AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Share Market: ಭಾರತದ ಷೇರುಮಾರುಕಟ್ಟೆಗೆ ಟಿ+1 ಟ್ರೇಡಿಂಗ್ ಸೈಕಲ್; ಇದು ವಿಶ್ವದಲ್ಲೇ ಪ್ರಥಮ

T+1 Trading Cycle: ಷೇರು ಖರೀದಿಸಿ ಎರಡು ದಿನದ ಬಳಿಕ ಡಿಮ್ಯಾಟ್ ಖಾತೆಗೆ ಷೇರು ಜಮೆಯಾಗುತ್ತದೆ. ಇದೀಗ ಅದರ ಅವಧಿಯನ್ನು ಒಂದು ದಿನಕ್ಕೆ ಇಳಿಸಲಾಗುತ್ತಿದೆ ಎಂದು ಸೆಬಿ ಹೇಳಿದೆ. ಜನವರಿ 27ರಿಂದ ಟಿ+1 ಟ್ರೇಡಿಂಗ್ ಸೈಕಲ್​ನ ವ್ಯವಸ್ಥೆ ಬರಲಿದೆಯಂತೆ.

Share Market: ಭಾರತದ ಷೇರುಮಾರುಕಟ್ಟೆಗೆ ಟಿ+1 ಟ್ರೇಡಿಂಗ್ ಸೈಕಲ್; ಇದು ವಿಶ್ವದಲ್ಲೇ ಪ್ರಥಮ
ಸೆಬಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 24, 2023 | 6:42 PM

Share

ನವದೆಹಲಿ, ಜುಲೈ 24: ಭಾರತದ ಷೇರು ಮಾರುಕಟ್ಟೆಯಲ್ಲಿ (Indian Stock Markets) ನಾವೀನ್ಯತೆಯ ಸ್ಪರ್ಶ ತರಲಾಗಿದೆ. ಷೇರುಪೇಟೆಗಳ ಟ್ರೇಡಿಂಗ್ ಚಕ್ರದ ಅವಧಿ ಕಡಿಮೆ ಮಾಡಲಾಗಿದೆ. ಜನವರಿ 27ರಿಂದ ಟಿ+1 ಟ್ರೇಡಿಂಗ್ ಸೈಕಲ್ (Trading Cycle) ಬರಲಿದೆ. ಈಗಿರುವ ಷೇರುಪೇಟೆ ವ್ಯವಸ್ಥೆಯಲ್ಲಿ ಟಿ+2 ವೃತ್ತದ ಸೂತ್ರವನ್ನು ಅನುಸರಿಸಲಾಗುತ್ತಿದೆ. ಇದು ಷೇರು ವಹಿವಾಟಿಗೆ ಅನ್ವಯ ಆಗುವ ಸೂತ್ರ. ಉದಾಹರಣೆಗೆ, ಟಿ+2 ಟ್ರೇಡಿಂಗ್ ಸೈಕಲ್ ಎಂದರೆ ನೀವು ಷೇರು ಖರೀದಿ ಮಾಡಿದ 2 ಎರಡು ದಿನದ ಬಳಿಕ ಅದು ನಿಮ್ಮ ಡಿಮ್ಯಾಟ್ ಅಕೌಂಟ್​ಗೆ ವರ್ಗಾವಣೆ ಆಗುತ್ತದೆ. ಅದೇ ಟಿ+1 ಸೈಕಲ್ ಜಾರಿಗೆ ಬಂದರೆ ಒಂದೇ ದಿನದಲ್ಲಿ ಷೇರು ಡೀಮ್ಯಾಟ್ ಖಾತೆಗೆ ಜಮೆ ಆಗುತ್ತದೆ. ನೀವು ಷೇರು ಖರೀದಿಸಿದ ಒಂದು ದಿನದ ಬಳಿಕ ಅದನ್ನು ಮಾರಬಹುದು.

ಒಂದೇ ದಿನದ ಟ್ರೇಡಿಂಗ್ ಸೈಕಲ್ ಅಳವಡಿಸಿರುವ ಮೊದಲ ಪ್ರಮುಖ ದೇಶ ಎಂದರೆ ಭಾರತವೇ. ಅಮೆರಿಕ ಇತ್ಯಾವುದೇ ಮುಖ್ಯ ದೇಶಗಳ ಷೇರುಪೇಟೆಗಳಲ್ಲಿ ಈ ಕ್ಷಿಪ್ರ ಸೆಟಲ್ಮೆಂಟ್ ಸಿಸ್ಟಂ ಇಲ್ಲ.

ಸೆಬಿ ಛೇರ್ಮನ್ ಮಾಧಬಿ ಪುರಿ ಬುಚ್ ಅವರು ಜುಲೈ 24ರಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಭಾರತದ ಷೇರುಮಾರುಕಟ್ಟೆಯಲ್ಲಿ ಟಿ+1 ಟ್ರೇಡಿಂಗ್ ಸೆಟಲ್ಮೆಂಟ್ ವ್ಯವಸ್ಥೆ ಜಾರಿಗೆ ತರುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: HAL Share: ಎಚ್​ಎಎಲ್ ಸತ್ತೇಹೋಯಿತು ಎಂದವರಿಗೆ ಶಾಕ್; ಹೂಡಿಕೆದಾರರಿಗೆ ಸ್ವರ್ಗವಾಗಿದೆ ಎಚ್​ಎಎಲ್ ಷೇರು

ರಿಯಲ್​ಟೈಮ್ ಸೆಟಲ್ಮೆಂಟ್ ವ್ಯವಸ್ಥೆ ಬರಲಿದೆಯಾ?

ಷೇರು ವಹಿವಾಟುಗಳ ಕ್ಷಿಪ್ರ ಸೆಟಲ್ಮೆಂಟ್ ಜಾರಿಗೆ ತರಲು ಯತ್ನಿಸುತ್ತಿದ್ದೇವೆ. ಆ ದಿನ ದೂರ ಇಲ್ಲ ಎಂದೂ ಸೆಬಿ ಮುಖ್ಯಸ್ಥೆ ಹೇಳಿದ್ದಾರೆ. ಷೇರು ವಹಿವಾಟುಗಳ ಸೆಟಲ್ಮೆಂಟ್ ರಿಯಲ್ ಟೈಮ್​ನಲ್ಲಿ ಆಗುವ ಸಾಧ್ಯತೆ ಬಗ್ಗೆ ಮಾಧಬಿ ಪುರಿ ಪ್ರಸ್ತಾಪಿಸಿರುವ ಸಾಧ್ಯತೆ ಇದೆ. ಅಂದರೆ ಷೇರು ಖರೀದಿಸಿದ ತತ್​ಕ್ಷಣವೇ ಅದು ಡೀಮ್ಯಾಟ್ ಅಕೌಂಟ್​ಗೆ ಜಮೆ ಆಗುವ ವ್ಯವಸ್ಥೆ ಶೀಘ್ರದಲ್ಲಿ ಬರಬಹುದು ಎಂದು ನಿರೀಕ್ಷಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ