ರಾತ್ರೋರಾತ್ರಿ 10 ಬಿಲಿಯನ್ ಡಾಲರ್ ಕಳೆದುಕೊಂಡ ಜೆಫ್ ಬೆಜೋಸ್, ಎಲಾನ್ ಮಸ್ಕ್ಗೂ ಕುಸಿತದ ಆಘಾತ
ಅಮೆರಿಕದ ಶ್ರೀಮಂತ ಬಿಲಿಯನೇರ್‌ಗಳ ನಿವ್ವಳ ಮೌಲ್ಯವು ಮಂಗಳವಾರ ಕುಸಿತಗೊಂಡಿದ್ದು, ಜೆಫ್ ಬೆಜೋಸ್ ಅವರ ಸಂಪತ್ತು ಒಂದು ದಿನದಲ್ಲಿ 9.8 ಶತಕೋಟಿ ಡಾಲರ್ನಷ್ಟು ಕುಸಿತಗೊಂಡಿದೆ. ಎಲಾನ್ ಮಸ್ಕ್ ಅವರು ಕೂಡ ಕುಸಿತವನ್ನು ಕಂಡಿದ್ದಾರೆ.
ಅಮೆರಿಕದ ಹಣದುಬ್ಬರದ ಪರಿಣಾಮ ಶ್ರೀಮಂತ ಬಿಲಿಯನೇರ್‌ಗಳ ನಿವ್ವಳ ಮೌಲ್ಯವು ಮಂಗಳವಾರ ಕುಸಿತಗೊಂಡಿದ್ದು, ಜೆಫ್ ಬೆಜೋಸ್ ಅವರ ಸಂಪತ್ತು ಒಂದೇ ದಿನದಲ್ಲಿ 9.8 ಶತಕೋಟಿ ಡಾಲರ್ (ಸುಮಾರು 80,000 ಕೋಟಿ) ನಷ್ಟು ಮತ್ತು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರ ನಿವ್ವಳ ಮೌಲ್ಯವು 8.4 ಬಿಲಿಯನ್ ಡಾಲರ್ (ಸುಮಾರು 70,000 ಕೋಟಿ) ಕಡಿಮೆಯಾಗಿದೆ. ಇವರಲ್ಲದೆ, ಮಾರ್ಕ್ ಜುಕರ್‌ಬರ್ಗ್, ಲ್ಯಾರಿ ಪೇಜ್, ಸೆರ್ಗೆ ಬ್ರಿನ್ ಮತ್ತು ಸ್ಟೀವ್ ಬಾಲ್ಮರ್ ಅವರ ನಿವ್ವಳ ಮೌಲ್ಯವು 4 ಶತಕೋಟಿ ಡಾಲರ್ಗಿಂತ ಹೆಚ್ಚು ಕುಸಿದಿದೆ. ಆದರೆ ವಾರೆನ್ ಬಫೆಟ್ ಮತ್ತು ಬಿಲ್ ಗೇಟ್ಸ್ ಕ್ರಮವಾಗಿ 3.4 ಶತಕೋಟಿ ಡಾಲರ್ ಮತ್ತು 2.8 ಶತಕೋಟಿ ಡಾಲರ್ ಕುಸಿತಗೊಂಡಿದೆ.
Published On - 5:59 pm, Wed, 14 September 22