AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bitcoin: ಕ್ರಿಪ್ಟೋಕರೆನ್ಸಿ ಬಿಟ್​ಕಾಯಿನ್ ಬಗ್ಗೆ ಆತಂಕ ಯಾಕೆ? ಇಲ್ಲಿದೆ ಕೆಲವಷ್ಟು ಮಾಹಿತಿ

ಕ್ರಿಪ್ಟೋಕರೆನ್ಸಿ ಬಿಟ್​ಕಾಯಿನ್ ಹೇಗೆ ಕೆಲಸ ಮಾಡುತ್ತದೆ ಹಾಗೂ ಸರ್ಕಾರಗಳು ಏಕೆ ಮಾನ್ಯತೆ ನೀಡುತ್ತಿಲ್ಲ ಎಂಬ ಬಗ್ಗೆ ವಿವರಣಾತ್ಮಕವಾದ ಲೇಖನ ಇಲ್ಲಿದೆ.

Bitcoin: ಕ್ರಿಪ್ಟೋಕರೆನ್ಸಿ ಬಿಟ್​ಕಾಯಿನ್ ಬಗ್ಗೆ ಆತಂಕ ಯಾಕೆ? ಇಲ್ಲಿದೆ ಕೆಲವಷ್ಟು ಮಾಹಿತಿ
ಬಿಟ್​ಕಾಯಿನ್ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Srinivas Mata

Updated on: Nov 12, 2021 | 2:08 PM

ಷೇರು ಮಾರ್ಕೆಟ್​ನಲ್ಲಿ ನೋಡನೋಡುತ್ತಾ 1 ರೂಪಾಯಿ ಬೆಲೆಯ ಷೇರು 100 ಅಥವಾ 1000 ರೂಪಾಯಿ ಆಗಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಅದಕ್ಕೆ ಕಾರಣ ಆಗುವುದು ಆಯಾ ಕಂಪೆನಿಯ ಪ್ರದರ್ಶನ. ಮತ್ತು ಅದರ ವ್ಯವಹಾರ, ವಹಿವಾಟು ಇತ್ಯಾದಿ. ಇದರಲ್ಲೊಂದು ತರ್ಕ ಇದೆ. ಈ ಷೇರಿನ ಬೆಲೆ ಯಾಕೆ ಇಷ್ಟು ಏರಿಕೆ ಅಥವಾ ಇಳಿಕೆ ಅನ್ನೋದಿಕ್ಕೆ ಅದು ಪಾವತಿಸುವ ಡಿವಿಡೆಂಡ್, ಈವರೆಗೆ ಮಾಡಿರುವ ವಹಿವಾಟು, ಗಳಿಸಿರುವ ಲಾಭ, ವಿವಿಧ ಬೆಳವಣಿಗೆ, ಪರಿಸ್ಥಿತಿ ಎಲ್ಲವೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ ಈಗ ಚಲಾವಣೆಗೆ ಬಂದಿರುವ ಕ್ರಿಪ್ಟೋಕರೆನ್ಸಿ ಎಂಬುದಿದೆಯಲ್ಲಾ ಇದರ ಏರಿಳಿತದಲ್ಲಿ ಯಾವುದೇ ತರ್ಕ ಇಲ್ಲ. ನಿಮಗೆ ಗೊತ್ತಿರಲಿ, ಸದ್ಯಕ್ಕೆ ವಿಶ್ವದಾದ್ಯಂತ 2000ಕ್ಕೂ ಹೆಚ್ಚು ಕ್ರಿಪ್ಟೋಕರೆನ್ಸಿಗಳಿವೆ. ಅದರಲ್ಲಿ ಒಂದು ಈಗ ಇಡೀ ಕರ್ನಾಟಕ ರಾಜಕೀಯದಲ್ಲಿ ಸುನಾಮಿ ಎಬ್ಬಿಸಿರುವ ಬಿಟ್​ಕಾಯಿನ್. ಇದೇ ರೀತಿ ಎಥೆರಮ್, DogeCoin, KokoSwap… ಹೀಗೆ ಬೇಕಾದಷ್ಟಿವೆ.

ಈಗ ನಮ್ಮ ಕೈಯಲ್ಲಿ ಐನೂರು ರೂಪಾಯಿಯ ನೋಟು ಹಿಡಿದುಕೊಂಡರೆ ಆ ಕಾಗದ (ಕರೆನ್ಸಿ), ಸಂಖ್ಯೆ ಮತ್ತು ಅದರ ಇರುವಿಕೆ ಅನುಭವಕ್ಕೆ ಬರುತ್ತದೆ. ಅಂದರೆ ಭೌತಿಕವಾಗಿ ಬಳಸುವುದಕ್ಕೆ ಯಾವಾಗಲೂ ಲಭ್ಯ ಇರುತ್ತದೆ. ಅದರ ಮೌಲ್ಯದಲ್ಲಿ ನಿತ್ಯವೂ, ಕ್ಷಣ-ಕ್ಷಣವೂ ಬದಲಾವಣೆ ಆಗಲ್ಲ. ಆದರೆ ಈ ಕ್ರಿಪ್ಟೋಕರೆನ್ಸಿ ಎಂಬುದು ದೊಡ್ಡ ಮಟ್ಟದಲ್ಲಿ ತಂತ್ರಜ್ಞಾನ, ಇಷ್ಟೇಇಷ್ಟು ಅರ್ಥಶಾಸ್ತ್ರ, ಚೂರೇಚೂರು ತರ್ಕ ಹುಡುಕಲು ಸಾಧ್ಯ ಇರುವಂಥ ಡಿಜಿಟಲ್ ಕರೆನ್ಸಿ. ಹೊಸ ಕಾಲದ ಬ್ಲಾಕ್​ಚೈನ್ ತಂತ್ರಜ್ಞಾನ ಬಳಸಿಕೊಂಡು ಮತ್ತು ವಿಕೇಂದ್ರೀಕೃತ ಡಿಜಿಟಲ್ ಕರೆನ್ಸಿಯಾಗಿ ಇದನ್ನು 2009ರಲ್ಲಿ ಚಲಾವಣೆಗೆ ತರಲಾಯಿತು. ಹಾಗೆ ತಂದವರದು ಪ್ರೋಗ್ರಾಮರ್​ಗಳ ಗುಂಪು. ಸಟೋಷಿ ನಕಮೊಟೊ ನೇತೃತ್ವದ ಗುಂಪು ಇದು.

ಆರಂಭದಲ್ಲಿ ಅಷ್ಟೇನೂ ಮನ್ನಣೆ ಪಡೆಯದ ಇದು, ಕ್ರಮೇಣ ಪ್ರಾಮುಖ್ಯ ಪಡೆಯುವುದಕ್ಕೆ ಆರಂಭಿಸಿತು. ಆದರೆ ಸರ್ಕಾರಗಳ ಯಾವುದೇ ಬ್ಯಾಂಕ್, ಹಣಕಾಸು ಸಂಸ್ಥೆಗಳು ಇದಕ್ಕೆ ಮಾನ್ಯತೆ ನೀಡಿಲ್ಲ. ಆದರೆ ಖಾಸಗಿಯಾಗಿ ವಹಿವಾಟು ಶುರು ಮಾಡಿತು. ಯಾವಾಗ ಹಣಕಾಸಿನ ಮೌಲ್ಯ ಇರುವ ಕರೆನ್ಸಿಯೊಂದು (ಕ್ರಿಪ್ಟೋಕರೆನ್ಸಿ) ಬ್ಯಾಂಕ್ ಅಥವಾ ನಿಯಂತ್ರಕರ ನಿಗಾ ಇಲ್ಲದೆ ದೇಶ-ದೇಶದ ನಡುವೆ ಗಡಿ ದಾಟಿ ವ್ಯವಹಾರ ಆರಂಭಿಸುತ್ತದೋ ಅದು ಅಪಾಯದ ಮುನ್ಸೂಚನೆ ಎಂಬುದು ಸರ್ಕಾರಗಳ ಎಚ್ಚರಿಕೆ. ಇದು ಸತ್ಯವೂ ಹೌದು. ಉದಾಹರಣೆಗೆ ವಿಧ್ವಂಸಕ ಕೃತ್ಯಗಳಿಗೆ ಬೇಕಾದ ಹಣಕಾಸು ನೆರವನ್ನು ಬಿಟ್​ಕಾಯಿನ್ ಅಥವಾ ಇಂಥ ಕ್ರಿಪ್ಟೋಕರೆನ್ಸಿಗಳ ಮೂಲಕ ವರ್ಗಾವಣೆ ಮಾಡಿದರೆ ಯಾವುದೇ ಸರ್ಕಾರದ ಗಮನಕ್ಕೆ ಬರುವುದಿಲ್ಲ. ಇದೊಂದೇ ಅಲ್ಲ, ಅಕ್ರಮ ಹಣ ವರ್ಗಾವಣೆಗೆ ಇದು ಸಹಾಯಕ ಎಂಬ ಕಾರಣಕ್ಕೆ ಸರ್ಕಾರಗಳು ಇದನ್ನು ವಿರೋಧಿಸುತ್ತಿವೆ.

ಆದ್ದರಿಂದ ಈ ಡಿಜಿಟಲ್ ಸ್ವರೂಪದ ಕರೆನ್ಸಿ ಈಗ ಸಟ್ಟಾ ವ್ಯವಹಾರಕ್ಕೆ ಬಳಕೆ ಆಗುತ್ತಿದೆ. ದಿನದಲ್ಲಿ ಶೇ 15ರಷ್ಟು ಇದರ ಬೆಲೆ ಏರಿಳಿತ ಗಮನಿಸಿದರೆ, ಬಹಳ ಅಪಾಯಕಾರಿ ಎಂಬುದನ್ನು ವಿವರಿಸುವ ಅಗತ್ಯ ಇಲ್ಲ. ಇದರ ವ್ಯವಹಾರ ಆನ್​ಲೈನ್​ನಲ್ಲೇ ಆಗುವುದರಿಂದ ಹ್ಯಾಕರ್​ಗಳು ಈ ಅವಕಾಶಗಳನ್ನು ತಮಗೆ ತಕ್ಕಂತೆ ಬಳಸಿಕೊಂಡಿರುವುದು ಉದಾಹರಣೆ ಸಮೇತ ಕಂಡುಬರುತ್ತದೆ. ಈಗ ಆಗಿರುವುದು ಅದೇ. ಈ ವರ್ಷದಲ್ಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಹ್ಯಾಕರ್​ಗಳು ಕನ್ನ ಹಾಕಿ, ಕೋಟ್ಯಂತರ ಡಾಲರ್ ಮೌಲ್ಯದ ಕ್ರಿಪ್ಟೋಕರೆನ್ಸಿ ತಮ್ಮದಾಗಿಸಿಕೊಂಡಿದ್ದಾರೆ. ಬಿಟ್​ಕಾಯಿನ್ ಬೆಲೆ ಕ್ಷಣಕ್ಷಣವೂ ಬದಲಾಗುತ್ತಾ ಹೂಡಿಕೆದಾರರು ಅದರಲ್ಲಿ ಹಣ ತೊಡಗಿಸುತ್ತಿದ್ದಾರೆ. ಯಾವುದೇ ಸರ್ಕಾರದಿಂದಲೂ ಮಾನ್ಯತೆ ಪಡೆಯದ ಇದರಲ್ಲಿ ವಹಿವಾಟು ಹೇಗೆ ಆಗುತ್ತದೆ ಎಂಬುತ್ತದೆ ಅನ್ನೋದಿಕ್ಕೆ ಮೊದಲಿಗೇ ಹೇಳಿದಂತೆ ತರ್ಕ ಇಲ್ಲ. ಇನ್ನು ಆನ್​ಲೈನ್​ನಲ್ಲೇ ವ್ಯವಹರಿಸುವುದರಿಂದ ಸೈಬರ್ ಸುರಕ್ಷತೆಯೂ ಇಲ್ಲ. ಕರ್ನಾಟಕದಲ್ಲಿ ಆಗಿರುವುದು ಈ ಸೈಬರ್ ಸುರಕ್ಷತೆ ಸಮಸ್ಯೆಯೇ.

ಇದನ್ನೂ ಓದಿ: Bitcoin: ಬಿಟ್​ಕಾಯಿನ್ ಮೌಲ್ಯ 67 ಸಾವಿರ ಡಾಲರ್​ನೊಂದಿಗೆ ಸಾರ್ವಕಾಲಿಕ ಗರಿಷ್ಠ; ಡಿಸೆಂಬರ್ ಹೊತ್ತಿಗೆ 1 ಲಕ್ಷ ಡಾಲರ್ ಸಾಧ್ಯತೆ 

ಬಹುದಿನಗಳ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಜಾರಕಿಹೋಳಿ ಅಣ್ತಮ್ಮಸ್
ಬಹುದಿನಗಳ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಜಾರಕಿಹೋಳಿ ಅಣ್ತಮ್ಮಸ್
5 ವಿಕೆಟ್ ಕಬಳಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಸ್ಫೋಟಕ ಬ್ಯಾಟರ್
5 ವಿಕೆಟ್ ಕಬಳಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಸ್ಫೋಟಕ ಬ್ಯಾಟರ್
ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ, ಮೂವರು ಸಾವು, ಹಲವರಿಗೆ ಗಾಯ
ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ, ಮೂವರು ಸಾವು, ಹಲವರಿಗೆ ಗಾಯ
ಮುಂದಿನ 3 ತಿಂಗಳಲ್ಲಿ ಡಿಕೆ ಶಿವಕುಮಾರ್​ ಸಿಎಂ ಆಗ್ತಾರೆ: ಇಕ್ಬಾಲ್ ಹುಸೇನ್
ಮುಂದಿನ 3 ತಿಂಗಳಲ್ಲಿ ಡಿಕೆ ಶಿವಕುಮಾರ್​ ಸಿಎಂ ಆಗ್ತಾರೆ: ಇಕ್ಬಾಲ್ ಹುಸೇನ್
ಏರು ಧ್ವನಿಯಲ್ಲಿ ಮಾತನಾಡಿದ್ರೆಂದು ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್
ಏರು ಧ್ವನಿಯಲ್ಲಿ ಮಾತನಾಡಿದ್ರೆಂದು ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್
Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ