Commercial LPG cylinder price: ಎಲ್ಪಿಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ 39 ರೂ ಇಳಿಕೆ
Gas Rates: ಕ್ರಿಸ್ಮಸ್ ಹಬ್ಬಕ್ಕೆ ಮುನ್ನ ಜನಸಾಮಾನ್ಯರಿಗೆ ಗಿಫ್ಟ್ ಸಿಕ್ಕಿದ್ದು, 19 ಕಿಲೋ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 39 ರೂ ಕಡಿಮೆ ಆಗಿದೆ. ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ವ್ಯತ್ಯಯವಾಗಿಲ್ಲ. ವಿವಿಧ ನಗರಗಳಲ್ಲಿ ಕಮರ್ಷಿಯಲ್ ಗ್ಯಾಸ್ ಬೆಲೆ ಎಷ್ಟು ಎಂಬ ವಿವರ ಈ ಸುದ್ದಿಯಲ್ಲಿದೆ.
ನವದೆಹಲಿ, ಡಿಸೆಂಬರ್ 22: ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಕೊಂಚ ನಿರಾಳ ತರುವ ಸುದ್ದಿ ಇದು. ಎಲ್ಪಿಜಿ ಗ್ಯಾಸ್ ಬೆಲೆಯಲ್ಲಿ ತುಸು ಇಳಿಕೆ ಆಗಿದೆ. 19 ಕಿಲೋ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ (Commercial LPG cylinder price) 39 ರೂನಷ್ಟು ಕಡಿಮೆ ಆಗಿದೆ. ರಾಷ್ಟ್ರರಾಜಧಾನಿ ನಗರಿ ದೆಹಲಿಯಲ್ಲಿ 1796.50 ರೂ ಇದ್ದ ಕಮರ್ಷಿಯಲ್ ಸಿಲಿಂಡರ್ ಬೆಲೆ 1757.50 ರುಪಾಯಿಗೆ ಇಳಿದಿದೆ. ಬೆಂಗಳೂರು ಸೇರಿದಂತೆ ಎಲ್ಲಾ ಕಡೆಯೂ 19 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಮುಖವಾಗಿದೆ. ಆದರೆ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ವ್ಯತ್ಯಯವಾಗಿಲ್ಲ.
ಎರಡೂವರೆ ತಿಂಗಳ ಅಂತರದಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿ ನಾಲ್ಕು ಬಾರಿ ಬದಲಾವಣೆ ಆಗಿದೆ. ನವೆಂಬರ್ 1ರಂದು ನೂರು ರೂಗೂ ಹೆಚ್ಚು ಬೆಲೆ ಏರಿಕೆ ಆಗಿತ್ತು. ನವೆಂಬರ್ 16ರಂದು 50ಕ್ಕೂ ಹೆಚ್ಚು ರುಪಾಯಿಯಷ್ಟು ಬೆಲೆ ಇಳಿಸಲಾಯಿತು. ಡಿಸೆಂಬರ್ 1ರಂದು 21 ರೂನಷ್ಟು ಬೆಲೆ ಏರಿಕೆ ಆಯಿತು. ಬಳಿಕ ಇದೀಗ 39 ರೂ ಕಡಿಮೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಡಿಸೆಂಬರ್ 1ರಂದು ಪರಿಷ್ಕರಿಸಲಾದ ದರದ ಪ್ರಕಾರ 19 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 1833 ರುಪಾಯಿ ಇದೆ. ಇದೀಗ 1,800 ರೂಗಿಂತ ಕಡಿಮೆಗೆ ಬೆಲೆ ಇಳಿದಿದೆ.
ಇದನ್ನೂ ಓದಿ: ಸಾವರೀನ್ ಗೋಲ್ಡ್ ಬಾಂಡ್ 3ನೇ ಸೀರೀಸ್; ಇವತ್ತೇ ಕೊನೆ ದಿನ; ಖರೀದಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್
19 ಕಿಲೋ ಎಲ್ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ
ದೆಹಲಿ: 1,757.50 ರೂ
ಕೋಲ್ಕತಾ: 1,869 ರೂ
ಮುಂಬೈ: 1,710 ರೂ
ಚೆನ್ನೈ: 1,929.50 ರೂ
ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ
ಡೊಮೆಸ್ಟಿಕ್ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಆಗಸ್ಟ್ ತಿಂಗಳಲ್ಲಿ ದರ ಪರಿಷ್ಕರಣೆ ಆಗಿದ್ದೇ ಕೊನೆ. ಆಗಸ್ಟ್ 30ರಂದು ಗೃಹಬಳಕೆ ಗ್ಯಾಸ್ ಬೆಲೆ 200 ರೂನಷ್ಟು ಕಡಿಮೆ ಆಗಿತ್ತು.
ಇದನ್ನೂ ಓದಿ: Petrol Diesel Price on December 22: ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ
ಬೆಂಗಳೂರಿನಲ್ಲಿ 14.2 ಕಿಲೋ ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆ 905.50 ರೂ ಇದೆ. 19 ಕಿಲೋ ವಾಣಿಜ್ಯ ಎಲ್ಪಿಜಿ ಸಿಲಿಂಡ್ ಬೆಲೆ 1,794 ರೂ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:22 am, Fri, 22 December 23