Chanda Kochhar: ಐಸಿಐಸಿಐ ಬ್ಯಾಂಕ್‌ ಮಾಜಿ ಸಿಇಒ ಚಂದಾ ಕೊಚ್ಚರ್‌ ದಂಪತಿ ಮೂರು ದಿನ ಸಿಬಿಐ ವಶಕ್ಕೆ

2009ರ ಜೂನ್​ನಿಂದ 2011ರ ಅಕ್ಟೋಬರ್​ ಅವಧಿಯಲ್ಲಿ ವಿಡಿಯೊಕಾನ್ ಗ್ರೂಪ್ ಮತ್ತು ಅದರ ಅಂಗಸಂಸ್ಥೆಗಳಿಗೆ ಅಕ್ರಮವಾಗಿ 1,875 ಕೋಟಿ ರೂ. ಸಾಲ ನೀಡಲಾಗಿತ್ತು ಎಂದು ಸಿಬಿಐ ತಿಳಿಸಿದ್ದು, ಆ ಬಗ್ಗೆ ತನಿಖೆ ನಡೆಸುತ್ತಿದೆ.

Chanda Kochhar: ಐಸಿಐಸಿಐ ಬ್ಯಾಂಕ್‌ ಮಾಜಿ ಸಿಇಒ ಚಂದಾ ಕೊಚ್ಚರ್‌ ದಂಪತಿ ಮೂರು ದಿನ ಸಿಬಿಐ ವಶಕ್ಕೆ
ಚಂದಾ ಕೊಚ್ಚರ್‌Image Credit source: PTI
Follow us
TV9 Web
| Updated By: ಗಣಪತಿ ಶರ್ಮ

Updated on:Dec 26, 2022 | 12:07 PM

ನವದೆಹಲಿ: ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಐಸಿಐಸಿ ಬ್ಯಾಂಕ್​​ನ (ICICI Bank) ಮಾಜಿ ಮುಖ್ಯ ಕಾರ್ಯನಿರ್ವಹಣಧಿಕಾರಿ (CEO) ಮತ್ತು ವ್ಯವಸ್ಥಾಪಕ ನಿರ್ದೆಶಕಿ ಚಂದಾ ಕೊಚ್ಚರ್ (Chanda Kochhar) ಹಾಗೂ ಅವರ ಪತಿ ದೀಪಕ್ ಕೊಚ್ಚರ್​ ಅವರನ್ನು ಸಿಬಿಐ ನ್ಯಾಯಾಲಯ (CBI Court) ಮೂರು ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿ ಆದೇಶಿಸಿದೆ. ವಿಡಿಯೊಕಾನ್ ಗ್ರೂಪ್​ಗೆ (Videocon Group) ಸಾಲ ಮಂಜೂರಾತಿಯಲ್ಲಿ ಅಕ್ರಮ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನೂ ಸಿಬಿಐ (CBI) ಶುಕ್ರವಾರ ರಾತ್ರಿ ಬಂಧಿಸಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿ ಕೊಚ್ಚರ್ ಅವರನ್ನು ಈ ಹಿಂದೆ 2021ರಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿತ್ತು. 2018ರಲ್ಲಿ ತನಿಖೆ ಆರಂಭವಾಗಿದ್ದು, ಆ ಸಂದರ್ಭದಲ್ಲಿ ಚಂದಾ ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. 2019ರಲ್ಲಿ ಚಂದಾ ಅವರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಆಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದರು.

ಇದನ್ನೂ ಓದಿ: ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚರ್‌ ದಂಪತಿಯನ್ನು ಬಂಧಿಸಿದ ಸಿಬಿಐ

2009ರ ಜೂನ್​ನಿಂದ 2011ರ ಅಕ್ಟೋಬರ್​ ಅವಧಿಯಲ್ಲಿ ವಿಡಿಯೊಕಾನ್ ಗ್ರೂಪ್ ಮತ್ತು ಅದರ ಅಂಗಸಂಸ್ಥೆಗಳಿಗೆ ಅಕ್ರಮವಾಗಿ 1,875 ಕೋಟಿ ರೂ. ಸಾಲ ನೀಡಲಾಗಿತ್ತು ಎಂದು ಸಿಬಿಐ ತಿಳಿಸಿದ್ದು, ಆ ಬಗ್ಗೆ ತನಿಖೆ ನಡೆಸುತ್ತಿದೆ. ಈ ಸಾಲಗಳನ್ನು 2012ರಲ್ಲಿ ಅನುತ್ಪಾದಕ ಆಸ್ತಿ (ಎನ್​ಪಿಎ) ಎಂದು ಘೋಷಿಸಲಾಗಿತ್ತು. ಇದರಿಂದ ಬ್ಯಾಂಕ್​ಗೆ 1,730 ಕೋಟಿ ರೂ. ನಷ್ಟವಾಗಿತ್ತು.

ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಚಂದಾ ಕೊಚ್ಚರ್, ಅವರ ಪತಿ ಮತ್ತು ವಿಡಿಯೋಕಾನ್ ಗ್ರೂಪ್‌ನ ವೇಣುಗೋಪಾಲ್ ಧೂತ್, ನ್ಯೂಪವರ್ ರಿನ್ಯೂವಬಲ್ಸ್, ಸುಪ್ರೀಂ ಎನರ್ಜಿ, ವಿಡಿಯೋಕಾನ್ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:43 pm, Sat, 24 December 22

ಸ್ನೇಹಿತೆ ಶಶಿಕಲಾಗೆ ಪಾರ್ಸೆಲ್ ಯಾರು ಕಳಿಸಿದ್ದರು ಅನ್ನೋದು ಇನ್ನೂ ನಿಗೂಢ
ಸ್ನೇಹಿತೆ ಶಶಿಕಲಾಗೆ ಪಾರ್ಸೆಲ್ ಯಾರು ಕಳಿಸಿದ್ದರು ಅನ್ನೋದು ಇನ್ನೂ ನಿಗೂಢ
ಊರಿಗೆ ಚಿರತೆ ಭಯ, ಮಹಿಳೆಯನ್ನ ಬಲಿ ಪಡೆದ ಕೂಗಳತೆಯಲ್ಲೇ ಮಲಗಿದ ಭೂಪ
ಊರಿಗೆ ಚಿರತೆ ಭಯ, ಮಹಿಳೆಯನ್ನ ಬಲಿ ಪಡೆದ ಕೂಗಳತೆಯಲ್ಲೇ ಮಲಗಿದ ಭೂಪ
ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಆದರೆ ಹೆಚ್ಚುವರಿ ಅನುದಾನ ನೀಡಿಲ್ಲ: ಲಾಡ್
ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಆದರೆ ಹೆಚ್ಚುವರಿ ಅನುದಾನ ನೀಡಿಲ್ಲ: ಲಾಡ್
ಬಿಮ್ಸ್​ ಆಡಳಿತ ವ್ಯವಸ್ಥೆ ಹಳಿತಪ್ಪಿದೆ, ಸರಿಮಾಡುವ ಅವಶ್ಯಕತೆಯಿದೆ: ಸಚಿವೆ
ಬಿಮ್ಸ್​ ಆಡಳಿತ ವ್ಯವಸ್ಥೆ ಹಳಿತಪ್ಪಿದೆ, ಸರಿಮಾಡುವ ಅವಶ್ಯಕತೆಯಿದೆ: ಸಚಿವೆ
ಜಿಂಕೆ ಹಿಂಡನ್ನು ಹೆದರಿಸಿದ 3 ಯುವಕರಿಗೆ ಬಿತ್ತು 15,000 ರೂ. ದಂಡ
ಜಿಂಕೆ ಹಿಂಡನ್ನು ಹೆದರಿಸಿದ 3 ಯುವಕರಿಗೆ ಬಿತ್ತು 15,000 ರೂ. ದಂಡ
BPL ಕಾರ್ಡ್ ರದ್ದಾದ್ರೆ ಗೃಹಲಕ್ಷ್ಮಿ ಹಣ ಬರಲ್ವಾ? ಸಚಿವೆ ಹೇಳಿದ್ದೇನು?
BPL ಕಾರ್ಡ್ ರದ್ದಾದ್ರೆ ಗೃಹಲಕ್ಷ್ಮಿ ಹಣ ಬರಲ್ವಾ? ಸಚಿವೆ ಹೇಳಿದ್ದೇನು?
ಕೊಡೊ ಕಾಟಕ್ಕೆ ತಾಯ್ತ ಕಟ್ಟಿಸ್ಕೋಬೇಕು: ನಗುತ್ತಲೇ ಎಚ್ಚರಿಕೆ ಕೊಟ್ಟ ರಜತ್
ಕೊಡೊ ಕಾಟಕ್ಕೆ ತಾಯ್ತ ಕಟ್ಟಿಸ್ಕೋಬೇಕು: ನಗುತ್ತಲೇ ಎಚ್ಚರಿಕೆ ಕೊಟ್ಟ ರಜತ್
ಅತೃಪ್ತ ಶಾಸಕರಿಗೆ ಅನುದಾನ ನೀಡಲು ಬಿಪಿಎಲ್ ಕಾರ್ಡ್ ರದ್ದು: ಅಶೋಕ
ಅತೃಪ್ತ ಶಾಸಕರಿಗೆ ಅನುದಾನ ನೀಡಲು ಬಿಪಿಎಲ್ ಕಾರ್ಡ್ ರದ್ದು: ಅಶೋಕ
ದೆಹಲಿ: ನಂದಿನಿ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿಎಂ
ದೆಹಲಿ: ನಂದಿನಿ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿಎಂ
ಬಿಪಿಎಲ್ ಕಾರ್ಡ್ ರದ್ದಾಗಿರುವ ಬಗ್ಗೆ ಯಾವುದೇ ನೋಟೀಸ್ ನೀಡದ ಇಲಾಖೆ
ಬಿಪಿಎಲ್ ಕಾರ್ಡ್ ರದ್ದಾಗಿರುವ ಬಗ್ಗೆ ಯಾವುದೇ ನೋಟೀಸ್ ನೀಡದ ಇಲಾಖೆ