ಚೀನಾದ ಕಾರ್ಖಾನೆ ಚಟುವಟಿಕೆಯು ಸೆಪ್ಟೆಂಬರ್‌ನಲ್ಲಿ 2020ರ ಫೆಬ್ರವರಿ ಹಂತಕ್ಕೆ ಕುಗ್ಗಿದೆ. ಆ ಸಂದರ್ಭದಲ್ಲಿ ಕೊರೊನಾದ ಲಾಕ್‌ಡೌನ್‌ಗಳಿಂದ ಆರ್ಥಿಕತೆಯನ್ನು ಕುಂಠಿತಗೊಳಿಸಿತ್ತು. ಈ ಅಂಶವನ್ನು ಅಧಿಕೃತ ಮಾಹಿತಿಯು ಗುರುವಾರ ತೋರಿಸಿದೆ. ಏಕೆಂದರೆ ದೇಶವು ವಿದ್ಯುತ್ ಸ್ಥಗಿತ ಮತ್ತು ರಿಯಲ್ ಎಸ್ಟೇಟ್ ವಲಯದಲ್ಲಿ ಅಸ್ಥಿರತೆಯ ಭಯವನ್ನು ಎದುರಿಸುತ್ತಿದೆ. ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ)- ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಲ್ಲಿ ಉತ್ಪಾದನಾ ಚಟುವಟಿಕೆಯ ಪ್ರಮುಖ ಮಾಪಕ- ಆಗಸ್ಟ್‌ನಲ್ಲಿ 50.1ರಿಂದ 49.6ಕ್ಕೆ ಇಳಿದಿದೆ ಎಂದು ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಹೇಳಿದೆ. 50 ಅಂಕದ ಕೆಳಗೆ ಇರುವ ಯಾವುದೇ ಅಂಕಿ ಕುಗ್ಗಿರುವುದನ್ನು ಪ್ರತಿನಿಧಿಸುತ್ತದೆ. ಆದರೆ ಅದರ ಮೇಲೆ ಅಂಕ ಇದ್ದಲ್ಲಿ ಬೆಳವಣಿಗೆಯನ್ನು ಸೂಚಿಸುತ್ತದೆ.
ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟಿನಿಂದ ಉಂಟಾದ ದೀರ್ಘಕಾಲದ ಕಾರ್ಖಾನೆ ಸ್ಥಗಿತದಿಂದ ದೇಶೀಯ ಆರ್ಥಿಕತೆಯು ಜರ್ಜರಿತಗೊಂಡಾಗ ಕಳೆದ ವರ್ಷ (2020) ಫೆಬ್ರವರಿಯ ನಂತರ ಚೀನಾದ ಪಿಎಂಐ ಕುಗ್ಗುತ್ತಿರುವುದು ಇದೇ ಮೊದಲು. ಇತ್ತೀಚಿನ ತಿಂಗಳಲ್ಲಿ ಕಾರ್ಖಾನೆಯ ಚಟುವಟಿಕೆಗಳನ್ನು ನಿಲ್ಲಿಸಿರುವುದು ಮತ್ತು ವಿದ್ಯುತ್ ಸ್ಥಗಿತ ಈಗಾಗಲೇ ಕನಿಷ್ಠ 17 ಪ್ರಾಂತ್ಯಗಳ ಮೇಲೆ ಪರಿಣಾಮ ಬೀರಿದೆ. ಬಿಗಿಯಾದ ಕಲ್ಲಿದ್ದಲು ಪೂರೈಕೆಯಿಂದ ಪರಿಸ್ಥಿತಿಯು ಮತ್ತಷ್ಟು ಉಲ್ಬಣಗೊಂಡಿದ್ದು, ಬೆಲೆ ಗಗನಕ್ಕೇರಿದೆ. ವಿದ್ಯುತ್ ಕಡಿತ ಮತ್ತು ಇಂಧನ ಬಳಕೆಯನ್ನು ಕಡಿತಗೊಳಿಸುವ ಕಾರ್ಖಾನೆಗಳ ಮೇಲಿನ ಸ್ಥಳೀಯ ಸರ್ಕಾರದ ನಿರ್ಬಂಧಗಳು, ಆಪಲ್ ಮತ್ತು ಟೆಸ್ಲಾದಂತಹ ಅಂತರಾಷ್ಟ್ರೀಯ ಸಂಸ್ಥೆಗಳಿಗೆ ಪೂರೈಕೆ ಸರಪಳಿಗಳ ಪರಿಣಾಮ ಬೀರಿದ್ದರಿಂದಾಗಿ ಕೆಲವು ಪ್ರಮುಖ ಬ್ಯಾಂಕ್ಗಳು ಚೀನಾದ ವಾರ್ಷಿಕ ಜಿಡಿಪಿ ಅಂದಾಜನ್ನು ಇಳಿಕೆ ಮಾಡಲು ಕಾರಣವಾಗಿವೆ. NBS ಹಿರಿಯ ಸಂಖ್ಯಾಶಾಸ್ತ್ರಜ್ಞ ಝಾವೊ ಕಿಂಘೆ ಮಾತನಾಡಿ, “ಇಂಧನವನ್ನು-ತೀವ್ರವಾಗಿ ಬಳಸುವ ಕೈಗಾರಿಕೆಗಳ ತುಲನಾತ್ಮಕವಾಗಿ ಕಡಿಮೆ ಸಂಪತ್ತಿನಿಂದ” ಪಿಎಂಐ ಮಿತಿಗಿಂತ ಕೆಳಗಿಳಿದಿದೆ ಎಂದು ಹೇಳಿದ್ದಾರೆ. ಈ ಅಂಕಿ- ಅಂಶವು ಬ್ಲೂಮ್‌ಬರ್ಗ್ ವಿಶ್ಲೇಷಕರ ಅಂದಾಜಿಗಿಂತ ಸ್ವಲ್ಪ ಕೆಳಗಿತ್ತು. ಕೊರೊನಾವನ್ನು ಏಕಾಏಕಿ ಯಶಸ್ವಿಯಾಗಿ ನಿಯಂತ್ರಿಸಿದ ನಂತರ ಸಣ್ಣ ಚೇತರಿಕೆಯನ್ನು ನಿರೀಕ್ಷಿಸಿದ್ದರು.
ಕೊರೊನಾದ ಆರಂಭಿಕ ಹೊಡೆತದಿಂದ ಚೀನಾದ ಆರ್ಥಿಕತೆಯು ಹೆಚ್ಚಾಗಿ ಪುಟಿದೆದ್ದರೂ ಇತ್ತೀಚಿನ ತಿಂಗಳಲ್ಲಿ ಹಲವು ಪ್ರಕರಣಗಳು ಮರುಕಳಿಸಿದ್ದರಿಂದ ಏಕಾಏಕಿ ಅನೇಕ ದೇಶೀಯ ಪ್ರವಾಸೋದ್ಯಮ ಮತ್ತು ಉತ್ಪಾದನೆಗೆ ಹೊಡೆತ ನೀಡಿದವು. ಏಕೆಂದರೆ ದೇಶದ ಅನೇಕ ಕಡೆಗಳಲ್ಲಿ ಲಾಕ್ಡೌನ್ ಘೋಷಿಸಲಾಯಿತು. ಇದರ ಪರಿಣಾಮವಾಗಿ ನಿರ್ಮಾಣ ಮತ್ತು ಸೇವೆಗಳಲ್ಲಿನ ಚಟುವಟಿಕೆಯನ್ನು ಅಳೆಯುವ ಚೀನಾದ ಉತ್ಪಾದನೆಯೇತರ ಪಿಎಂಐ-ಕೊರೊನಾ ಆರಂಭವಾದ ನಂತರ ಮೊದಲ ಬಾರಿಗೆ ಆಗಸ್ಟ್‌ನಲ್ಲಿ ಸಂಕುಚಿತಗೊಂಡಿತು. ಆದರೆ ಕಳೆದ ತಿಂಗಳು 47.5 ರಿಂದ 53.2ಕ್ಕೆ ಚೇತರಿಸಿಕೊಂಡಿತು.
ಚೀನಾದ ರಿಯಲ್ ಎಸ್ಟೇಟ್ ದೈತ್ಯ ಎವರ್ಗ್ರಾಂಡ್ನಿಂದ ಸಾಲ ವಸೂಲಾಗದ ಬಗ್ಗೆ ಇರುವ ಆತಂಕದಿಂದ 300 ಬಿಲಿಯನ್ ಅಮೆರಿಕನ್ ಡಾಲರ್ ಅಪಾಯದಲ್ಲಿ ಸಿಲುಕಿದೆ. ಗ್ರಾಹಕರ ವಿಶ್ವಾಸಕ್ಕೆ ಪೆಟ್ಟು ಬಿದ್ದಿದೆ. ಉಳಿದ ಆಸ್ತಿ ವಲಯಕ್ಕೆ ಆರ್ಥಿಕ ಅಪಾಯವನ್ನು ತಡೆಯಲು ಸರ್ಕಾರವು ಪ್ರಯತ್ನಿಸುತ್ತಿದೆ. ಪಿನ್‌ಪಾಯಿಂಟ್ ಅಸೆಟ್ ಮ್ಯಾನೇಜ್‌ಮೆಂಟ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಝಿವೇ ಜಾಂಗ್, ದುರ್ಬಲ ಪಿಎಂಐ ಸರ್ಕಾರಕ್ಕೆ “ಅಲಾರಂ” ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ. “ಸರ್ಕಾರದ ನೀತಿಗಳ ಬದಲಾವಣೆಯಿಲ್ಲದೆ Q4ನಲ್ಲಿನ ಆರ್ಥಿಕ ಬೆಳವಣಿಗೆ ಮತ್ತಷ್ಟು ನಿಧಾನವಾಗಬಹುದು, ಮತ್ತು ನಿಧಾನಗತಿಯ ವೇಗವು ಹೆಚ್ಚಾಗಬಹುದು,” ಎಂದಿದ್ದಾರೆ.
ಇದನ್ನೂ ಓದಿ: Evergrande: ಚೀನಾದ ಪೋಸ್ಟರ್ಬಾಯ್ ಎವರ್ಗ್ರ್ಯಾಂಡ್ ದಬ್ಬಾಕಿಕೊಂಡರೆ 171 ಬ್ಯಾಂಕ್, 121 ಹಣಕಾಸು ಸಂಸ್ಥೆ ಅಡ್ಡಡ್ಡ