ಮಾಮೂಲಿ ಅಕ್ಕಿ ಜೊತೆಗೆ ಬಾಸ್ಮತಿ ಅಕ್ಕಿ ರಫ್ತಿಗೂ ಕೇಂದ್ರದಿಂದ ನಿರ್ಬಂಧ; ಇಲ್ಲಿದೆ ಡೀಟೇಲ್ಸ್

|

Updated on: Aug 27, 2023 | 12:24 PM

Basmati Rice Export Curb: ಟನ್​​ಗೆ 1 ಲಕ್ಷ ರೂಗಿಂತ ಕಡಿಮೆ ಬೆಲೆಗೆ ಗುತ್ತಿಗೆ ಪಡೆದಿರುವ ಬಾಸ್ಮತಿ ಅಕ್ಕಿಯ ರಫ್ತನ್ನು ಸರ್ಕಾರ ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಬಾಸ್ಮತಿಯೇತರ ಪ್ರಾಕಾರದ ಅಕ್ಕಿಗಳ ರಫ್ತನ್ನು ನಿಷೇಧಿಸಲಾಗಿತ್ತು. ಈಗ ಬಾಸ್ಮತಿ ಅಕ್ಕಿ ರಫ್ತಿಗೆ ನಿರ್ಬಂಧ ಹಾಕಲಾಗಿದೆ.

ಮಾಮೂಲಿ ಅಕ್ಕಿ ಜೊತೆಗೆ ಬಾಸ್ಮತಿ ಅಕ್ಕಿ ರಫ್ತಿಗೂ ಕೇಂದ್ರದಿಂದ ನಿರ್ಬಂಧ; ಇಲ್ಲಿದೆ ಡೀಟೇಲ್ಸ್
ಬಾಸ್ಮತಿ ಅಕ್ಕಿ
Follow us on

ನವದೆಹಲಿ, ಆಗಸ್ಟ್ 27: ಕೇಂದ್ರ ಸರ್ಕಾರ ಬಾಸ್ಮತಿ ಅಕ್ಕಿಯ ರಫ್ತಿಗೂ (Basmati rice exports) ಕೆಲ ನಿರ್ಬಂಧಗಳನ್ನು ವಿಧಿಸಿದೆ. ಕೆಲ ದಿನಗಳ ಹಿಂದೆ, ಬಾಸ್ಮತಿಯೇತರ ವಿಧದ ಅಕ್ಕಿಗಳ (Non-basmati rice varieties) ರಫ್ತನ್ನು ಸರ್ಕಾರ ನಿಷೇಧಿಸಿತ್ತು. ಈಗ ನಿರ್ದಿಷ್ಟ ಸ್ತರದ ಬೆಲೆಯ ಬಾಸ್ಮತಿ ಅಕ್ಕಿಯ ರಫ್ತಿಗೆ ನಿರ್ಬಂಧ ಹಾಕಿದೆ. ಸದ್ಯ ಬಂದಿರುವ ವರದಿ ಪ್ರಕಾರ ಒಂದು ಟನ್​ಗೆ 1,200 ಡಾಲರ್ (ಸುಮಾರು 1 ಲಕ್ಷ ರೂ) ಮೊತ್ತಕ್ಕಿಂತ ಹೆಚ್ಚು ರಫ್ತ ಗುತ್ತಿಗೆ ಪಡೆದಿರುವ ಬಾಸ್ಮತಿ ಅಕ್ಕಿಯನ್ನು ಮಾತ್ರ ರಫ್ತು ಮಾಡಲು ಅವಕಾಶ ಇರುತ್ತದೆ. ಅದಕ್ಕಿಂತ ಕಡಿಮೆ ಮೌಲ್ಯದ ಬಾಸ್ಮತಿ ಅಕ್ಕಿಯ ರಫ್ತನ್ನು ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವುದು ತಿಳಿದುಬಂದಿದೆ.

ಹಣದುಬ್ಬರ ಇನ್ನಷ್ಟು ಏರುವುದನ್ನು ನಿಯಂತ್ರಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದ್ದರಿಂದ ಭತ್ತದ ಇಳುವರಿ ಕಡಿಮೆ ಆಗಿದೆ. ಎಲ್ಲಾ ತಳಿಯ ಅಕ್ಕಿಗಳ ಉತ್ಪಾದನೆ ಸಂಕುಚಿತಗೊಂಡಿದೆ. ಬಾಸ್ಮತಿಯೇತರ ಮಾಮೂಲಿಯ ತಳಿಯ ಅಕ್ಕಿಯ ರಫ್ತನ್ನು ಸರ್ಕಾರ ನಿಷೇಧಿಸಿತ್ತು. ಕಡಿಮೆ ಬೆಲೆಯ ಬಾಸ್ಮತಿ ಅಕ್ಕಿ ಭಾರತದಲ್ಲಿ ಹೆಚ್ಚು ಮಾರಾಟವಾಗುವುದರಿಂದ ಇದರ ಅಭಾವ ಸೃಷ್ಟಿಯಾದರೆ ಬೆಲೆ ಏರಿಕೆ ವಿಪರೀತವಾಗುತ್ತದೆ. ಅದರ ಪರಿಣಾಮ ಹಣದುಬ್ಬರವೂ ಹೆಚ್ಚಾಗುತ್ತದೆ. ಹೀಗಾಗಿ, ಇದರ ರಫ್ತನ್ನು ಸರ್ಕಾರ ನಿರ್ಬಂಧಿಸಿದೆ.

ಇದನ್ನೂ ಓದಿ: ಸೆಪ್ಟೆಂಬರ್​ನಲ್ಲಿ ಬ್ಯಾಂಕುಗಳಿಗೆ 16 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ ಇದೆ, ಇದಲ್ಲಿದೆ ಪಟ್ಟಿ

ಬೆಲೆ ಏರಿಕೆ ತಡೆಯುವ ಉದ್ದೇಶದಿಂದ ಭಾರತ ಈರುಳ್ಳಿ ಸೇರಿದಂತೆ ಇನ್ನೂ ಕೆಲ ಆಹಾರ ವಸ್ತುಗಳ ರಫ್ತಿಗೆ ನಿರ್ಬಂಧ ವಿಧಿಸಿದೆ. ಈ ಕ್ರಮದಿಂದ ಭಾರತದ ಹಲವು ವರ್ತಕರಿಗೆ ಮತ್ತು ರೈತರಿಗೆ ಹೆಚ್ಚಿನ ಆದಾಯದ ಅವಕಾಶ ತಪ್ಪುತ್ತದೆಯಾದರೂ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ಹೆಚ್ಚು ತಾಕದಂತೆ ತಡೆಯಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:11 pm, Sun, 27 August 23