ಜಾಗತಿಕ ಕ್ರಿಪ್ಟೋಕರೆನ್ಸಿ (Cryptocurrency) ಮಾರುಕಟ್ಟೆ ಮೌಲ್ಯವು ಕಳೆದ 24 ಗಂಟೆಯಲ್ಲಿ 1.70 ಲಕ್ಷ ಕೋಟಿ ಡಾಲರ್ನಿಂದ 1.87 ಲಕ್ಷ ಕೋಟಿ ಡಾಲರ್ಗೆ ಏರಿಕೆ ಆಗಿದೆ. ಫೆಬ್ರವರಿ 4ನೇ ತಾರೀಕಿನಂದು ವಹಿವಾಟಿನ ಪರಿಮಾಣ (ಟ್ರೇಡಿಂಗ್ ವಾಲ್ಯೂಮ್) 68.72 ಬಿಲಿಯನ್ ಡಾಲರ್ನಿಂದ 90.36 ಬಿಲಿಯನ್ ಡಾಲರ್ಗೆ ಏರಿಕೆ ಆಗಿದೆ. ವಿಕೇಂದ್ರೀಕೃತ ಫೈನಾನ್ಸ್ (DeFi) ಕಳೆದ 24 ಗಂಟೆಯಲ್ಲಿ ಒಟ್ಟಾರೆ ಕ್ರಿಪ್ಟೋಕರೆನ್ಸಿಯ ವಹಿವಾಟಿನ ವಾಲ್ಯೂಮ್ 12.21 ಬಿಲಿಯನ್ ಡಾಲರ್ನ ಶೇ 13.44ರಷ್ಟಾಗುತ್ತದೆ. ಮತ್ತೊಂದು ಕಡೆ, ಸ್ಥಿರವಾದ ಕಾಯಿನ್ಸ್ ಪಾಲು ಕಳೆದ 24 ಗಂಟೆಯ ವಾಲ್ಯೂಮ್ ಶೇ 81.35ರಷ್ಟಾಗಿದ್ದು, 73.92 ಬಿಲಿಯನ್ ಡಾಲರ್ ಆಗುತ್ತದೆ. ಬಿಟ್ಕಾಯಿನ್ನ ಪಾರಮ್ಯ ಸ್ವಲ್ಪ ಪ್ರಮಾಣದಲ್ಲಿ ಜಾಸ್ತಿಯಾಗಿ ಶೇ 41.65 ಆಗಿದ್ದು, ಫೆಬ್ರವರಿ 5ರಂದು ವರ್ಚುವಲ್ ಟೋಕನ್ 41,388.68 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.
ವಿಶ್ವದ ಅತಿ ದೊಡ್ಡ ಮತ್ತು ಹೆಸರಾಂತ ಕ್ರಿಪ್ಟೋಕರೆನ್ಸಿ ಜನವರಿ 24ರಂದು ತಲುಪಿದ್ದ ವಾರ್ಷಿಕ ಕನಿಷ್ಠ ಮಟ್ಟವಾದ 32,950.72 ಡಾಲರ್ನಿಂದ ಶೇ 23.2ರಷ್ಟು ಮೇಲೇರಿದೆ. ಇನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ಬಿಟ್‌ಕಾಯಿನ್ ದರಗಳು ಶೇ 9ರಷ್ಟು ಹೆಚ್ಚಾಗಿ, 32,33,214 (32.33 ಲಕ್ಷ ರೂಪಾಯಿ) ಆಗಿದೆ. ಎಥೆರಿಯಂ ಶೇ 9.5ರಷ್ಟು ಮೇಲೇರಿ, 2,34,199.9 ರೂಪಾಯಿ ಆಗಿದೆ. ಕಾರ್ಡಾನೊ ಶೇ 6ರಷ್ಟು ಜಾಸ್ತಿಯಾಗಿ ರೂ. 88.73 ಆಗಿದ್ದರೆ, ಅವಲಂಚೆ ಶೇ 11ರಷ್ಟು ಜಿಗಿದು, ರೂ. 6,096.60 ಮುಟ್ಟಿದೆ. ಪೋಲ್ಕ್ಡಾಟ್ ಶೇ 7ರಷ್ಟು ಬೆಳವಣಿಗೆ ಕಂಡು, ರೂ. 1617.09 ಆಗಿದ್ದು, ಕಳೆದ 24 ಗಂಟೆಯಲ್ಲಿ ಲೈಟ್ಕಾಯಿನ್ ಶೇ 6.7ರಷ್ಟು ಮೇಲೇರಿ ರೂ. 9,320ರಲ್ಲಿದೆ.
ಕ್ರಿಪ್ಟೋಕರೆನ್ಸಿಗೆ ಭಾರತದಲ್ಲಿ ಕಾನೂನುಬದ್ಧ ಮಾನ್ಯತೆ ಸಿಗುವುದಿಲ್ಲ ಎಂದು ಭಾರತೀಯ ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರು ಗುರುವಾರ ಹೇಳಿದ್ದಾರೆ. ಆ ಮೂಲಕ ಮಾರುಕಟ್ಟೆಯಲ್ಲಿ ಖಾಸಗಿ ಡಿಜಿಟಲ್ ಕರೆನ್ಸಿಗಳ ಕಾನೂನುಬದ್ಧತೆಯ ವದಂತಿಯನ್ನು ತಳ್ಳಿಹಾಕಿದ್ದಾರೆ.2022-23ರ ಬಜೆಟ್ ವರ್ಚುವಲ್ ಡಿಜಿಟಲ್ ಸ್ವತ್ತುಗಳ ತೆರಿಗೆಯ ಬಗ್ಗೆ ಸ್ಪಷ್ಟತೆಯನ್ನು ನೀಡಿದೆ ಮತ್ತು ಕ್ರಿಪ್ಟೋ ವಹಿವಾಟುಗಳನ್ನು ಮಿತಿ ಮೀರಿ, ಶೇ 1 ಟಿಡಿಎಸ್‌ಗೆ ಒಳಪಡಿಸುವುದರ ಜೊತೆಗೆ ಅಂತಹ ವಹಿವಾಟುಗಳ ಮೇಲೆ ಗಳಿಸಿದ ಲಾಭಗಳ ಮೇಲೆ ಶೇ 30ರಷ್ಟು ತೆರಿಗೆಯನ್ನು ವಿಧಿಸಲು ಪ್ರಸ್ತಾಪಿಸಿದೆ.
ಫೆಬ್ರವರಿ 5ನೇ ತಾರೀಕಿನ ಬೆಳಗ್ಗೆ 8.25ಕ್ಕೆ ಭಾರತೀಯ ಮಾರುಕಟ್ಟೆಯಲ್ಲಿನ ವಿವಿಧ ಕ್ರಿಪ್ಟೋಕರೆನ್ಸಿಗಳ ಬೆಲೆಗಳ ವಿವರ ಇಲ್ಲಿದೆ (WazirX.comನಿಂದ ಡೇಟಾ)
ಕ್ರಿಪ್ಟೋಕರೆನ್ಸಿ ಬೆಲೆ (ರೂಪಾಯಿಗಳಲ್ಲಿ)- 24 ಗಂಟೆಗಳಲ್ಲಿ ಬದಲಾವಣೆ (ಶೇಕಡಾವಾರು ಪ್ರಮಾಣ)
ಬಿಟ್‌ಕಾಯಿನ್- ರೂ. 32,27,530 – ಶೇ 8.75
ಎಥೆರಿಯಮ್- ರೂ. 2,34,076.5- ಶೇ 9.3
ಕಾರ್ಡಾನೊ- ರೂ. 88.89- ಶೇ 6.08
ಟೆಥರ್- ರೂ. 78.19- ಶೇ 1.84
ಸೊಲಾನಾ- ರೂ. 8,713.10- ಶೇ 6.76
ಅವಲಂಚೆ- ರೂ. 6,098.397- ಶೇ 12.07
ಲೈಟ್ ಕಾಯಿನ್ (Litecoin)- ರೂ. 9,340.19- ಶೇ 7.05
XRP- ರೂ. 52.13 – ಶೇ 7.16
ಆಕ್ಸಿ – ರೂ. 4,163.30 – ಶೇ 6.75
Published On - 2:21 pm, Sat, 5 February 22