Rs.2000 Exchange Deadline: 2,000 ರೂ ನೋಟುಗಳು ಇನ್ನೂ ಇವೆಯೇ? ಸೆಪ್ಟಂಬರ್ 30ರ ಡೆಡ್​ಲೈನ್ ವಿಸ್ತರಣೆ ಆಗೊಲ್ಲ; ಬೇಗ ಮರಳಿಸಿಬಿಡಿ

No Deadline Extension: ಮೇ 19ರಂದು ಸರ್ಕಾರ 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಪ್ರಕಟಿಸಿತ್ತು. ಸೆ. 30ರವರೆಗೂ ಸಾರ್ವಜನಿಕರು ಆ ನೋಟುಗಳನ್ನು ಮರಳಿಸಲು ಅವಕಾಶ ಇದೆ. ಅದಾದ ಬಳಿಕ ಗಡುವು ವಿಸ್ತರಣೆ ಅಗುವ ಸಾಧ್ಯತೆ ಇಲ್ಲ.

Rs.2000 Exchange Deadline: 2,000 ರೂ ನೋಟುಗಳು ಇನ್ನೂ ಇವೆಯೇ? ಸೆಪ್ಟಂಬರ್ 30ರ ಡೆಡ್​ಲೈನ್ ವಿಸ್ತರಣೆ ಆಗೊಲ್ಲ; ಬೇಗ ಮರಳಿಸಿಬಿಡಿ
2,000 ರೂ ನೋಟು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 25, 2023 | 11:00 AM

ನವದೆಹಲಿ, ಜುಲೈ 25: ಆರ್​ಬಿಐ ಇತ್ತೀಚೆಗೆ 2,000 ರೂ ನೋಟುಗಳನ್ನು (Rs 2000 note) ಚಲಾವಣೆಯಿಂದ ಹಿಂಪಡೆದಿತ್ತು. 2,000 ರೂ ನೋಟುಗಳನ್ನು ಹೊಂದಿರುವವರು ಬ್ಯಾಂಕುಗಳಿಗೆ ಅವನ್ನು ಮರಳಿಸಬೇಕೆಂದು ತಿಳಿಸಲಾಗಿದೆ. ಅದಕ್ಕೆ ಸೆಪ್ಟಂಬರ್ 30 ಡೆಡ್​ಲೈನ್ ಎಂದು ನಿಗದಿ ಮಾಡಲಾಗಿದೆ. ಆದರೆ, ಈ ಗಡುವನ್ನು ವಿಸ್ತರಿಸುವ ಯಾವ ಪ್ರಸ್ತಾಪವೂ ಇಲ್ಲ ಎಂದು ಹಣಕಾಸು ಸಚಿವಾಲಯ ಜುಲೈ 25ರಂದು ಸ್ಪಷ್ಟಪಡಿಸಿದೆ. 2,000 ರೂ ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಲು ಸೆಪ್ಟಂಬರ್ 30ರ ಡೆಡ್​ಲೈನ್ ವಿಸ್ತರಣೆ ಆಗುತ್ತದಾ ಎಂದು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಈ ವಿಚಾರ ಪರಿಗಣನೆಯಲ್ಲಿ ಇಲ್ಲ ಎಂದಿದ್ದಾರೆ.

ಹಾಗೆಯೇ, ಎರಡು ಸಾವಿರು ರೂ ಮುಖಬೆಲೆಯ ನೋಟು ಅಥವಾ ಬೇರೆ ಯಾವುದಾದರೂ ನೋಟನ್ನು ನಿಷೇಧಿಸುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆಯನ್ನೂ ಸಚಿವರು ತಳ್ಳಿಹಾಕಿದ್ದಾರೆ. 500 ರೂ ಮುಖಬೆಲೆಯಲ್ಲಿ ಬಹಳಷ್ಟು ನಕಲಿ ನೋಟುಗಳು ಚಲಾವಣೆಯಲ್ಲಿವೆ ಎಂಬ ಮಾಹಿತಿ. ಈ ಹಿನ್ನೆಲೆಯಲ್ಲಿ ಸರ್ಕಾರ 500 ರೂ ಮುಖಬೆಲೆಯ ನೋಟುಗಳನ್ನು ಮತ್ತು 2000 ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಬಹುದು ಎಂದು ಕೆಲ ವಲಯಗಳಲ್ಲಿ ಚರ್ಚೆಗಳಾಗುತ್ತಿರುವುದು ಹೌದು. ಕಪ್ಪು ಹಣ ಸಂಗ್ರಹಣೆಯನ್ನು ತಪ್ಪಿಸುವ ಉದ್ದೇಶದಿಂದಲೂ ಸರ್ಕಾರ ಮತ್ತೊಮ್ಮೆ ನೋಟ್ ಬ್ಯಾನ್ ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗಿತ್ತು. ಆದರೆ, ಸರ್ಕಾರ ಈ ಸಾಧ್ಯತೆಯನ್ನು ತಳ್ಳಿಹಾಕಿದೆ.

ಇದನ್ನೂ ಓದಿ: ITR Deadline: ಐಟಿ ರಿಟರ್ನ್ ಫೈಲ್ ಮಾಡುವ ಗಡುವು ವಿಸ್ತರಣೆಯಾಗುತ್ತಾ? ಇಲ್ಲಿಯವರೆಗೆ ಐಟಿಆರ್ ಸಲ್ಲಿಸಿದವರೆಷ್ಟು? ಇಲ್ಲಿದೆ ಡೀಟೇಲ್ಸ್

ಮೇ 19ರಂದು ಸರ್ಕಾರ 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿತ್ತು. ಸಾರ್ವಜನಿಕವಾಗಿ ಚಲಾವಣೆಯಲ್ಲಿದ್ದ 2,000 ರೂ ನೋಟುಗಳ ಪೈಕಿ ಶೇ. 76ರಷ್ಟು ನೋಟುಗಳು ಇಲ್ಲಿಯವರೆಗೆ ವಾಪಸ್ ಬಂದಿವೆ. ಇನ್ನೂ ಶೇ. 20ಕ್ಕೂ ಹೆಚ್ಚು ನೋಟುಗಳು ಚಲಾವಣೆಯಲ್ಲಿವೆ.

ಸೆಪ್ಪಂಬರ್ 30ರವರೆಗೂ ಈ ನೋಟುಗಳನ್ನು ಮರಳಿಸಲು ಸಮಯಾವಕಾಶ ಕೊಡಲಾಗಿದೆ. ಅದಾದ ಬಳಿಕ ಈ ನೋಟು ಅಮಾನ್ಯವೇನೂ ಆಗುವುದಿಲ್ಲ. ಅದರೆ, ಚಲಾವಣೆಯಲ್ಲಿ ಇರುವುದಿಲ್ಲ. ಅಕಸ್ಮಾತ್, ಸೆಪ್ಟಂಬರ್ 30ರ ಬಳಿಕ ಸಾರ್ವಜನಿಕರ ಬಳಿ 2,000 ರೂ ನೋಟುಗಳು ಇದ್ದರೆ ಏನಾಗುತ್ತದೆ ಎಂಬ ಬಗ್ಗೆ ಆರ್​ಬಿಐ ಅಥವಾ ಸರ್ಕಾರ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: Share Market: ಭಾರತದ ಷೇರುಮಾರುಕಟ್ಟೆಗೆ ಟಿ+1 ಟ್ರೇಡಿಂಗ್ ಸೈಕಲ್; ಇದು ವಿಶ್ವದಲ್ಲೇ ಪ್ರಥಮ

2,000 ರೂ ನೋಟುಗಳನ್ನು ಮೇ 19ರಂದು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಪ್ರಕಟಿಸಲಾಯಿತಾದರೂ, ಅದಕ್ಕಿಂತಲೂ ಮುಂಚಿನಿಂದಲೇ ಸರ್ಕಾರ ಈ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಆರಂಭಿಸಿತ್ತು ಎನ್ನುತ್ತವೆ ವರದಿಗಳು. ಎಟಿಎಂಗಳಲ್ಲಿ ಬಹಳ ತಿಂಗಳುಗಳಿಂದ 2,000 ರೂ ಮುಖಬೆಲೆಯ ನೋಟುಗಳು ಬರುತ್ತಿಲ್ಲ. ಆರ್​ಬಿಐ ಕೂಡ 2,000 ರೂ ನೋಟುಗಳ ಮುದ್ರಣ ನಿಲ್ಲಿಸಿತ್ತು. ಬ್ಯಾಂಕುಗಳೂ ಕೂಡ 2,000 ರೂ ನೋಟುಗಳ ವಿತರಣೆ ನಿಲ್ಲಿಸಿದ್ದವೆನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ