LPG Gas Cylinder Price: ಗ್ಯಾಸ್​ ಸಿಲಿಂಡರ್ ಬೆಲೆ ದೆಹಲಿಯಲ್ಲಿ 43.5 ರೂಪಾಯಿ ಏರಿಕೆ; ನಿಮ್ಮ ನಗರದಲ್ಲಿ ಎಷ್ಟು?

| Updated By: Srinivas Mata

Updated on: Oct 01, 2021 | 11:01 AM

ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ದೆಹಲಿಯಲ್ಲಿ ರೂ. 43.50 ಏರಿಕೆ ಮಾಡಲಾಗಿದೆ. ಹಾಗಿದ್ದರೆ ನಿಮ್ಮ ನಗರದಲ್ಲಿ ಬೆಲೆ ಎಷ್ಟಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಲು ಈ ವರದಿ ಓದಿ.

LPG Gas Cylinder Price: ಗ್ಯಾಸ್​ ಸಿಲಿಂಡರ್ ಬೆಲೆ ದೆಹಲಿಯಲ್ಲಿ 43.5 ರೂಪಾಯಿ ಏರಿಕೆ; ನಿಮ್ಮ ನಗರದಲ್ಲಿ ಎಷ್ಟು?
ಎಲ್​ಪಿಜಿ ಸಿಲಿಂಡರ್
Follow us on

ಇಂದಿನಿಂದ ಹೊಸ ತಿಂಗಳು ಆರಂಭವಾಗಿದೆ. ಅಕ್ಟೋಬರ್ ಮೊದಲ ದಿನ ಹಣದುಬ್ಬರದ ದೊಡ್ಡ ಆಘಾತ ತಂದಿದೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪೆನಿಗಳು ಅಕ್ಟೋಬರ್ 1ರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿವೆ. ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) 19 ಕೇಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 43.5 ರೂಪಾಯಿ ಏರಿಕೆ ಮಾಡಿದ್ದು, ದೆಹಲಿಯಲ್ಲಿ 19 ಕೇಜಿ ತೂಕದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1693 ರೂಪಾಯಿಯಿಂದ 1736.5 ರೂಪಾಯಿಗೆ ಹೆಚ್ಚಳವಾಗಿದೆ. ಆದರೆ ತೈಲ ಕಂಪೆನಿಗಳು ಸಾಮಾನ್ಯ ಜನರು ಬಳಸುವ 14.2 ಕೇಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿಲ್ಲ. ಅದರ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ದೆಹಲಿಯಲ್ಲಿ 14.2 ಕೇಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 884.50 ರೂಪಾಯಿ ಇದೆ. ಕಳೆದ ತಿಂಗಳು, ಅಂದರೆ ಸೆಪ್ಟೆಂಬರ್‌ನಲ್ಲಿ ತೈಲ ಕಂಪೆನಿಗಳು ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 25 ರೂಪಾಯಿಗಳಷ್ಟು ಹೆಚ್ಚಿಸಿದ್ದವು.

ಸಬ್ಸಿಡಿ ರಹಿತ 14.2 ಕೇಜಿ ಸಿಲಿಂಡರ್ ಬೆಲೆ
ಸಬ್ಸಿಡಿ ರಹಿತ 14.2 ಕೇಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 884.50 ರೂಪಾಯಿ, ಕೋಲ್ಕತ್ತಾದಲ್ಲಿ 911 ರೂಪಾಯಿ, ಮುಂಬೈನಲ್ಲಿ 884.50 ರೂಪಾಯಿ ಮತ್ತು ಚೆನ್ನೈನಲ್ಲಿ 900.50 ರೂಪಾಯಿ ಇದೆ.

19 ಕೇಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಹೊಸ ಬೆಲೆ
ಸರ್ಕಾರಿ ತೈಲ ಕಂಪೆನಿಗಳು 19 ಕೇಜಿ ತೂಕದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿವೆ. ದೆಹಲಿಯಲ್ಲಿ ಅತ್ಯಧಿಕ ಹೆಚ್ಚಳವನ್ನು, ಅಂದರೆ ಪ್ರತಿ ಸಿಲಿಂಡರ್‌ಗೆ 43.50 ರೂಪಾಯಿ ಮಾಡಿರುವುದರಿಂದ ದೆಹಲಿಯಲ್ಲಿ 1736.5 ರೂಪಾಯಿಗೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ರೂ.35 ಹೆಚ್ಚಳವಾಗಿದ್ದರಿಂದ 1805.5ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ಬೆಲೆ 35.5 ರೂಪಾಯಿ ಮೇಲೇರಿ 1685 ರೂಪಾಯಿಗೆ ತಲುಪಿದೆ ಮತ್ತು ಚೆನ್ನೈನಲ್ಲಿ ಪ್ರತಿ ಸಿಲಿಂಡರ್​ಗೆ ರೂ.36.5 ದುಬಾರಿ ಆಗಿರುವುದರಿಂದ ರೂ.1867.5 ಆಗಿದೆ.

LPG ಬೆಲೆಯನ್ನು ಹೇಗೆ ಪರಿಶೀಲಿಸುವುದು?
ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಪರಿಶೀಲಿಸಲು ಸರ್ಕಾರಿ ತೈಲ ಕಂಪನಿಯ ವೆಬ್‌ಸೈಟ್‌ಗೆ ತೆರಳಬೇಕು. ಇಲ್ಲಿ ಕಂಪೆನಿಗಳು ಪ್ರತಿ ತಿಂಗಳು ಹೊಸ ದರಗಳನ್ನು ನೀಡುತ್ತವೆ. https://iocl.com/Products/IndaneGas.aspx ಲಿಂಕ್‌ನಲ್ಲಿ ಆಯಾ ನಗರದ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಶೀಲಿಸಬಹುದು.

ಹೊಸ ಫೈಬರ್ ಗ್ಲಾಸ್ ಸಂಯೋಜಿತ ಸಿಲಿಂಡರ್ ಪರಿಚಯ
ಇಂಡಿಯನ್ ಆಯಿಲ್ ತನ್ನ ಗ್ರಾಹಕರಿಗಾಗಿ ಹೊಸ ರೀತಿಯ LPG ಸಿಲಿಂಡರ್ ಅನ್ನು ಬಿಡುಗಡೆ ಮಾಡಿದೆ. ಇದರ ಹೆಸರು ಕಾಂಪೋಸಿಟ್ ಸಿಲಿಂಡರ್. ಈ ಸಿಲಿಂಡರ್ ಅನ್ನು ಮೂರು ಹಂತಗಳಲ್ಲಿ ನಿರ್ಮಿಸಲಾಗಿದೆ. ಒಳಗಿನಿಂದ ಮೊದಲ ಹಂತವನ್ನು ಹೆಚ್ಚಿನ ಸಾಂದ್ರತೆಯ ಪಾಲಿಥಿಲೀನ್‌ನಿಂದ ಮಾಡಲಾಗುವುದು. ಈ ಒಳ ಪದರವನ್ನು ಪಾಲಿಮರ್​ನಿಂದ ಮಾಡಿದ ಫೈಬರ್​ ಗ್ಲಾಸ್​ನಿಂದ ಲೇಪಿಸಲಾಗಿದೆ. ಹೊರಗಿನ ಪದರವನ್ನು HDPEನಿಂದ ಕೂಡ ಮಾಡಲಾಗಿದೆ.

ಸಂಯೋಜಿತ ಸಿಲಿಂಡರ್ ಅನ್ನು ಪ್ರಸ್ತುತ ದೇಶದ 28 ನಗರಗಳಲ್ಲಿ ವಿತರಿಸಲಾಗುತ್ತಿದೆ. ಇವುಗಳಲ್ಲಿ ಅಹಮದಾಬಾದ್, ಅಜ್ಮೀರ್, ಅಲಹಾಬಾದ್, ಬೆಂಗಳೂರು, ಭುವನೇಶ್ವರ, ಚಂಡೀಗಡ, ಚೆನ್ನೈ, ಕೊಯಮತ್ತೂರು, ಡಾರ್ಜಿಲಿಂಗ್, ದೆಹಲಿ, ಫರೀದಾಬಾದ್, ಗುರುಗ್ರಾಮ, ಹೈದರಾಬಾದ್, ಜೈಪುರ, ಜಲಂಧರ್, ಜಮ್ಷೆಡ್​ಪುರ್​, ಲುಧಿಯಾನ, ಮೈಸೂರು, ಪಾಟ್ನಾ, ರಾಯಪುರ, ರಾಂಚಿ, ಸಂಗ್ರೂರ್, ಸೂರತ್, ತಿರುಚಿರಾಪಳ್ಳಿ, ತಿರುವಳ್ಳೂರು., ತುಮಕೂರು, ವಾರಾಣಸಿ ಮತ್ತು ವಿಶಾಖಪಟ್ಟಣಂ ಸೇರಿವೆ. ಸಂಯೋಜಿತ ಸಿಲಿಂಡರ್ 5 ಮತ್ತು 10 ಕೇಜಿ ತೂಕದಲ್ಲಿ ಬರುತ್ತಿದೆ. ಈ ಸಿಲಿಂಡರ್ ಅನ್ನು ಶೀಘ್ರದಲ್ಲೇ ದೇಶದ ಇತರ ನಗರಗಳಲ್ಲಿಯೂ ಪೂರೈಸಲಾಗುವುದು.

ಇದನ್ನೂ ಓದಿ: Financial Changes: ಅಕ್ಟೋಬರ್​ 1ರಿಂದ ಅನ್ವಯ ಆಗುವಂಥ 5 ಪ್ರಮುಖ ಬದಲಾವಣೆಗಳಿವು