Sign In

By signing in or creating an account, you agree with Associated Broadcasting Company's Terms & Conditions and Privacy Policy.

Investment: 100 ರೂಪಾಯಿ ಹೂಡಿಕೆ ಮಾಡಿ 25 ಲಕ್ಷ ರೂಪಾಯಿ ಪಡೆಯಿರಿ

ನೀವು ಸುರಕ್ಷಿತ ಭವಿಷ್ಯಕ್ಕಾಗಿ ಅತ್ಯುತ್ತಮ ಹಣಕಾಸು ಹೂಡಿಕೆಯನ್ನು ಹುಡುಕುತ್ತಿದ್ದರೆ ಸಾರ್ವಜನಿಕ ಭವಿಷ್ಯ ನಿಧಿ ಉತ್ತಮ ಆಯ್ಕೆಯಾಗಿದೆ. ಈ ಯೋಜನೆ ಮೂಲಕ ನಿತ್ಯ 100 ರೂಪಾಯಿ ಹೂಡಿಕೆ ಮಾಡಿದರೆ ನಿಮ್ಮ ನಿವೃತ್ತಿ ಜೀವನಕ್ಕೆ ಸುರಕ್ಷಿತ ಆದಾಯ ಪಡೆಯಬಹುದು.

Investment: 100 ರೂಪಾಯಿ ಹೂಡಿಕೆ ಮಾಡಿ 25 ಲಕ್ಷ ರೂಪಾಯಿ ಪಡೆಯಿರಿ
ಸುರಕ್ಷಿತ ಭವಿಷ್ಯಕ್ಕಾಗಿ ಸಾರ್ವಜನಿಕ ಭವಿಷ್ಯ ನಿಧಿ ಅತ್ಯುತ್ತಮ ಹಣಕಾಸು ಹೂಡಿಕೆ ಆಯ್ಕೆ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Rakesh Nayak Manchi

Updated on:Sep 15, 2022 | 6:03 PM

ಹೆಚ್ಚಿನ ಜನರು ಆರ್ಥಿಕವಾಗಿ ಸುರಕ್ಷಿತ ಮತ್ತು ಸುರಕ್ಷಿತ ಭವಿಷ್ಯಕ್ಕಾಗಿ ಅತ್ಯುತ್ತಮ ಹಣಕಾಸು ಹೂಡಿಕೆಗಾಗಿ ಉತ್ತಮ ವೇದಿಕೆಯನ್ನು ಹುಡುಕಾಟ ನಡೆಸುತ್ತಿರುತ್ತಾರೆ. ಜನರ ಆಲೋಚನಾ ಪ್ರವೃತ್ತಿಯನ್ನು ಅನುಸರಿಸಿ ಹೂಡಿಕೆ ಮಾಡಲು ಹಲವಾರು ಯೋಜನೆಗಳಿವೆ. ಈ ಪೈಕಿ ಸಾರ್ವಜನಿಕ ಭವಿಷ್ಯ ನಿಧಿ (Public Provident Fund-PPF) ಇನ್ನೂ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಕಡಿಮೆ ಬಡ್ಡಿ ದರದ ಹೊರತಾಗಿಯೂ ಪಿಪಿಎಫ್​ ಅನೇಕ ಪ್ರಯೋಜನಗಳನ್ನು ಹೊಂದಿದೆ. ಈ ಯೋಜನೆಯಲ್ಲಿ ಹಣ ಠೇವಣಿ ಇಟ್ಟರೆ ಹೂಡಿಕೆಯೂ ಆಗುವುದುರ ಜೊತೆಗೆ ತೆರಿಗೆಯೂ ಉಳಿತಾಯವಾಗಲಿದೆ. ಉದ್ಯೋಗಿ ಮತ್ತು ಸ್ವಯಂ ಉದ್ಯೋಗಿಗಳಿಬ್ಬರೂ ಇದರ ಪ್ರಯೋಜನವನ್ನು ಪಡೆಯಬಹುದು. ಈ ಉಳಿತಾಯ ಯೋಜನೆಯಲ್ಲಿ ಭದ್ರತೆಯನ್ನು ಸರ್ಕಾರವು ಖಾತರಿಪಡಿಸುತ್ತದೆ ಮತ್ತು ಆದಾಯವನ್ನು ಕೂಡ ಖಾತರಿಪಡಿಸುತ್ತದೆ.

ಮುಕ್ತಾಯದ ಮೇಲಿನ ಬಡ್ಡಿ ಆದಾಯ ಮತ್ತು ಮೆಚ್ಯೂರಿಟಿ ಮೊತ್ತವು ಇಲ್ಲಿ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ. ಇತರ ಯೋಜನೆಗಳಲ್ಲಿ, ಮ್ಯೂಚುವಲ್ ಫಂಡ್‌ಗಳಲ್ಲಿ ಆದಾಯವು ಖಂಡಿತವಾಗಿಯೂ ಹೆಚ್ಚಾಗಿರುತ್ತದೆ, ಆದರೆ 20 ಪ್ರತಿಶತದಷ್ಟು ದೀರ್ಘಾವಧಿಯ ಬಂಡವಾಳ ಲಾಭದ ತೆರಿಗೆಯನ್ನು ವಿಧಿಸಲಾಗುತ್ತದೆ. ಹಾಗಿದ್ದರೆ ಹೂಡಿಕೆಯ ಕೋನದಿಂದ ಈ ಯೋಜನೆಯ ಪ್ರತಿಯೊಂದು ಅಂಶವನ್ನು ನೋಡೋಣ.

ಇಕ್ವಿಟಿ ಮ್ಯೂಚುಯಲ್ ಫಂಡ್

ಇತ್ತೀಚಿನ ಹಣಕಾಸು ಸ್ವಾತಂತ್ರ್ಯ ಸಮೀಕ್ಷೆ ಫಲಿತಾಂಶದ ಪ್ರಕಾರ, ಇಕ್ವಿಟಿ ಮ್ಯೂಚುವಲ್ ಫಂಡ್‌ಗಳು ನಿವೃತ್ತಿಗೆ ಮೊದಲ ಆಯ್ಕೆಯಾಗಿದೆ. ಇದರ ನಂತರ ಉದ್ಯೋಗಿ ಭವಿಷ್ಯ ನಿಧಿ ಮತ್ತು ನಂತರ ಸಾರ್ವಜನಿಕ ಭವಿಷ್ಯ ನಿಧಿ. ಪಿಪಿಎಫ್ ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ನೀಡುತ್ತದೆ. ನೀವೂ ಸಹ ನಿಮ್ಮ ನಿವೃತ್ತಿಗಾಗಿ ಯೋಜಿಸುತ್ತಿದ್ದರೆ ಈ ಯೋಜನೆಯಲ್ಲಿ ಹಣವನ್ನು ಠೇವಣಿ ಮಾಡಲು ಪ್ರಾರಂಭಿಸಬಹುದು.

ಮೆಚುರಿಟಿ ಅವಧಿ ಮತ್ತು ಹೂಡಿಕೆ ಲೆಕ್ಕಾಚಾರಗಳು

ಪಿಪಿಎಫ್​ನ ಮೆಚುರಿಟಿ ಅವಧಿಯು 15 ವರ್ಷಗಳಾಗಿವೆ. ಅದರ ನಂತರವೂ ಅದನ್ನು 5+5 ವರ್ಷಗಳಿಗೆ ವಿಸ್ತರಿಸಬಹುದು. ನಿತ್ಯ 100 ರೂಪಾಯಿ ಠೇವಣಿ ಇಟ್ಟರೆ ಒಂದು ವರ್ಷದಲ್ಲಿ 36,500 ರೂಪಾಯಿ ಜಮೆಯಾಗುತ್ತದೆ. ನೀವು ಈ ಹೂಡಿಕೆಯನ್ನು 15 ವರ್ಷಗಳವರೆಗೆ ಮಾಡಿದರೆ ಮತ್ತು ಪ್ರಸ್ತುತ ಇರುವ ಬಡ್ಡಿದರ ಶೇ.7.1 ಸ್ಥಿರವಾಗಿದ್ದರೆ ನೀವು ಒಟ್ಟು 9.89 ಲಕ್ಷ ರೂ.ವನ್ನು ಪಡೆಯುತ್ತೀರಿ. 15 ವರ್ಷಗಳಲ್ಲಿ ನಿಮ್ಮ ಠೇವಣಿ ಬಂಡವಾಳ 5,47,500 ರೂ. ಆಗಿರುತ್ತದೆ. ಇನ್ನು ನೀವು ಅವಧಿ ಮುಕ್ತಾಯಕ್ಕೂ ಮುನ್ನ ಮತ್ತೆ 5ವರ್ಷಗಳಿಗೆ ವಿಸ್ತರಿಸಬಹುದು. ನಂತರ ಮತ್ತೆ 5ವರ್ಷಗಳಿಗೆ ಅಂದರೆ 25 ವರ್ಷಗಳಿಗೆ ವಿಸ್ತರಿಸಬಹುದು. 25 ವರ್ಷಗಳಲ್ಲಿ 25 ಲಕ್ಷದ 8 ಸಾವಿರದ 284 ರೂಪಾಯಿ ಸಿಗಲಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:03 pm, Thu, 15 September 22

ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ