Work From Office: ಕಚೇರಿಗೆ ಉದ್ಯೋಗಿಗಳನ್ನು ಕರೆಸಿಕೊಳ್ಳಲು ನಡೆದಿದೆ ಸಿದ್ಧತೆ; ಇಲ್ಲಿದೆ ಕಂಪೆನಿಗಳ ಪಟ್ಟಿ

ಮಾಹಿತಿ ತಂತ್ರಜ್ಞಾನ ಕಂಪೆನಿಗಳೂ ಸೇರಿದಂತೆ ಹಣಕಾಸು ಸಂಸ್ಥೆಗಳು ತಮ್ಮ ಉದ್ಯೋಗಿಗಗಳನ್ನು ವಾಪಸ್ ಕಚೇರಿಗೆ ತರಲು ಸಿದ್ಧತೆ ನಡೆಸಿವೆ.

Work From Office: ಕಚೇರಿಗೆ ಉದ್ಯೋಗಿಗಳನ್ನು ಕರೆಸಿಕೊಳ್ಳಲು ನಡೆದಿದೆ ಸಿದ್ಧತೆ; ಇಲ್ಲಿದೆ ಕಂಪೆನಿಗಳ ಪಟ್ಟಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 01, 2021 | 9:17 PM

ಭಾರತದಲ್ಲಿ ಕೊರೊನಾ ಲಸಿಕೆ ಹಾಕುವ ಪ್ರಮಾಣ ಮೇಲ್ಮುಖದಲ್ಲಿ ಸಾಗಿದೆ ಹಾಗೂ ಕೊರೊನಾ ಸೋಂಕು ಪ್ರಕರಣಗಳು ಸಹ ಕಡಿಮೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಪೊರೇಟ್​ ಜಗತ್ತಿನಿಂದ ಮತ್ತೆ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುವುದಕ್ಕೆ ಸಿದ್ಧತೆ ಶುರುವಾಗಿದೆ. 2020ರ ಮಾರ್ಚ್​ನಲ್ಲಿ ಕೊರೊನಾ ಬಿಕ್ಕಟ್ಟಿನ ತೀವ್ರತೆ ಕಾಣಿಸಿಕೊಂಡಿತು. ಹಲವು ಕಂಪೆನಿಗಳು ಬಹಳ ಬೇಗ ವರ್ಕ್ ಫ್ರಮ್ ಹೋಮ್ (WFH) ಅಳವಡಿಸಿಕೊಂಡವು. ಅದನ್ನು ಬಳಸಿಕೊಳ್ಳುವುದರಲ್ಲಿ ಯಶಸ್ವಿಯಾದವು. ಮಾಹಿತಿ ತಂತ್ರಜ್ಞಾನ ಪ್ರಮುಖ ಕಂಪೆನಿಗಳಾದ ಇನ್ಫೋಸಿಸ್, ವಿಪ್ರೋ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್​)ನಿಂದ ಮೊದಲುಗೊಂಡು ಎಚ್​ಡಿಎಫ್​ಸಿ ಬ್ಯಾಂಕ್​ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಸೇರಿ ಇತರ ಹಲವು ಕಂಪೆನಿಗಳು ತಮ್ಮ ಉದ್ಯೋಗಿಗಳನ್ನು ವಾಪಸ್ ಕಚೇರಿಗೆ ಕರೆಸಿಕೊಳ್ಳುವುದಕ್ಕೆ ಯೋಜನೆ ರೂಪಿಸುತ್ತಿವೆ. ಕೆಲವು ಕಂಪೆನಿಗಳಂತೂ ಕಚೇರಿಗೆ ಹಿಂತಿರುಗುವ ಆಯ್ಕೆಯನ್ನು ಉದ್ಯೋಗಿಗಳಿಗೇ ನೀಡುತ್ತಿವೆ.

ಆದರೆ, ಉದ್ಯೋಗಿಗಳು ಕಚೇರಿಗೆ ವಾಪಸಾಗುವ ಮುಂಚೆ ಎರಡೂ ಸುತ್ತಿನ ಕೊರೊನಾ ಲಸಿಕೆ ಹಾಕಿಸಿಕೊಂಡಿರಲಿ ಎಂದು ಎದುರು ನೋಡುತ್ತಿವೆ. ಟಿಸಿಎಸ್​ನಲ್ಲಿ ಐದು ಲಕ್ಷ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದು ಈಗಾಗಲೇ ಘೋಷಣೆ ಮಾಡಿರುವಂತೆ ಬಹುತೇಕ (ಶೇ 70ರಿಂದ 80ರಷ್ಟು) ಉದ್ಯೋಗಿಗಳನ್ನು 2021ರ ಕೊನೆಯ ಹೊತ್ತಿಗೆ ಅಥವಾ 2022ರ ಆರಂಭದ ಹೊತ್ತಿಗೆ ಕಚೇರಿಗೆ ವಾಪಸ್ ಕರೆಸಿಕೊಳ್ಳುವ ಉಮ್ಮೇದಿಯಲ್ಲಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖವಾದ ಟಿಸಿಎಸ್​ ಮಹತ್ವಾಕಾಂಕ್ಷೆಯ 25-25 ಮಾದರಿಯನ್ನು ಅನುಷ್ಠಾನಕ್ಕೆ ತರುವ ಯೋಜನೆ ಇರಿಸಿಕೊಂಡಿದೆ. ಇದರಲ್ಲಿ ಶೇ 25ರಷ್ಟು ಸಿಬ್ಬಂದಿ ವರ್ಕ್​ ಫ್ರಮ್ ಹೋಮ್ ಮಾಡಲಿದ್ದಾರೆ. ಬಾಕಿ ಉಳಿದವರು 2025ನೇ ಇಸವಿಯಿಂದ ಸಂಪೂರ್ಣವಾಗಿ ವರ್ಕ್​ ಫ್ರಮ್ ಹೋಮ್ ತರಲಿದೆ.

ಟಿಸಿಎಸ್​ ಸಿಇಒ ರಾಜೇಶ್​ ಗೋಪಿನಾಥನ್ ಈಚೆಗೆ ಮಾಧ್ತಮವೊಂದರ ಜತೆ ಸಂದರ್ಶನದಲ್ಲಿ ಮಾತನಾಡುತ್ತಾ, ಕೊರೊನಾ ಮೂರನೇ ಅಲೆಯ ಪ್ರಭಾವ ಹೇಗಿರುತ್ತದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ ಎಂದು ಹೇಳಿದ್ದರು. ಇನ್ನು ಮಾಹಿತಿ ತಂತ್ರಜ್ಞಾನ ಕಂಪೆನಿಗಳಾದ ವಿಪ್ರೋ ಹಾಗೂ ಇನ್ಫೋಸಿಸ್ ಕೂಡ ಕಚೇರಿಯಿಂದ ಕೆಲಸ ಆರಂಭಿಸುವ ಬಗ್ಗೆ ಇರುವ ಯೋಜನೆಯನ್ನು ತಿಳಿಸಿದ್ದವು. ಈ ತಿಂಗಳ ಆರಂಭದಲ್ಲಿ ವಿಪ್ರೋದ ಅಧ್ಯಕ್ಷ ರಿಷದ್ ಪ್ರೇಮ್​ಜೀ ಟ್ವೀಟ್​ ಮಾಡಿ, ಕಚೇರಿಗಳಲ್ಲಿ ಕೊರೊನಾ ವೈರಸ್ ಪ್ರೊಟೋಕಾಲ್ ಹೇಗೆ ಅನುಷ್ಠಾನಕ್ಕೆ ತರುತ್ತಿದ್ದಾರೆ ಎಂದು ತಿಳಿಸಿದ್ದರು. ಇದನ್ನು ಹೊರತುಪಡಿಸಿ, ಕೊಟಕ್​ ಮಹೀಂದ್ರಾ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಯೆಸ್​ ಬ್ಯಾಂಕ್​ ಈ ಎಲ್ಲ ಹಣಕಾಸು ಸಮೂಹಗಳು ವರ್ಕ್​ ಫ್ರಮ್ ಹೋಮ್ ವ್ಯವಸ್ಥೆ ಕೊನೆ ಮಾಡುವ ಬಗ್ಗೆ ಸೂಚನೆ ನೀಡಿದ್ದವು.

ಎಚ್​ಡಿಎಫ್​ಸಿ ಮ್ಯಾನೇಜಿಂಗ್ ಡೈರೆಕ್ಟರ್ ಈಚೆಗೆ ಮಾತನಾಡಿ, ಆಯಾ ರಾಜ್ಯ ಸರ್ಕಾರದ ನಿರ್ದೇಶನದ ಅನುಸಾರವಾಗಿ ಶೇ 100ರಷ್ಟು ಮಾನವ ಸಂಪನ್ಮೂಲದೊಂದಿಗೆ ಎಲ್ಲ ಕಚೇರಿಗಳನ್ನು ನಡೆಸುತ್ತಿರುವುದಾಗಿ ಹೇಳಿರುವುದಾಗಿ ಮಾಧ್ಯಮದಲ್ಲಿ ವರದಿ ಆಗಿತ್ತು. ಎಫ್​ಎಂಸಿಜಿ ಪ್ರಮುಖ ಕಂಪೆನಿಯಾದ ಮಾರಿಕೋ ಕೂಡ ಹೈಬ್ರಿಡ್ ವರ್ಕಿಂಗ್ ಮಾದರಿಯನ್ನು​ ಅಕ್ಟೋಬರ್​ನಿಂದ ಭಾರತದಲ್ಲಿ ತರುವುದಾಗಿ ಘೋಷಣೆ ಮಾಡಿದೆ. ಇದರ ಪ್ರಕಾರವಾಗಿ, ಬಹುತೇಕ ಉದ್ಯೋಗಿಗಳು ಕಚೇರಿಗಳಲ್ಲೇ ಕೆಲಸ ಮಾಡುತ್ತಾರೆ, ಕಡಿಮೆ ಹಾಗೂ ಮಂಚೆಯೇ ತಿಳಿಸಲಾದ ಸಂಖ್ಯೆಯೊಂದಿಗೆ ಕಾರ್ಯ ನಿರ್ವಹಿಸುತ್ತಾರೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Work From Home: ವರ್ಕ್​ ಫ್ರಮ್ ಹೋಮ್ ಮುಗಿದು ಮತ್ತೆ ಕೆಲಸಕ್ಕೆ ಹೋಗವಂತಾಗುತ್ತದೆಯೇ? ಯಾರು ಏನಂತಾರೆ?

ಐಟಿ ಬಿಟಿ ಸಿಬ್ಬಂದಿಗಳ ವರ್ಕ್ ಫ್ರಮ್ ಹೋಮ್​ಗೆ ಶೀಘ್ರದಲ್ಲೇ ಫುಲ್ ಸ್ಟಾಪ್; ಬೆಂಗಳೂರಿನತ್ತ ಆಗಮಿಸುತ್ತಾರೆ 40 ಲಕ್ಷಕ್ಕೂ ಹೆಚ್ಚು ಜನ

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ