‘ಭಾರತದಲ್ಲಿ ಶನಿವಾರ, ಭಾನುವಾರ ರಜೆಯ ಕಾನ್ಸೆಪ್ಟೇ ಇರಲಿಲ್ಲ, ಇದೆಲ್ಲಾ ಪಾಶ್ಚಿಮಾತ್ಯದ ಎರವಲು’: ಟ್ರೋಲ್ ಆದ ಒಲಾ ಸಿಇಒ

Netizens troll Ola CEO Bhavish Aggarwal: ಶನಿವಾರ ಮತ್ತು ಭಾನುವಾರ ರಜಾ ದಿನಗಳೆನ್ನುವುದು ಪಾಶ್ಚಿಮಾತ್ಯ ದೇಶಗಳಿಂದ ಬಂದ ಕಾನ್ಸೆಪ್ಟು ಎಂದು ಓಲಾ ಸಿಇಒ ಭವೀಶ್ ಅಗರ್ವಾಲ್ ಹೇಳಿದ್ದಾರೆ. ಭಾರತದಲ್ಲಿ ಚಾಂದ್ರಮಾನ ಕ್ಯಾಲಂಡರ್ ಪದ್ಧತಿ ಇದ್ದು ತಿಂಗಳಿಗೆ ಒಂದೋ ಎರಡೋ ರಜೆಗಳಿದ್ದವು. ಪಶ್ಚಿಮದ ದೇಶಗಳಲ್ಲಿ ಕೈಗಾರಿಕಾ ಕ್ರಾಂತಿ ಆದಾಗ ಶನಿವಾರ ಮತ್ತು ಭಾನುವಾರ ರಜಾದಿನಗಳಾದವು. ಅದನ್ನೇ ಭಾರತದಲ್ಲೂ ಬಳಸಲಾಗುತ್ತಿದೆ ಎಂದಿದ್ದಾರೆ ಭವೀಶ್.

‘ಭಾರತದಲ್ಲಿ ಶನಿವಾರ, ಭಾನುವಾರ ರಜೆಯ ಕಾನ್ಸೆಪ್ಟೇ ಇರಲಿಲ್ಲ, ಇದೆಲ್ಲಾ ಪಾಶ್ಚಿಮಾತ್ಯದ ಎರವಲು’: ಟ್ರೋಲ್ ಆದ ಒಲಾ ಸಿಇಒ
ಭವೀಶ್ ಅಗರ್ವಾಲ್
Follow us
|

Updated on:Oct 06, 2024 | 5:23 PM

ನವದೆಹಲಿ, ಅಕ್ಟೋಬರ್ 6: ವರ್ಕ್ ಮತ್ತು ಲೈಫ್ ಎಷ್ಟು ಬ್ಯಾಲನ್ಸ್ ಇರಬೇಕು ಎನ್ನುವ ಬಗ್ಗೆ ಕಾರ್ಪೊರೇಟ್ ವಲಯದಲ್ಲಿ ಭಿನ್ನ ಅಭಿಪ್ರಾಯಗಳಿವೆ. ಒಳ್ಳೆಯ ಬ್ಯಾಲನ್ಸ್ ಇರಬೇಕು. ಕುಟುಂಬಕ್ಕೂ ಹೆಚ್ಚು ಸಮಯ ಕೊಡಬೇಕು ಎನ್ನುವುದು ಕೆಲವರ ಅನಿಸಿಕೆ. ಆದರೆ ಹೆಚ್ಚಿನ ಸಿಇಒಗಳು ಈ ವರ್ಕ್ ಲೈಫ್ ಬ್ಯಾಲನ್ಸ್ ಥಿಯರಿಯನ್ನು ಒಪ್ಪುವುದಿಲ್ಲ. ಉದ್ಯೋಗಿಗಳು ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎನ್ನುತ್ತಾರೆ. ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ವಾರಕ್ಕೆ 70 ಕೆಲಸ ಮಾಡಬೇಕು ಎಂದು ನೀಡಿದ ಹೇಳಿಕೆಯಿಂದ ಭಾರತದಲ್ಲಿ ವರ್ಕ್ ಲೈಫ್ ಬ್ಯಾಲನ್ಸ್ ವಿಚಾರ ಸಾಕಷ್ಟು ಚರ್ಚೆಗೆ ಬಂದಿದೆ. ಒಲಾ ಸಿಇಒ ಭವೀಶ್ ಅಗರ್ವಾಲ್ ಈ ವಿಚಾರದ ಬಗ್ಗೆ ಮಾತನಾಡಿರುವ ವಿಡಿಯೋವೊಂದು ಇಂಟರ್ನೆಟ್​ನಲ್ಲಿ ಸದ್ದು ಮಾಡುತ್ತಿದೆ. ಶನಿವಾರ ಮತ್ತು ಭಾನುವಾರ ವಾರದ ರಜೆಗಳು ಎನ್ನುವ ವಿಚಾರವೇ ಭಾರತಕ್ಕೆ ಹೊಸದು. ಇದು ಪಾಶ್ಚಿಮಾತ್ಯ ದೇಶಗಳಿಂದ ಎರವಲಾಗಿ ಬಂದ ಕಾನ್ಸೆಪ್ಟು ಎಂದು ಒಲಾ ಸಿಇಒ ಈ ವಿಡಿಯೋದಲ್ಲಿ ಹೇಳಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಇವರು ಕೆಲಸ ಮತ್ತು ಜೀವನ ಸಮತೋಲದ ವಿಚಾರದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಇನ್ಸ್​ಟಾಗ್ರಾಮ್​ನಲ್ಲಿ ಈ ವಿಡಿಯೋ ಪೋಸ್ಟ್ ಆಗಿದೆ. ಇದಕ್ಕೆ ಸಾಕಷ್ಟು ಜನರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಕಂಪನಿ ಮಾರಿ 400 ನೌಕರರನ್ನು ಶ್ರೀಮಂತರನ್ನಾಗಿಸಿದ ಸಿಇಒ ಜ್ಯೋತಿ ಬನ್ಸಾಲ್

ಭವೀಶ್ ಅಗರ್ವಾಲ್ ಹೇಳಿದ್ದು ಇದು…

‘ವರ್ಕ್ ಮತ್ತು ಲೈಫ್ ಬ್ಯಾಲನ್ಸ್ ಎನ್ನುವುದು ಸರಿಯಾದ ವಿಚಾರವಲ್ಲ. ಶನಿವಾರ ಮತ್ತು ಭಾನುವಾರ ರಜೆ ಎಂಬುದು ಭಾರತೀಯ ಸಂಗತಿಯಲ್ಲ. ಇದು ಪಶ್ಚಿಮದಿಂದ ಬಂದಿದ್ದು. ಭಾರತದಲ್ಲಿ ಎಂದಿಗೂ ಕೂಡ ಶನಿವಾರ ಮತ್ತು ಭಾನುವಾರ ರಜೆ ಎಂಬುದು ಇರಲಿಲ್ಲ.

‘ನಮ್ಮದು ಚಾಂದ್ರಮಾನ ಕ್ಯಾಲಂಡರ್. ಅದರ ಪ್ರಕಾರ ರಜಾ ದಿನಗಳಿದ್ದವು. ತಿಂಗಳಿಗೆ ಒಂದು ಅಥವಾ ಎರಡು ದಿನ ಮಾತ್ರವೇ ರಜೆಗಳಿದ್ದವು. ಶನಿವಾರ ಅಥವಾ ಭಾನುವಾರ ರಜೆ ಎಂಬುದು ಇರಲಿಲ್ಲ. ಇದು ಪಶ್ಚಿಮದಿಂದ ಆಮದಾಗಿರುವ ವಿಚಾರ.

‘ಕೈಗಾರಿಕಾ ಕ್ರಾಂತಿ ಆದಾಗ ಕಾರ್ಮಿಕರಿಗೆ ಶನಿವಾರ ಮತ್ತು ಭಾನುವಾರ ವಿಶ್ರಾಂತಿ ದಿನಗಳಾದವು. ಈಗಲೂ ಇದು ಜಾರಿಯಲ್ಲಿದೆ. ಆಧುನಿಕ ಯುಗದಲ್ಲಿ ಇವು ಒಪ್ಪುವಂಥದ್ದಲ್ಲ. ಮುಂದಿನ ಕೆಲ ದಶಕಗಳಲ್ಲಿ ಇದು ಇರುವುದಿಲ್ಲ. ವಾರದಲ್ಲಿ ಐದು ದಿನ ಕೆಲಸ, ಉಳಿದ ದಿನ ರಜೆ ಎನ್ನುವ ಕ್ರಮ ಇರುವುದಿಲ್ಲ,’ ಎಂದು ಓಲಾ ಸಿಇಒ ಭವೀಶ್ ಅಗರ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಜೊಮಾಟೊ ಉದ್ಯೋಗಿಗಳಿಗೆ 330 ಕೋಟಿ ರೂ ಮೊತ್ತದ ಭರ್ಜರಿ ಉಡುಗೊರೆ; ಇಸಾಪ್ ಬಿಡುಗಡೆ

ಓದುಗರಿಂದ ಖಾರದ ಪ್ರತಿಕ್ರಿಯೆ

ಶನಿವಾರ ಮತ್ತು ಭಾನುವಾರದ ರಜೆ ಪಾಶ್ಚಿಮಾತ್ಯದ ಎರವಲು ಎಂದ ಭವೀಶ್ ಅಗರ್ವಾಲ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಇವರು ಹಾಕುವ ಡ್ರೆಸ್, ಬಳಸುವ ತಂತ್ರಜ್ಞಾನ, ಮಾತನಾಡುವ ಭಾಷೆ ಎಲ್ಲವೂ ವೆಸ್ಟರ್ನ್ ಎಂದು ಹಲವರು ಕಾಮೆಂಟಿಸಿದ್ದಾರೆ.

ನಾಳೆ ದಿನ ಸಂಬಳ ಎನ್ನುವುದೂ ಕೂಡ ಪಾಶ್ಚಿಮಾತ್ಯ ಕಾನ್ಸೆಪ್ಟ್. ಅದರ ಬದಲು ಸಂಜೆ ರೊಟ್ಟಿ ಕೊಡ್ತೀವಿ ತಿನ್ನಿ ಎಂತಲೂ ಹೇಳುತ್ತಾರೇನೋ ಇವರು ಎಂದು ಒಂದು ಕಾಮೆಂಟ್​ನಲ್ಲಿ ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:22 pm, Sun, 6 October 24

ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು