ಕರ್ನಾಟಕ ಸೇರಿ 16 ರಾಜ್ಯಗಳಿಗೆ 56,415 ಕೋಟಿ ರೂ. ವಿಶೇಷ ನೆರವು ಘೋಷಿಸಿದ ಕೇಂದ್ರ

|

Updated on: Jun 26, 2023 | 8:20 PM

ಕರ್ನಾಟಕಕ್ಕೆ 3,647 ಕೋಟಿ ರೂಪಾಯಿ ವಿಶೇಷ ಸಹಾಯ ಘೋಷಣೆ ಮಾಡಲಾಗಿದೆ. ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ ಹಾಗೂ ಬಿಹಾರಕ್ಕೆ ಹೆಚ್ಚಿನ ನೆರವು ಘೋಷಿಸಲಾಗಿದೆ.

ಕರ್ನಾಟಕ ಸೇರಿ 16 ರಾಜ್ಯಗಳಿಗೆ 56,415 ಕೋಟಿ ರೂ. ವಿಶೇಷ ನೆರವು ಘೋಷಿಸಿದ ಕೇಂದ್ರ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಬಂಡವಾಳ ಹೂಡಿಕೆ (Capital Investment) ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಸೇರಿದಂತೆ 16 ರಾಜ್ಯಗಳಿಗೆ ‘ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು 2023-24’ ಯೋಜನೆಯಡಿ 56,415 ಕೋಟಿ ರೂ. ವಿಶೇಷ ನೆರವು (Special Assistance) ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ ಘೋಷಿಸಿದೆ. ಆರೋಗ್ಯ, ಶಿಕ್ಷಣ, ನೀರಾವರಿ, ನೀರು ಸರಬರಾಜು, ವಿದ್ಯುತ್, ರಸ್ತೆಗಳು, ಸೇತುವೆಗಳು ಮತ್ತು ರೈಲ್ವೆ ಸೇರಿದಂತೆ ವಿವಿಧ ವಲಯಗಳಲ್ಲಿ ಬಂಡವಾಳ ಹೂಡಿಕೆ ಯೋಜನೆಗಳನ್ನು ಅನುಮೋದಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಬಂಡವಾಳ ವೆಚ್ಚ ಹೆಚ್ಚಿಸುವುದನ್ನು ಗಮನದಲ್ಲಿಟ್ಟುಕೊಂಡು ಮತ್ತು ರಾಜ್ಯಗಳಲ್ಲಿ ಬಂಡವಾಳ ವೆಚ್ಚಕ್ಕೆ ಉತ್ತೇಜನ ನೀಡುವ ಸಲುವಾಗಿ, 2023-24 ರ ಕೇಂದ್ರ ಬಜೆಟ್‌ನಲ್ಲಿ ‘ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು 2023-24′ ಯೋಜನೆಯನ್ನು ಘೋಷಿಸಲಾಯಿತು. ಯೋಜನೆಯಡಿಯಲ್ಲಿ, ರಾಜ್ಯ ಸರ್ಕಾರಗಳಿಗೆ ವಿಶೇಷ ಸಹಾಯವನ್ನು 50 ವರ್ಷಗಳ ಬಡ್ಡಿ ರಹಿತ ಸಾಲದ ರೂಪದಲ್ಲಿ ನೀಡಲಾಗುತ್ತದೆ. 2023-24ರ ಹಣಕಾಸು ವರ್ಷದಲ್ಲಿ 1.3 ಲಕ್ಷ ಕೋಟಿ ರೂ. ನೀಡಲು ಘೋಷಣೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಈ ಯೋಜನೆಯು ನಗರ ಪ್ರದೇಶಗಳಲ್ಲಿನ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ವಸತಿ ಹೆಚ್ಚಿಸುವ ಹಾಗೂ ಇನ್ನೂ ಅನೇಕ ಗುರಿಗಳನ್ನು ಹೊಂದಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: PM Kisan eKYC: ಪಿಎಂ ಕಿಸಾನ್ ಸ್ಕೀಮ್: ಇಕೆವೈಸಿ ಅಪ್​ಡೇಟ್ ಬಹಳ ಸುಲಭ; ಇಲ್ಲಿವೆ ವಿವಿಧ ವಿಧಾನಗಳು


ಕರ್ನಾಟಕಕ್ಕೆ 3,647 ಕೋಟಿ ರೂಪಾಯಿ ವಿಶೇಷ ಸಹಾಯ ಘೋಷಣೆ ಮಾಡಲಾಗಿದೆ. ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ ಹಾಗೂ ಬಿಹಾರಕ್ಕೆ ಹೆಚ್ಚಿನ ನೆರವು ಘೋಷಿಸಲಾಗಿದೆ. ಈ ರಾಜ್ಯಗಳಿಗೆ ಕ್ರಮವಾಗಿ 7,523 ಕೋಟಿ ರೂ., 7,850 ರೂ, ಹಾಗೂ 9,640 ಕೋಟಿ ರೂ. ಘೋಷಣೆ ಮಾಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:19 pm, Mon, 26 June 23