ಸಾಲ ತೆಗೆದುಕೊಳ್ಳಲು ಬಯಸಿದರೆ ಬುದ್ಧಿವಂತಿಕೆಯಿಂದ ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿ

| Updated By: Rakesh Nayak Manchi

Updated on: Sep 15, 2022 | 3:45 PM

ಸಾಲ ತೆಗೆದುಕೊಳ್ಳಲು ಬಯಸಿದರೆ ನಿಮಗೆ ವೈಯಕ್ತಿಕ ಸಾಲ, ಓವರ್ ಡ್ರಾಫ್ಟ್ ಮಿತಿ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಸಾಲ ಎಂಬ ಮೂರು ಆಯ್ಕೆಗಳಿವೆ. ಇವುಗಳನ್ನು ನೀವು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು.

ಸಾಲ ತೆಗೆದುಕೊಳ್ಳಲು ಬಯಸಿದರೆ ಬುದ್ಧಿವಂತಿಕೆಯಿಂದ ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿ
ವೈಯಕ್ತಿಕ ಸಾಲ, ಓವರ್ ಡ್ರಾಫ್ಟ್ ಮಿತಿ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಸಾಲ (ಸಾಂದರ್ಭಿಕ ಚಿತ್ರ)
Follow us on

ಹಣಕಾಸಿನ ಬಿಕ್ಕಟ್ಟು ಯಾರಿಗಾದರೂ ಉಂಟಾಗಬಹುದು. ಒಮ್ಮೆ ಅದು ಸಂಭವಿಸಿದಾಗ ಜನರು ಹೆಚ್ಚು ಕಾರ್ಯಸಾಧ್ಯವಾದ ಮಾರ್ಗವನ್ನು ಆರಿಸಿಕೊಳ್ಳುವ ಮೊದಲು ಅನೇಕ ಆಯ್ಕೆಗಳ ಮೇಲೆ ಕಣ್ಣು ಆಡಿಸುತ್ತಾರೆ. ಕುಟುಂಬ ಮತ್ತು ಸ್ನೇಹಿತರಿಂದ ಪಡೆಯುವ ಸಾಲದ ಹೊರತಾಗಿ ನಿಮ್ಮ ಮುಂದೆ ಮೂರು ರೀತಿಯ ಸಾಲದ ಆಯ್ಕೆಗಳಿವೆ. ಅವುಗಳೆಂದರೆ, ವೈಯಕ್ತಿಕ ಸಾಲ, ಓವರ್ ಡ್ರಾಫ್ಟ್ ಮಿತಿ ಸಾಲ ಮತ್ತು ಕ್ರೆಡಿಟ್ ಸಾಲ.  ಇವುಗಳಲ್ಲಿ ಪ್ರತಿಯೊಂದೂ ತನ್ನದೇ ಆದ ಸಾಧಕ-ಬಾಧಕಗಳನ್ನು ಒಳಗೊಂಡಿದ್ದು, ಅಂತಿಮ ನಿರ್ಧಾರವನ್ನು ತೆಗೆದುಕೊಂಡಾಗ ಸಂಪೂರ್ಣವಾಗಿ ಅನ್ವೇಷಿಸುವ ಅಗತ್ಯವಿದೆ. ನೀವು ತೀರ್ಮಾನಿಸುವ ಮೊದಲು ಇವುಗಳಲ್ಲಿ ಪ್ರತಿಯೊಂದನ್ನು ಅರ್ಥಮಾಡಿಕೊಳ್ಳಬೇಕು.

ವೈಯಕ್ತಿಕ ಸಾಲ: ಯಾವುದೇ ಮೇಲಾಧಾರ ಅಥವಾ ಭದ್ರತೆ ಇಲ್ಲದೆ ಸಾಲಗಾರನಿಗೆ ವೈಯಕ್ತಿಕ ಸಾಲವನ್ನು ಒದಗಿಸಲಾಗುತ್ತದೆ. ಇದನ್ನು ಕನಿಷ್ಠ ದಾಖಲಾತಿಗಳೊಂದಿಗೆ ನೀಡಲಾಗುತ್ತದೆ. ಮಾತ್ರವಲ್ಲದೆ ಸಾಲದಾತರೊಂದಿಗೆ ಒಪ್ಪಿದ ನಿಯಮಗಳಿಗೆ ಅನುಗುಣವಾಗಿ ಮರುಪಾವತಿ ಮಾಡಬೇಕಾಗುತ್ತದೆ. ವೈಯಕ್ತಿಕ ಸಾಲದ ಗರಿಷ್ಠ ಅವಧಿಯು ಹೆಚ್ಚಿನ ಬ್ಯಾಂಕ್‌ಗಳಿಗೆ ಐದು ವರ್ಷಗಳು ಮತ್ತು ಕೆಲವು ಸಾಲದಾತರಿಗೆ ಏಳು ವರ್ಷಗಳು ಅಗಿರುತ್ತದೆ. ಬಡ್ಡಿಯ ದರವು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಮತ್ತು ಗ್ರಾಹಕರಿಂದ ಗ್ರಾಹಕನಿಗೆ ಅವರ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಬದಲಾಗುತ್ತದೆ.

ಓವರ್‌ಡ್ರಾಫ್ಟ್ ಮಿತಿ ಸಾಲ: ಓವರ್‌ಡ್ರಾಫ್ಟ್ ಮಿತಿಯು ಹೊಂದಿಕೊಳ್ಳುವ ವೈಶಿಷ್ಟ್ಯಗಳೊಂದಿಗೆ ಒಂದು ರೀತಿಯ ವೈಯಕ್ತಿಕ ಸಾಲವಾಗಿದೆ. ಇದು ಸಾಲಗಾರನಿಗೆ ಅವಶ್ಯಕತೆಗಳಿಗೆ ಅನುಗುಣವಾಗಿ ಮೊತ್ತವನ್ನು ಹಿಂಪಡೆಯಲು ಅನುಮತಿಸುತ್ತದೆ. ಹಿಂಪಡೆದ ಮೊತ್ತವನ್ನು ಮರುಪಾವತಿ ಮಾಡುವಲ್ಲಿ ನಮ್ಯತೆಯೂ ಇದೆ. ಸಾಲದಾತನು ಒಟ್ಟು ಮಂಜೂರಾದ ಮಿತಿಯಿಂದ ಬಳಸಿದ ಮೊತ್ತಕ್ಕೆ ಮಾತ್ರ ಬಡ್ಡಿಯನ್ನು ವಿಧಿಸುತ್ತಾನೆ. ಮಂಜೂರಾದ ಮಿತಿಯೊಳಗೆ ಹಲವಾರು ಬಾರಿ ಹಿಂಪಡೆಯಲು ಮತ್ತು ಮರುಪಾವತಿ ಮಾಡಲು ಸಹ ಇದು ಅನುಮತಿಸುತ್ತದೆ. ಉದಾಹರಣೆಗೆ: ಸಾಲದಾತನು 4 ಲಕ್ಷಗಳ ಓವರ್ ಡ್ರಾಫ್ಟ್ ಮಿತಿಯನ್ನು ಮಂಜೂರು ಮಾಡಿದರೆ ಸಾಲದಾತನು ನಿಮಗಾಗಿ ತೆರೆಯುವ ಹೊಸ ಖಾತೆಯಲ್ಲಿ ಹಣವನ್ನು ವಿತರಿಸಲಾಗುತ್ತದೆ. ಈ ಖಾತೆಗೆ ನಿಮಗೆ ಪ್ರವೇಶವನ್ನೂ ನೀಡಲಾಗುತ್ತದೆ. ನೀವು 4 ಲಕ್ಷ ರೂ.ಗಳಲ್ಲಿ ಯಾವುದೇ ಮೊತ್ತವನ್ನು ಹಿಂಪಡೆಯಬಹುದು ಮತ್ತು ಆ ಮೊತ್ತಕ್ಕೆ ನೀವು ಬಡ್ಡಿಯನ್ನು ಮಾತ್ರ ಪಾವತಿಸಬೇಕಾಗುತ್ತದೆ. ಸಾಲದಾತನು ಪ್ರತಿ ಲಕ್ಷಕ್ಕೆ ದಿನಕ್ಕೆ 41 ರೂ. ಬಡ್ಡಿಯನ್ನು ವಿಧಿಸಿದರೆ ಮತ್ತು ನೀವು 2 ಲಕ್ಷ ರೂ. ಹಿಂಪಡೆದಿದ್ದರೆ, ನೀವು ತಿಂಗಳಿಗೆ ಸುಮಾರು 2460 ರೂ. ಬಡ್ಡಿಯನ್ನು ಪಾವತಿಸಬೇಕು. 

Published On - 3:45 pm, Thu, 15 September 22