ಷೇರುಗಳ ಮೇಲೆ ಹೂಡಿಕೆ: ಪಿಇ ರೇಶಿಯೋ ಮಾನದಂಡ ಬಳಸಿ ಷೇರಿನ ನಿಜಮೌಲ್ಯ ತಿಳಿಯಿರಿ

|

Updated on: Oct 07, 2024 | 5:03 PM

stock market strategies: ಷೇರು ಮಾರುಕಟ್ಟೆಯಲ್ಲಿ ಬೇರೆ ಬೇರೆ ಕಾರಣಕ್ಕೆ ಕೆಲ ಷೇರುಗಳು ಅತಿಯಾದ ಮೌಲ್ಯ ಪಡೆದುಕೊಂಡಿರುತ್ತವೆ. ಆ ಕಂಪನಿ ಗಳಿಸುವ ಆದಾಯದ ಮಟ್ಟಕ್ಕಿಂತ ಷೇರು ಬೆಲೆ ಹಲವು ಪಟ್ಟು ಹೆಚ್ಚು ಇರುತ್ತದೆ. ಮುಂದೊಂದು ದಿನ ಷೇರು ಪ್ರಪಾತಕ್ಕೆ ಬೀಳಬಹುದು. ಇಂಥ ಅಪಾಯಕಾರಿ ಷೇರುಗಳನ್ನು ಪತ್ತೆ ಮಾಡಲು ಪಿಇ ರೇಶಿಯೋ ಇತ್ಯಾದಿ ಮಾನದಂಡಗಳನ್ನು ಅಳವಡಿಸಬಹುದು.

ಷೇರುಗಳ ಮೇಲೆ ಹೂಡಿಕೆ: ಪಿಇ ರೇಶಿಯೋ ಮಾನದಂಡ ಬಳಸಿ ಷೇರಿನ ನಿಜಮೌಲ್ಯ ತಿಳಿಯಿರಿ
ಷೇರು ಮಾರುಕಟ್ಟೆ
Follow us on

ಷೇರು ಮಾರುಕಟ್ಟೆಯಲ್ಲಿ ಸಾವಿರಾರು ಕಂಪನಿಗಳ ಷೇರುಗಳ ರಾಶಿ ಮಧ್ಯೆ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಗೊಂದಲ ಸಹಜ. ಕಳೆದ ಒಂದು ವರ್ಷದಲ್ಲಿ ಬೆಲೆ ಡಬಲ್ ಆಗಿರುವ ಸ್ಟಾಕುಗಳು ಗಮನ ಸೆಳೆಯುತ್ತವೆ. ಈ ವರ್ಷವೂ ಅದು ಡಬಲ್ ಆಗಬಹುದು ಎನ್ನುವ ಆಸೆಯಲ್ಲಿ ಹೂಡಿಕೆ ಮಾಡುತ್ತೀರಿ. ಅದು ಈ ವರ್ಷ ಬೇರೆ ಬೇರೆ ಕಾರಣಕ್ಕೆ ನಷ್ಟ ತರಬಹುದು. ಇಂಥ ಬಹಳಷ್ಟು ಸ್ಟಾಕುಗಳು ಷೇರು ಮಾರುಕಟ್ಟೆಯಲ್ಲಿ ಕಾಣಬಹುದು. ಸಾಮಾನ್ಯವಾಗಿ ಷೇರುಗಳನ್ನು ಆಯ್ಕೆ ಮಾಡಿಕೊಳ್ಳಲು ಹಲವು ಮಾನದಂಡಗಳಿವೆ. ಇದರಲ್ಲಿ ಪಿಇ ರೇಶಿಯೋ ಕೂಡ ಒಂದು. ಮಾತ್ರವಲ್ಲ, ಪ್ರಮುಖ ಮಾನದಂಡವೂ ಹೌದು.

ಪಿಇ ರೇಶಿಯೋ ಎಂದರೆ ಪ್ರೈಸ್ ಟು ಅರ್ನಿಂಗ್ಸ್ ರೇಶಿಯೋ. ಒಂದು ಕಂಪನಿ ಗಳಿಸುವ ಲಾಭಕ್ಕೆ ಹೋಲಿಸಿದರೆ ಅದರ ಷೇರುಬೆಲೆ ಎಷ್ಟು ಹೆಚ್ಚಿದೆ ಎನ್ನುವುದನ್ನು ಸೂಚಿಸುತ್ತದೆ ಈ ಪಿಇ ಅನುಪಾತ. ಕೆಲ ಷೇರುಗಳ ಪಿಇ ರೇಶಿಯೋ 50ಕ್ಕಿಂತಲೂ ಹೆಚ್ಚಿರುತ್ತದೆ. ಇನ್ನೂ ಕೆಲ ಷೇರುಗಳ ಪಿಇ 20ಕ್ಕಿಂತಲೂ ಕಡಿಮೆ ಇರುತ್ತದೆ. ಪಿಇ ಅನುಪಾತ ಹೆಚ್ಚಿದ್ದರೆ ಆ ಷೇರಿನ ಮೌಲ್ಯ ಅಸಹಜವಾಗಿ ಹೆಚ್ಚಾಗಿರಬಹುದು. ಅಥವಾ ಭವಿಷ್ಯದಲ್ಲಿ ಅದು ಚೆನ್ನಾಗಿ ಬೆಳೆಯಬಲ್ಲ ಕಂಪನಿಯಾಗಿರಬಹುದು.

ಇದನ್ನೂ ಓದಿ: ಡೆಲಿವರಿ ಬಾಯ್ ಕೆಲಸದಲ್ಲಿ ಜೊಮಾಟೊ ಸಿಇಒ; ಲಿಫ್ಟ್ ಬಳಸಲು ಬಿಡದ ಮಾಲ್ ಸೆಕ್ಯೂರಿಟಿ

ಪಿಇ ರೇಶಿಯೋ ಕಡಿಮೆ ಇದ್ದರೆ ಆ ಷೇರು ಅಂಡರ್​ವ್ಯಾಲ್ಯೂಡ್ ಆಗಿದ್ದಿರಬಹುದು. ಅಂದರೆ, ನ್ಯಾಯಯುತ ಮೌಲ್ಯ ಇನ್ನೂ ಲಭಿಸಿಲ್ಲದೇ ಇರಬಹುದು. ಕಂಪನಿಯ ಮೂಲಭೂತ ಅಂಶಗಳು ಉತ್ತಮವಾಗಿದ್ದು ಪಿಇ ರೇಶಿಯೋ ಕಡಿಮೆ ಇದ್ದಲ್ಲಿ ಅಂಥ ಷೇರುಗಳು ಮುಂದಿನ ದಿನಗಳಲ್ಲಿ ಮಲ್ಟಿಬ್ಯಾಗರ್ ಎನಿಸಬಹುದು. ಹೂಡಿಕೆದಾರರ ಪಾಲಿಗೆ ಅದು ಚಿನ್ನದ ಗಣಿ ಇದ್ದಂತೆ.

ಪಿಇ ರೇಶಿಯೋಗೆ ಫಾರ್ಮುಲಾ ಇದು

ಪಿಇ ರೇಶಿಯೋ ಎಷ್ಟಿದೆ ಎಂದು ತಿಳಿಯಲು ಎರಡು ವಿಧ ಅಥವಾ ಸೂತ್ರ ಇದೆ. ಮೊದಲನೆಯದು, ‘ಷೇರಿನ ಪ್ರಸಕ್ತ ಮಾರುಕಟ್ಟೆ ದರ’ / ‘ಪ್ರತೀ ಷೇರಿಗೆ ಸಿಕ್ಕ ಗಳಿಕೆ’. ಎರಡನೇ ಸೂತ್ರ: ‘ಒಟ್ಟು ಮಾರುಕಟ್ಟೆ ಬಂಡವಾಳ’ / ಒಟ್ಟು ನಿವ್ವಳ ಗಳಿಕೆ.

ಇಲ್ಲಿ ಮೊದಲನೆಯ ಸೂತ್ರದಲ್ಲಿ ಅರ್ನಿಂಗ್ಸ್ ಪರ್ ಶರ್ ಇದೆ. ಕಂಪನಿಯ ಡಿವಿಡೆಂಡ್​ಗಳನ್ನೂ ಕಳೆದು ಉಳಿಯುವ ನಿವ್ವಳ ಆದಾಯದ ಮೊತ್ತವನ್ನು ಆ ಕಂಪನಿಯ ಒಟ್ಟು ಷೇರುಗಳ ಸಂಖ್ಯೆಯೊಂದಿಗೆ ಭಾಗಿಸಿದರೆ ಇಪಿಎಸ್ ಅಥವಾ ಅರ್ನಿಂಗ್ಸ್ ಪರ್ ಷೇರ್ ಸಿಗುತ್ತದೆ.

ಇದನ್ನೂ ಓದಿ: ‘ಭಾರತದಲ್ಲಿ ಶನಿವಾರ, ಭಾನುವಾರ ರಜೆಯ ಕಾನ್ಸೆಪ್ಟೇ ಇರಲಿಲ್ಲ, ಇದೆಲ್ಲಾ ಪಾಶ್ಚಿಮಾತ್ಯದ ಎರವಲು’: ಟ್ರೋಲ್ ಆದ ಒಲಾ ಸಿಇಒ

ಈಗ ಒಂದು ಷೇರಿನ ಈಗಿನ ಮಾರುಕಟ್ಟೆ ಮೌಲ್ಯವನ್ನು ಇಪಿಎಸ್​ನೊಂದಿಗೆ ಭಾಗಿಸಿದರೆ ಪಿಇ ರೇಶಿಯೋ ಸಿಗುತ್ತದೆ. ಒಂದು ಕಂಪನಿ ತನ್ನ ಬಿಸಿನೆಸ್​ನಲ್ಲಿ ಕಾಣುವ ಬೆಳವಣಿಗೆಯೊಂದಿಗೆ ಪಿಇ ರೇಶಿಯೋ ತಳುಕು ಹಾಕಿಕೊಂಡಿರುತ್ತದೆ. ಹೀಗಾಗಿ, ಷೇರುಗಳ ಆಯ್ಕೆಯಲ್ಲಿ ಪಿಇ ರೇಶಿಯೋ ಒಂದು ಉತ್ತಮ ಮಾನದಂಡ ಎನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ