ಸೆಪ್ಟೆಂಬರ್ನಲ್ಲಿ ಬ್ಯಾಂಕ್ಗಳಿಗೆ ಸಾಲು ಸಾಲು ರಜಾ ಇದೆ: 2000 ರೂ ನೋಟು ಬದಲಾಯಿಸಿಕೊಳ್ಳಲು ಗಡುವು ಸಮೀಪಿಸುತ್ತಿದೆ, ಗಡಿಬಿಡಿ ಮಾಡಿಕೊಳ್ಳಬೇಡಿ
ನೆನಪಿರಲಿ.. ಸೆಪ್ಟೆಂಬರ್ ನಾಳೆಯಿಂದಲೇ.. ತಿಂಗಳು ಬದಲಾಗುತ್ತಿದ್ದಂತೆ ಕೆಲ ಆರ್ಥಿಕ ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು. ಮರೆತರೆ ನಿಮಗೇ ನಷ್ಟ ಅಷ್ಟೇ.. ಇದರಲ್ಲಿ ಪ್ರಮುಖವಾದದ್ದು ರೂ. 2000 ನೋಟು ಬದಲಾವಣೆ. ನಿಮ್ಮ ಬಳಿಯಿರುವ 2 ಸಾವಿರ ರೂ ನೋಟನ್ನು ತಕ್ಷಣ ಬ್ಯಾಂಕ್‌ಗೆ ಹೋಗಿ ಬದಲಾಯಿಸಿಕೊಳ್ಳಿ. ಗಮನಿಸಿ, ಸೆಪ್ಟೆಂಬರ್ ನಲ್ಲಿ ಬ್ಯಾಂಕ್ಗಳಿಗೆ ತುಂಬಾ ರಜಾ ಇದೆ. ಹಾಗಾಗಿ ನೋಟ್ ಎಕ್ಸ್ಚೇಂಜ್ಗೆ ಹೋದಾಗ ಬ್ಯಾಂಕ್ ಬಂದ್ ಆಗಿದ್ದರೆ ಪೆಚ್ಚು ಮೋರೆ ಹಾಕಿಕೊಂಡು ಬರಬೇಡಿ.
ನೆನಪಿರಲಿ.. ಸೆಪ್ಟೆಂಬರ್ ತಿಂಗಳು ನಾಳೆಯಿಂದಲೇ.. ಅಂದರೆ ಆಗಸ್ಟ್ ಮುಗಿದು ಸೆಪ್ಟೆಂಬರ್ ಎಂಟ್ರಿಯಾಗುತ್ತಿದೆ. ತಿಂಗಳು ಬದಲಾಗುತ್ತಿದ್ದಂತೆ ಹಲವು ಆರ್ಥಿಕ ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು. ಮಹತ್ವದ ಈ ಹಣಕಾಸಿನ ವಿಷಯಗಳ ಬಗ್ಗೆ ಮರೆಯಬೇಡಿ. ಮರೆತರೆ ನಿಮಗೇ ನಷ್ಟ ಅಷ್ಟೇ.. ಇದರಲ್ಲಿ ಪ್ರಮುಖವಾದದ್ದು ರೂ. 2000 ನೋಟು ಬದಲಾವಣೆ. ಆರ್‌ಬಿಐ ಮತ್ತೊಂದು ಲಾಸ್ಟ್ ಡೇ ಕೊಡುತ್ತದೆ ಬಿಡು ಎಂದು ಯಾಮಾರಬೇಡಿ. ನಿಮ್ಮ ಬಳಿಯಿರುವ 2 ಸಾವಿರ ರೂ ನೋಟನ್ನು ತಕ್ಷಣ ಬ್ಯಾಂಕ್‌ಗೆ ಹೋಗಿ ಬದಲಾಯಿಸಿಕೊಳ್ಳಿ. ಆದರೆ ಇಲ್ಲೂ ಒಂದು ಜಾಗ್ರತೆ ವಹಿಸಬೇಕು ನೀವು. ಅದೆನೆಂದಂರೆ ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್ಗಳಿಗೆ ಸಾಲು ಸಾಲು ರಜಾ ಇದೆ. ಹಾಗಾಗಿ ನೋಟ್ ಎಕ್ಸ್ಚೇಂಜ್ಗೆ ಹೋದಾಗ ಬ್ಯಾಂಕ್ ಬಂದ್ ಆಗಿದ್ದರೆ ಪೆಚ್ಚು ಮೋರೆ ಹಾಕಿಕೊಂಡು ಬರಬೇಡಿ.
ಮೇ 19, 2023 ರಂದು, ಭಾರತೀಯ ರಿಸರ್ವ್ ಬ್ಯಾಂಕ್ ರೂ 2,000 ನೋಟಿನ ಅಮಾನ್ಯೀಕರಣವನ್ನು ಘೋಷಿಸಿತು. ಇದಾದ ಬಳಿಕ.. ನಾಗರಿಕರು ತಮ್ಮ ಹಳೆಯ 2,000 ರೂ ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ಅಂದರೆ ಇನ್ನು ಸರಿಯಾಗಿ ಇನ್ನು 30 ದಿನಗಳೊಳಗೆ ಬದಲಾಯಿಸಿಕೊಳ್ಳಲು ಆರ್‌ಬಿಐ ಅವಕಾಶ ನೀಡಿದೆ. ಅಲ್ಲಿಗೆ 2000 ರೂ. ನೋಟುಗಳ ವಿನಿಮಯದ ಗಡುವು ಮುಕ್ತಾಯವಾಗಲಿದೆ. ಇಂದು ಆಗಸ್ಟ್ 31.. ನೀವು ಇನ್ನೂ 2000 ರೂ. ನೋಟು ಬದಲಿಸದಿದ್ದರೆ.. ಇಂದೇ ಈ ಕೆಲಸವನ್ನು ಪೂರ್ಣಗೊಳಿಸಿ ಇಲ್ಲದಿದ್ದರೆ ಮುಂದೆ ಅನ್ಯಥಾ ತೊಂದರೆ ಎದುರಿಸಬೇಕಾಗುತ್ತದೆ.
ಜನರ ಅನುಕೂಲಕ್ಕಾಗಿ ಆರ್‌ಬಿಐ 2000 ರೂಪಾಯಿ ನೋಟು ಬದಲಾಯಿಸಲು ಸೆಪ್ಟೆಂಬರ್ 30 ಕೊನೆಯ ದಿನಾಂಕ ಎಂದು ಘೋಷಿಸಿದೆ. ಎಲ್ಲಿ ಹೇಗೆ ಯಾವಾಗ ಬದಲಾವಣೆ ಮಾಡಲಿ ಎಂದು ಚಿಂತಿಸದೆ ಬ್ಯಾಂಕ್ ನಲ್ಲಿ ಬದಲಾವಣೆ ಮಾಡುವಂತೆ ಸಲಹೆ ನೀಡಿದ್ದರು. ಇದಕ್ಕಾಗಿ ನಾಲ್ಕು ತಿಂಗಳ ಕಾಲಾವಕಾಶವನ್ನೂ ನೀಡಲಾಗಿತ್ತು.
ನೀವು ಇದನ್ನು ಇನ್ನೂ ಮಾಡದಿದ್ದರೆ 2000 ರೂ ನೋಟು ಹೇಗೆ ಬದಲಾಯಿಸಿಕೊಳ್ಳುವುದು ಎಂಬುದನ್ನು ಇಲ್ಲಿ ವಿವರಿಸುತ್ತೇವೆ.
ನಿಮ್ಮ ಬಳಿ 2000 ರೂ ನೋಟು ಇದ್ದರೆ.. ನಿಮ್ಮ ಹತ್ತಿರದ ಯಾವುದಾದರೂ ಬ್ಯಾಂಕ್ ಶಾಖೆಗೆ ತೆಗೆದುಕೊಂಡು ಹೋಗಿ. ಅಲ್ಲಿ ಸ್ಲಿಪ್ ಭರ್ತಿ ಮಾಡಿ, ವಿವರಗಳನ್ನು ಸಲ್ಲಿಸಿ. ಗಮನಿಸಿ, ಗರಿಷ್ಠ 20 ಸಾವಿರ ರೂ ವಿನಿಮಯ ಮಾಡಿಕೊಳ್ಳಬಹುದು. ಅಂದರೆ ಒಂದು ಬಾರಿಗೆ 10 ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಮಾನ್ಯತೆ ನೀಡಲಾಗಿದೆ.
ಈ ಮಧ್ಯೆ ಬ್ಯಾಂಕ್ ರಜೆಗಳ ಪಟ್ಟಿಯನ್ನು ಒಮ್ಮೆ ಆದ್ಯವಾಗಿ ನೋಡಿಕೊಂಡು ಬ್ಯಾಂಕಿಗೆ ಹೋಗಿಬನ್ನಿ. ಸೆಪ್ಟೆಂಬರ್ 2023 ಬ್ಯಾಂಕ್ ರಜಾ ದಿನಗಳಿಂದ ತುಂಬಿದೆ ಎಂಬುದನ್ನು ನೆನಪಿಡಿ. ಮುಂದಿನ ತಿಂಗಳು ದೇಶದ ವಿವಿಧ ರಾಜ್ಯಗಳಲ್ಲಿ ಬ್ಯಾಂಕುಗಳು 16 ದಿನಗಳ ಕಾಲ ಬಾಗಿಲುಮುಚ್ಚಿರುತ್ತವೆ.
Also Read: ಸೆಪ್ಟೆಂಬರ್ನಲ್ಲಿ ಬ್ಯಾಂಕುಗಳಿಗೆ 16 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ ಇದೆ, ಇದಲ್ಲಿದೆ ಪಟ್ಟಿ
3 ಸೆಪ್ಟೆಂಬರ್ 2023- ಭಾನುವಾರದ ಕಾರಣ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
6 ಸೆಪ್ಟೆಂಬರ್ 2023- ಶ್ರೀ ಕೃಷ್ಣ ಜನ್ಮಾಷ್ಟಮಿ -ಭುವನೇಶ್ವರ್, ಚೆನ್ನೈ, ಹೈದರಾಬಾದ್ ಮತ್ತು ಪಾಟ್ನಾದಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ.
7 ಸೆಪ್ಟೆಂಬರ್, 2023- ಶ್ರೀ ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಅಹಮದಾಬಾದ್, ಲಕ್ನೋ, ರಾಯ್‌ಪುರ, ಚಂಡೀಗಢ, ಡೆಹ್ರಾಡೂನ್, ಗ್ಯಾಂಗ್‌ಟಾಕ್, ತೆಲಂಗಾಣ, ಜೈಪುರ, ಜಮ್ಮು, ಕಾನ್‌ಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರದಲ್ಲಿ ಬ್ಯಾಂಕ್ ರಜೆ.
9 ಸೆಪ್ಟೆಂಬರ್, 2023- ಎರಡನೇ ಶನಿವಾರ
10 ಸೆಪ್ಟೆಂಬರ್, 2023 – ಭಾನುವಾರ
17 ಸೆಪ್ಟೆಂಬರ್, 2023 – ಭಾನುವಾರ
18 ಸೆಪ್ಟೆಂಬರ್ 18, 2023 – ವಿನಾಯಕ ಚತುರ್ಥಿಯ ಕಾರಣ ಬೆಂಗಳೂರು, ತೆಲಂಗಾಣದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
19 ಸೆಪ್ಟೆಂಬರ್, 2023 – ಗಣೇಶ ಚತುರ್ಥಿಯ ನಿಮಿತ್ತ ಅಹಮದಾಬಾದ್, ಬೇಲಾಪುರ್, ಭುವನೇಶ್ವರ್, ಮುಂಬೈ, ನಾಗ್ಪುರ, ಪಣಜಿಯಲ್ಲಿ ಬ್ಯಾಂಕ್ ರಜೆ.
20 ಸೆಪ್ಟೆಂಬರ್, 2023 – ಗಣೇಶ ಚತುರ್ಥಿ ಕಾರಣ ಕೊಚ್ಚಿ ಮತ್ತು ಭುವನೇಶ್ವರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
22 ಸೆಪ್ಟೆಂಬರ್, 2023 – ಶ್ರೀ ನಾರಾಯಣ ಗುರು ಸಮಾಧಿ ದಿನದಂದು ಕೊಚ್ಚಿ, ಪಣಜಿ ಮತ್ತು ತಿರುವನಂತಪುರದಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.
23 ಸೆಪ್ಟೆಂಬರ್, 2023 ನಾಲ್ಕನೇ ಶನಿವಾರ
24 ಸೆಪ್ಟೆಂಬರ್, 2023 – ಭಾನುವಾರ
25 ಸೆಪ್ಟೆಂಬರ್, 2023 – ಶ್ರೀಮಂತ್ ಶಂಕರ್ ದೇವ್ ಜಯಂತಿಯ ಕಾರಣ ಗುವಾಹಾಟಿಯಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ.
27 ಸೆಪ್ಟೆಂಬರ್, 2023 – ಮಿಲಾದ್-ಎ-ಷರೀಫ್ ಕಾರಣ ಜಮ್ಮು, ಕೊಚ್ಚಿ, ಶ್ರೀನಗರ, ತಿರುವನಂತಪುರದಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ.
28 ಸೆಪ್ಟೆಂಬರ್, 2023 – ಈದ್-ಎ-ಮಿಲಾದ್ ಕಾರಣ ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಬೆಂಗಳೂರು, ಭೋಪಾಲ್, ಚೆನ್ನೈ, ಡೆಹ್ರಾಡೂನ್, ತೆಲಂಗಾಣ, ಇಂಫಾಲ್, ಕಾನ್ಪುರ್, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ರಾಯ್‌ಪುರ ಮತ್ತು ರಾಂಚಿಯಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
29 ಸೆಪ್ಟೆಂಬರ್, 2023 – ಈದ್-ಎ-ಮಿಲಾದ್-ಉನ್-ನಬಿ ಕಾರಣ ಗ್ಯಾಂಗ್‌ಟಾಕ್, ಜಮ್ಮು, ಶ್ರೀನಗರದಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Thu, 31 August 23