Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ತ್ರೈಮಾಸಿಕದಲ್ಲಿ ಶೇ. 8ಕ್ಕಿಂತ ಹೆಚ್ಚು ಆರ್ಥಿಕವೃದ್ಧಿ ಸಾಧ್ಯತೆ; ಆರ್ಥಿಕತಜ್ಞರ ಸರಾಸರಿ ಲೆಕ್ಕಾಚಾರ

India GDP: 2023-24 ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಶೇ. 8ಕ್ಕಿಂತ ಹೆಚ್ಚು ಮಟ್ಟದಲ್ಲಿ ಬೆಳೆಯಬಹುದು ಎಂಬ ಸುಳಿವನ್ನು ರಾಯ್ಟರ್ಸ್ ಪೋಲ್ ನೀಡಿದೆ. ಎಸ್​ಬಿಐ ಸೇರಿದಂತೆ ವಿವಿಧ ಸಂಸ್ಥೆಗಳ ಆರ್ಥಿಕತಜ್ಞರು ಶೇ. 5.9ರಿಂದ ಶೇ. 9.1ರವರೆಗೂ ವಿವಿಧ ದರದ ಸಾಧ್ಯತೆಯನ್ನು ಅಂದಾಜಿಸಿರುವುದು ತಿಳಿದುಬಂದಿದೆ.

ಮೊದಲ ತ್ರೈಮಾಸಿಕದಲ್ಲಿ ಶೇ. 8ಕ್ಕಿಂತ ಹೆಚ್ಚು ಆರ್ಥಿಕವೃದ್ಧಿ ಸಾಧ್ಯತೆ; ಆರ್ಥಿಕತಜ್ಞರ ಸರಾಸರಿ ಲೆಕ್ಕಾಚಾರ
ಭಾರತದ ಆರ್ಥಿಕ ಬೆಳವಣಿಗೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 31, 2023 | 2:02 PM

ನವದೆಹಲಿ, ಆಗಸ್ಟ್ 31: ಪ್ರಸಕ್ತ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ (2023ರ ಏಪ್ರಿಲ್​ನಿಂದ ಜೂನ್) ಭಾರತದ ಜಿಡಿಪಿ ಶೇ. 8ಕ್ಕಿಂತಲೂ ಹೆಚ್ಚು ಬೆಳೆಯುವ ಸಾಧ್ಯತೆ ಇದೆ. ರಾಯ್ಟರ್ಸ್ ಸಮೀಕ್ಷೆಯಲ್ಲಿ (Reuters Poll) ಪಾಲ್ಗೊಂಡಿದ್ದ ವಿವಿಧ ಆರ್ಥಿಕತಜ್ಞರು ವ್ಯಕ್ತಪಡಿಸಿದ ಅಭಿಪ್ರಾಯಗಳಲ್ಲಿ ಸರಾಸರಿ ಪಡೆದಾಗ ಜಿಡಿಪಿವೃದ್ಧಿ (GDP Growth) ಶೇ. 8ಕ್ಕಿಂತಲೂ ಹೆಚ್ಚಿನ ಮಟ್ಟದ ಸಾಧ್ಯತೆ ಕಂಡುಬಂದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ (2022ರ ಏಪ್ರಿಲ್​ನಿಂದ ಜೂನ್​ವರೆಗಿನ ಕ್ವಾರ್ಟರ್) ಭಾರತದ ಜಿಡಿಪಿ ವೃದ್ಧಿ ಶೇ. 6.1 ಇತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಆರ್ಥಿಕತೆಯ ವೇಗ ಗಣನೀಯವಾಗಿ ಹೆಚ್ಚುವ ಸಾಧ್ಯತೆ ಇದೆ. ಭಾರತದ ಮೊದಲ ತ್ರೈಮಾಸಿಕ ಅವಧಿಯ ಜಿಡಿಪಿ ಅಂಕಿ ಅಂಶಗಳು ಇಂದು ಸಂಜೆ ಬಿಡುಗಡೆ ಆಗುವ ಸಾಧ್ಯತೆ ಇದೆ.

ರಾಯ್ಟರ್ಸ್ ಪೋಲ್​ನಲ್ಲಿ ವಿವಿಧ ಆರ್ಥಿಕತಜ್ಞರ ಅನಿಸಿಕೆಗಳನ್ನು ಪಡೆಯಲಾಗಿದೆ. ಆರ್ಥಿಕತೆ ಶೇ. 5.6ರಿಂದ ಶೇ. 9.1ರವರೆಗೆ ಬೆಳೆಯಬಹುದು ಎಂಬ ವಿವಿಧ ಅಭಿಪ್ರಾಯಗಳು ಈ ಸಮೀಕ್ಷೆಯಲ್ಲಿ ವ್ಯಕ್ತವಾಗಿವೆ. ಎಸ್​ಬಿಐನ ಆರ್ಥಿಕ ತಜ್ಞರ ಪ್ರಕಾರ ಮೊದಲ ಕ್ವಾರ್ಟರ್​ನಲ್ಲಿ ಆರ್ಥಿಕತೆ ಶೇ. 8.3ರಷ್ಟು ಬೆಳೆಯುವ ನಿರೀಕ್ಷೆ ಇದೆ. ಇನ್ನು, ಆರ್​ಬಿಐ ಶೇ. 8ರಷ್ಟು ಜಿಡಿಪಿ ಬೆಳೆಯಬಹುದು ಎಂದು ಅಂದಾಜಿಸಿದೆ. ಕ್ರಿಸಿಲ್ ಎಂಬ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಶೇ. 8.2 ಹಾಗು, ಐಸಿಆರ್​ಎ ಶೇ. 8.5ರ ದರದಲ್ಲಿ ಜಿಡಿಪಿ ಬೆಳೆಯಬಹುದು ಎಂದಿವೆ.

ಇದನ್ನೂ ಓದಿ: ಎನ್​ಟಿಪಿಸಿಯಿಂದ ಭಾರೀ ಮೊತ್ತದ ಗುತ್ತಿಗೆ ಪಡೆದ ಬಳಿಕ ಬಿಎಚ್​ಇಎಲ್ ಷೇರುಬೆಲೆ ಏರುಗತಿಗೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಬಂಡವಾಳ ವೆಚ್ಚ ಮಾಡುತ್ತಿರುವುದರಿಂದ ಈ ಕ್ವಾರ್ಟರ್​ನಲ್ಲಿ ಹೆಚ್ಚಿನ ಆರ್ಥಿಕ ವೃದ್ಧಿ ಸಾಧ್ಯವಾಗುತ್ತಿದೆ ಎಂದು ಎಸ್​ಬಿಐ ಮತ್ತು ಐಸಿಆರ್​ಎ ಸಂಸ್ಥೆಗಳ ಅನಿಸಿಕೆ. ಇಷ್ಟೂ ಸಂಸ್ಥೆಗಳ ಆರ್ಥಿಕ ತಜ್ಞರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಸರಾಸರಿ ಪಡೆದುಕೊಂಡಾಗ ಶೇ. 8ಕ್ಕಿಂತಲೂ ಹೆಚ್ಚಿನ ಮಟ್ಟ ಕಂಡುಬಂದಿದೆ. ಹೀಗಾಗಿ, ಜಿಡಿಪಿವೃದ್ಧಿ ಶೇ. 8ರ ಮೇಲ್ಪಟ್ಟು ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ವಾಸ್ತವವಾಗಿ ಜಿಡಿಪಿ ಎಷ್ಟು ಬೆಳೆದಿದೆ ಎಂಬುದು ಇಂದು ಸಂಜೆ ಗೊತ್ತಾಗಲಿದೆ.

ಆರ್​ಬಿಐ ತನ್ನ ಹಿಂದಿನ ಎಂಪಿಸಿ ಸಭೆ ಬಳಿಕ ಜಿಡಿಪಿ ಬೆಳವಣಿಗೆ ಬಗ್ಗೆ ತನ್ನ ಅಂದಾಜನ್ನು ಮತ್ತೆ ಪ್ರಸ್ತುತಪಡಿಸಿತ್ತು. ಅದರ ಪ್ರಕಾರ 2023-24ರ ಹಣಕಾಸು ವರ್ಷದಲ್ಲಿ ರಿಯಲ್ ಜಿಡಿಪಿ ಶೇ. 6.5ರಷ್ಟು ಇರಬಹುದು ಎಂದು ಅಂದಾಜು ಮಾಡಿತ್ತು. ಈ ತ್ರೈಮಾಸಿಕ ನಾಲ್ಕು ಕ್ವಾರ್ಟರ್​ಗಳಲ್ಲಿ ಕ್ರಮವಾಗಿ ಶೇ. 8.0, ಶೇ. 6.5, ಶೇ. 6.0 ಮತ್ತು ಶೇ. 5.7ರಷ್ಟು ಜಿಡಿಪಿ ಬೆಳೆಯಬಹುದು ಎಂಬ ಅಂದಾಜು ಆರ್​ಬಿಐನದ್ದು.

ಇದನ್ನೂ ಓದಿ: ಅದಾನಿ ಕಂಪನಿಗಳ ವಿರುದ್ಧ ಮತ್ತೆ ವಂಚನೆ ಆರೋಪ; ಇದು ಸೋರೋಸ್ ಪಿತೂರಿ ಎಂದ ಅದಾನಿ ಗ್ರೂಪ್

ಆದರೆ ಆರ್​ಬಿಐ ಅಂದಾಜು ಪ್ರಕಾರ ಮುಂದಿನ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ (2024ರ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿ) ಜಿಡಿಪಿ ಬೆಳವಣಿಗೆ ಶೇ. 6.6ರಷ್ಟು ಮಾತ್ರ ಇರಬಹುದು. ಒಟ್ಟಾರೆ ಭಾರತದ ಸದ್ಯದ ಆರ್ಥಿಕ ಚಟುವಟಿಕೆ ಸಕಾರಾತ್ಮಕವಾಗಿದೆ ಎಂಬುದು ರಿಸರ್ವ್ ಬ್ಯಾಂಕ್​ನ ಭಾವನೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ