ಕೆ (Loan Pre Payment) ಆದ್ಯತೆ ನೀಡುವುದು ಅತ್ಯುತ್ತಮ ನಿರ್ಧಾರ ಎನಿಸುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ