ದೂರಸಂಪರ್ಕ ಇಲಾಖೆಯಿಂದ ಏರ್‌ಟೆಲ್, VILಗೆ ರೂ. 3050 ಕೋಟಿ ದಂಡ; ಪಾವತಿಸಲು 3 ವಾರದ ಗಡುವು
2016ರಲ್ಲಿ ಟ್ರಾಯ್ನಿಂದ ಮಾಡಲಾದ ಶಿಫಾರಸಿಗೆ ದೂರಸಂಪರ್ಕ ಇಲಾಖೆಯು ವೊಡಾಫೋನ್ ಐಡಿಯಾ ಹಾಗೂ ಭಾರ್ತಿ ಏರ್ಟೆಲ್ಗೆ ರೂ. 3050 ಕೋಟಿ ದಂಡ ಹಾಕಲಾಗಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಕ ಪ್ರಾಧಿಕಾರ (Trai) 5 ವರ್ಷದ ಹಿಂದೆ ಮಾಡಿದ ಶಿಫಾರಸಿನ ಅನ್ವಯ ದೂರ ಸಂಪರ್ಕ ಇಲಾಖೆಯು (DoT) ವೊಡಾಫೋನ್ ಐಡಿಯಾಗೆ ರೂ. 2000 ಕೋಟಿ ಮತ್ತು ಭಾರ್ತಿ ಏರ್ಟೆಲ್ಗೆ 1050 ಕೋಟಿ ರೂಪಾಯಿ ದಂಡ ವಿಧಿಸಿದೆ ಎಂದು ಮೂಲಗಳು ತಿಳಿಸಿವೆ. ದೂರಸಂಪರ್ಕ ಇಲಾಖೆಯು ಟೆಲಿಕಾಂ ಆಪರೇಟರ್ಗಳಿಗೆ ದಂಡ ಪಾವತಿಸಲು ಮೂರು ವಾರಗಳ ಗಡುವು ನೀಡಿದೆ. ಗುರುವಾರದಂದು ಈ ಸಂಬಂಧ ಕಂಪೆನಿಗಳಿಗೆ ಡಿಮ್ಯಾಂಡ್ ನೋಟಿಸ್ ನೀಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಇದೇ ವಿಚಾರವಾಗಿ ಭಾರ್ತಿ ಏರ್‌ಟೆಲ್ ವಕ್ತಾರರನ್ನು ಮಾಧ್ಯಮದವರು ಸಂಪರ್ಕಿಸಿದಾಗ, 2016ರಲ್ಲಿ ಟ್ರಾಯ್ ಮಾಡಿದ ಶಿಫಾರಸುಗಳ ಆಧಾರದ ಮೇಲೆ ಅನಿಯಂತ್ರಿತ ಮತ್ತು ಅನ್ಯಾಯದ ಬೇಡಿಕೆ ಇಟ್ಟಿರುವುದರಿಂದ ನಾವು ತೀವ್ರವಾಗಿ ನಿರಾಶೆಗೊಂಡಿದ್ದೇವೆ. ಹೊಸ ಆಪರೇಟರ್‌ಗೆ ಪರಸ್ಪರ ಸಂಪರ್ಕ ಮಟ್ಟದ ನಿಬಂಧನೆಗಳಿಗೆ ಸಂಬಂಧಿಸಿದೆ. ಈ ಆರೋಪಗಳು ಕ್ಷುಲ್ಲಕ ಮತ್ತು ಉದ್ದೇಶಪೂರಿತ ಎಂದಿದ್ದಾರೆ.
“ಭಾರತಿ ಏರ್‌ಟೆಲ್ ಉನ್ನತ ಗುಣಮಟ್ಟದ ನಿಯಮಾವಳಿಗಳನ್ನು ನಿರ್ವಹಿಸುವುದಕ್ಕೆ ಹೆಮ್ಮೆ ಪಡುತ್ತದೆ ಮತ್ತು ಯಾವಾಗಲೂ ದೇಶದ ಕಾನೂನನ್ನು ಅನುಸರಿಸುತ್ತಿದೆ. ನಾವು ಈ ಬೇಡಿಕೆಯನ್ನು ಪ್ರಶ್ನಿಸುತ್ತೇವೆ ಹಾಗೂ ನಮಗೆ ಲಭ್ಯ ಇರುವ ಕಾನೂನು ಆಯ್ಕೆಗಳನ್ನು ಅನುಸರಿಸುತ್ತೇವೆ,” ಎಂದಿದ್ದಾರೆ. ತಕ್ಷಣಕ್ಕೆ ವೊಡಾಫೋನ್ ಐಡಿಯಾದ ಕಡೆಯಿಂದ ಯಾವುದೇ ಪ್ರತಿಕ್ರಿಯೆಯೂ ಬಂದಿಲ್ಲ. ರಿಲಯನ್ಸ್ ಜಿಯೋಗೆ ಇಂಟರ್ಕನೆಕ್ಟಿವಿಟಿ ನಿರಾಕರಿಸಿದ ಆರೋಪದ ಮೇಲೆ 2016ರ ಅಕ್ಟೋಬರ್ನಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಕ ಪ್ರಾಧಿಕಾರ (Trai) ಏರ್‌ಟೆಲ್ ಮತ್ತು ವೊಡಾಫೋನ್ ಮತ್ತು ಐಡಿಯಾಗೆ (ಈಗ ವಿಲೀನ ಆಗಿದೆ) 3050 ಕೋಟಿ ರೂಪಾಯಿ ದಂಡ ವಿಧಿಸಲು ಶಿಫಾರಸು ಮಾಡಿತ್ತು.
ಆಗ ನಿಯಂತ್ರಕ ಸಂಸ್ಥೆಯಾಗಿದ್ದದ್ದು ಟೆಲಿಕಾಂ ಲೈಸೆನ್ಸ್ ರದ್ದು ಮಾಡುವ ಶಿಫಾರಸನ್ನು ನಿಲ್ಲಿಸಿತ್ತು. ಇದರಿಂದ ಅಪಾರ ಸಂಖ್ಯೆಯ ಗ್ರಾಹಕರಿಗೆ ಸಮಸ್ಯೆ ಆಗಬಹುದು ಎಂದು ಇಂಥ ನಿರ್ಧಾರ ಕೈಗೊಳ್ಳಲಾಗಿತ್ತು. ಶೇ 75ರಷ್ಟು ಅದರ ನೆಟ್ವರ್ಕ್ನಲ್ಲಿನ ಕರೆಗಳು ವಿಫಲವಾಗುತ್ತಿವೆ. ಅದಕ್ಕೆ ಪಾಯಿಂಟ್ಸ್ ಆಫ್ ಇಂಟರ್ಫೇಸ್ (PoIs) ಅಗತ್ಯ ಪ್ರಮಾಣದಲ್ಲಿ ಬಿಡುಗಡೆ ಮಾಡದಿರುವುದೇ ಕಾರಣ ಎಂದು ರಿಲಯನ್ಸ್ ಜಿಯೋ ದೂರು ನೀಡಿತ್ತು. ಊರಸಂಪರ್ಕ ಇಲಾಖೆಯ ನಿರ್ಧಾರ ತೆಗೆದುಕೊಳ್ಳುವ ಡಿಜಿಟಲ್ ಕಮ್ಯುನಿಕೇಷನ್ ಆಯೋಗವು 2019ರಲ್ಲಿ ಕ್ಯುಮ್ಯುಲೇಟಿವ್ ದಂಡವನ್ನು ವಿಧಿಸುವುದಕ್ಕೆ ಅನುಮತಿ ನೀಡಿತ್ತು.
ಇದನ್ನೂ ಓದಿ: ಟ್ರಾಯ್ ವರದಿ: 4G ಡೌನ್‌ಲೋಡ್ ವೇಗದಲ್ಲಿ ಜೂನ್ ತಿಂಗಳಲ್ಲಿಯೂ ಪಾರಮ್ಯ ಮೆರೆದ ಜಿಯೋ
Published On - 4:57 pm, Fri, 1 October 21