ITR Deadline: ಐಟಿ ರಿಟರ್ನ್ ಫೈಲ್ ಮಾಡುವ ಗಡುವು ವಿಸ್ತರಣೆಯಾಗುತ್ತಾ? ಇಲ್ಲಿಯವರೆಗೆ ಐಟಿಆರ್ ಸಲ್ಲಿಸಿದವರೆಷ್ಟು? ಇಲ್ಲಿದೆ ಡೀಟೇಲ್ಸ್

Income Tax Return This Year: ಈ ವರ್ಷ ಇಲ್ಲಿಯವರೆಗೆ 7.40 ಕೋಟಿ ಮಂದಿ ಐಟಿಆರ್ ಸಲ್ಲಿಕೆ ಮಾಡಿದ್ದಾರೆ. ಕಳೆದ ಬಾರಿಗಿಂತ ಸಾಕಷ್ಟು ಏರಿಕೆಯಾಗಿದೆ. ಇದೇ ವೇಳೆ ಜುಲೈ 31ರ ಗಡುವು ವಿಸ್ತರಣೆ ಆಗುವುದು ಅನುಮಾನ ಎನ್ನಲಾಗಿದೆ.

ITR Deadline: ಐಟಿ ರಿಟರ್ನ್ ಫೈಲ್ ಮಾಡುವ ಗಡುವು ವಿಸ್ತರಣೆಯಾಗುತ್ತಾ? ಇಲ್ಲಿಯವರೆಗೆ ಐಟಿಆರ್ ಸಲ್ಲಿಸಿದವರೆಷ್ಟು? ಇಲ್ಲಿದೆ ಡೀಟೇಲ್ಸ್
ಐಟಿ ರಿಟರ್ನ್
Follow us
|

Updated on: Jul 25, 2023 | 10:27 AM

ನವದೆಹಲಿ, ಜುಲೈ 25: ಆದಾಯ ತೆರಿಗೆ ರಿಟರ್ನ್ (IT Return Filing) ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಅದಾದ ಬಳಿಕವೂ ಐಟಿ ರಿಟರ್ನ್ ಫೈಲ್ ಮಾಡಬಹುದಾದರೂ ದಂಡ ಪಾವತಿಸಬೇಕಾಗುತ್ತದೆ. ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವ ವಿಚಾರದಲ್ಲಿ ಕೆಲವಾರು ಬಾರಿ ಗಡುವು ವಿಸ್ತರಣೆ ಆದಂತೆ ಐಟಿ ರಿಟರ್ನ್ ಫೈಲ್ ವಿಚಾರದಲ್ಲೂ ಡೆಡ್​ಲೈನ್ 15 ದಿನ ವಿಸ್ತರಣೆ ಆಗಬಹುದು ಎಂದು ಕೆಲವರು ನಿರೀಕ್ಷಿಸಿದ್ದಾರೆ. ಆದರೆ, ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿ ಪ್ರಕಾರ ಐಟಿಆರ್ ಫೈಲಿಂಗ್ ಮಾಡುವ ಗಡುವನ್ನು ವಿಸ್ತರಿಸುವುದು ಅನುಮಾನ. ಕಳೆದ ವರ್ಷ ಐಟಿಆರ್ ಸಲ್ಲಿಕೆಗೆ ನಿಗದಿಯಾಗಿದ್ದ ಡೆಡ್​ಲೈನ್ ವಿಸ್ತರಣೆ ಮಾಡಲಾಗಿರಲಿಲ್ಲ. ಈ ಬಾರಿಯೂ ಗಡುವು ಹೆಚ್ಚಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಇತ್ತೀಚೆಗೆ ಕೇಂದ್ರ ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಆದಾಯ ತೆರಿಗೆ ಪಾವತಿದಾರರು ಆದಷ್ಟೂ ಶೀಘ್ರದಲ್ಲಿ ರಿಟರ್ನ್ ಫೈಲ್ ಮಾಡಬೇಕೆಂದು ಹೇಳಿದ್ದರು. ಅವರ ಮಾತಿನಲ್ಲಿ, ಐಟಿಆರ್ ಡೆಡ್​ಲೈನ್ ವಿಸ್ತರಣೆಯಾಗುವ ಯಾವ ಸುಳಿವೂ ಇಲ್ಲ.

7 ಕೋಟಿಗೂ ಹೆಚ್ಚು ಮಂದಿಯಿಂದ ಐಟಿಆರ್ ಸಲ್ಲಿಕೆ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಐಟಿ ರಿಟರ್ನ್ ಸಲ್ಲಿಸಿರುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಇಲ್ಲಿಯವರೆಗೆ 7.40 ಕೋಟಿ ಐಟಿಆರ್​ಗಳು ಸಲ್ಲಿಕೆಯಾಗಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 24ರಂದು ಮಾಹಿತಿ ನೀಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಐಟಿಆರ್ ಸಲ್ಲಿಕೆ ಪ್ರಮಾಣದಲ್ಲಿ ಶೇ. 6.18ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: IT Return: ಒಂದಿಷ್ಟು ತೆರಿಗೆ ಉಳಿಸಲು ಆದಾಯ ಕಡಿಮೆ ತೋರಿಸದಿರಿ; ಜೈಲಿಗೆ ಹೋಗಬೇಕಾದೀತು ಜೋಕೆ..!

ಈ ವರ್ಷ ಸಲ್ಲಿಕೆಯಾಗಿರುವ 7.40 ಐಟಿಆರ್ ಪೈಕಿ 5.16 ಕೋಟಿ ಮಂದಿ ಶೂನ್ಯ ತೆರಿಗೆ ಬಾಧ್ಯತೆಯನ್ನು ಘೋಷಿಸಿದ್ದಾರೆ ಎಂದು ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

ಕಳೆದ 4 ವರ್ಷದಲ್ಲಿ ಐಟಿಆರ್ ಸಲ್ಲಿಕೆಯ ವಿವರ

  • 2022-23ರಲ್ಲಿ 7.40 ಕೋಟಿ ಮಂದಿ (ಜುಲೈ 23ರವರೆಗೂ)
  • 2021-22ರಲ್ಲಿ 6.94 ಕೋಟಿ ಐಟಿಆರ್
  • 2020-21ರಲ್ಲಿ 6.72 ಕೋಟಿ ಐಟಿಅರ್
  • 2019-20ರಲ್ಲಿ 6.47 ಕೋಟಿ ಐಟಿಆರ್

ಇದನ್ನೂ ಓದಿ: ITR: ಬ್ಯಾಂಕ್ ಅಕೌಂಟ್ ತಪ್ಪಾಗಿ ಹಾಕಿ ಐಟಿಆರ್ ಸಲ್ಲಿಸಿಬಿಟ್ರಾ? ಇಲ್ಲಿದೆ ಸರಿಪಡಿಸುವ ಉಪಾಯ

ಸರ್ಕಾರ ಐಟಿ ರಿಟರ್ನ್ ಸಲ್ಲಿಕೆಯ ಪ್ರಕ್ರಿಯೆಯನ್ನು ಸರಳಗೊಳಿಸುತ್ತಾ ಬರುತ್ತಿದೆ. ಈಗ ಐಟಿಆರ್ ಫಾರ್ಮ್​ಗಳಲ್ಲಿ ಬಹಳಷ್ಟು ಮಾಹಿತಿಯನ್ನು ಮುಂಚಿತವಾಗಿಯೇ ಭರ್ತಿ ಮಾಡಲಾಗಿರುತ್ತದೆ. ಹೀಗಾಗಿ, ತೆರಿಗೆ ಪಾವತಿದಾರರಿಗೆ ಐಟಿಆರ್ ಸಲ್ಲಿಸುವ ಸಮಯ ಹೆಚ್ಚು ಹಿಡಿಯುವುದಿಲ್ಲ. ಇಮೇಲ್ ಮತ್ತು ಎಸ್ಸೆಮ್ಮೆಸ್ ಮೂಲಕ ತೆರಿಗೆ ಪಾವತಿದಾರರಿಗೆ ಐಟಿಆರ್ ಸಲ್ಲಿಸಲು ಸರ್ಕಾರ ಅಲರ್ಟ್ ಮೆಸೇಜ್​ಗಳನ್ನು ಸಲ್ಲಿಸುತ್ತದೆ. ಈ ಮೂಲಕ ಈ ವರ್ಷ ಐಟಿಆರ್ ಸಲ್ಲಿಕೆ ಪ್ರಮಾಣ ಹೆಚ್ಚಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ